Wednesday, 20 June 2012

Letter to Editor Vijayvani Paper (Published 20/06/2012)




ವಾಗಿನಗಿರಿ ಕೋಟೆ ಸಂರಕ್ಷಿಸಿ

ಗಂಡುಮೆಟ್ಟಿನ ನಾಡು, ಸಗರನಾಡು ಎಂದು ಖ್ಯಾತಿ ಪಡೆದಿರುವ ಸುರಪುರ ಸಂಸ್ಥಾನದ ಗೋಸಲ ವಂಶದ ರಾಜ ಮನೆತನ ಇತಿಹಾಸ ಪ್ರಸಿದ್ಧಿ ಪಡೆದಿದೆ. ಸುರಪುರ ಸಂಸ್ಥಾನದ ಮೂಲಪುರುಷ ಗಡ್ಡಿ ಪಿಡ್ಡನಾಯಕನು 1636 ರಲ್ಲಿ ವಾಗಿನಗಿರಿ ಕೋಟೆಯನ್ನು ನಿಮರ್ಿಸಿ ಸಂಸ್ಥಾನದ ಭದ್ರ ಬುನಾದಿಗೆ ಕಾರಣನಾದನು ಎಂಬ ಐತಿಹ್ಯವಿದೆ. ಬ್ರಿಟಿಷರನ್ನು ಹಿಮ್ಮೆಟ್ಟಿಸಿ ಅವರಿಂದಲೇ ಸೈ ಎನಿಸಿಕೊಂಡ ಕೀತರ್ಿ ಸುರಪುರ ಸಂಸ್ಥಾನದ ರಾಜ ಮನೆತನಕ್ಕಿದೆ. ಸಾಹಿತ್ಯ, ಕಲೆ, ಸಂಸ್ಕೃತಿ, ಕ್ಷಾತ್ರತೇಜ, ಲೋಕ ಕಲ್ಯಾಣ, ಧಾಮರ್ಿಕ ಸಾಮರಸ್ಯ. ಸಮನ್ವಯತೆ, ನಾಡು-ನುಡಿಗಾಗಿ ಹೋರಾಡಿ ವೀರ ಮರಣವನ್ನಪ್ಪಿ ಸ್ವರ್ಗ ಸೇರಿದ ಕೀತರ್ಿ ಇವರಿಗಿದೆ.


222 ವರ್ಷಗಳ ಕಾಲ ಸಗರ ನಾಡನ್ನಾಳಿದ ಅರಸರುಗಳ ಚರಿತ್ರೆ ತುಂಬಾ ಮಹತ್ವದ್ದು, ಅನೇಕ ಅವಶೇಷಗಳನ್ನು ಹೊಂದಿರುವ ಅತ್ಯಂತ ಪ್ರಾಚೀನ ಸ್ಥಳಗಳಾದ ಸಗರನಾಡಿನ ಸುರಪುರ, ದೇವಪುರ, ಎಮ್ಮಡಗಿ, ಹುಣಸಗಿ, ಕಕ್ಕೇರಿ, ರಾಜನಕೊಳ್ಳೂರು, ಮುದನೂರು, ಕೆಂಭಾವಿ, ಏವೂರು, ವನದುರ್ಗ, ಜಲದುರ್ಗ, ತಿಂಥಣಿ, ಕೊಡೆಕಲ್ಲು, ರಾಯನಪಾಳ್ಯ, ಹಗರಟಗಿ, ಶಾಹಪುರ, ಸಗರ, ಶಿರವಾಳ, ಮಂದಾಕಿನಿ, ಗೋಗಿ, ಜೇವರಗಿ, ಆಂದೇಲಿ, ಅರಳಗುಂಡಿಗಿ, ಯಾಳವಾರ, ಅಣಬಿ, ಇಜೇರಿ ಮುಂತಾದ ಸ್ಥಳಗಳ ಚರಿತ್ರೆಯ ಸಂಶೋಧನೆಯಾಗಿ ಸಂಗ್ರಹವಾಗಬೇಕಾಗಿದೆ.


ನೂತನ ಜಿಲ್ಲೆ ಯಾದಗಿರಿಗೆ ಸೇರಿದ ಸುರಪುರ ತಾಲೂಕು ಕೃಷ್ಣ-ಭೀಮಾ ನದಿಗಳ ನಡುವಿನ ಪ್ರದೇಶ ಸಗರನಾಡೆಂದು ಸುಪ್ರಸಿದ್ಧವಾಗಿದೆ. ಪ್ರಾಚೀನ ಕಾಲದಿಂದಲೂ ಪೌರಾಣಿಕವಾಗಿ ಹೆಸರು ಪಡೆದಿರುವ ಈ ನಾಡು ಐತಿಹಾಸಿಕ ದೃಷ್ಟಿಯಿಂದಲೂ ಅನೇಕ ರಾಜ ಮನೆತನಗಳು ಆಳಿದ ನಾಡಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ವಾಗಿನಗಿರಿ ಕೋಟೆ ನಶಿಸಿ ಹೋಗುತ್ತಿದೆ, ಇದನ್ನು ನವೀಕರಣಗೊಳಿಸಿ, ರಕ್ಷಣಾ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲಿರುವ ಪ್ರಾಚೀನ ಕಾಲದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ಮಾಡಿ, ಸುಂದರವಾದ ಉದ್ಯಾನವನವನ್ನು ನಿಮರ್ಿಸಬೇಕಾಗಿದೆ. ಗತಕಾಲದ ವೈಭವ ತಿಳಿಸುವ ದೇವಾಲಯಗಳ ಪುನರ್ ನವೀಕರಣವಾಗಬೇಕು. ಪ್ರಾಚ್ಯ ವಸ್ತು ಇಲಾಖೆ, ಪ್ರವಾಸೋದ್ಯುಮ ಇಲಾಖೆಗಳಿಗೆ ರಾಜ್ಯ ಸರಕಾರ ಕೋಟೆ ಕೊತ್ತಲಗಳ ಸಂರಕ್ಷಣೆಗಾಗಿ, ಸ್ಮಾರಕಗಳ ರಕ್ಷಣೆಗಾಗಿ ಕೋಟ್ಯಾಂತರ ರೂ. ಬಿಡುಗಡೆ ಮಾಡುತ್ತಿದೆ. ಸಂಬಂಧಪಟ್ಟ ಇಲಾಖೇಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನ ಹರಿಸಿ ಸುರಪುರ ಸಂಸ್ಥಾನದ ವೈಭವದ ಐತಿಹ್ಯವಿರುವ ವಾಗಿನಗಿರಿ ಕೋಟೆಯ ಅಭಿವೃದ್ಧಿಗೆ ಒತ್ತು ನೀಡಿ, ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ.

-ಅಮರೇಶನಾಯಕ ಜಾಲಹಳ್ಳಿ,
  ತಾ|| ದೇವದುರ್ಗ
  ಜಿ|| ರಾಯಚೂರು


No comments:

Post a Comment