ಅಪೂರ್ವ ಸಂಗಮ ಈ-ಕನಸು...
ಲೇಖನ ಬರೆಯಬೇಕೆಂಬ ನನ್ನ ಈ ಕನಸುಗಳಿಗೆ ಜೀವ ತುಂಬಿದ್ದು. ಗೆಳೆಯ ಅಹ್ಮದ್ ಅದೊಂದು ದಿವಸ ಗುಲಬಗರ್ಾ ವಿವಿಯಲ್ಲಿ ಸ್ನಾತ್ತಕೋತ್ತರ ಪದವಿಗೆ ವಿದ್ಯಾಥರ್ಿಗಳ ಆಯ್ಕೆ ನಡೆದಿತ್ತು. ತನ್ನ ಗೆಳೆಯನ ಅಡ್ಮಿಷನ್ ಸಲುವಾಗಿ ಆತ ಇಲ್ಲಿಗೆ ಬಂದಿದ್ದ. ನಾನು ಭೇಟಿ ಮಾಡಿ ಬಹಳ ವರ್ಷಗಳೇ ಕಳೆದಿದ್ದವು. ಆಕಸ್ಮಿಕವಾಗಿ ಭೇಟಿಯಾದ ಆತನ ಕುಶಲೋಪರಿ ವಿಚಾರಿಸಿದೆ. ಅಲ್ಲಿರುವ ಸುಂದರವಾದ ಪಾಕರ್್, ಅಲ್ಲಿ ಕುಳಿತು ಮಾತನಾಡುತ್ತಿದ್ದಾಗ, ನಿನ್ನ ಲೇಖನಗಳ ಬರವಣಿಗೆ ಎಲ್ಲಿಗೆ ಬಂತು ಎಂದು ಕೇಳಿದೆ. ಕೆಲವೊಂದು ಲೇಖನಗಳು ಪತ್ರಿಕೆಗಳಲ್ಲಿ ಹಾಗೂ ಈ-ಕನಸು.ಕಾಂ ವೆಬ್ಸೈಟ್ನಲ್ಲೂ ಪ್ರಕಟಗೊಂಡಿವೆ ಎಂದು ತಿಳಿಸಿದ. ಕುತೂಹಲದಿಂದ ಕೇಳಿದಾಗ ವೆಬ್ಸೈಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ. ನಾನು ಕೂಡ ಈ ವೆಬ್ಸೈಡ್ಗೆ ಲೇಖನಗಳನ್ನು ಕಳಿಸಬೇಕೆಂದು ತೀಮರ್ಾನಿಸಿದೆ. ಅದಾಗಲೇ ನಾನು ಬರೆದ ಹತ್ತಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಒಂದು ಸಲ ಆ ವೆಬ್ಸೈಟ್ (ಈ-ಕನಸು.ಕಾಂ) ಸಚರ್್ ಮಾಡಿ ನೋಡಿದೆ.
ಇಲ್ಲಿ ಪ್ರಸ್ತುತಪಡಿಸುವಂತಹ ವೈವಿಧ್ಯಮಯ ಸುದ್ದಿಗಳು, ಹಲವು ವಿಚಾರಧಾರೆಯ ಲೇಖನಗಳು, ಮನಮೋಹಕವಾದಂತಹ ಚಿತ್ರಗಳು, ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ಯುವಂತಿದ್ದವು. ಪ್ರತಿನಿತ್ಯ ಇದನ್ನು ಓದುತ್ತಾ ಇದರ ಅಭಿಮಾನಿಯಾದೆ. ಹೊಸ ಬಗೆಯ ಲೇಖನಗಳು, ಪ್ರಚಲಿತ ಘಟನೆಗಳನ್ನು ಕುರಿತು ಲೇಖನಗಳನ್ನು ಬರೆಯಲು ಇದು ಸ್ಪೂತರ್ಿಯಾಯಿತು. ನಾನಿರುವದು ವಸತಿ ನಿಲಯದಲ್ಲಿ, ಆಗತಾನೇ ಸ್ಪಧರ್ಾತ್ಮಕ ಪರೀಕ್ಷೇಗಳು ಹತ್ತಿರವಾಗುತ್ತಿದ್ದವು. ಕೆಲವರು ಓದಲು ಮಗ್ನರಾದರೆ, ಹಲವರು ಪರೀಕ್ಷೇಗಳು ಇನ್ನೂ ಮುಂದೆ ಇವೆ, ನಾವು ಯಾಕೆ ಟೆನ್ಷನ್ ಮಾಡಿಕೊಂಡು ಓದಬೆಕು ಎನ್ನುತ್ತಾ ಕಾಲವನ್ನು ಮುಂದಕ್ಕೆ ಹಾಕುತ್ತಿದ್ದರು. ಈ ದೃಷ್ಟಿಕೋನ ಇಟ್ಟುಕೊಂಡು ಲೇಖನ ಬರೆಯ ತೊಡಗಿದೆ. ನಾಳೆ ಮಾಡುವ ಕೆಲಸ ಇವತ್ತೆ ಮಾಡು, ಇವತ್ತೇ ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡು ಎಂಬ ಮಾತಿದೆ. ಕಳೆದು ಹೋದ ಸಮಯ ಮತ್ತೆ ಬರಲಾರದು. ಕಾಲಗಳು ಉರುಳುವವು, ಗಳಿಗೆಗಳು ಹೊರಳುವವು ಇದನ್ನರಿತುಕೊಂಡು ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಸರಿಯಾದ ಕ್ರಮದಲ್ಲಿ ಓದಿ, ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಒಂದು ಲೇಖನ ಸಿದ್ಧಪಡಿಸಿದೆ.
ಮುಂದೂಡುವ ಪ್ರವೃತ್ತಿ ಸಲ್ಲದು. ಎಂಬ ತಲೆಬರಹದೊಂದಿಗೆ ಈ-ಕನಸು.ಕಾಂನಲ್ಲಿ ಲೇಖನ ಪ್ರಕಟವಾಯಿತು. ಆ ದಿನ ಸಾಯಂಕಾಲ 7 ಘಂ. ಸುಮಾರಿಗೆ ನನಗೆ ಒಂದು ಕರೆ ಬಂತು. ಆ ಕರೆ ಬೇರೆ ಯಾರದೂ ಅಲ್ಲ... ವೆಬ್ಸೈಟ್ ಎಡಿಟರ್ ಕರೆ ಮಾಡಿದ್ದರು!! ಅವರು ಲೇಖನದ ಸರಿ ತಪ್ಪುಗಳನ್ನು ನನಗೆ ತಿಳಿಸುತ್ತಾ, ಇನ್ನೂ ಚನ್ನಾಗಿ ಲೇಖನ ಬರೆಯಲು ಹುರಿದುಂಬಿಸಿದರು. ಹೊಸ ಹೊಸ ವಿಷಯಗಳತ್ತ ಗಮನ ಹರಿಸುವದು, ಓದುಗರಿಗೆ ಅಭಿರುಚಿ ಇರುವಂತಹ ವಿಷಯಗಳ ಬಗ್ಗೆ, ಪ್ರಚಲಿತ ಘಟನೆಗಳ ಕುರಿತು ಲೇಖನವಿರಬೇಕು. ಪ್ರತಿಯೊಂದು ವಿಷಯಕ್ಕೆ ಹೊಂದಿಕೊಳ್ಳುವಂತಹ ಭಾವಚಿತ್ರಗಳಿದ್ದರೆ ಲೇಖನ ಸ್ವಾರಸ್ಯಕರವಾಗಿರುತ್ತದೆ. ಎಂದು ತಿಳಿಸಿಕೊಟ್ಟ ಅವರ ಮಾತುಗಳು ಇಂದಿಗೂ ಅವಿಸ್ಮರಣೀಯ.
ಲೇಖನ ಬರೆಯಬೇಕೆಂಬ ಹಂಬಲ, ತುಡಿತ ನನಗೆ ಇನ್ನೂ ಹೆಚ್ಚಾಯಿತು. ನನ್ನ ಈ ಅಭಿಲಾಷೆಯಿಂದ ಇದೀಗ ಹತ್ತು ಲೇಖನಗಳು ಈ-ಕನಸು.ಕಾಂನಲ್ಲಿ ಪ್ರಕಟಗೊಂಡಿವೆ. ನನ್ನ ಮನೋಭಿಲಾಷೆಗೆ ಇದು ಸ್ಪೂತರ್ಿಯ ಸೆಲೆಯಾಯಿತು. ಹೊಸ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟು, ಯುವಲೇಖಕರಲ್ಲಿ ಉತ್ಸಾಹವನ್ನು ತುಂಬುವದರ ಜೊತೆಗೆ ಅವರ ಗುರಿಯನ್ನು ಸಾಧಿಸಲು ಸಹಾಯಕವಾಗಿದೆ. ಯುವ ಮನಸ್ಸಿನ ಮನದಂಗಳಕೆ ಬರವಣಿಗೆಯ ಭರವಸೆ ಮೂಡಿಸುತ್ತಿರುವ ಈ ವೆಬ್ಸೈಟ್ ಪತ್ರಿಕೆ ನಿಜಕ್ಕೂ ಶ್ಲಾಘನೀಯವಾದುದು. ಬರವಣಿಗೆ ಎನ್ನುವದು ಒಂದು ಕಲೆ. ಅದು ಎಲ್ಲರಿಗೂ ಸಿದ್ದಿಸುವುದಿಲ್ಲ ಎನ್ನುವದು ಬಹಳ ಜನರ ಅಭಿಮತ. ಆದರೆ ಪ್ರಪಂಚದಲ್ಲಿ ಇಷ್ಟೊಂದು ಬರಹಗಾರರು ಇರುವಾಗ, ಅವರಲ್ಲಿ ನಾವೇಕೆ ಒಬ್ಬರಾಗಬಾರದು? ಮನಸ್ಸಿನಲ್ಲಿರುವದನ್ನು ಬರವಣಿಗೆಯ ರೂಪಕ್ಕೆ ಇಳಿಸಲು ಪ್ರಯತ್ನ ಮಾಡಬೇಕು, ಅಕ್ಷರದ ಮೂಲಕ ವ್ಯಕ್ತಪಡಿಸಲು ಸಮರ್ಥರಾಗಬೇಕು. ನಾವು ಬರೆಯುವಂತಹ ಲೇಖನಗಳಲ್ಲಿ ಸತ್ವವಿದ್ದರೆ ಅದು ಖಂಡಿತಾ ಪ್ರಕಟಣೆಗೆ ಒಳಪಡುತ್ತದೆ. ಬನ್ನಿ ಬರಹಗಾರರಾಗೋಣ, ಈ-ಕನಸು, ಇದು ವರ್ಷದ ಕನಸು. ಇದೊಂದು ಅಪೂರ್ವ ಸಂಗಮ.
-ಅಮರೇಶ ನಾಯಕ ಜಾಲಹಳ್ಳಿ
Cell-9945268059.
nice article
ReplyDelete