Thursday, 22 January 2015

ನಿನ್ನಾಗಮನದ ನಿರೀಕ್ಷೆಯಲ್ಲಿ...

ಪ್ರಾಂಜಲ ಮನಸ್ಸಿನ ಪ್ರೇಯಸಿ
ಓ ಗೆಳತಿ.. ನೀನೆ ನನಗೆ ಸಾರಥಿ
ಮನೆದೀಪ ಬೆಳಗುವ ಆರತಿ
ಮನದಾಳದಿ ಮನೆ ಮಾಡಿದ ಪಾರ್ವತಿ
--
ಚೆಲುವಿನ ಚಿತ್ತಾರ ನಿನ್ನ ಆಕೃತಿ
ಹೂಗಳ ರಾಶಿಯಿಂದ ಒಡಮೂಡಿದಾಕೃತಿ
ಇಳೆಗೆ ತಂದಿರುವುದೇ ಈ ಪ್ರಕೃತಿ
ನಿನ್ನ ನೋಡಿ ಬೆರಗಾದೆನಲ್ಲ ಓ ಕಾಂತಿ
--
ಸ್ಪುರದ್ರೂಪಿ ಗೆಳತಿ.. ಎಲ್ಲದಕ್ಕೂ ನೀ ಸ್ಫೂರ್ತಿ
ಒಡಮೂಡಿದವು ಕಲ್ಪನೆಯ ಅಕ್ಷರಾಕೃತಿ
ಹೃದಯದಲ್ಲಿ ಬೆಸೆದಿದೆ ನಿನ್ನ ಕಲಾಕೃತಿ
ಅಕ್ಷರಗಳ ವರ್ಣನೆಗೆ ಅಂಕುಶವಿಲ್ಲ ಗೆಳತಿ
--
ನೀನಲ್ಲದಿದ್ದರೂ ಸೌಂದರ್ಯವತಿ
ನೀ ಹೇಗಿದ್ದರೂ ನನ್ನ ಗೆಳತಿ
ನಿನ್ನ ವರ್ಣಿಸಲು ನನಗೆ ಬಲು ಸ್ಫೂರ್ತಿ
ಮುಂದೆ ಆಗುವೆಯಾ ಬಾಳ ಸಂಗಾತಿ..
-- ಅಮರೇಶ ನಾಯಕ




Monday, 19 January 2015

ನಲ್ಲೆ.. ಒಂದು ಸಾರಿ ನಿಲ್ಲೆ..

ಕೇಳೆ ಚೆಂದದ ನಾರಿ
ಬಲು ಅಂದದ ಸಿಂಗಾರಿ
ನಿನಗೆ ನಾ ಆಭಾರಿ
ಓ ನನ್ನ ಬಂಗಾರಿ
ನಿಲ್ಲೆ ಒಂದು ಸಾರಿ..
--
ಪ್ರೀತಿಯ ಮನೋಹರಿ
ನನ್ನ ಚಂದ್ರಚಕೋರಿ
ನಿನ್ನ ನಗು ನವಿಲುಗರಿ
ಓ ಹೃದಯ ಕದ್ದ ಚೋರಿ
ನಿಲ್ಲೆ ಒಂದು ಸಾರಿ..
--
ಓ ಮುದ್ದಿನ ಸುಕುಮಾರಿ
ಹೃದಯದ ಮೇಲೆ ನಿನ್ನ ಸವಾರಿ
ನಿನಗೆ ಯಾವುದು ಸರಿದಾರಿ
ವಯ್ಯಾರಿ.. ನೀ ಕನ್ಯಾಕುಮಾರಿ
ತೋರಿಸದಿರು ನನಗೆ ಕಲ್ಲುಕ್ವಾರಿ
ನಿಲ್ಲೆ ಒಂದು ಸಾರಿ..
--
ಭಾರತ ಸಂಸ್ಕೃತಿಯ ನಾರಿ
ಬಲು ಅಂದವ ತೋರಿ
ಬೇರೆ ಇರುವನು ಸೂತ್ರಧಾರಿ
ನಾ ಬರೀ ಪಾತ್ರಧಾರಿ
ಧ್ವನಿ ಕೇಳಿಸಿತೇ ಕುಮಾರಿ
ನಿಲ್ಲೆ ಒಂದು ಸಾರಿ..
--ರಾಜಾ ಅಮರೇಶ ನಾಯಕ










Thursday, 15 January 2015

ವೇದನೆಯ ಕಟ್ಟೆಯೊಡೆದಾಗ...

ಕೋಮಲ ಕಂಗಳಿಗೆ ನಾ ಮನಸೋತೆ
ಓ ನನ್ನ ಗೆಳತಿ.. ತೆಗೀಬೇಡ ನೀ ಕ್ಯಾತೆ
ಹೃದಯದಲ್ಲಿ ಆರಾಧಿಸುವೆ ಕಾಣೆಯೇ ಮಾತೆ
ಕಂಗಳ ಕುಡಿನೋಟದಲ್ಲಿ ಅದೆಂಥಾ ಖಾತೆ
--
ನೀಲ ನಯನಗಳು ನನ್ನ ಮೋಡಿ ಮಾಡಿತೇ
ಅಕ್ಷಿಪಟಲಗಳ ಆಕರ್ಷಣೆಗೆ ಮನ ಮಿಡಿಯಿತೇ
ಕಣ್ಣುಗಳ ಸೌಂದರ್ಯಕ್ಕೆ ಮನ ಮಂದಾರವಾಯಿತೇ
ಕಣ್ಣಲ್ಲಿನ ಕಪ್ಪು ಛಾಯೆ ನನ್ನನ್ನು ಕರಗಿಸಿತೇ..
ಮನೆ ಮಾಡಿದ ಮನದ ಇಂಗಿತ ನಿನಗೆ ತಿಳಿಯಿತೇ
--
ಪ್ರೇಮ ಚಿಗುರಿತೇ.. ಪ್ರೀತಿ ಎನ್ನಲಾದೀತೆ
ಓ ನನ್ನ ನಲ್ಲೆ.. ನಿನ್ನ ನಯನ ನನ್ನ ಸೆಳೆಯಿತೇ
ನೂರು ಪ್ರಶ್ನೆಗಳ ಮಧ್ಯೆ ನಾ ಒದ್ದಾಡಲಾದೀತೆ
ಪ್ರಶ್ನೆಗಳಿಗೆ ಉತ್ತರ ನೀ ನೀಡಲಾದೀತೆ...?
-- ರಾಜಾ ಅಮರೇಶ ನಾಯಕ





Monday, 12 January 2015

ನೊಂದ ಮೀನು.. ಆನಂದದಲಿ ನೀನು..

ಮಗುವಿನಲ್ಲಿ ಮನೆ ಮಾಡಿದೆ ಅತಿಯಾದ ಉಲ್ಲಾಸ..
ಎದ್ದು ಕಾಣುತ್ತಿದೆ ಆತನ ಮೊಗದಲ್ಲಿ ಮಂದಹಾಸ..
ಆತ ಹಿಡಿದಿರುವ ಭಂಗಿ.. ನಡೆಯುತ್ತಿರುವ ಠೀವಿ..
ಭುವಿಯ ಮೇಲೆ ಏನೋ ಸಾಧಿಸಿದ ಅನುಭವಿ..
--
ಬಲು ಹುಮ್ಮಸ್ಸಿನಿಂದ ಕೂಡಿದೆ ಮಗುವಿನ ಓಟ..
ಭೂಮಿಯ ಕಡೆ ಮುಖ ಮಾಡಿದೆ ಮೀನಿನ ನೋಟ..
ಅತ್ಯುತ್ಸಾಹದ ಆನಂದದಲ್ಲಿ ಮಗು ಮನೆಗೆ..
ಮನೆಗೆ ಹೋದ ಮೀನಿಗೆ.. ಪ್ರಾಣವಿಲ್ಲ ಕೊನೆಗೆ..


Thursday, 8 January 2015

ಒಂದಾಗಲಿ ಸುಪ್ತ ಮನಸುಗಳ ಭಾವಗಳು..

ನೋಡಿರಿ ಇದು ಬೃಹತ್ ಮಹಾನಗರ ಪಾಲಿಕೆ..
ಮಾಡದಿರಿ ಸಣ್ಣ ನಗರ ಪಾಲಿಕೆ 
ಒಗ್ಗೂಡಿಸಿರಿ ನೂರು ಮನಸುಗಳ ಕನಸ
ಯತ್ನಿಸಿರಿ ನನಸು ಮಾಡಲು ಆ ಕನಸಾ..
ತೊಲಗಿಸಿರಿ ಒಡೆದು ಆಳುವ ನೀತಿಯ
ಗೆಲ್ಲಿರಿ ಸಾಮರಸ್ಯದ ಜನರ ಮನಸಾ..
--
ಮಾಡುತಿಹರು ಪ್ರಜಾಪ್ರತಿನಿಧಿಗಳು ಪ್ರಹಸನ
ನೋಡುತಿಹರು ಸುಖಾಸುಮ್ಮನೆ ನಾಡಪ್ರಜೆಗಳು
ಎಚ್ಚೆತ್ತುಕೊಳ್ಳಿರೈ.. ನೀವ್ಗಳ್..
--
ಇದು ನಮ್ಮ ಬೆಂಗಳೂರು.. ಬೃಹತ್ ಬೆಂಗಳೂರು
ಇದ ಕಟ್ಟಲು ಶ್ರಮಿಸಿದರು ನಾಡಪ್ರಭುಗಳು
ಇದ ಉಳಿಸಲು ಯತ್ನಿಸಿರಿ ನೀವು ಪ್ರಜೆಗಳು
ಧೀರ ಪ್ರಜೆಗಳೇ.. ಕೆಚ್ಚದೆಯಾ ಕಲಿಗಳೇ..
ಒಂದಾಗಲಿ ಸುಪ್ತ ಮನಸುಗಳ ಭಾವಗಳು..




ಗೆಳತಿ ಜೋಪಾನ...

ಬೆಂದಕಾಳೂರಿಗೆ ಬಂದ ಬೆಳದಿಂಗಳ ಬಾಲೆ
ಸುಂದರ ನಯನಗಳ ಮಂದಾರ ಮಲ್ಲೆ
ಉದ್ಯಾನಗಳ ನಗರವಿದು.. ಫಲಪುಷ್ಪಗಳ ನಾಡಿದು..
ದುಂಬಿಗಳ ರೀತಿಯಲಿ ಕೆಡಕು ಜನರು ಬರುತಿಹರು
ಚೆಂದದ ಹೂಗಳ ಮಕರಂದವ ಹೀರುತಿಹರು
ಜೋಪಾನ.. ಬಲು ಜೋಪಾನ..
--
ನಲ್ಮೆಯ ಮುದ್ದಿನ ಗೆಳತಿ
ನೀನಾಗಿರುವೆ ಮುಗ್ಧೆಯ ಒಡತಿ
ಅರಳಿದ ಮಲ್ಲಿಗೆ.. ಸ್ನೇಹದ ಸಂಪಿಗೆ..
ನೀ ಹೊರಟಿಹೆ ಅಲ್ಲಿಗೆ..
ಜೋಪಾನ.. ಬಲು ಜೋಪಾನ..
--
ನಸುಕಿನ ವೇಳೆಯಲಿ.. ನೆಲಮಂಗಲ ಊರಿನಲಿ..
ನೀ ಹೆಜ್ಜೆ ಇಟ್ಟಿರುವೆ ಕೆಂಪೇಗೌಡರ ನಾಡಿನಲಿ
ಜೋಪಾನ.. ಬಲು ಜೋಪಾನ..
--
ಬೆಂದಕಾಳೂರು ಹೋಗಿ ಬೆಂಗಳೂರು
ಪ್ರಶಾಂತ ವಾತಾವರಣ ಇದು ನಮ್ಮೂರು
ಅಶಾಂತಿಯ ಕಿಡಿ ಹೊತ್ತಿಸಲು ಕುಳಿತಿಹರು
ಬಂದು ಸೇರುತಿಹರಿಲ್ಲಿ ಬಂಡುಕೋರರು
ಜೋಪಾನ.. ಬಲು ಜೋಪಾನ..
--ಅಮರೇಶ ನಾಯಕ