ನೊಂದ ಮೀನು.. ಆನಂದದಲಿ ನೀನು..
ಮಗುವಿನಲ್ಲಿ ಮನೆ ಮಾಡಿದೆ ಅತಿಯಾದ ಉಲ್ಲಾಸ..ಎದ್ದು ಕಾಣುತ್ತಿದೆ ಆತನ ಮೊಗದಲ್ಲಿ ಮಂದಹಾಸ..ಆತ ಹಿಡಿದಿರುವ ಭಂಗಿ.. ನಡೆಯುತ್ತಿರುವ ಠೀವಿ..ಭುವಿಯ ಮೇಲೆ ಏನೋ ಸಾಧಿಸಿದ ಅನುಭವಿ..--
ಬಲು ಹುಮ್ಮಸ್ಸಿನಿಂದ ಕೂಡಿದೆ ಮಗುವಿನ ಓಟ..
ಭೂಮಿಯ ಕಡೆ ಮುಖ ಮಾಡಿದೆ ಮೀನಿನ ನೋಟ..
ಅತ್ಯುತ್ಸಾಹದ ಆನಂದದಲ್ಲಿ ಮಗು ಮನೆಗೆ..
ಮನೆಗೆ ಹೋದ ಮೀನಿಗೆ.. ಪ್ರಾಣವಿಲ್ಲ ಕೊನೆಗೆ..
No comments:
Post a Comment