Thursday, 8 January 2015

ಗೆಳತಿ ಜೋಪಾನ...

ಬೆಂದಕಾಳೂರಿಗೆ ಬಂದ ಬೆಳದಿಂಗಳ ಬಾಲೆ
ಸುಂದರ ನಯನಗಳ ಮಂದಾರ ಮಲ್ಲೆ
ಉದ್ಯಾನಗಳ ನಗರವಿದು.. ಫಲಪುಷ್ಪಗಳ ನಾಡಿದು..
ದುಂಬಿಗಳ ರೀತಿಯಲಿ ಕೆಡಕು ಜನರು ಬರುತಿಹರು
ಚೆಂದದ ಹೂಗಳ ಮಕರಂದವ ಹೀರುತಿಹರು
ಜೋಪಾನ.. ಬಲು ಜೋಪಾನ..
--
ನಲ್ಮೆಯ ಮುದ್ದಿನ ಗೆಳತಿ
ನೀನಾಗಿರುವೆ ಮುಗ್ಧೆಯ ಒಡತಿ
ಅರಳಿದ ಮಲ್ಲಿಗೆ.. ಸ್ನೇಹದ ಸಂಪಿಗೆ..
ನೀ ಹೊರಟಿಹೆ ಅಲ್ಲಿಗೆ..
ಜೋಪಾನ.. ಬಲು ಜೋಪಾನ..
--
ನಸುಕಿನ ವೇಳೆಯಲಿ.. ನೆಲಮಂಗಲ ಊರಿನಲಿ..
ನೀ ಹೆಜ್ಜೆ ಇಟ್ಟಿರುವೆ ಕೆಂಪೇಗೌಡರ ನಾಡಿನಲಿ
ಜೋಪಾನ.. ಬಲು ಜೋಪಾನ..
--
ಬೆಂದಕಾಳೂರು ಹೋಗಿ ಬೆಂಗಳೂರು
ಪ್ರಶಾಂತ ವಾತಾವರಣ ಇದು ನಮ್ಮೂರು
ಅಶಾಂತಿಯ ಕಿಡಿ ಹೊತ್ತಿಸಲು ಕುಳಿತಿಹರು
ಬಂದು ಸೇರುತಿಹರಿಲ್ಲಿ ಬಂಡುಕೋರರು
ಜೋಪಾನ.. ಬಲು ಜೋಪಾನ..
--ಅಮರೇಶ ನಾಯಕ


No comments:

Post a Comment