Sunday, 31 May 2015

ಬರೆಯಲ್ಲ ರಕ್ತದಲ್ಲಿ ಪತ್ರ...

ಗೆಳತಿ, ನಿನಗಾಗಿ ನಾ ಬರೆಯಲ್ಲ
ರಕ್ತದಲ್ಲಿ ಪತ್ರ
ಹೃದಯದಲ್ಲಿ ನಾ ಬಿಡಿಸಿಕೊಂಡಿರುವೆ 
ನಿನ್ನ ವರ್ಣಚಿತ್ರ
ನಿನ್ನ ಹೆಸರಲ್ಲಿ ನಾ ದಾನ ಮಾಡುವೆ
ಮೈಯಲ್ಲಿನ ನೆತ್ತರ..
ಪ್ರೇಯಸಿ, ನನಗೇನಾದ್ರೂ ಪರವಾಗಿಲ್ಲ
ನೀ ಪಡಬೇಡ ತತ್ತರ..
ನಿನ್ನ ಮೇಲೆ ನನಗೆ ಅಪಾರ ಪ್ರೇಮ
ಒಪ್ಪಿ ಬರ್ತಿಯಾ ಹತ್ತಿರ..
--
ಮನದಲ್ಲಿ ಮನೆ ಮಾಡಿದ ಮನದರಸಿ
ನೀನೇ ನನಗೆ ಮಿತ್ರ
ಪದಪುಂಜಗಳ ಪೋಣಿಸಿ ವರ್ಣಿಸಲಾಗದೇ
ನಾ ನಿಂತೆ ವಿಚಿತ್ರ
ನಿನ್ನಂತರಂಗ ಸೌಂದರ್ಯಕೆ ಮರುಳಾಗಿ
ಬರೆಯಲಿಲ್ಲ ಪತ್ರ
ನನ್ನ ಒಡಲ ಮೇಲೆ ಮೂಡಿಸಿಕೊಳ್ಳುವುದಿಲ್ಲ
ನಿನ್ನ ಹೆಸರಾ..
ನನ್ನಂತರಂಗದಲ್ಲಿ ಅಚ್ಚೊತ್ತಾಗಿದೆ ನಿನ್ನ
ನಯನಗಳ ಚಿತ್ತಾರ..




Friday, 29 May 2015

ಜಸ್ಟ್ ಮಾತು ಮಾತಲ್ಲಿ...

ನೀಟಾಗಿದೆ ನಿನ್ನ ಡ್ರೆಸ್ ಕೋಡ್
ನಿನ್ನಲ್ಲಿಲ್ಲ ಅಹಂಕಾರದ ಕೋಡು
ಸ್ವಲ್ಪ ಇಗೋ ಬಿಟ್ಟು ಮಾತಾಡು
ಕೋಪಿಸಿಕೊಳ್ಳಬೇಡ ಜಸ್ಟ್ ಡು
--
ಅಟೆನ್ಷನ್ ನಲ್ಲಿ ನಿಂತು ನೀ ಕೇಳು
ಡು ಆರ್ ಡೈ ಅಂತಿದೆ ನನ್ನ ಬಾಳು
ನೀನಿಲ್ಲದಿದ್ದರೆ ಜೀವನ ಬರೀ ಗೋಳು
ಅಚೀವ್ ಮಾಡಲು ಏನಾದ್ರೂ ಹೇಳು
--
ಡಿಯರ್.. ನೀನೊಂದು ಸ್ಕೈ..
ನಿನಗಾಗಿ ನಾ ಮಾಡುವೆ ಟ್ರೈ
ಖಂಡಿತಾ, ನೀ ಸಿಗದಿದ್ದೆರೆ ನಾ ಡೈ
ನಾ ಸತ್ತರೆ ನಿನಗೆ ಬರುತ್ತಾ ಕ್ರೈ..
--
ನೀ ಸಿಗುವ ಡಿಸೈರ್ ನನ್ನಲ್ಲಿ..
ಡಿಸೈನ್ ಡಿಸೈನ್ ಮಾತುಗಳು ನಿನ್ನಲ್ಲಿ
ನೀ ಡಿಫರೆಂಟ್ ನನ್ನ ಕಣ್ಣಲ್ಲಿ
ಡೆಫಿನಿಷನ್ ಉಂಟು ನಿನ್ನ ಮಾತಲ್ಲಿ..




Monday, 25 May 2015

ನಿನದೇ ಆಲಾಪ...

ನೀ ನಡೆದರೆ ನವಿಲು..
ನೀ ನುಡಿದರೆ ಕೋಗಿಲೆ
ನಿನ್ನ ಒಲುಮೆಗೆ ನಾ ಬಲೆ
ಸ್ರವಿಸಲಿ ಪ್ರೀತಿಯ ಸೆಲೆ
--
ನನ್ನಲ್ಲಿ ನಿನಗೆ ಬಲು ಕೋಪ
ಬೇಡ ನನ್ನ ಮೇಲೆ ಪ್ರತಾಪ
ದಿನವಿಡೀ ನಿನದೇ ಆಲಾಪ
ಮನದಲ್ಲಿ ನಡೆದಿದೆ ಕಲಾಪ
--
ನಿನ್ನ ಕಣ್ಣಲ್ಲಿ ಅದೇನೋ ಮಿಂಚು
ಹಾಕ್ತಿದೆ ಮನ ನಿನಗಾಗಿ ಹೊಂಚು
ನೀ ನೀಡದಿರು ನನಗೆ ಪಂಚ್
ನನ್ನ ಪ್ರೇಮದಲ್ಲಿಲ್ಲ ಸಂಚು
--
ನಿನ್ನಂತರಂಗದಲ್ಲಿ ಅಪಾರ ಪ್ರೀತಿ
ಮೂಡ್ತಿಲ್ಲ ಭಾವನೆಗಳ ಅಭಿವ್ಯಕ್ತಿ
ಸರಿಯಲ್ಲ ನೀನಾಡುವ ರೀತಿ
ಹರಡಲಿ ಒಲವಿನ ಕೀರ್ತಿ...




Sunday, 24 May 2015

ಗೆಳತಿಗೆ ನಮನ...

ನಗುವಿನೊಂದಿಗೆ ನಿನಗೆ ನಮನ
ಕಣ್ಮುಂದೆ ಕಾಣ್ತಿದೆ ಸುಂದರ ಕಾನನ
ಮನಸ್ಸಿನಲ್ಲಿ ನಿನದೇ ಮನನ
ನೀ ಮಾಡದಿರು ಅದರ ಹನನ
--
ನಿನಗಾಗಿ ಈ ನನ್ನ ಜನನ
ಎಲ್ಲಿದ್ದರೂ ನಿನ್ನಲ್ಲೇ ಗಮನ
ಬರೆಯಲೇ ಒಂದು ಹನಿಗವನ
ತರದಿರು ನೀ ನನಗೆ ಮರಣ
--
ಹೃದಯದಲ್ಲಿ ತನನಂ ತನನ..
ಮನದಲ್ಲಿ ನಿನದೇ ನೆನಪಿನ ತಿಲ್ಲಾನ..
ಕನಸಿನಲ್ಲಿ ಬರೆದ ಒಲವಿನ ಕವನ
ಮಾಡದಿರು ಪ್ರೇಮದ ಹರಣ
--
ಗೆಳತಿ ನೀನೆ ನನಗೆ ತನುಮನ
ನೆನಪಲ್ಲೇ ಸಾಗ್ತಿದೆ ಬಾಳ ಪಯಣ
ಮುರಿಯುವೆಯಾ ನಿನ್ನ ಮೌನ
ಸನಿಹ ಬಂದರೆ ರೋಮಾಂಚನ
--
ತುಂತುರು ಹನಿಗಳ ಸಿಂಚನ
ಹೃದಯದಲ್ಲಿ ಒಂದು ಸಂಚಲನ
ಕಾದಿದೆ ಒಲವಿಗಾಗಿ ನನ್ನ ಮನ
ಓ ಗೆಳತಿ, ನಿನಗೆ ನನ್ನ ನಮನ




Thursday, 21 May 2015

ಮನದ ಮಾತು...

ಮನದ ಭಾವನೆಗಳು ಮನದೊಳಗೆ 
ಮಾತುಗಳು ಬರ್ತಿಲ್ಲವಲ್ಲ ಹೊರಗೆ
ನಿನ್ನ ಕಂಡಾಗ, ಮೌನ ಮಾತಾಗಿ
ಮಾತುಗಳು ಬರೀ ತುಟಿಯ ಕೆಳಗೆ
--
ನೀಲ ನಯನಗಳು ಮಾಡಿದೆ ಮೋಡಿ
ಹೃದಯದಲ್ಲಿ ಹರಿಯಿತು ಚಿತ್ರದ ಕೋಡಿ
ಮನದಲ್ಲಿ ನಿನ್ನ ರೂಪದ ಚೆಲುವ ಕಾಡಿ
ನಿನ್ನ ನಾಡಿಮಿಡಿತದ ಸುಳಿವ ನಾ ಬೇಡಿ
--
ಮೌನ ಮುರಿದು ಮಾತನಾಡಿದೊಡೆ
ಒಲವಿನ ಕಾವ್ಯ ನನಗೆ ತಿಳಿಯುವುದೇ
ಎದೆಯಾಳದ ಭಾವ ಒಡಮೂಡಿದೊಡೆ
ನನ್ನ ಹೃದಯ ಲಹರಿ ಹಾಡುವುದೇ
--
ಮನದ ಭಾವನೆಗಳು ಮನದೊಳಗೆ
ಅದನು ನೀ ಅರಿತರೆ ಸಾಕು ಎನಗೆ
ಜೀವನ ಸಾರ್ಥಕ ಭಾವನೆ ನನಗೆ
ಓ ಮಲ್ಲಿಗೆ, ನೀಡುವೆಯಾ ನೀ ಒಪ್ಪಿಗೆ





ಪ್ರೇಮಾಂಕುರದ ಕ್ಷಣ...

ನೀನು ಬಿಟ್ಟೆ ನನಗೆ ಪ್ರೇಮಬಾಣ
ಆಯ್ತು ಪ್ರೇಮಾಂಕುರದ ಅನಾವರಣ
ನೀನಿಲ್ಲದ ನನ್ನ ಒಡಲು ರಣರಣ
ಇಬ್ಬರು ಮಾಡಿಕೊಳ್ಳೋಣವೇ ಕಲ್ಯಾಣ
--
ಸ್ವಪ್ನದಲ್ಲಿ ಕಂಡೆ ಸುಂದರ ಆವರಣ
ಎಲ್ಲೆಲ್ಲೂ ನಿನ್ನ ಬಿಂಬದ ಕಣಕಣ
ಅಲ್ಲಿತ್ತು ಸುಂದರ ಒಲವಿನ ತಾಣ
ತುಡಿಯುತಿದೆ ನಿನಗಾಗಿ ನನ್ನ ಮನ
--
ನೀ ಮರೆತರೂ ನಾ ಮರೆಯನು ಆ ಕ್ಷಣ
ನಾನಿರುವುದಿಲ್ಲ ನಿನ್ನ ಮರೆತ ಮರುಕ್ಷಣ
ನಿನಗೆ ತಿಳಿಯುತ್ತಿಲ್ಲವೇ ಮನದ ತಲ್ಲಣ
ಬಾಳಲ್ಲಿ ನೀ ಬರದಿದ್ದರೆ ಬದುಕೆಲ್ಲ ಬಣಬಣ
--