Monday, 12 January 2015

ನೊಂದ ಮೀನು.. ಆನಂದದಲಿ ನೀನು..

ಮಗುವಿನಲ್ಲಿ ಮನೆ ಮಾಡಿದೆ ಅತಿಯಾದ ಉಲ್ಲಾಸ..
ಎದ್ದು ಕಾಣುತ್ತಿದೆ ಆತನ ಮೊಗದಲ್ಲಿ ಮಂದಹಾಸ..
ಆತ ಹಿಡಿದಿರುವ ಭಂಗಿ.. ನಡೆಯುತ್ತಿರುವ ಠೀವಿ..
ಭುವಿಯ ಮೇಲೆ ಏನೋ ಸಾಧಿಸಿದ ಅನುಭವಿ..
--
ಬಲು ಹುಮ್ಮಸ್ಸಿನಿಂದ ಕೂಡಿದೆ ಮಗುವಿನ ಓಟ..
ಭೂಮಿಯ ಕಡೆ ಮುಖ ಮಾಡಿದೆ ಮೀನಿನ ನೋಟ..
ಅತ್ಯುತ್ಸಾಹದ ಆನಂದದಲ್ಲಿ ಮಗು ಮನೆಗೆ..
ಮನೆಗೆ ಹೋದ ಮೀನಿಗೆ.. ಪ್ರಾಣವಿಲ್ಲ ಕೊನೆಗೆ..


Thursday, 8 January 2015

ಒಂದಾಗಲಿ ಸುಪ್ತ ಮನಸುಗಳ ಭಾವಗಳು..

ನೋಡಿರಿ ಇದು ಬೃಹತ್ ಮಹಾನಗರ ಪಾಲಿಕೆ..
ಮಾಡದಿರಿ ಸಣ್ಣ ನಗರ ಪಾಲಿಕೆ 
ಒಗ್ಗೂಡಿಸಿರಿ ನೂರು ಮನಸುಗಳ ಕನಸ
ಯತ್ನಿಸಿರಿ ನನಸು ಮಾಡಲು ಆ ಕನಸಾ..
ತೊಲಗಿಸಿರಿ ಒಡೆದು ಆಳುವ ನೀತಿಯ
ಗೆಲ್ಲಿರಿ ಸಾಮರಸ್ಯದ ಜನರ ಮನಸಾ..
--
ಮಾಡುತಿಹರು ಪ್ರಜಾಪ್ರತಿನಿಧಿಗಳು ಪ್ರಹಸನ
ನೋಡುತಿಹರು ಸುಖಾಸುಮ್ಮನೆ ನಾಡಪ್ರಜೆಗಳು
ಎಚ್ಚೆತ್ತುಕೊಳ್ಳಿರೈ.. ನೀವ್ಗಳ್..
--
ಇದು ನಮ್ಮ ಬೆಂಗಳೂರು.. ಬೃಹತ್ ಬೆಂಗಳೂರು
ಇದ ಕಟ್ಟಲು ಶ್ರಮಿಸಿದರು ನಾಡಪ್ರಭುಗಳು
ಇದ ಉಳಿಸಲು ಯತ್ನಿಸಿರಿ ನೀವು ಪ್ರಜೆಗಳು
ಧೀರ ಪ್ರಜೆಗಳೇ.. ಕೆಚ್ಚದೆಯಾ ಕಲಿಗಳೇ..
ಒಂದಾಗಲಿ ಸುಪ್ತ ಮನಸುಗಳ ಭಾವಗಳು..




ಗೆಳತಿ ಜೋಪಾನ...

ಬೆಂದಕಾಳೂರಿಗೆ ಬಂದ ಬೆಳದಿಂಗಳ ಬಾಲೆ
ಸುಂದರ ನಯನಗಳ ಮಂದಾರ ಮಲ್ಲೆ
ಉದ್ಯಾನಗಳ ನಗರವಿದು.. ಫಲಪುಷ್ಪಗಳ ನಾಡಿದು..
ದುಂಬಿಗಳ ರೀತಿಯಲಿ ಕೆಡಕು ಜನರು ಬರುತಿಹರು
ಚೆಂದದ ಹೂಗಳ ಮಕರಂದವ ಹೀರುತಿಹರು
ಜೋಪಾನ.. ಬಲು ಜೋಪಾನ..
--
ನಲ್ಮೆಯ ಮುದ್ದಿನ ಗೆಳತಿ
ನೀನಾಗಿರುವೆ ಮುಗ್ಧೆಯ ಒಡತಿ
ಅರಳಿದ ಮಲ್ಲಿಗೆ.. ಸ್ನೇಹದ ಸಂಪಿಗೆ..
ನೀ ಹೊರಟಿಹೆ ಅಲ್ಲಿಗೆ..
ಜೋಪಾನ.. ಬಲು ಜೋಪಾನ..
--
ನಸುಕಿನ ವೇಳೆಯಲಿ.. ನೆಲಮಂಗಲ ಊರಿನಲಿ..
ನೀ ಹೆಜ್ಜೆ ಇಟ್ಟಿರುವೆ ಕೆಂಪೇಗೌಡರ ನಾಡಿನಲಿ
ಜೋಪಾನ.. ಬಲು ಜೋಪಾನ..
--
ಬೆಂದಕಾಳೂರು ಹೋಗಿ ಬೆಂಗಳೂರು
ಪ್ರಶಾಂತ ವಾತಾವರಣ ಇದು ನಮ್ಮೂರು
ಅಶಾಂತಿಯ ಕಿಡಿ ಹೊತ್ತಿಸಲು ಕುಳಿತಿಹರು
ಬಂದು ಸೇರುತಿಹರಿಲ್ಲಿ ಬಂಡುಕೋರರು
ಜೋಪಾನ.. ಬಲು ಜೋಪಾನ..
--ಅಮರೇಶ ನಾಯಕ