Wednesday, 20 June 2012

Bangalore Media Tour (Journalism & Mass Communication)


ಮಾಧ್ಯಮ ಕ್ಷೇತ್ರದ ಸ್ವರೂಪ ತಿಳಿಸಿದ ಶೈಕ್ಷಣಿಕ ಪ್ರವಾಸ


ಯಾವುದೇ ಒಂದು ವೃತ್ತಿಪರ ಕೋರ್ಸಗಳಲ್ಲಿ ಅಧ್ಯಯನ ಮಾಡುವ ವಿದ್ಯಾಥರ್ಿಗಳು ಕೇವಲ ಪಠ್ಯದಿಂದ ಜ್ಞಾನವನ್ನು ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ ಬದಲಾಗಿ ವಿದ್ಯಾಥರ್ಿಗಳು ಜ್ಞಾನವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ವಿಶೇಷ ಅಂಶಗಳು ಅವಶ್ಯವಾಗಿ ಬೇಕಾಗುತ್ತವೆ. ಅವುಗಳು ವಿಚಾರ ಸಂಕಿರಣಗಳಾಗಿರಬಹುದು, ಕಾಯರ್ಾಗಾರಗಳಾಗಿರಬಹುದು, ಶೈಕ್ಷಣಿಕ ಪ್ರವಾಸಗಳಾಗಿರಬಹುದು, ಇಂಥಹ ಕಾರ್ಯಕ್ರಮಗಳು ವಿದ್ಯಾಥರ್ಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ.


ಪೂರ್ವ ಸಿದ್ಧತೆ


ನಮ್ಮ ಮಾಧ್ಯಮ ಭೇಟಿಗೆ ಆಯ್ಕೆ ಮಾಡಿಕೊಂಡ ಪ್ರದೇಶ ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿ, ಉದ್ಯಾನಗಳ ನಗರಿ, ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಮಹಾನಗರ. ನಮ್ಮ ಶೈಕ್ಷಣಿಕ ಪ್ರವಾಸದ ಅವಧಿ ಮೂರು ದಿನಗಳಾಗಿದ್ದು, ಮೇ, 29, 30, 31 ದಿನಾಂಕದಂದು ನಿಗಧಿಪಡಿಸಲಾಗಿತ್ತು. ಪತ್ರಿಕೋದ್ಯಮ ವಿಭಾಗದ ಶೈಕ್ಷಣಿಕ ಪ್ರವಾಸದ ಅಂಗವಾಗಿ ರಾಜ್ಯಮಟ್ಟದ ದಿನ ಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕನರ್ಾಟಕ, ಕನ್ನಡಪ್ರಭ ಹಾಗೂ ಜನಶ್ರೀ ವಾಹಿನಿಗೆ ಅನುಮತಿ ದೊರಕಿತ್ತು. 


ಪ್ರಯಾಣ


ಮೇ, 28 ಸೋಮವಾರದಂದು ಸಾಯಂಕಾಲ 8.ಘಂಟೆ ಸುಮಾರಿಗೆ, ವಿಭಾಗದ ಸಂಯೋಜಕರ ಆದೇಶದ ಮೇರೆಗೆ, ಅಥಿತಿ ಉಪನ್ಯಾಸಕ ಡಾ.ಕೆ.ಎಂ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಗುಲಬಗರ್ಾ ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿದ್ದೆವು. ನಂತರ ಸ್ನೇಹಿತರೆಲ್ಲರೊಂದಿಗೂ ಕೂಡಿ ರಾಜಹಂಸ ಬಸ್ನಲ್ಲಿ ರಿಸರ್ವವೇಶನ್ ಮಾಡಿಕೊಂಡು ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು.  


ಮೇ, 29 ರಂದು ಬೆಳಿಗ್ಗೆ 8. ಘಂ ಸುಮಾರಿಗೆ ನಾವು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣ ಮೆಜೆಸ್ಟಿಕ್ನಲ್ಲಿ ಇಳಿದುಕೊಂಡೆವು. ನಂತರ ಹೊರಟು ನಾವು ಮೆಜೆಸ್ಟಿಕ್ನಲ್ಲಿರುವ ಮೋತಿಮಹಲ್ ಲಾಡ್ಜ ಬುಕ್ ಮಾಡಿಕೊಂಡು ಅಲ್ಲಿ ಸ್ನಾನಾದಿಗಳನ್ನು ಮುಗಿಸಿಕೊಂಡು ಹೊರಟು ನಿಂತೆವು. ಮೊದಲು ಪ್ರಜಾವಾಣಿ ಕಾಯರ್ಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ಅಲ್ಲಿಂದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪ್ರಜಾವಾಣಿ ಪತ್ರಿಕಾ ಕಾಯರ್ಾಲಯಕ್ಕೆ ನಡೆದುಕೊಂಡು ಹೊರಟೆವು.
Gopalkrishna Egde Associated Editor of Prajavani Daily Paper.
Guest Lecturer Dr.K.M.Kumarswami with Amaresh Nayak & Friends
ಪ್ರಜಾವಾಣಿ ದಿನ ಪತ್ರಿಕೆ

ಸ್ವಾತಂತ್ರ್ಯ ನಂತರ ಕನ್ನಡದ ಜನಪ್ರಿಯ ಪತ್ರಿಕೆ ಎಂದರೆ ಪ್ರಜಾವಾಣಿ ಪತ್ರಿಕೆ. ಇದು ಮೈಸೂರು ಪ್ರಿಂಟಸರ್್ ಪ್ರೈವೇಟ್ ಲಿಮಿಟೆಡ್ನಿಂದ ಅಕ್ಟೋಬರ್ 15, 1948 ರಂದು ಪ್ರಕಟಣೆ ಪ್ರಾರಂಭೀಸಿದ್ದು, ಅಂದಿನಿಂದ ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿ ಬೆಳೆದು ಬಂದಿದೆ. ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುವದಲ್ಲದೆ, ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವು ಮೂದಡಿಸುತ್ತಿದೆ. ಓದುಗರ ಅಭಿರುಚಿಯನ್ನು ಕಂಡುಕೊಂಡು, ಅವರ ಅಭಿರುಚಿಗೆ ತಕ್ಕಂತೆ ಸುದ್ದಿ ವಿಶೇಷಗಳನ್ನು ನೀಡುತ್ತಿದೆ. ಈ ಪತ್ರಿಕೆಯು ಪ್ರತಿವಾರ ವಿಶೇಷ ಪುರವಣಿಗಳನ್ನು ಪ್ರಕಟಿಸುತ್ತದೆ. ಸಿನಿವಾಣಿ, ಸಾಪ್ತಾಯಿಕ ಪುರವಣಿ, ಕನರ್ಾಟಕ ದರ್ಶನ ಪುರವಣಿ, ಭೂಮಿಕ ಪುರವಣಿ, ಕಾಮನಬಿಲ್ಲು, ವಾಣಿಜ್ಯ ಪುರವಣಿಗಳಾಗಿವೆ. ಈ ಸಂಸ್ಥೆಯ ಇತರ ಪ್ರಕಟಣೆಗಳೆಂದರೆ ಸುಧಾ, ಮಯೂರ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು.


ಬೆಂಗಳೂರಿನ ಪ್ರತಿಷ್ಠಿತ ಮಹಾತ್ಮ ಗಾಧಿ ರಸ್ಥೆಯಲ್ಲಿ ಇದರ ಬೃಹತ್ ಕಟ್ಟಡವಿದ್ದು, ಸಾಕಷ್ಟು ನುರಿತ ವರದಿಗಾರರು ಕಾರ್ಯನಿರ್ವಹಿಸುತ್ತಿರುವದು ಇಂದಿಗೂ ವಿಶೇಷ. ಪತ್ರಿಕಾ ಕಛೇರಿಯಲ್ಲಿ ಮೊದಲು ಭೇಟಿಯಾಗಿದ್ದು, ಕ್ರೀಡಾ ಸಂಪಾದಕರಾದ ಗೋಪಾಲಕೃಷ್ಣ ಹೆಗ್ಡೆ ಅವರನ್ನು, ಇವರು ಪತಿಕೆಯ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುತ್ತಾ, ನಮ್ಮನ್ನು ಎಲ್ಲಾ ವಿಭಾಗಗಳಿಗೂ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. 
Library Section of Prajavani Office Bangalore
ಅಲ್ಲಿರುವ ಬೃಹತ್ ಗ್ರಂಥಾಲಯವನ್ನು ತೋರಿಸಿ ಅದರ ಕುರಿತು ಮಹಿಳಾ ಸಿಬ್ಬಂದಿಯೊಬ್ಬರು ಸಂಪೂರ್ಣ ಮಾಹಿತಿ ಒದಗಿಸಿದರು. 


Printing Machine




Printing Press
Printing Machine
ಅದೇ ದಿವಸ ರಾತ್ರಿ 7.ಘಂ ಸುಮಾರಿಗೆ ಬಿ.ಎಂ.ಟಿ.ಸಿ ಬಸ್ ಹತ್ತಿಕೊಂಡು ಪ್ರಜಾವಾಣಿ ಪ್ರಕಾಶನ ಕಾಯರ್ಾಲಯಕ್ಕೆ ಹೊರಟೆವು. ಮೈಸೂರು ರಸ್ತೆಯ ಕೆಂಗೇರಿಯಲ್ಲಿರುವ ಈ ಪ್ರಕಾಶನಕ್ಕೆ ಭೇಟಿ ನೀಡಿ ಅಲ್ಲಿರುವ ಒಂದು ಅದ್ಬುತ ವ್ಯವಸ್ಥೆಯ ಪರಚಯವಾಯಿತು. ಅಲ್ಲಿ ನಮಗೆ ಎಲ್ಲಾ ರೀತಿಯ ಮಾಹಿತಿ ಒದಗಿಸುವದಕ್ಕೆ ಅಲ್ಲಿನ ಸಿಬ್ಬಂದಿಯೊಬ್ಬರು ತುಂಬಾ ಆಸಕ್ತರಾಗಿದ್ದರು. ನಾವು ಆ ಅದ್ಬುತವಾದ ಪ್ರಿಂಟಿಂಗ್ ಪ್ರೆಸ್ನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೆವು. ಅತಿ ದೊಡ್ಡ ಪ್ರಮಾಣದ ಪ್ರಕಾಶನ ಯಂತ್ರಗಳು ಅಲ್ಲಿದ್ದವು. ಯಾಂತ್ರೀಕರಣದ ಇಂದಿನ  ಸಂದರ್ಭದಲ್ಲಿ ತಂತ್ರಜ್ಞಾನದ ಪರಿಣಾಮದಿಂದಾಗಿ ಎಲ್ಲವೂ ಬದಲಾಗುತ್ತಿದೆ. ಅತ್ಯದ್ಬುತವಾದ ಅಟೋಮ್ಯಾಟಿಕ್ ಯಂತ್ರಗಳು ಬಂದಿವೆ. ಪ್ರತಿಯೊಂದು ಯಂತ್ರಗಳು ಪತ್ರಿಕೆಗಳನ್ನು ಪ್ರಕಾಶನಗೊಳಿಸಿ, ವ್ಯವಸ್ಥಿತ ರೀತಿಯಲ್ಲಿ ಫೋಲ್ಡ್ ಮಾಡಿ ಅವುಗಳನ್ನು ಜೋಡಿಸಿ ಹೊರ ಹಾಕುವ ದೃಶ್ಯ ನೋಡುವದೇ ಒಂದು ವಿಶೇಷವಾಗಿತ್ತು. ಒಂದು ಪತ್ರಿಕೆ ಪ್ರಕಾಶನಗೊಳ್ಳಬೇಕಾದರೆ ಅದರ ಹಿಂದೆ ಎಷ್ಟೊಂದು ಜನರ ಕಾಣದ ಕೈಗಳ ಶ್ರಮವಿದೆ ಎಂಬುದು ತಿಳಿದು ಬರುತ್ತದೆ.
Vasant Nadiger News Editor of VijayKarnataka
ವಿಜಯ ಕನರ್ಾಟಕ ದಿನಪತ್ರಿಕೆ

ಟೈಮ್ಸ್ ಗ್ರೂಪ್ ಒಡೆತನದಲ್ಲಿರುವ ವಿಜಯ ಕನರ್ಾಟಕ ಪತ್ರಿಕೆ 2000 ದಲ್ಲಿ ಪ್ರಾರಭವಾಯಿತು. ವಿಜಯ ಟೈಮ್ಸ್ (ಆಂಗ್ಲ ಭಾಷೆ) ಮತ್ತು ಉಷಾ ಕಿರಣ ಪತ್ರಿಕೆಗಳನ್ನು ಪ್ರಕಟಿಸಿ ಕೆಲ ದಿನಗಳ ನಂತರ ಈ ಎರಡು ಪತ್ರಿಕೆಗಳು ಮುದ್ರಣವನ್ನು ನಿಲ್ಲಿಸಿದವು ಈಗ ವಿಜಯ ಕನರ್ಾಟಕ ದಿನ ಪತ್ರಿಕೆ ಮಾತ್ರ ಪತ್ರಿಕೆ ಮಾತ್ರ ಪ್ರಕಟವಾಗುತ್ತಿದ್ದು, ರಾಜ್ಯದಾದ್ಯಂತ ವಿಶಿಷ್ಠ ಅಂಕಣ ಬರಹಗಳಿಂದ ಹಾಗೂ ಪುರವಣಿಗಳಿಂದ ಜನಪ್ರಿಯ ಪತ್ರಿಕೆಯಾಗಿ ಹೊರಹೊಮ್ಮಿದೆ.


ವಿಜಯ ಕನರ್ಾಟಕ ಪತ್ರಿಕಾ ಕಾಯರ್ಾಲಯ ನಗರದ ಚಾಮರಾಜಪೇಟೆಯಲ್ಲಿದೆ. ಅಲ್ಲಿಗೆ ನಾವು ತಲುಪಿದಾಗ ಸಾಯಂಕಾಲ 5.ಘಂಟೆ. ಅನುಮತಿ ಸಿಕ್ಕಿದ ಕೂಡಲೇ ಒಳಗಡೆ ಹೋದಾಗ ವಿಜಯ ಕನರ್ಾಟಕ ಮುಖ್ಯ ಸುದ್ದಿ ಸಂಪಾದಕರಾದ ವಸಂತ್ ನಾಡಿಗೇರ್ ಅವರನ್ನು ಭೇಟಿಯಾದೆವು. ಅವರು ನಮ್ಮನ್ನು ತುಂಬಾ ಆತ್ಮೀಯವಾಗಿ ಬರಮಾಡಿಕೊಂಡು, ಪತ್ರಿಕಾ ಕಾಯರ್ಾಲಯದ ರೀತಿ, ನೀತಿಗಳು ಹಾಗೂ ಸುದ್ದಿ ಮನೆಯಲ್ಲಿರುವ ಪ್ರತಿಯೊಬ್ಬ ವರದಿಗಾರರನ್ನು, ಪ್ರಮುಖ ವರದಿಗಾರರನ್ನು, ಸುದ್ದಿ ಸಂಪಾದಕರನ್ನು, ಅಂಕಣ ಬರಹಗಾರರನ್ನು, ವಿಶೇಷ ಪುರವಣಿಗಳ ಸಂಪಾದಕರನ್ನು ಪರಿಚಯ ಮಾಡಿಸುತ್ತಾ, ಸುದ್ದಿ ಮನೆಯ ಪ್ರತಿಯೊಂದು ವಿಷಯದ ಮಾಹಿತಿ ನೀಡುತ್ತಿದ್ದರು.


Columnist of VijayKarnataka

News Editor

Editor of VijayKarnataka Daily Paper Bangalore
ತದನಂತರ ವಿಜಯ ಕನರ್ಾಟಕ ಪತ್ರಿಕೆಯ ಸಂಪಾದಕರನ್ನು ಭೇಟಿ ಮಾಡಿಸಿ ನಮ್ಮ ಪರಿಚಯ ಮಾಡಿಸಿದರು. ಸಂಪಾದಕರು ನಮ್ಮಲ್ಲಿರುವ ಭಿನ್ನ ಭಿನ್ನ ಆಸಕ್ತಿಯನ್ನು ತಿಳಿದುಕೊಂಡು, ಒಂದು ವಿಭಿನ್ನ ಗುರಿ ಇಟ್ಟುಕೊಂಡು ಪ್ರಯತ್ನ ಮಾಡಬೇಕು. ವರದಿಗಾರರಾಗಬೇಕಾದರೆ ಬರವಣಿಗೆ ತುಂಬಾ ಪ್ರಮುಖವಾಗಿರುತ್ತದೆ. ಅದನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.


ವಸಂತ್ ನಾಡಿಗೇರ್ ರವರು ನಮ್ಮನ್ನೆಲ್ಲ ಕಾನ್ಫೆರೆನ್ಸ್ ಹಾಲ್ಗೆ ಕರೆದುಕೊಂಡು ಹೋಗಿ ಇಪ್ಪತ್ತು ನಿಮಿಷಗಳ ಕಾಲ ನಮ್ಮೊಂದಿಗೆ ಚಚರ್ಿಸಿ, ಸುದ್ದಿ ಯಾವ ರೀತಿ ಇರಬೇಕೆನ್ನುವದು, ಪತ್ರಕರ್ತನ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು. ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು, ಓದುಗರಿಗೆ ಹೊಸ ಹೊಸ ವಿಷಯ ತಲುಪಿಸಬೇಕು, ಸುದ್ದಿ ಸತ್ಯವಾಗಿರಬೇಕು, ಸಕಾರಾತ್ಮಕವಾಗಿರಬೇಕು, ವಸ್ತುನಿಷ್ಟವಾಗಿರಬೇಕು, ಪೂವರ್ಾಗ್ರಪೀಡಿತವವಾಗಿರಬೇಕು, ಆಸಕ್ತಿ ಹೊಂದಿರಬೇಕು, ಸುತ್ತಮುತ್ತ ಹಾಗೂ ಹೊರಾಂಗಣ ಎಲ್ಲವೂ ತಿಳಿದಿರಬೇಕು. ಪ್ರತಿದಿನ ಸುಮಾರು ನಾಲ್ಕು ಪತ್ರಿಕೆಯಾದರೂ ಓದಬೇಕು. ಎಲ್ಲಾ ಪತ್ರಿಕಾ ಸಂಸ್ಥೆಗಳ ಬಗ್ಗೆ ತಿಳಿದಿರಬೇಕು. ಬರೆಯುವ ಹವ್ಯಾಸವಿರಬೇಕು ಎಂದು ಭಾವಿ ಪತ್ರಕರ್ತರಿಗೆ ಕಿವಿಮಾತು ಹೇಳಿದರು.



Columnist Pratap Simha with Amaresh Nayak & Friends
ಕನ್ನಡಪ್ರಭ ದಿನ ಪತ್ರಿಕೆ


ಕನ್ನಡದ ಪ್ರಮುಖ ದಿನಪತ್ರಿಕೆಯಾದ ಕನ್ನಡಪ್ರಭ 1967 ನವೆಂಬರ್ 4 ರಂದು ಪ್ರಾರಂಭವಾದ ಈ ಪತ್ರಿಕೆ ಪತ್ರಿಕಾ ರಂಗದಲ್ಲಿ ಓದುಗರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಲೇಖನ, ವಿಶಿಷ್ಟ ಸುದ್ದಿ, ಅಂಕಣ ಛಾಯಾಚಿತ್ರ ಹಾಗೂ ಆಕರ್ಷಕ ಪುಟವಿನ್ಯಾಸವನ್ನು ಹೊಂದಿರುವ ಈ ಪತ್ರಿಕೆ ಅತ್ಯಾಕರ್ಷಕ ಪುಟ ವಿನ್ಯಾಸಕ್ಕೆ 2005-2006-2007 ರಲ್ಲಿ ಮಾಧ್ಯಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ಈ ಸಂಸ್ಥೆ ಕನ್ನಡಪ್ರಭದ ಜೊತೆಗೆ ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ಹೊಸದಾಗಿ ಪ್ರಾರಂಭವಾಗಿರುವ ಸಖಿ, ನಿಯತಕಾಲಿಕೆಗಳನ್ನು ಹೊರತರುತ್ತದೆ. ಪತ್ರಿಕಾ ಕಛೇರಿಯಲ್ಲಿ ಪ್ರವೇಶ ಮಾಡಿದ ನಂತರ ಅಲ್ಲಿನ ಹಿರಿಯ ವರದಿಗಾರರು ಎಲ್ಲರನ್ನೂ ಕರೆದುಕೊಂಡು ಪ್ರತಿಯೊಂದು ವಿಭಾಗದ ಕೆಲಸ, ಕಾರ್ಯಗಳನ್ನು ಪರಿಚಯ ಮಾಡತೊಡಗಿದರು. ನಾವು ಅಲ್ಲಿಗೆ ಹೋದಾಗ ಮುಖ್ಯ ಸಂಪಾದಕ ಪಿ.ತ್ಯಾಗರಾಜ ಅಲ್ಲಿರಲಿಲ್ಲ. ನಂತರ ನಾವು ಖ್ಯಾತ ಅಂಕಣಕಾರ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಿ ಅವರೊಂದಗೆ ಮಾತನಾಡಿದೆವು. ಅವರು ನಮಗೆ ಕೆಲವೊಂದು ವಿಷಯಗಳನ್ನು ತಿಳಿಸಿದರು. ಯಾವಾಗಲೂ ಅವರೊಂದಿಗೆ ಸಂವಹನ ನಡೆಸಲು ತಿಳಿಸಿದರು (ಇ-ಮೇಲ್ ಮುಖಾಂತರ). 


ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವಾಹಿನಿ ಮುಖ್ಯಸ್ಥರಾದ ವಿಶ್ವೇಶ್ವರ್ ಭಟ್ ಅವರನ್ನು ಭೇಟಿಯಾದಾಗ ಅವರೊಂದು ಮುಖ್ಯವಾದ ಮೀಟಿಂಗ್ನಲ್ಲಿ ಮಗ್ನರಾಗಿದ್ದ ಕಾರಣ ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗಲಿಲ್ಲ. ಪತ್ರಿಕೆಯ ಎಲ್ಲಾ ವರದಿಗಾರರನ್ನು ಭೇಟಿಯಾದೆವು. ಅವರು ನಮ್ಮೊಂದಿಗೆ ತುಂಬಾ ಆತ್ಮೀಯವಾಗಿ ನಡೆದುಕೊಂಡರು.  ಭಾಷಾಂತರವನ್ನು ಯಾವ ರೀತಿ ಮಾಡುತ್ತಾರೆ, ಈ ಭಾಷಾಂತರದ ಮಹತ್ವ ಏನು ಎಂಬುದರ ಬಗ್ಗೆ ತಿಳಿಯಲಾಯಿತು. ಭಾಷಾಂತರ ಮಾಡುವಾಗ ಅಲ್ಲಿ ದೊರೆಯುವ ಪ್ರಮುಖವಾದ ವಿಷಯವನ್ನು ಲೀಡ್ ನ್ಯೂಸ್ ಆಗಿ ತೆಗೆದುಕೊಳ್ಳಬೇಕು. ನಂತರ ಅದರ ವಿವರಣೆ ಮಾಡಬೇಕು ಎಂದರು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡುವವರು ಭಾಷಾಂತರ, ಅನುವಾದವನ್ನು ಕಲಿತುಕೊಂಡಿರಲೇಬೇಕು. ಇದು ಸುದ್ದಿಮನೆಯಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು. 

ಜನಶ್ರೀ ವಾಹಿನಿ


ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜನಶ್ರೀ ವಾಹಿನಿಯು ತನ್ನ ವಿಶಿಷ್ಟ ಆಕರ್ಷಣೇಯೊಂದಿಗೆ ವೀಕ್ಷಕರ ಮನ ಸೆಳೆದಿದೆ. ಪ್ರತಿಷ್ಠಿತ ಮಾಧ್ಯಮಗಳಲ್ಲಿ ಇದು ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ. ಓ.ಆರ್.ಪಿ. ರೇಟ್ನಲ್ಲಿ ಇದು ಮೂರನೇ ಸ್ಥಾನದಲ್ಲಿದೆ. ಇದು ಆಕರ್ಷಕವಾದ, ಅದ್ಬುತವಾದ ಬೆಲೆಬಾಳುವ ಸುಡಿಯೋವನ್ನು ಒಳಗೊಂಡಿದೆ.


ನಾವು ಮೇ 31 ರಂದು 'ಭಾರತ್ ಬಂದ್' ಇದ್ದ ಕಾರಣ ಆಟೋಗಳನ್ನು ಮುಗಿಸಿಕೊಂಡು ಜನಶ್ರೀ ವಾಹಿನಿ ಇರುವ ನಗರಕ್ಕೆ ಹೋದೆವು. ನಾವು ಸ್ಟುಡಿಯೋ ಹೋದಾಗ ನಮ್ಮನ್ನು ಸ್ವಾಗತ ಮಾಡಿದ್ದು, ರೆಹಮತ್ ಖಂಚಗಾರ್. ತದನಂತರ ನಾವು ಹದಿನೈದು ನಿಮಿಷ ಕುಳಿತಿದ್ದೆವು. ನಂತರ ತಾಂತ್ರಿಕ ನಿಮರ್ಾಪಕರು ಬಂದು ಅವರೊಂದಿಗೆ ನಮ್ಮನ್ನು ಕರೆದುಕೊಂಡು ಹೋಗಿ, ಟಿಜಠಠಡಿ ಖಠಠಣಟಿರ ಮಾಡುವದನ್ನು, ವಾತರ್ಾ ಪ್ರಸಾರ ಕಾರ್ಯಕ್ರಮವನ್ನು ಯಾವ ರೀತಿ ಮಾಡಲಾಗುತ್ತದೆ ಎಂದು ತೋರಿಸಿದರು. ಅದೇ ರೀತಿ ತಾಂತ್ರಿಕ ಕೆಲಸವನ್ನು ಯಾವ ರೀತಿ ಕೈಗೊಳ್ಳುತ್ತಾರೆ ಎನ್ನುವದನ್ನು ತಿಳಿಸಿಕೊಡುತ್ತಾ ಪ್ರತಿಯೊಂದು ವಿಭಾಗಕ್ಕೂ ಕರೆದುಕೊಂಡು ಹೋಗಿ ಅಲ್ಲಿ ನಡೆಯುವ ಕೆಲಸ, ಕಾರ್ಯಗಳ ಬಗ್ಗೆ ವಿವರಿಸುತ್ತಿದ್ದರು.


ತದನಂತರ ನಮ್ಮನ್ನು ಒಳಾಂಗಣ ಶೂಟಿಂಗ್ ಮಾಡುವ ವಿಶೇಷ ಕ್ಯಾಮಾರಾಗಳನ್ನು ಅಳವಡಿಸಿದ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಅದ್ಬುತವಾದ ಕ್ಯಾಮರಾಗಳ ವೈಶಿಷ್ಟ್ಯದ ಬಗ್ಗೆ ವಿವರಣೆ ನೀಡಿದರು. ಶೂಟಿಂಗ್ ಮಾಡಬೇಕಾದ ಸಂದರ್ಭದಲ್ಲಿ ಬೆಳಕಿನ ವ್ಯವಸ್ಥೆ ಯಾವ ರೀತಿ ಇರಬೇಕು ಎನ್ನುವದರ ಬಗ್ಗೆ ತಿಳುವಳಿಕೆ ಮೂಡಿಸಿದರು.  ಅಲ್ಲಿನ ಒಂದು ವಿಶಿಷ್ಟವಾದ ಗ್ರೀನ್ ಕ್ರೋಮೋ ಕೀ ಬಗ್ಗೆ, ವಿಶೇಷವಾಗಿ ವಿವರಿಸಿದರು. ಅದು ಅತ್ಯಂತ ದುಬಾರಿ ತಂತ್ರಜ್ಞಾನವಾಗಿದ್ದು, ಅಲ್ಲಿಂದಲೇ ತಮಗೆ ಬೇಕಾದ ಶೈಲಿಯಲ್ಲಿ, ಗ್ರಾಫಿಕ್ಸ್ಗಳನ್ನು ಹಾಕಿಕೊಂಡು ಶೂಟಿಂಗ್ ಮಾಡಬಹುದು ಎಂದು ತಿಳಿಸಿದರು. ಈ ವ್ಯವಸ್ಥೆ ಜನಶ್ರೀ ವಾಹಿನಿಯಲ್ಲಿ ಮಾತ್ರ ಇದೆ ಎಂದು ಹೇಳಿದರು. ಇದೊಂದು ಅದ್ಬುತವಾದ ವ್ಯವಸ್ಥೆ ಖಚರ್ು ಕಡಿಮೆ ಬರುತ್ತದೆ. 


ಜೂನ್, 1 ರಂದು ನಮ್ಮ ಪಯಣ ಸಿದ್ಧಗೊಂಡಿತು, ಬೆಳಿಗ್ಗೆ ಎಲ್ಲರೂ ಸ್ವಪ್ನ ಬುಕ್ ಹೌಸ್, ಜನತಾ ಬಜಾರ್ ನೋಡಿಕೊಂಡು ಅಲ್ಲಿ ಇಲ್ಲಿ ಕಾಲ ಕಳೆದು ಸಾಯಂಕಾಲ 6.ಘಂ ಸುಮಾರಿಗೆ ಯಶವಂತ್ಪುರ ಸ್ಟೇಶನ್ ತಲುಪಿ, ಅಲ್ಲಿಂದ ಬಸವ ಎಕ್ಸ್ಪ್ರೆಸ್ ರೈಲಿನಲ್ಲಿ ಕುಳಿತು ಬೆಳಗ್ಗೆ 4.ಘಂ ಸುಮಾರಿಗೆ ಗುಲ್ಬಗರ್ಾ ತಲುಪಿದೆವು.

Letter to Editor Vijayvani Paper (Published 20/06/2012)




ವಾಗಿನಗಿರಿ ಕೋಟೆ ಸಂರಕ್ಷಿಸಿ

ಗಂಡುಮೆಟ್ಟಿನ ನಾಡು, ಸಗರನಾಡು ಎಂದು ಖ್ಯಾತಿ ಪಡೆದಿರುವ ಸುರಪುರ ಸಂಸ್ಥಾನದ ಗೋಸಲ ವಂಶದ ರಾಜ ಮನೆತನ ಇತಿಹಾಸ ಪ್ರಸಿದ್ಧಿ ಪಡೆದಿದೆ. ಸುರಪುರ ಸಂಸ್ಥಾನದ ಮೂಲಪುರುಷ ಗಡ್ಡಿ ಪಿಡ್ಡನಾಯಕನು 1636 ರಲ್ಲಿ ವಾಗಿನಗಿರಿ ಕೋಟೆಯನ್ನು ನಿಮರ್ಿಸಿ ಸಂಸ್ಥಾನದ ಭದ್ರ ಬುನಾದಿಗೆ ಕಾರಣನಾದನು ಎಂಬ ಐತಿಹ್ಯವಿದೆ. ಬ್ರಿಟಿಷರನ್ನು ಹಿಮ್ಮೆಟ್ಟಿಸಿ ಅವರಿಂದಲೇ ಸೈ ಎನಿಸಿಕೊಂಡ ಕೀತರ್ಿ ಸುರಪುರ ಸಂಸ್ಥಾನದ ರಾಜ ಮನೆತನಕ್ಕಿದೆ. ಸಾಹಿತ್ಯ, ಕಲೆ, ಸಂಸ್ಕೃತಿ, ಕ್ಷಾತ್ರತೇಜ, ಲೋಕ ಕಲ್ಯಾಣ, ಧಾಮರ್ಿಕ ಸಾಮರಸ್ಯ. ಸಮನ್ವಯತೆ, ನಾಡು-ನುಡಿಗಾಗಿ ಹೋರಾಡಿ ವೀರ ಮರಣವನ್ನಪ್ಪಿ ಸ್ವರ್ಗ ಸೇರಿದ ಕೀತರ್ಿ ಇವರಿಗಿದೆ.


222 ವರ್ಷಗಳ ಕಾಲ ಸಗರ ನಾಡನ್ನಾಳಿದ ಅರಸರುಗಳ ಚರಿತ್ರೆ ತುಂಬಾ ಮಹತ್ವದ್ದು, ಅನೇಕ ಅವಶೇಷಗಳನ್ನು ಹೊಂದಿರುವ ಅತ್ಯಂತ ಪ್ರಾಚೀನ ಸ್ಥಳಗಳಾದ ಸಗರನಾಡಿನ ಸುರಪುರ, ದೇವಪುರ, ಎಮ್ಮಡಗಿ, ಹುಣಸಗಿ, ಕಕ್ಕೇರಿ, ರಾಜನಕೊಳ್ಳೂರು, ಮುದನೂರು, ಕೆಂಭಾವಿ, ಏವೂರು, ವನದುರ್ಗ, ಜಲದುರ್ಗ, ತಿಂಥಣಿ, ಕೊಡೆಕಲ್ಲು, ರಾಯನಪಾಳ್ಯ, ಹಗರಟಗಿ, ಶಾಹಪುರ, ಸಗರ, ಶಿರವಾಳ, ಮಂದಾಕಿನಿ, ಗೋಗಿ, ಜೇವರಗಿ, ಆಂದೇಲಿ, ಅರಳಗುಂಡಿಗಿ, ಯಾಳವಾರ, ಅಣಬಿ, ಇಜೇರಿ ಮುಂತಾದ ಸ್ಥಳಗಳ ಚರಿತ್ರೆಯ ಸಂಶೋಧನೆಯಾಗಿ ಸಂಗ್ರಹವಾಗಬೇಕಾಗಿದೆ.


ನೂತನ ಜಿಲ್ಲೆ ಯಾದಗಿರಿಗೆ ಸೇರಿದ ಸುರಪುರ ತಾಲೂಕು ಕೃಷ್ಣ-ಭೀಮಾ ನದಿಗಳ ನಡುವಿನ ಪ್ರದೇಶ ಸಗರನಾಡೆಂದು ಸುಪ್ರಸಿದ್ಧವಾಗಿದೆ. ಪ್ರಾಚೀನ ಕಾಲದಿಂದಲೂ ಪೌರಾಣಿಕವಾಗಿ ಹೆಸರು ಪಡೆದಿರುವ ಈ ನಾಡು ಐತಿಹಾಸಿಕ ದೃಷ್ಟಿಯಿಂದಲೂ ಅನೇಕ ರಾಜ ಮನೆತನಗಳು ಆಳಿದ ನಾಡಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ವಾಗಿನಗಿರಿ ಕೋಟೆ ನಶಿಸಿ ಹೋಗುತ್ತಿದೆ, ಇದನ್ನು ನವೀಕರಣಗೊಳಿಸಿ, ರಕ್ಷಣಾ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲಿರುವ ಪ್ರಾಚೀನ ಕಾಲದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ಮಾಡಿ, ಸುಂದರವಾದ ಉದ್ಯಾನವನವನ್ನು ನಿಮರ್ಿಸಬೇಕಾಗಿದೆ. ಗತಕಾಲದ ವೈಭವ ತಿಳಿಸುವ ದೇವಾಲಯಗಳ ಪುನರ್ ನವೀಕರಣವಾಗಬೇಕು. ಪ್ರಾಚ್ಯ ವಸ್ತು ಇಲಾಖೆ, ಪ್ರವಾಸೋದ್ಯುಮ ಇಲಾಖೆಗಳಿಗೆ ರಾಜ್ಯ ಸರಕಾರ ಕೋಟೆ ಕೊತ್ತಲಗಳ ಸಂರಕ್ಷಣೆಗಾಗಿ, ಸ್ಮಾರಕಗಳ ರಕ್ಷಣೆಗಾಗಿ ಕೋಟ್ಯಾಂತರ ರೂ. ಬಿಡುಗಡೆ ಮಾಡುತ್ತಿದೆ. ಸಂಬಂಧಪಟ್ಟ ಇಲಾಖೇಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನ ಹರಿಸಿ ಸುರಪುರ ಸಂಸ್ಥಾನದ ವೈಭವದ ಐತಿಹ್ಯವಿರುವ ವಾಗಿನಗಿರಿ ಕೋಟೆಯ ಅಭಿವೃದ್ಧಿಗೆ ಒತ್ತು ನೀಡಿ, ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ.

-ಅಮರೇಶನಾಯಕ ಜಾಲಹಳ್ಳಿ,
  ತಾ|| ದೇವದುರ್ಗ
  ಜಿ|| ರಾಯಚೂರು


Monday, 16 January 2012

Apoorva Sangama E-Kanasu (Published)


ಅಪೂರ್ವ ಸಂಗಮ ಈ-ಕನಸು...


ಲೇಖನ ಬರೆಯಬೇಕೆಂಬ ನನ್ನ ಈ ಕನಸುಗಳಿಗೆ ಜೀವ ತುಂಬಿದ್ದು. ಗೆಳೆಯ ಅಹ್ಮದ್ ಅದೊಂದು ದಿವಸ ಗುಲಬಗರ್ಾ ವಿವಿಯಲ್ಲಿ ಸ್ನಾತ್ತಕೋತ್ತರ ಪದವಿಗೆ ವಿದ್ಯಾಥರ್ಿಗಳ ಆಯ್ಕೆ ನಡೆದಿತ್ತು. ತನ್ನ ಗೆಳೆಯನ ಅಡ್ಮಿಷನ್ ಸಲುವಾಗಿ ಆತ ಇಲ್ಲಿಗೆ ಬಂದಿದ್ದ. ನಾನು ಭೇಟಿ ಮಾಡಿ ಬಹಳ ವರ್ಷಗಳೇ ಕಳೆದಿದ್ದವು. ಆಕಸ್ಮಿಕವಾಗಿ ಭೇಟಿಯಾದ ಆತನ ಕುಶಲೋಪರಿ ವಿಚಾರಿಸಿದೆ. ಅಲ್ಲಿರುವ ಸುಂದರವಾದ ಪಾಕರ್್, ಅಲ್ಲಿ ಕುಳಿತು ಮಾತನಾಡುತ್ತಿದ್ದಾಗ, ನಿನ್ನ ಲೇಖನಗಳ ಬರವಣಿಗೆ ಎಲ್ಲಿಗೆ ಬಂತು ಎಂದು ಕೇಳಿದೆ. ಕೆಲವೊಂದು ಲೇಖನಗಳು ಪತ್ರಿಕೆಗಳಲ್ಲಿ ಹಾಗೂ ಈ-ಕನಸು.ಕಾಂ ವೆಬ್ಸೈಟ್ನಲ್ಲೂ ಪ್ರಕಟಗೊಂಡಿವೆ ಎಂದು ತಿಳಿಸಿದ. ಕುತೂಹಲದಿಂದ ಕೇಳಿದಾಗ ವೆಬ್ಸೈಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ. ನಾನು ಕೂಡ ಈ ವೆಬ್ಸೈಡ್ಗೆ ಲೇಖನಗಳನ್ನು ಕಳಿಸಬೇಕೆಂದು ತೀಮರ್ಾನಿಸಿದೆ. ಅದಾಗಲೇ ನಾನು ಬರೆದ ಹತ್ತಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಒಂದು ಸಲ ಆ ವೆಬ್ಸೈಟ್ (ಈ-ಕನಸು.ಕಾಂ) ಸಚರ್್ ಮಾಡಿ ನೋಡಿದೆ. 

ಇಲ್ಲಿ ಪ್ರಸ್ತುತಪಡಿಸುವಂತಹ ವೈವಿಧ್ಯಮಯ ಸುದ್ದಿಗಳು, ಹಲವು ವಿಚಾರಧಾರೆಯ ಲೇಖನಗಳು, ಮನಮೋಹಕವಾದಂತಹ ಚಿತ್ರಗಳು, ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ಯುವಂತಿದ್ದವು. ಪ್ರತಿನಿತ್ಯ ಇದನ್ನು ಓದುತ್ತಾ ಇದರ ಅಭಿಮಾನಿಯಾದೆ. ಹೊಸ ಬಗೆಯ ಲೇಖನಗಳು, ಪ್ರಚಲಿತ ಘಟನೆಗಳನ್ನು ಕುರಿತು ಲೇಖನಗಳನ್ನು ಬರೆಯಲು ಇದು ಸ್ಪೂತರ್ಿಯಾಯಿತು. ನಾನಿರುವದು ವಸತಿ ನಿಲಯದಲ್ಲಿ, ಆಗತಾನೇ ಸ್ಪಧರ್ಾತ್ಮಕ ಪರೀಕ್ಷೇಗಳು ಹತ್ತಿರವಾಗುತ್ತಿದ್ದವು. ಕೆಲವರು ಓದಲು ಮಗ್ನರಾದರೆ, ಹಲವರು ಪರೀಕ್ಷೇಗಳು ಇನ್ನೂ ಮುಂದೆ ಇವೆ, ನಾವು ಯಾಕೆ ಟೆನ್ಷನ್ ಮಾಡಿಕೊಂಡು ಓದಬೆಕು ಎನ್ನುತ್ತಾ ಕಾಲವನ್ನು ಮುಂದಕ್ಕೆ ಹಾಕುತ್ತಿದ್ದರು. ಈ ದೃಷ್ಟಿಕೋನ ಇಟ್ಟುಕೊಂಡು ಲೇಖನ ಬರೆಯ ತೊಡಗಿದೆ. ನಾಳೆ ಮಾಡುವ ಕೆಲಸ ಇವತ್ತೆ ಮಾಡು, ಇವತ್ತೇ ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡು ಎಂಬ ಮಾತಿದೆ. ಕಳೆದು ಹೋದ ಸಮಯ ಮತ್ತೆ ಬರಲಾರದು. ಕಾಲಗಳು ಉರುಳುವವು, ಗಳಿಗೆಗಳು ಹೊರಳುವವು ಇದನ್ನರಿತುಕೊಂಡು ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಸರಿಯಾದ ಕ್ರಮದಲ್ಲಿ ಓದಿ, ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಒಂದು ಲೇಖನ ಸಿದ್ಧಪಡಿಸಿದೆ.

ಮುಂದೂಡುವ ಪ್ರವೃತ್ತಿ ಸಲ್ಲದು. ಎಂಬ ತಲೆಬರಹದೊಂದಿಗೆ ಈ-ಕನಸು.ಕಾಂನಲ್ಲಿ ಲೇಖನ ಪ್ರಕಟವಾಯಿತು. ಆ ದಿನ ಸಾಯಂಕಾಲ 7 ಘಂ. ಸುಮಾರಿಗೆ ನನಗೆ ಒಂದು ಕರೆ ಬಂತು. ಆ ಕರೆ ಬೇರೆ ಯಾರದೂ ಅಲ್ಲ... ವೆಬ್ಸೈಟ್ ಎಡಿಟರ್ ಕರೆ ಮಾಡಿದ್ದರು!! ಅವರು ಲೇಖನದ ಸರಿ ತಪ್ಪುಗಳನ್ನು ನನಗೆ ತಿಳಿಸುತ್ತಾ, ಇನ್ನೂ ಚನ್ನಾಗಿ ಲೇಖನ ಬರೆಯಲು ಹುರಿದುಂಬಿಸಿದರು. ಹೊಸ ಹೊಸ ವಿಷಯಗಳತ್ತ ಗಮನ ಹರಿಸುವದು, ಓದುಗರಿಗೆ ಅಭಿರುಚಿ ಇರುವಂತಹ ವಿಷಯಗಳ ಬಗ್ಗೆ, ಪ್ರಚಲಿತ ಘಟನೆಗಳ ಕುರಿತು ಲೇಖನವಿರಬೇಕು. ಪ್ರತಿಯೊಂದು ವಿಷಯಕ್ಕೆ ಹೊಂದಿಕೊಳ್ಳುವಂತಹ ಭಾವಚಿತ್ರಗಳಿದ್ದರೆ ಲೇಖನ ಸ್ವಾರಸ್ಯಕರವಾಗಿರುತ್ತದೆ. ಎಂದು ತಿಳಿಸಿಕೊಟ್ಟ ಅವರ ಮಾತುಗಳು ಇಂದಿಗೂ ಅವಿಸ್ಮರಣೀಯ.

ಲೇಖನ ಬರೆಯಬೇಕೆಂಬ ಹಂಬಲ, ತುಡಿತ ನನಗೆ ಇನ್ನೂ ಹೆಚ್ಚಾಯಿತು. ನನ್ನ ಈ ಅಭಿಲಾಷೆಯಿಂದ ಇದೀಗ ಹತ್ತು ಲೇಖನಗಳು ಈ-ಕನಸು.ಕಾಂನಲ್ಲಿ ಪ್ರಕಟಗೊಂಡಿವೆ. ನನ್ನ ಮನೋಭಿಲಾಷೆಗೆ ಇದು ಸ್ಪೂತರ್ಿಯ ಸೆಲೆಯಾಯಿತು. ಹೊಸ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟು, ಯುವಲೇಖಕರಲ್ಲಿ ಉತ್ಸಾಹವನ್ನು ತುಂಬುವದರ ಜೊತೆಗೆ ಅವರ ಗುರಿಯನ್ನು ಸಾಧಿಸಲು ಸಹಾಯಕವಾಗಿದೆ. ಯುವ ಮನಸ್ಸಿನ ಮನದಂಗಳಕೆ ಬರವಣಿಗೆಯ ಭರವಸೆ ಮೂಡಿಸುತ್ತಿರುವ ಈ ವೆಬ್ಸೈಟ್ ಪತ್ರಿಕೆ ನಿಜಕ್ಕೂ ಶ್ಲಾಘನೀಯವಾದುದು.  ಬರವಣಿಗೆ ಎನ್ನುವದು ಒಂದು ಕಲೆ. ಅದು ಎಲ್ಲರಿಗೂ ಸಿದ್ದಿಸುವುದಿಲ್ಲ ಎನ್ನುವದು ಬಹಳ ಜನರ ಅಭಿಮತ. ಆದರೆ ಪ್ರಪಂಚದಲ್ಲಿ ಇಷ್ಟೊಂದು ಬರಹಗಾರರು ಇರುವಾಗ, ಅವರಲ್ಲಿ ನಾವೇಕೆ ಒಬ್ಬರಾಗಬಾರದು? ಮನಸ್ಸಿನಲ್ಲಿರುವದನ್ನು ಬರವಣಿಗೆಯ ರೂಪಕ್ಕೆ ಇಳಿಸಲು ಪ್ರಯತ್ನ ಮಾಡಬೇಕು, ಅಕ್ಷರದ ಮೂಲಕ ವ್ಯಕ್ತಪಡಿಸಲು ಸಮರ್ಥರಾಗಬೇಕು. ನಾವು ಬರೆಯುವಂತಹ ಲೇಖನಗಳಲ್ಲಿ ಸತ್ವವಿದ್ದರೆ ಅದು ಖಂಡಿತಾ ಪ್ರಕಟಣೆಗೆ ಒಳಪಡುತ್ತದೆ. ಬನ್ನಿ ಬರಹಗಾರರಾಗೋಣ, ಈ-ಕನಸು, ಇದು ವರ್ಷದ ಕನಸು. ಇದೊಂದು ಅಪೂರ್ವ ಸಂಗಮ.
     
-ಅಮರೇಶ ನಾಯಕ ಜಾಲಹಳ್ಳಿ
  Cell-9945268059.

Prof.Khandoba Interview (Published)


ಜನಪದ ಸಂಸ್ಕೃತಿಯ ಸಂಶೋಧಕ ಪ್ರೊ.ಖಂಡೋಬಾ

ಜನಪದ ಸಾಹಿತ್ಯದಲ್ಲಿ ವಿಶಿಷ್ಟ ಕೃಷಿ ಮಾಡಿ ಬರಹಗಾರರಾಗಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಅಪರ್ಿಸಿರುವ ಡಾ.ಪಿ.ಕೆ.ಖಂಡೋಬಾ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಶಿರೂರದಲ್ಲಿ ನಡೆದ ಬಾಗಲಕೋಟೆ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಾಕ್ಷರಾಗಿದ್ದರು.
ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮ ಪ್ರೊ. ಪಿ.ಕೆ.ಖಂಡೋಬಾ ರವರ ಜನ್ಮಭೂಮಿಯಾದರೂ, ಕರ್ಮಭೂಮಿ ಕಲಬುಗರ್ಿ. 1953 ರಲ್ಲಿ ತಾಂಡಾ ಸಂಸ್ಕೃತಿಯ ಮನೆತನದಲ್ಲಿ ಜನಿಸಿರುವ ಇವರು, ಗುಲಬಗರ್ಾ ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿರುವ ಅವರ ಸಾಧನೆ ಅಪೂರ್ವವಾದುದು. ಲಂಬಾಣಿ ಬುಡಕಟ್ಟಿಗೆ ಸೇರಿದ ಇವರ ಬದುಕು ಸುಖ ದು:ಖಗಳನ್ನು ಅನುಭವಿಸಿದೆ.
ಪ್ರೊ.ಖಂಡೋಬಾ ಅವರು ಪ್ರಾಥಮಿಕ ಶಿಕ್ಷಣವನ್ನು ಬಾಗಲಕೋಟೆ ತಾಲೂಕಿನ ಶಿರೂರು ತಾಂಡಾದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕೆಲವಡಿ (ಬಾದಾಮಿ) ಯಲ್ಲಿ, ಪ್ರೌಢ ಶಿಕ್ಷಣ ಶಿರೂರುನಲ್ಲಿ, 1974 ರಲ್ಲಿ ಗದುಗಿನ ಜಗದ್ಗುರು ಕಾಲೇಜಿನಲ್ಲಿ ಪದವಿ, 1976 ರಲ್ಲಿ ಸ್ನಾತ್ತಕೋತ್ತರ ಶಿಕ್ಷಣವನ್ನು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯಲ್ಲಿ ಪೂರೈಸಿದರು. 'ಕನರ್ಾಟಕದ ಲಂಬಾಣಿಗಳು- ಒಂದು ಸಾಂಸ್ಕೃತಿಕ ಅಧ್ಯಯನ ಮಹಾಪ್ರಬಂಧವನ್ನು ಕನರ್ಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ 1984 ರಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಹಾಗೂ ಅದೇ ವಿಶ್ವವಿದ್ಯಾಲಯದಿಂದ ಭಾಷಾಂತರ ಡಿಪ್ಲೋಮಾ ಪದವಿಯನ್ನು ಪಡೆದುಕೊಂಡಿದ್ದಾರೆ.

ಬಾಲ್ಯದ ಶಾಲಾ ದಿನಗಳಿಂದಲೇ ಶಿಸ್ತಿನ ಸಿಪಾಯಿ, ಸಂಸ್ಕೃತಿಯ ಚಿಂತಕ,  ಹಳ್ಳಿಯ ಜನಪದ ಪರಿಸರ, ರೀತಿ ರಿವಾಜು ನಂಬಿಕೆ, ಆಚಾರ, ವಿಚಾರಗಳು ಹಾಗೂ ಕಲೆ ಇತ್ಯಾದಿಗಳು ಅವರ ಮನಸ್ಸನ್ನು ಆಕಷರ್ಿಸಿದವು. ರಜಾ ದಿನಗಳಲ್ಲಿ ಲಂಬಾಣಿ ಬುಡಕಟ್ಟು ಸಂಸ್ಕೃತಿಯನ್ನು ಕುರಿತು ಆಕರಗಳ ಸಂಗ್ರಹ, ಕುತೂಹಲಕಾರಿ ಸಂಗತಿಗಳ ಬಗೆಗೆ ಚಚರ್ೆ, ಸಂವಾದ, ವಿವರಣೆ ಹಾಗೂ ವಿಶ್ಲೇಷಣೆಗಳಿಗೆ ತೊಡಗಿಕೊಳ್ಳುವುದು, ಓದಿನಲ್ಲಿ ಹೆಚ್ಚಿನ ಆಸಕ್ತಿ, ಕಡು ಬಡತನದಲ್ಲಿದ್ದರೂ ಅಚ್ಚು ಕಟ್ಟುತನ, ಶಿಸ್ತನ್ನು ಮೈಗೂಡಿಸಿಕೊಂಡ ಇವರ ಸಂಸ್ಕೃತಿ ಬಗೆಗಿನ ಅನ್ವೇಷಣೆಯೇ ಮುಂದೆ ಡಾಕ್ಟರೇಟ್ ಪದವಿಯ ವಿಷಯಕ್ಕೆ ಕಾರಣವಾಗಿದೆ.
ಗುಲಬಗರ್ಾ ವಿಶ್ವವಿದ್ಯಾಲಯದಲ್ಲಿ 1987 ರಲ್ಲಿ ಸಹ ಪ್ರಾಧ್ಯಾಪಕ ಹುದ್ದೆ ಸೇರಿದ ಇವರು, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಪ್ರಸಾರಾಂಗದ ನಿದರ್ೆಶಕ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಡೀನ್, ಸಿಂಡಿಕೇಟ್ ಸದಸ್ಯರಾಗಿ, ಅಲ್ಲದೆ 2003 ರಲ್ಲಿ ಹಂಗಾಮಿ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಕನ್ನಡ ಅಧ್ಯಯನದ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಮೊದಲ ಕೃತಿ 'ಲಂಬಾಣಿ ಸಂಸ್ಕೃತಿ' (1988), ಅಲ್ಲಿಂದ ಆರಂಭವಾದ ಇವರ ಸಾಹಿತ್ಯ ಇದುವರೆಗೂ 20 ಸಂಶೋಧನಾ ಕೃತಿಗಳು, 20 ಪಠ್ಯ ಪುಸ್ತಕಗಳ ಸಂಗ್ರಹ ಹಾಗೂ ಸಂಪಾದನೆ, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹೊರ ತಂದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಸಮ್ಮೇಳನ, ಕಾಯರ್ಾಗಾರಗಳಲ್ಲಿ ಪ್ರಬಂಧ ಮಂಡನೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.  ಯು.ಜಿ.ಸಿಯ ಎರಡು ಪ್ರಧಾನ ಸಂಶೋಧನಾ ಯೋಜನೆ, ಕನರ್ಾಟಕ ಸಕರ್ಾರದ ಕನ್ನಡ ಸಂಸ್ಕೃತಿ ಇಲಾಖೆಯ ಶಾಸ್ತ್ರೀಯ ಭಾಷಾ ಯೋಜನೆಗಳನ್ನು ಕೈಗೊಂಡಿದ್ದಾರೆ.

ಇವರ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ 2005 ರಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ. ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿಯ ವಿಜಯ ಶ್ರೀ ಪ್ರಶಸ್ತಿ. 1998 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುರಸ್ಕಾರ. 1997 ರಲ್ಲಿ ಕನರ್ಾಟಕ ಜಾನಪದ ತಜ್ಞ ಪ್ರಶಸ್ತಿ. 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಾಗಿದೆ.





ಕನ್ನಡ ಶಾಸ್ತ್ರೀಯ ಭಾಷೆ ಕಾರ್ಯ ತೃಪ್ತಿ ತಂದಿದೆಯೇ?

ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವದು ದಾಖಲೆಗಳಿಂದ ಸ್ಪಷ್ಟವಾಗಿದೆ. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭದಲ್ಲಿ ಕನ್ನಡಕ್ಕೂ ಲಭಿಸಬೇಕಾಗಿತ್ತು. ತಡವಾಗಿಯಾದರೂ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಸಂತೋಷದ ಸಂಗತಿ. ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒಂದು ಕಿರೀಟ ಇದ್ದಂತೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತೆ ಕಟ್ಟಿ ಕೊಡುವಂತಹ ಕೆಲಸ ಮಾಡಬೇಕಾಗಿದೆ. ಎಲ್ಲಾ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳಿಗೂ ಕನರ್ಾಟಕ ಸರಕಾರ ಎರಡೆರಡು ಕೋಟಿ ಅನುದಾನ ನೀಡಿದೆ. ಕನ್ನಡ ಕಟ್ಟುವ ಕೆಲಸ ಹಿಂದೆಂದಿಗಿಂತ ಹೆಚ್ಚು ಶಾಸ್ತ್ರೀಯ ಭಾಷೆಯ ಹಿನ್ನೆಲೆಯೊಳಗೆ ಭರದಿಂದ ಸಾಗಿದೆ, ತೃಪ್ಪಿಕರವಾಗಿದೆ. ಯಾವುದೇ ಒಂದು ರಾಜ್ಯದ ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿದೆ.

ಸಾಹಿತ್ಯ ಬರವಣಿಗೆಗೆ ಬೇಕಾದ ಅಂಶಗಳೇನು?

ಸಾಹಿತ್ಯ ಬರವಣಿಗೆಗೆ ಬಹಳ ಮುಖ್ಯವಾಗಿ ಓದು ಬೇಕು, ಗಂಭೀರವಾದಂತಹ ಓದು ಬೇಕು. ಶಿಸ್ತುಬದ್ಧ ಅಧ್ಯಯನ, ಇಲ್ಲದಿದ್ದರೆ ಅವ್ಯವಸ್ಥಿತ ಬರವಣಿಗೆಯಾಗುತ್ತದೆ. ಬಹಳ ವ್ಯವಸ್ಥಿತವಾದಂತಹ ಬರವಣಿಗೆ ಬೇಕು. ಲೇಖಕನ ಶಿಸ್ತು, ಸೂಕ್ತವಾದ ಅಧ್ಯಯನ, ಭಾಷೆಯ ಹಿಡಿತ ಮೇಲಾಗಿ ಲೇಖಕನಿಗೆ ಆಸಕ್ತಿ ಮುಖ್ಯವಾದದ್ದು.
್ಡ 'ಜನಪದ ಸಾಹಿತ್ಯವೆಂದರೆ ಭಾರತೀಯ ಸಂಸ್ಕೃತಿಯ ಬೇರು' ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಎಲ್ಲಾ ಭಾಷೆಗಳಿಗೂ ಜನಪದ ಸಾಹಿತ್ಯ ತಾಯಿ ಬೇರು. ಬರೀ ಕನ್ನಡಕ್ಕೆ ಮಾತ್ರ ಅಲ್ಲ ಪ್ರಪಂಚದ ಯಾವುದೇ ಭಾಷೆಯಾಗಿರಬಹುದು. ಮೊದಲು ಜನಪದ ಸಾಹಿತ್ಯ ಆಮೇಲೆ ಶಿಷ್ಠ ಸಾಹಿತ್ಯ. ಜನಪದ ಸಾಹಿತ್ಯದ ಪರಿಷ್ಕೃತ ಭಾಗವೇ ಈ ಶಿಷ್ಠ ಸಾಹಿತ್ಯವಾಗಿದೆ.

'ನಗರ ಸಂಸ್ಕೃತಿ ಬೆಳೆದು, ಗ್ರಾಮ ಸಂಸ್ಕೃತಿ' ಮಾಯಾವಾಗುತ್ತಿಲ್ಲವೇ?

ಖಂಡಿತಾ, ನಮ್ಮ ಗ್ರಾಮೀಣ ಪ್ರದೇಶದ ಜನ ಇಂದು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ನಗರದ ಸಂಸ್ಕೃತಿಗೆ ಅವರು ಹೊಂದಿಕೊಳ್ಳುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ ಕ್ರಮೇಣ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಹತ್ತು ವರ್ಷಗಳ ಹಿಂದಿನ ಸಂಸ್ಕೃತಿ ಇವತ್ತು ನಮ್ಮ ಮಧ್ಯೆ ಇಲ್ಲ. ಇಂದಿನ ಸಂಸ್ಕೃತಿ ನಾಳೆ ಇರುವದಿಲ್ಲ. ಸಂಸ್ಕೃತಿ ಚಲನ ಶೀಲವಾಗಿರುವಂಥದ್ದು. ಅದನ್ನು ತಡೆಗಟ್ಟುವದಕ್ಕೆ ಆಗುವದಿಲ್ಲ. ಸಂಸ್ಕೃತಿ ನಿಂತ ನೀರಾಗಬಾರದು. ಇದು ಪರಿವರ್ತನಾಶೀಲವಾಗಿರುವಂಥದ್ದು, ಯಾವತ್ತೂ ಬದಲಾವಣೆಗೆ ಒಳಪಡುವಂಥದ್ದು. ವಿಶಿಷ್ಠವಾದಂತಹ ನಮ್ಮ ಮೌಲ್ಯಗಳನ್ನು ಉಳಿಸಿಕೊಂಡು, ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು.

ಜಾಗತೀಕರಣದ ಪ್ರಭಾವದಿಂದ ಜನಪದ ಸಂಸ್ಕೃತಿಯ ಮಹತ್ವ ಕಡಿಮೆಯಾಗಿದೆಯೇ?

ಜಾಗತೀಕರಣದಿಂದ ಜನಪದ ಸಾಹಿತ್ಯದ ಮಹತ್ವ ಕಡಿಮೆ ಎಂಬುದಿಲ್ಲ. ಜನಪದದ ಸತ್ವ ಕ್ಷೀಣಿಸುವದಿಲ್ಲ. ಜಾಗತೀಕರಣದ ಪ್ರಭಾವ ಎಷ್ಟೇ ಆದರೂ ತನ್ನ ಮೂಲ ಸತ್ವ ವನ್ನು ಉಳಿಸಿಕೊಂಡು ಬರುತ್ತದೆ. ಇದರಿಂದ ಕೆಲವು ಬದಲಾವಣೆಗಳಾಗಬಹುದು, ವಿಪಯರ್ಾಸಗಳಾಗಬಹುದು, ಹೊಸ ಅಲೆಗಳು ಮೂಡಬಹುದು ಅಂದ ಮಾತ್ರಕ್ಕೆ ಇಡೀ ಸಂಸ್ಕೃತಿ ಬದಲಾಗುತ್ತದೆ, ಜನಪದ ಹಾಗೂ ನಮ್ಮ ಸಂವೇದನೆ ಬದಲಾಗುತ್ತದೆ, ಎನ್ನುವಂಥದ್ದಲ್ಲ. ಎಲ್ಲೋ ಮೇಲೆತ್ತರದಲ್ಲಿ ಪ್ರಭಾವ ಬೀರಬಹುದು. ನೇರವಾಗಿ ನಮ್ಮ ಜನಪದದ ಮೇಲೆ ಪರಿಣಾಮ ಆಗುವದಿಲ್ಲ.

ಮಾದ್ಯಮ ಪ್ರಭಾವದಿಂದ ಮೂಲ ಸಂಸ್ಕೃತಿಗೆ ಪೆಟ್ಟು ಬಿದ್ದಿದೆಯೇ?

ಸಂಸ್ಕೃತಿ ಚಲನಶೀಲವಾಗಿರುವದು, ಪರಿವರ್ತನಾಶೀಲವಾಗಿರುವಂಥದ್ದು. ಆಧುನಿಕ ಮಾದ್ಯಮಗಳ ಪ್ರಭಾವದಿಂದ ಮೂಲ ಸಂಸ್ಕೃತಿಗೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ. ಆಧುನಿಕ ಮಾಧ್ಯಮಗಳು ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿವೆ.ಜೊತೆಗೆ ಸಂಸ್ಕೃತಿಯ ಆಶಯಗಳನ್ನು ಜನ ಸಾಮಾನ್ಯರಲ್ಲಿ ಬಿತ್ತಿ ಬೆಳೆಸಿ ಪ್ರಸಾರ ಮಾಡುವ ಜವಾಬ್ದಾರಿ ಸಮೂಹ ಸಂವಹನ ಮಾಧ್ಯಮಗಳದ್ದಾಗಿದೆ. ಸಂಸ್ಕೃತಿಯ ವೈವಿಧ್ಯತೆ ಮತ್ತು ವಿಶಿಷ್ಟತೆಯ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ಅಧ್ಯಯನ, ಸಂಶೋಧನೆಗೆ ಮಾರ್ಗದರ್ಶನ ಮಾಡುವ ಮೂಲಕ ಸಂಸ್ಕೃತಿಯ ಬಗೆಗಿನ ಕಾಳಜಿ ಮತ್ತು ಸಮುದಾಯದೊಂದಿಗೆ ಸಂಸ್ಕೃತಿಯ ಬೆಸುಗೆ ಮಾಡುತ್ತಿವೆ.

ಯುವಸಮುದಾಯವನ್ನು ಸಾಹಿತ್ಯದೆಡೆಗೆ ಆಕಷರ್ಿಸುವದು ಹೇಗೆ?

ಯುವಕರನ್ನು ಸಾಹಿತ್ಯದೆಡೆಗೆ ತರಲು ಚಚರ್ೆ, ವಾದ, ಸಂವಾದಗಳಲ್ಲಿ ಭಾಗವಹಿಸುವಂತೆ ಮಾಡಬೆಕು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಬೆಕು. ತಾಲೂಕ, ಜಿಲ್ಲಾ, ರಾಜ್ಯಮಟ್ಟದವರೆಗೆ ಸಾಹಿತ್ಯ ಸಮ್ಮೆಳನಗಳು, ವಿಚಾರ ಸಂಕಿರಣಗಳು ನಡೆಯುತ್ತಿರಬೇಕು. ಸಾಹಿತ್ಯದ ಬರವಣಿಗೆಯ ಕಮ್ಮಟಗಳನ್ನು ನಡೆಸಬೇಕು. ಅದು ಭಾಷಾಂತರ ಕಮ್ಮಟ ಆಗಿರಬಹುದು, ಸಾಹಿತ್ಯ ರಚನೆ, ಸೃಜನ ಕ್ರಿಯೆಯಂತಹ ಕಮ್ಮಟಗಳಲ್ಲಿ ಯುವಕರು ಭಾಗಿಯಾಗುವಂತೆ ಮಾಡಿ ಸಾಹಿತ್ಯ ದೃಷ್ಟಿಗೆ, ಸೃಜನ ಕ್ರಿಯೆಗೆ ತೊಡಗಿಸಿಕೊಳ್ಳಬೇಕಾಗಿದೆ.

ಶಿಕ್ಷಣದಲ್ಲಿ ಜನಪದ ಸಾಹಿತ್ಯದ ಕಲಿಕಾ ಆಸಕ್ತಿ ಮೂಡಿಸುವದು ಹೇಗೆ?

ನಮ್ಮಲ್ಲಿ ಸಾವಿರಾರು ಕನ್ನಡ ಪ್ರಾಥಮಿಕ ಶಾಲೆಗಳಿವೆ. ದೈಹಿಕ ಶಿಕ್ಷಣ ನೀಡುವಂತೆ, ಕಲೆ ನಾಟಕ ತರಬೇತಿ ಕೊಡುವಂತೆ ಜಾನಪದ ಕಲಿಕೆಗೆ ಆಸಕ್ತಿ ಮೂಡಿಸಲು ಜಾನಪದ ಹಾಡುಗಾರರನ್ನು, ಜಾನಪದ ಶಿಕ್ಷಕರನ್ನು, ವಾದನಕಾರರನ್ನು, ಜನಪದ ವೇಷ ಭೂಷಣಗಳನ್ನು ತರಬೇತಿ ರೂಪದೊಳಗೆ ಪ್ರತಿಯೊಬ್ಬ ಜಾನಪದ ಕಲಾವಿದರನ್ನು ಪ್ರಾಥಮಿಕ ಶಾಲೆಗಳಿಗೆ ನೇಮಕ ಮಾಡಬೇಕು. ಜಾನಪದ ಕಲಾವಿದರಿಗೆ ಮಹತ್ವ ಹಾಗೂ ಮಾನ್ಯತೆ ದೊರೆತು, ಕಲೆಯನ್ನು ಉಳಿಸಿದಂತಾಗುತ್ತದೆ. ಇಂಥಹ ಒಂದು ಕ್ರಮವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕು. ನಾಳಿನ ವಿದ್ಯಾಥರ್ಿಗಳಿಗೆ ಜನಪದ ಕಲಿಕೆಯ ಬಗೆಗೆ ಆಸಕ್ತಿ ಮೂಡಿಸುವಂತಾಗುತ್ತದೆ. ಕಲೆ, ಸಂಸ್ಕೃತಿ ಉಳಿಸಿ, ಮುಂದಿನ ಪೀಳಿಗೆಗೆ ಜನಪದ ಸಂಸ್ಕೃತಿಯನ್ನು ರವಾನೆ ಮಾಡಬೇಕು.

'ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಬೇಕು' ಎಂದಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮೂರ್ಖತನದ ಪರಮಾವಧಿ. ಇದೇ 78ನೇ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಕನ್ನಡ ಶಾಲೆಗಳು ರದ್ದಾಗುವದಿಲ್ಲ ಎಂದಿದ್ದಾರೆ. ಹಾಗೇನಾದರೂ ಆದರೆ ಬಹಳ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಇಂಗ್ಲೀಷ ಶಾಲೆಗಳನ್ನು ಮುಚ್ಚಬೇಕೆ ಹೊರತು, ಕನ್ನಡ ಶಾಲೆಗಳನ್ನಲ್ಲ. ಸಂಸ್ಕೃತಿ ಶಾಲೆಯಿಂದಲೇ ಆರಂಭಗೊಳ್ಳುತ್ತದೆ. ಅದನ್ನು ಮುಚ್ಚಿದರೆ ವಿದ್ಯಾಥರ್ಿಗಳು ಶಾಲೆಗೆ ಬರಲಾರದೆ, ಚಿಕ್ಕ ಮಕ್ಕಳು ಕೂಲಿ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಶಾಲೆ ಮುಚ್ಚುವ ನಿಧರ್ಾರ ಸರಕಾರ ಕೈ ಬಿಡಬೇಕು ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಇದು ಕಾರಣವಾಗುತ್ತದೆ.

-ಅಮರೆಶ ನಾಯಕ ಜಾಲಹಳ್ಳಿ
Cell-9945268059






Wednesday, 11 January 2012

Dr.Rajappa Dalavai Interview (Published)


ಕ್ರಿಯಾಶೀಲ ರಂಗ ನಿರ್ದೇಶಕ ಡಾ.ದಳವಾಯಿ..

ಪರಿಣತಿ ಸಾಧಿಸುವದು ಒಂದು ಸವಾಲು, ಆದರೆ ಅಂತಹ ವಿಚಾರಗಳಲ್ಲಿ ಸವಾಲುಗಳನ್ನು ಆಸಕ್ತಿಯಿಂದ ಸ್ವೀಕರಿಸಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿ, ಗಟ್ಟಿಯಾಗಿ ನೆಲೆ ನಿಂತವರು ಕೆಲವೇ ವ್ಯಕ್ತಿಗಳು, ಅಂತಹ ಸಾಧಕರಲ್ಲಿ ರಂಗ ರತ್ನ ಪ್ರಶಸ್ತಿ ವಿಜೇತ ಡಾ.ರಾಜಪ್ಪ ದಳವಾಯಿ ಒಬ್ಬರು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ, ವೈವಿಧ್ಯಮಯವಾದ ಕ್ಷೇತ್ರಗಳಲ್ಲಿ ತೊಡಗಿಕೊಂಡು ವಿಶಿಷ್ಟ ಶೈಲಿಯ ಕಲೆಯನ್ನು ರೂಡಿಸಿಕೊಂಡಿರುವ ಇವರು ವಿಮರ್ಶಕರಾಗಿ, ಸಂಪಾದಕರಾಗಿ, ಸಿನಿಮಾ ನಿದರ್ೇಶಕರಾಗಿ, ರಂಗಭೂಮಿ, ಜಾನಪದ, ಸಂಗೀತ ಹೀಗೆ ಹಲವಾರು ಕೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಶಿವನಿ ಬಳಿಯ ಅನುವನಹಳ್ಳಿಯ ಕುರುಬ ಜನಾಂಗದ ಕಡು ಬಡತನ ಕುಟುಂಬದಲ್ಲ್ಲಿ ಜನಿಸಿರುವ ಇವರು ಮಾಡಿದ ಸಾಧನೆ ಅಮೋಘವಾಗಿದೆ. ಕಷ್ಟ, ಸುಖಗಳನ್ನು ಅನುಭವಿಸಿದ ಇವರ ಬದುಕು ಏಳು, ಬೀಳುಗಳನ್ನು ಕಂಡಿದೆ. ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ 1985ರಲ್ಲಿ ಎಂ.ಎ ಪದವಿ ಪಡೆದು, ಎಂ.ಎಂ, ಪಿ.ಜಿ.ಡಿ.ಎಫ್, ಎಂ.ಫಿಲ್, ಪಿಎಚ್.ಡಿ, ಪದವಿಗಳನ್ನು ಪಡೆದಿದ್ದಾರೆ.

 'ಸ್ವಾತಂತ್ರ್ಯಪೂರ್ವದ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ವಸ್ತುಗಳು' ಎಂಬ ವಿಷಯ ಕುರಿತು ಸಂಶೋಧನೆ ನಡೆಸಿದ್ದಾರೆ. ಕಪ್ಪು ದಾರಿಯ ಕೆಂಪು ಚಿತ್ರ, ಸಗಟು ಕವಿಯ ಚಿಲ್ಲರೆ ಪದ್ಯಗಳು, ನೆನಪುಗಳು ಸಾಯುವದಿಲ್ಲ, ಹಕ್ಕಿ ಪಿಕ್ಕಿಯರ ಸಂಸ್ಕೃತಿ, ಏಳೂರು ದೇವರ ಕಾಳಗ, ಇವು ಇವರ ಕೃತಿಗಳು. ಅಂತರ್ಗಟ್ಟೆವ್ವ, ರಕ್ತದ ಬಣ್ಣ ಕಪ್ಪು, ಚಲನ, ಡೋಲಿ, ತಿಳಿವಳಿಕೆ, ಓದು-ಬರಹ, ಸಿನಿಮಾ ಮೀಮಾಂಸೆ, ಕೃತಿ ಆಕೃತಿ, ಉಳುಮೆ, ಸಂಸ್ಕೃತಿ ನಿರ್ವಚನ, ಬೆಳೆ ಮತ್ತು ಸುಯೋಧನ ಎಂಬ ಹನ್ನೆರಡು ಕೃತಿಗಳು ಏಕಕಾಲದಲ್ಲಿ ಪ್ರಕಟಗೊಂಡ ದಳವಾಯಿ ಡಜನ್ ಕೃತಿಗಳೆನಿಸಿಕೊಂಡಿವೆ.

ಕದ್ದವರ್ಯಾರಣ್ಣ ಬೀಜಗಳ, ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ ಎಂಬ ಬೀದಿ ನಾಟಕಗಳು, 'ಕುಲಂ' ಎಂಬ ಪಂಪಭಾರತದ ಕರ್ಣನನ್ನು ಕುರಿತ ಪ್ರಸಿದ್ಧ ನಾಟಕವಾಗಿದೆ.. ಇವರ ಹಲವಾರು ಸಂಶೋದನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗೆ ಡಾ.ನಲ್ಲೂರು ಪ್ರಸಾದ್ ಪ್ರಶಸ್ತಿ, ಇವರ ಮುಡಿಗೇರಿವೆ. ವಿವಿಧ ಸಂಘ, ಸಂಸ್ಥೆಗಳಿಂದ ಗೌರವ, ಸನ್ಮಾನಗಳು ದೊರೆತಿವೆ.

ಪ್ರಸ್ತುತ ಇವರು ಗುಲಬಗರ್ಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಕವೇ ಕೈಲಾಸವೆಂದು ತಿಳಿದು ತಮ್ಮ ಕಾರ್ಯದಲ್ಲಿ ಮಗ್ನರಾಗಿ ಕ್ರಿಯಾಶೀಲ, ನಿತ್ಯಪರಿವರ್ತನಾಶೀಲ ಗುಣ ಸ್ವಭಾವ ಅಳವಡಿಸಿಕೊಂಡಿರುವ ಇವರು ತಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ನಾಟಕ ಅಕಾಡೆಮಿ ಪ್ರಶಸ್ತಿ, ನಲ್ಲೂರು ಪ್ರಶಸ್ತಿ ದೊರೆತ ಬಗ್ಗೆ ನಿಮ್ಮ ಅನಿಸಿಕೆ?

ನಾಟಕ ಅಕಾಡೆಮಿ ಪ್ರಶಸ್ತಿ ಒಂದು ವಿಶೇಷ ಸಂದರ್ಭ ಪ್ರಶಸ್ತಿ. ಸಾಹಿತ್ಯ ಅಕಾಡೆಮಿ ಆರಂಭವಾಗಿ ಐವತ್ತು ವರ್ಷ ಗತಿಸಿದೆ. ಈ ಅವಧಿಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿ, ಐವತ್ತು ಜನಕ್ಕೆ ಸನ್ಮಾನಿಸಿ ಜೀವಮಾನದ ಸಾಧನೆ ಹಿನ್ನೆಲೆಯಲ್ಲಿ ಪ್ರಶಸ್ತಿ ವಿತರಿಸಲಾಗಿದೆ. ನಾಟಕಕಾರ, ವಿಮರ್ಶಕ, ರಂಗಕಮರ್ಿ ಪರವಾಗಿ ನನ್ನನ್ನು ಗುರುತಿಸಿದ್ದಾರೆ. ಒಳ್ಳೆಯ ಅಧ್ಯಾಪಕನಿಗೆ ರಂಗಭೂಮಿಯ ನಂಟಿರಬೇಕು ಹಾಗೂ ರಂಗಭೂಮಿ ಕುರಿತು ಅಂಕಣ ಬರೆಯುತ್ತಿದ್ದ್ದೇನೆ. ಪ್ರಶಸ್ತಿಗಳನ್ನು ನಾವು ಬಯಸಿರುವದಿಲ್ಲ. ಪ್ರಶಸ್ತಿಗಳು ದೊರೆತ ಸಂದರ್ಭದಲ್ಲಿ ಭರವಸೆ ಮೂಡುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ಮಾಡಲು ಪ್ರೋತ್ಸಾದಾಯಕವಾಗಿರುತ್ತದೆ.

ನಿಮಗೆ ಬರವಣಿಗೆಯ ಬದುಕಾಗಲು ಕಾರಣ?

ನಾನು ಮೊದಲು ನಿರುದ್ಯೋಗಿ, ಬದುಕಿನ ಅನಿವಾರ್ಯತೆಗಳು, ಹತ್ತಾರು ವರ್ಷ ಬಳಲಿದ ಅನುಭವ ಬರಹಗಾರನಾಗಲು ಪ್ರೇರೇಪಿಸಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಯುವದು ಒಂದು ಹಂತ. ಬದುಕಿನಿಂದ ಕಲಿಯುವ ಕಲಿಕೆ ಮನುಷ್ಯನ ಜೀವನ ರೂಪಿಸುತ್ತದೆ. ಜೀವನದಲ್ಲಿ ಬರುವಂತಹ ಅನಿವಾರ್ಯ ಸಂದರ್ಭಗಳು ಕವಲು ದಾರಿಗಳಾಗಿ ಒಂದು ಹಂತಕ್ಕೆ ತಂದು ನಿಲ್ಲಿಸುತ್ತವೆ. ವಿಶ್ವವಿದ್ಯಾಲಯದಿಂದ ಸಮಾಜ ಅಪಾರವಾದುದನ್ನು ಬಯಸುತ್ತದೆ. ಮೂಲತ: ನಾನು ಚಿತ್ರ ಕಲಾವಿದ, ಆಮೇಲೆ ಸಾಹಿತ್ಯದ ವಿದ್ಯಾಥರ್ಿ, ಸಿನಿಮಾ, ನಾಟಕ, ಸಂಗೀತ ಈ ಎಲ್ಲಾ ಕ್ಷೆತ್ರಗಳಲ್ಲಿ ಕೆಲಸ ಮಾಡಿದ ಅನುಭವ ಒಬ್ಬ ಒಳ್ಳೆಯ ಅಧ್ಯಾಪಕನನ್ನಾಗಿ ರೂಪಿಸಿವೆ.

ನಾಟಕ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?

ಬಾಲ್ಯದಿಂದಲೂ ನನಗೆ ನಾಟಕದಲ್ಲಿ ಆಸಕ್ತಿ, ನಮ್ಮ ಹಳ್ಳಿಯಲ್ಲಿ ಬಯಲಾಟ ತುಂಬಾ ಪ್ರಸಿದ್ಧ, ಬಯಲಾಟದಲ್ಲಿ ನಾನು ಭಾಗವಹಿಸುತ್ತಿದ್ದೆ. ಪ್ರಸಿದ್ಧ ರಂಗ ನಿದರ್ೇಶಕ ಅಶೋಕ ಬಾದರದಿನ್ನಿ ನನ್ನ ಮೊದಲ ರಂಗ ಗುರು. ಅವರು 'ಎ ಮಿಸ್ಸೆಮರ್ ನೈಟ್ ಡ್ರೀಮ್ಸ್' ಷೇಕ್ಸ್ಪಿಯರ್ನ ನಾಟಕ ಕಲಿಸಿದ್ದರು. ಅದರಲ್ಲಿ ನನ್ನದೊಂದು ಚಿಕ್ಕ ಪಾತ್ರ, ಅವರು ಮಾಡಿದ ರಂಗಭೂಮಿಯ ಸಿದ್ದಾಂತ, ಅದರ ಕುರಿತ ವ್ಯಾಖ್ಯಾನಗಳು ಇವೆಲ್ಲವೂ ನನ್ನನ್ನು ರಂಗಭೂಮಿ ಕಡೆಗೆ ಆಕéಷರ್ಿಸಿದವು. ಆಗ ಮೈಸೂರಿನಲ್ಲಿ ರಂಗಭೂಮಿ ಶುರುವಾಗಿತ್ತು. ರಂಗಾಯಣದ ನಾಟಕಗಳನ್ನು ನೋಡುತ್ತ ಎರಡು ದಶಕಗಳು ಕಳೆದವು, ರಂಗಾಯಣ ಒಂದು ರೀತಿಯಲ್ಲಿ ನಾಟಕಕಾರನನ್ನಾಗಿ ರೂಪಿಸಿತು. ಒಳ್ಳೆಯ ನಾಟಕಗಳನ್ನು ನೋಡಿದರೆ ನಾಟಕಕಾರನಾಗಲು ಸಾಧ್ಯವಿಲ್ಲ. ಅದರಲ್ಲಿ ಭಿನ್ನವಾಗಿ ತೊಡಗಿಕೊಳ್ಳಬೇಕು. ರವೀಂದ್ರ ಕಲಾ ಕ್ಷೇತ್ರದ ಒಬ್ಬ ಸಾಮಾನ್ಯ ಪ್ರೇಕ್ಷಕ ನಾನು, ಮುಂದೊಂದು ದಿನ ನಾನೊಬ್ಬ ನಾಟಕಕಾರ ಆಗಬಹುದು, ಇದೇ ರಂಗಮಂದಿರದಲ್ಲಿ ನಿದರ್ೇಶನ ಮಾಡಬಹುದು ಎಂದು ನಾನು ಕಲ್ಪಿಸಿಕೊಂಡೇ ಇರಲಿಲ್ಲ.

ಕನ್ನಡ ರಂಗಭೂಮಿಯ ಪ್ರಸ್ತುತ ಸ್ಥಿತಿಗತಿ ಹೇಗಿದೆ?

ಕನ್ನಡ ರಂಗಭೂಮಿ ಸೃಜನಶೀಲ ಮಾಧ್ಯಮವಾಗಿದ್ದು ಅತ್ಯಂತ ಪ್ರಯೋಗಶೀಲವಾಗಿದೆ. ಇಂದು ಆಸಕ್ತ ಕಲಾವಿದರು ಹಾಗೂ ಯುವಕರು ಈ ಕ್ಷೇತ್ರದ ಕಡೆ ಹೆಚ್ಚು ಹೆಚ್ಚು ಆಕಷರ್ಿತರಾಗಿದ್ದಾರೆ ಪ್ರಸಕ್ತ ದಿನಮಾನಗಳಲ್ಲಿ ತಾಂತ್ರಿಕ ಮಾಧ್ಯಮಗಳಾದ ದೂರದರ್ಶನ, ಸಿನಿಮಾ ಮಾಧ್ಯಮಗಳು ಸೃಷ್ಟಿಯಾಗಿವೆ. ಅದಾಗ್ಯೂ ಕನ್ನಡ ರಂಗಭೂಮಿ ಜೀವಂತ ಮಾಧ್ಯಮವಾಗಿದ್ದು ಇಂದು ಪ್ರಯೋಗಶೀಲವಾಗಿದೆ. ಹಾಗೂ ಸಕ್ರಿಯವಾಗಿದೆ ಆದರೆ ಆದಾಯಕ್ಕಿಂತ ಪರಿಣಾಮಕಾರಿ ಜನ ಮಾಧ್ಯಮವಾಗಿದೆ. ಸಿನಿಮಾದಲ್ಲಿ ಗ್ಲಾಮರ್ ಇರುತ್ತದೆ, ಆದಾಯ ಹೆಚ್ಚು. ರಂಗಭೂಮಿಯಲ್ಲಿ ಹೆಚ್ಚು ಆದಾಯದ ಸಾಧ್ಯತೆಗಳು ಕಡಿಮೆ, ರಂಗಭೂಮಿಯಲ್ಲಿ ಲಾಭ ಇಲ್ಲ. ಆದರೆ ಅದು ಪ್ರತಿಭೆಗಳನ್ನು ನಿಮರ್ಾಣ ಮಾಡುತ್ತದೆ.

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಬೀರಿದೆಯೇ?

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿ ಪ್ರಭಾವ ಇದೆ. ಮೊದಲು ಬೇರೆ ಭಾಷೆಯ ರಂಗಭೂಮಿ ಭಾರತೀಯ ಸಂಸ್ಕೃತಿ, ಜೀವನ ಶೈಲಿ ಮತ್ತು ಭಾಷೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ದೇಶಿಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕನ್ನಡ ರಂಗಭೂಮಿ ದೇಶಿಯ ಸಂಸ್ಕೃತಿಯ ಜೊತೆಗೆ ಪಾಶ್ಚಿಮಾತ್ಯ ರಂಗಭೂಮಿಯ ಕೆಲವು ಸಾಹಿತ್ಯಗಳ ಪ್ರಭಾವದಿಂದ ಪ್ರಭಾವಿತವಾಗಿರುವುದು ಉಂಟು.  ಭಾರತೀಯ ರಂಗಭೂಮಿ ಕೂಡ ಪಾಶ್ಚಾತ್ಯರ ಮೇಲೆ ಪ್ರಭಾವ ಬೀರಿದೆ, ಪೀಟರ್ ಬ್ರೂಕ್ ಎನ್ನುವವರು ಹನ್ನೆರಡು ಘಂಟೆಗಳ ಕಾಲ 'ಮಹಾಭಾರತ' ನಿದರ್ೇಶನ ಮಾಡಿದರು. ನಾಟಕ ಒಂದು ಜಾಗತಿಕ ಭಾಷೆ. ಸಿನಿಮಾ ನಾಟಕದಲ್ಲಿ ಭಾಷೆ ಮುಖ್ಯ ಅಲ್ಲ. ಅನುಭವ ಮುಖ್ಯ. ಅದೊಂದು ಜಾಗತಿಕ ವ್ಯಾಕರಣ ಕ್ಷೇತ್ರ. ಕನ್ನಡದ ಅಗ್ನಿ ಮತ್ತು ಮಳೆ ಅಮೇರಿಕನ್ ನಾಟಕದ ಮೇಲೆ ಪ್ರಭಾವ ಬೀರಿದೆ. ರಂಗಭೂಮಿಯ ವೈಶಿಷ್ಟ್ಯ ಎಲ್ಲಿದ್ದರೂ ಪ್ರಭಾವ ಬೀರುತ್ತದೆ.

ಭಾರತೀಯ ಸಂಸ್ಕೃತಿಗೆ ರಂಗಭೂಮಿಯ ಕೊಡುಗೆ?

ನಾಟಕಗಳು ಮನುಷ್ಯ ಸಂಸ್ಕೃತಿಯ ನಿಜಸ್ವರೂಪದ ಪ್ರತಿಬಿಂಬಗಳಾಗಿವೆ. ಸಮಾಜದ ವಾಸ್ತವ ವಸ್ತು ಸ್ಥಿತಿಯನ್ನು ನಿಮರ್ಾಣ ಮಾಡುವ ನಾಟಕಗಳು ಜನರ ಜೀವನ ಕಲೆಯನ್ನು ಓರೆಗೆ ಹಚ್ಚುತ್ತದೆ. ಅಲ್ಲದೆ ಸ್ವಸಾಮಥ್ರ್ಯದಿಂದ ಸ್ಥಳೀಯ ಸಂಸ್ಕೃತಿ, ಆಚಾರ ವಿಚಾರ, ಜನಜೀವನ ಶೈಲಿ, ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪ್ರಭಾವಿ ಮಾಧ್ಯಮವಾಗಿ, ಕನ್ನಡ ರಂಗಭೂಮಿ ಕನಸ್ಸನ್ನು ಕಟ್ಟಿ ಕೊಡುತ್ತಾ ಬದುಕನ್ನು ಅರ್ಥ ಮಾಡಿಸುತ್ತದೆ. ಬದುಕು ಕಟ್ಟಿಕೊಳ್ಳುವದನ್ನು ಹೇಳುತ್ತದೆ. ಬೇರೆ ಶಿಷ್ಟ ಮಾಧ್ಯಮಗಳು ಜನರ ಬದುಕು ಹೇಗಿರಬಹುದಿತ್ತು ಎಂದು ತಿಳಿಸುತ್ತದೆ. ಬದುಕು ಹೇಗಿರಬೇಕೆಂದು ತಿಳಿಸುವದೇ ರಂಗಭೂಮಿ. ಇದೇ ಭಾರತೀಯ ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆ.

ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರಗಳಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರಶಸ್ತಿಗಳ ಆಯ್ಕೆಯಲ್ಲಿ ಅನೇಕ ವಿಚಾರಗಳನ್ನು ಚಚರ್ೆ ಮಾಡಿ ನಿದರ್ಿಷ್ಟವಾದ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ಕೊಡಲಾಗುತ್ತದೆ. ನಾನು ಕೂಡ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಕೆಲಸ ನಿರ್ವಹಿಸಿದ್ದೇನೆ. ಅನೇಕ ವಿಷಯಗಳನ್ನು ಚಚರ್ೆಗೆ ತಂದು, ಸದಸ್ಯರು ಯಾರನ್ನು ಒಪ್ಪಿಕೊಳ್ಳುತ್ತಾರೆ, ಆ ವ್ಯಕ್ತಿಯ ಬಗ್ಗೆ  ಕೂಲಂಕಷವಾಗಿ ತಿಳಿದು ಚಚರ್ೆ ನಡೆಸಲಾಗುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಶಸ್ತಿಗಳು ಪ್ರಜಾಪ್ರಭುತ್ವದಿಂದ ಕೂಡಿರುತ್ತವೆ. ಕೆಲವು ಸಾರಿ ಕೆಲವರ ಪ್ರಾಬಲ್ಯ ಅಧಿಕವಾಗಿರುತ್ತದೆ. ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರ ಹೇಳಬಹುದು, ಏಕೆಂದರೆ ಆಪೇಕ್ಷಿತರ ಪಟ್ಟಿ ಅಧಿಕವಾಗಿರಬಹುದು. ಕ್ಷೇತ್ರದಲ್ಲಿ ಗಣನೀಯ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಚೆನ್ನಾಗಿ ಕೆಲಸ ಮಾಡಿದವರನ್ನು ಯಾವ ಪ್ರಸಸ್ತಿಗಳು ಮರೆತಿಲ್ಲ.

ನಾಟಕ ಸಾಹಿತ್ಯ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆಗಳೇನು?

ಸಾಹಿತ್ಯ ಅಭಿರುಚಿ ಬೆಳೆಯಲು ಮೊದಲು ನಿರಂತರವಾದ ಓದು, ವಿಭಿನ್ನ ರೀತಿಯಲ್ಲಿ ಓದುವದು ಬಹಳ ಅಗತ್ಯವಾಗಿದೆ. ವ್ಯವಸ್ಥಿತವಾದ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಸಾಹಿತ್ಯ ರುಚಿ ಮೂಡಿದರೆ ಅಭ್ಯಾಸದಿಂದ ಸಾಧನೆ ಸಾಧ್ಯ. ನಿರಂತರ ಓದುವವರು ಮಾತ್ರ ಸಾಹಿತ್ಯ ಕಲಿಕೆಗೆ ಸೇರಬೇಕು. ಈ ದಿಶೆಯಲ್ಲಿ ವಿದ್ಯಾಥರ್ಿಗಳು ಅಭ್ಯಾಸದಲ್ಲಿ ನಿರತರಾಗಬೇಕು.


-ಅಮರೇಶ ನಾಯಕ ಜಾಲಹಳ್ಳಿ
Cell-9945268059