ಜನಪದ ಸಂಸ್ಕೃತಿಯ ಸಂಶೋಧಕ ಪ್ರೊ.ಖಂಡೋಬಾ
ಜನಪದ ಸಾಹಿತ್ಯದಲ್ಲಿ ವಿಶಿಷ್ಟ ಕೃಷಿ ಮಾಡಿ ಬರಹಗಾರರಾಗಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಅಪರ್ಿಸಿರುವ ಡಾ.ಪಿ.ಕೆ.ಖಂಡೋಬಾ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಶಿರೂರದಲ್ಲಿ ನಡೆದ ಬಾಗಲಕೋಟೆ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಾಕ್ಷರಾಗಿದ್ದರು.
ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮ ಪ್ರೊ. ಪಿ.ಕೆ.ಖಂಡೋಬಾ ರವರ ಜನ್ಮಭೂಮಿಯಾದರೂ, ಕರ್ಮಭೂಮಿ ಕಲಬುಗರ್ಿ. 1953 ರಲ್ಲಿ ತಾಂಡಾ ಸಂಸ್ಕೃತಿಯ ಮನೆತನದಲ್ಲಿ ಜನಿಸಿರುವ ಇವರು, ಗುಲಬಗರ್ಾ ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿರುವ ಅವರ ಸಾಧನೆ ಅಪೂರ್ವವಾದುದು. ಲಂಬಾಣಿ ಬುಡಕಟ್ಟಿಗೆ ಸೇರಿದ ಇವರ ಬದುಕು ಸುಖ ದು:ಖಗಳನ್ನು ಅನುಭವಿಸಿದೆ.
ಪ್ರೊ.ಖಂಡೋಬಾ ಅವರು ಪ್ರಾಥಮಿಕ ಶಿಕ್ಷಣವನ್ನು ಬಾಗಲಕೋಟೆ ತಾಲೂಕಿನ ಶಿರೂರು ತಾಂಡಾದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕೆಲವಡಿ (ಬಾದಾಮಿ) ಯಲ್ಲಿ, ಪ್ರೌಢ ಶಿಕ್ಷಣ ಶಿರೂರುನಲ್ಲಿ, 1974 ರಲ್ಲಿ ಗದುಗಿನ ಜಗದ್ಗುರು ಕಾಲೇಜಿನಲ್ಲಿ ಪದವಿ, 1976 ರಲ್ಲಿ ಸ್ನಾತ್ತಕೋತ್ತರ ಶಿಕ್ಷಣವನ್ನು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯಲ್ಲಿ ಪೂರೈಸಿದರು. 'ಕನರ್ಾಟಕದ ಲಂಬಾಣಿಗಳು- ಒಂದು ಸಾಂಸ್ಕೃತಿಕ ಅಧ್ಯಯನ ಮಹಾಪ್ರಬಂಧವನ್ನು ಕನರ್ಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ 1984 ರಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಹಾಗೂ ಅದೇ ವಿಶ್ವವಿದ್ಯಾಲಯದಿಂದ ಭಾಷಾಂತರ ಡಿಪ್ಲೋಮಾ ಪದವಿಯನ್ನು ಪಡೆದುಕೊಂಡಿದ್ದಾರೆ.
ಬಾಲ್ಯದ ಶಾಲಾ ದಿನಗಳಿಂದಲೇ ಶಿಸ್ತಿನ ಸಿಪಾಯಿ, ಸಂಸ್ಕೃತಿಯ ಚಿಂತಕ, ಹಳ್ಳಿಯ ಜನಪದ ಪರಿಸರ, ರೀತಿ ರಿವಾಜು ನಂಬಿಕೆ, ಆಚಾರ, ವಿಚಾರಗಳು ಹಾಗೂ ಕಲೆ ಇತ್ಯಾದಿಗಳು ಅವರ ಮನಸ್ಸನ್ನು ಆಕಷರ್ಿಸಿದವು. ರಜಾ ದಿನಗಳಲ್ಲಿ ಲಂಬಾಣಿ ಬುಡಕಟ್ಟು ಸಂಸ್ಕೃತಿಯನ್ನು ಕುರಿತು ಆಕರಗಳ ಸಂಗ್ರಹ, ಕುತೂಹಲಕಾರಿ ಸಂಗತಿಗಳ ಬಗೆಗೆ ಚಚರ್ೆ, ಸಂವಾದ, ವಿವರಣೆ ಹಾಗೂ ವಿಶ್ಲೇಷಣೆಗಳಿಗೆ ತೊಡಗಿಕೊಳ್ಳುವುದು, ಓದಿನಲ್ಲಿ ಹೆಚ್ಚಿನ ಆಸಕ್ತಿ, ಕಡು ಬಡತನದಲ್ಲಿದ್ದರೂ ಅಚ್ಚು ಕಟ್ಟುತನ, ಶಿಸ್ತನ್ನು ಮೈಗೂಡಿಸಿಕೊಂಡ ಇವರ ಸಂಸ್ಕೃತಿ ಬಗೆಗಿನ ಅನ್ವೇಷಣೆಯೇ ಮುಂದೆ ಡಾಕ್ಟರೇಟ್ ಪದವಿಯ ವಿಷಯಕ್ಕೆ ಕಾರಣವಾಗಿದೆ.
ಗುಲಬಗರ್ಾ ವಿಶ್ವವಿದ್ಯಾಲಯದಲ್ಲಿ 1987 ರಲ್ಲಿ ಸಹ ಪ್ರಾಧ್ಯಾಪಕ ಹುದ್ದೆ ಸೇರಿದ ಇವರು, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಪ್ರಸಾರಾಂಗದ ನಿದರ್ೆಶಕ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಡೀನ್, ಸಿಂಡಿಕೇಟ್ ಸದಸ್ಯರಾಗಿ, ಅಲ್ಲದೆ 2003 ರಲ್ಲಿ ಹಂಗಾಮಿ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಕನ್ನಡ ಅಧ್ಯಯನದ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಮೊದಲ ಕೃತಿ 'ಲಂಬಾಣಿ ಸಂಸ್ಕೃತಿ' (1988), ಅಲ್ಲಿಂದ ಆರಂಭವಾದ ಇವರ ಸಾಹಿತ್ಯ ಇದುವರೆಗೂ 20 ಸಂಶೋಧನಾ ಕೃತಿಗಳು, 20 ಪಠ್ಯ ಪುಸ್ತಕಗಳ ಸಂಗ್ರಹ ಹಾಗೂ ಸಂಪಾದನೆ, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹೊರ ತಂದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಸಮ್ಮೇಳನ, ಕಾಯರ್ಾಗಾರಗಳಲ್ಲಿ ಪ್ರಬಂಧ ಮಂಡನೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಯು.ಜಿ.ಸಿಯ ಎರಡು ಪ್ರಧಾನ ಸಂಶೋಧನಾ ಯೋಜನೆ, ಕನರ್ಾಟಕ ಸಕರ್ಾರದ ಕನ್ನಡ ಸಂಸ್ಕೃತಿ ಇಲಾಖೆಯ ಶಾಸ್ತ್ರೀಯ ಭಾಷಾ ಯೋಜನೆಗಳನ್ನು ಕೈಗೊಂಡಿದ್ದಾರೆ.
ಇವರ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ 2005 ರಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ. ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿಯ ವಿಜಯ ಶ್ರೀ ಪ್ರಶಸ್ತಿ. 1998 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುರಸ್ಕಾರ. 1997 ರಲ್ಲಿ ಕನರ್ಾಟಕ ಜಾನಪದ ತಜ್ಞ ಪ್ರಶಸ್ತಿ. 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಾಗಿದೆ.
ಕನ್ನಡ ಶಾಸ್ತ್ರೀಯ ಭಾಷೆ ಕಾರ್ಯ ತೃಪ್ತಿ ತಂದಿದೆಯೇ?
ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವದು ದಾಖಲೆಗಳಿಂದ ಸ್ಪಷ್ಟವಾಗಿದೆ. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭದಲ್ಲಿ ಕನ್ನಡಕ್ಕೂ ಲಭಿಸಬೇಕಾಗಿತ್ತು. ತಡವಾಗಿಯಾದರೂ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಸಂತೋಷದ ಸಂಗತಿ. ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒಂದು ಕಿರೀಟ ಇದ್ದಂತೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತೆ ಕಟ್ಟಿ ಕೊಡುವಂತಹ ಕೆಲಸ ಮಾಡಬೇಕಾಗಿದೆ. ಎಲ್ಲಾ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳಿಗೂ ಕನರ್ಾಟಕ ಸರಕಾರ ಎರಡೆರಡು ಕೋಟಿ ಅನುದಾನ ನೀಡಿದೆ. ಕನ್ನಡ ಕಟ್ಟುವ ಕೆಲಸ ಹಿಂದೆಂದಿಗಿಂತ ಹೆಚ್ಚು ಶಾಸ್ತ್ರೀಯ ಭಾಷೆಯ ಹಿನ್ನೆಲೆಯೊಳಗೆ ಭರದಿಂದ ಸಾಗಿದೆ, ತೃಪ್ಪಿಕರವಾಗಿದೆ. ಯಾವುದೇ ಒಂದು ರಾಜ್ಯದ ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿದೆ.
ಸಾಹಿತ್ಯ ಬರವಣಿಗೆಗೆ ಬೇಕಾದ ಅಂಶಗಳೇನು?
ಸಾಹಿತ್ಯ ಬರವಣಿಗೆಗೆ ಬಹಳ ಮುಖ್ಯವಾಗಿ ಓದು ಬೇಕು, ಗಂಭೀರವಾದಂತಹ ಓದು ಬೇಕು. ಶಿಸ್ತುಬದ್ಧ ಅಧ್ಯಯನ, ಇಲ್ಲದಿದ್ದರೆ ಅವ್ಯವಸ್ಥಿತ ಬರವಣಿಗೆಯಾಗುತ್ತದೆ. ಬಹಳ ವ್ಯವಸ್ಥಿತವಾದಂತಹ ಬರವಣಿಗೆ ಬೇಕು. ಲೇಖಕನ ಶಿಸ್ತು, ಸೂಕ್ತವಾದ ಅಧ್ಯಯನ, ಭಾಷೆಯ ಹಿಡಿತ ಮೇಲಾಗಿ ಲೇಖಕನಿಗೆ ಆಸಕ್ತಿ ಮುಖ್ಯವಾದದ್ದು.
್ಡ
'ಜನಪದ ಸಾಹಿತ್ಯವೆಂದರೆ ಭಾರತೀಯ ಸಂಸ್ಕೃತಿಯ ಬೇರು' ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಎಲ್ಲಾ ಭಾಷೆಗಳಿಗೂ ಜನಪದ ಸಾಹಿತ್ಯ ತಾಯಿ ಬೇರು. ಬರೀ ಕನ್ನಡಕ್ಕೆ ಮಾತ್ರ ಅಲ್ಲ ಪ್ರಪಂಚದ ಯಾವುದೇ ಭಾಷೆಯಾಗಿರಬಹುದು. ಮೊದಲು ಜನಪದ ಸಾಹಿತ್ಯ ಆಮೇಲೆ ಶಿಷ್ಠ ಸಾಹಿತ್ಯ. ಜನಪದ ಸಾಹಿತ್ಯದ ಪರಿಷ್ಕೃತ ಭಾಗವೇ ಈ ಶಿಷ್ಠ ಸಾಹಿತ್ಯವಾಗಿದೆ.
'ನಗರ ಸಂಸ್ಕೃತಿ ಬೆಳೆದು, ಗ್ರಾಮ ಸಂಸ್ಕೃತಿ' ಮಾಯಾವಾಗುತ್ತಿಲ್ಲವೇ?
ಖಂಡಿತಾ, ನಮ್ಮ ಗ್ರಾಮೀಣ ಪ್ರದೇಶದ ಜನ ಇಂದು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ನಗರದ ಸಂಸ್ಕೃತಿಗೆ ಅವರು ಹೊಂದಿಕೊಳ್ಳುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ ಕ್ರಮೇಣ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಹತ್ತು ವರ್ಷಗಳ ಹಿಂದಿನ ಸಂಸ್ಕೃತಿ ಇವತ್ತು ನಮ್ಮ ಮಧ್ಯೆ ಇಲ್ಲ. ಇಂದಿನ ಸಂಸ್ಕೃತಿ ನಾಳೆ ಇರುವದಿಲ್ಲ. ಸಂಸ್ಕೃತಿ ಚಲನ ಶೀಲವಾಗಿರುವಂಥದ್ದು. ಅದನ್ನು ತಡೆಗಟ್ಟುವದಕ್ಕೆ ಆಗುವದಿಲ್ಲ. ಸಂಸ್ಕೃತಿ ನಿಂತ ನೀರಾಗಬಾರದು. ಇದು ಪರಿವರ್ತನಾಶೀಲವಾಗಿರುವಂಥದ್ದು, ಯಾವತ್ತೂ ಬದಲಾವಣೆಗೆ ಒಳಪಡುವಂಥದ್ದು. ವಿಶಿಷ್ಠವಾದಂತಹ ನಮ್ಮ ಮೌಲ್ಯಗಳನ್ನು ಉಳಿಸಿಕೊಂಡು, ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು.
ಜಾಗತೀಕರಣದ ಪ್ರಭಾವದಿಂದ ಜನಪದ ಸಂಸ್ಕೃತಿಯ ಮಹತ್ವ ಕಡಿಮೆಯಾಗಿದೆಯೇ?
ಜಾಗತೀಕರಣದಿಂದ ಜನಪದ ಸಾಹಿತ್ಯದ ಮಹತ್ವ ಕಡಿಮೆ ಎಂಬುದಿಲ್ಲ. ಜನಪದದ ಸತ್ವ ಕ್ಷೀಣಿಸುವದಿಲ್ಲ. ಜಾಗತೀಕರಣದ ಪ್ರಭಾವ ಎಷ್ಟೇ ಆದರೂ ತನ್ನ ಮೂಲ ಸತ್ವ ವನ್ನು ಉಳಿಸಿಕೊಂಡು ಬರುತ್ತದೆ. ಇದರಿಂದ ಕೆಲವು ಬದಲಾವಣೆಗಳಾಗಬಹುದು, ವಿಪಯರ್ಾಸಗಳಾಗಬಹುದು, ಹೊಸ ಅಲೆಗಳು ಮೂಡಬಹುದು ಅಂದ ಮಾತ್ರಕ್ಕೆ ಇಡೀ ಸಂಸ್ಕೃತಿ ಬದಲಾಗುತ್ತದೆ, ಜನಪದ ಹಾಗೂ ನಮ್ಮ ಸಂವೇದನೆ ಬದಲಾಗುತ್ತದೆ, ಎನ್ನುವಂಥದ್ದಲ್ಲ. ಎಲ್ಲೋ ಮೇಲೆತ್ತರದಲ್ಲಿ ಪ್ರಭಾವ ಬೀರಬಹುದು. ನೇರವಾಗಿ ನಮ್ಮ ಜನಪದದ ಮೇಲೆ ಪರಿಣಾಮ ಆಗುವದಿಲ್ಲ.
ಮಾದ್ಯಮ ಪ್ರಭಾವದಿಂದ ಮೂಲ ಸಂಸ್ಕೃತಿಗೆ ಪೆಟ್ಟು ಬಿದ್ದಿದೆಯೇ?
ಸಂಸ್ಕೃತಿ ಚಲನಶೀಲವಾಗಿರುವದು, ಪರಿವರ್ತನಾಶೀಲವಾಗಿರುವಂಥದ್ದು. ಆಧುನಿಕ ಮಾದ್ಯಮಗಳ ಪ್ರಭಾವದಿಂದ ಮೂಲ ಸಂಸ್ಕೃತಿಗೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ. ಆಧುನಿಕ ಮಾಧ್ಯಮಗಳು ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿವೆ.ಜೊತೆಗೆ ಸಂಸ್ಕೃತಿಯ ಆಶಯಗಳನ್ನು ಜನ ಸಾಮಾನ್ಯರಲ್ಲಿ ಬಿತ್ತಿ ಬೆಳೆಸಿ ಪ್ರಸಾರ ಮಾಡುವ ಜವಾಬ್ದಾರಿ ಸಮೂಹ ಸಂವಹನ ಮಾಧ್ಯಮಗಳದ್ದಾಗಿದೆ. ಸಂಸ್ಕೃತಿಯ ವೈವಿಧ್ಯತೆ ಮತ್ತು ವಿಶಿಷ್ಟತೆಯ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ಅಧ್ಯಯನ, ಸಂಶೋಧನೆಗೆ ಮಾರ್ಗದರ್ಶನ ಮಾಡುವ ಮೂಲಕ ಸಂಸ್ಕೃತಿಯ ಬಗೆಗಿನ ಕಾಳಜಿ ಮತ್ತು ಸಮುದಾಯದೊಂದಿಗೆ ಸಂಸ್ಕೃತಿಯ ಬೆಸುಗೆ ಮಾಡುತ್ತಿವೆ.
ಯುವಸಮುದಾಯವನ್ನು ಸಾಹಿತ್ಯದೆಡೆಗೆ ಆಕಷರ್ಿಸುವದು ಹೇಗೆ?
ಯುವಕರನ್ನು ಸಾಹಿತ್ಯದೆಡೆಗೆ ತರಲು ಚಚರ್ೆ, ವಾದ, ಸಂವಾದಗಳಲ್ಲಿ ಭಾಗವಹಿಸುವಂತೆ ಮಾಡಬೆಕು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಬೆಕು. ತಾಲೂಕ, ಜಿಲ್ಲಾ, ರಾಜ್ಯಮಟ್ಟದವರೆಗೆ ಸಾಹಿತ್ಯ ಸಮ್ಮೆಳನಗಳು, ವಿಚಾರ ಸಂಕಿರಣಗಳು ನಡೆಯುತ್ತಿರಬೇಕು. ಸಾಹಿತ್ಯದ ಬರವಣಿಗೆಯ ಕಮ್ಮಟಗಳನ್ನು ನಡೆಸಬೇಕು. ಅದು ಭಾಷಾಂತರ ಕಮ್ಮಟ ಆಗಿರಬಹುದು, ಸಾಹಿತ್ಯ ರಚನೆ, ಸೃಜನ ಕ್ರಿಯೆಯಂತಹ ಕಮ್ಮಟಗಳಲ್ಲಿ ಯುವಕರು ಭಾಗಿಯಾಗುವಂತೆ ಮಾಡಿ ಸಾಹಿತ್ಯ ದೃಷ್ಟಿಗೆ, ಸೃಜನ ಕ್ರಿಯೆಗೆ ತೊಡಗಿಸಿಕೊಳ್ಳಬೇಕಾಗಿದೆ.
ಶಿಕ್ಷಣದಲ್ಲಿ ಜನಪದ ಸಾಹಿತ್ಯದ ಕಲಿಕಾ ಆಸಕ್ತಿ ಮೂಡಿಸುವದು ಹೇಗೆ?
ನಮ್ಮಲ್ಲಿ ಸಾವಿರಾರು ಕನ್ನಡ ಪ್ರಾಥಮಿಕ ಶಾಲೆಗಳಿವೆ. ದೈಹಿಕ ಶಿಕ್ಷಣ ನೀಡುವಂತೆ, ಕಲೆ ನಾಟಕ ತರಬೇತಿ ಕೊಡುವಂತೆ ಜಾನಪದ ಕಲಿಕೆಗೆ ಆಸಕ್ತಿ ಮೂಡಿಸಲು ಜಾನಪದ ಹಾಡುಗಾರರನ್ನು, ಜಾನಪದ ಶಿಕ್ಷಕರನ್ನು, ವಾದನಕಾರರನ್ನು, ಜನಪದ ವೇಷ ಭೂಷಣಗಳನ್ನು ತರಬೇತಿ ರೂಪದೊಳಗೆ ಪ್ರತಿಯೊಬ್ಬ ಜಾನಪದ ಕಲಾವಿದರನ್ನು ಪ್ರಾಥಮಿಕ ಶಾಲೆಗಳಿಗೆ ನೇಮಕ ಮಾಡಬೇಕು. ಜಾನಪದ ಕಲಾವಿದರಿಗೆ ಮಹತ್ವ ಹಾಗೂ ಮಾನ್ಯತೆ ದೊರೆತು, ಕಲೆಯನ್ನು ಉಳಿಸಿದಂತಾಗುತ್ತದೆ. ಇಂಥಹ ಒಂದು ಕ್ರಮವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕು. ನಾಳಿನ ವಿದ್ಯಾಥರ್ಿಗಳಿಗೆ ಜನಪದ ಕಲಿಕೆಯ ಬಗೆಗೆ ಆಸಕ್ತಿ ಮೂಡಿಸುವಂತಾಗುತ್ತದೆ. ಕಲೆ, ಸಂಸ್ಕೃತಿ ಉಳಿಸಿ, ಮುಂದಿನ ಪೀಳಿಗೆಗೆ ಜನಪದ ಸಂಸ್ಕೃತಿಯನ್ನು ರವಾನೆ ಮಾಡಬೇಕು.
'ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಬೇಕು' ಎಂದಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮೂರ್ಖತನದ ಪರಮಾವಧಿ. ಇದೇ 78ನೇ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಕನ್ನಡ ಶಾಲೆಗಳು ರದ್ದಾಗುವದಿಲ್ಲ ಎಂದಿದ್ದಾರೆ. ಹಾಗೇನಾದರೂ ಆದರೆ ಬಹಳ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಇಂಗ್ಲೀಷ ಶಾಲೆಗಳನ್ನು ಮುಚ್ಚಬೇಕೆ ಹೊರತು, ಕನ್ನಡ ಶಾಲೆಗಳನ್ನಲ್ಲ. ಸಂಸ್ಕೃತಿ ಶಾಲೆಯಿಂದಲೇ ಆರಂಭಗೊಳ್ಳುತ್ತದೆ. ಅದನ್ನು ಮುಚ್ಚಿದರೆ ವಿದ್ಯಾಥರ್ಿಗಳು ಶಾಲೆಗೆ ಬರಲಾರದೆ, ಚಿಕ್ಕ ಮಕ್ಕಳು ಕೂಲಿ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಶಾಲೆ ಮುಚ್ಚುವ ನಿಧರ್ಾರ ಸರಕಾರ ಕೈ ಬಿಡಬೇಕು ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಇದು ಕಾರಣವಾಗುತ್ತದೆ.
-ಅಮರೆಶ ನಾಯಕ ಜಾಲಹಳ್ಳಿ
Cell-9945268059