Monday, 9 January 2012

Buddha Vihara Gulbarga (Published)


ಒಂದು ಸಾರಿ ಬಂದು ನೋಡಿ

ಹೈದರಾಬಾದ ಕನರ್ಾಟಕ ಪ್ರದೇಶ ಈಗ ಕಲ್ಯಾಣ ಕನರ್ಾಟಕವೆಂದು ನಾಮಕರಣವಾಗಿದೆ. ಬಸವಣ್ಣನವರು ಜನಿಸಿದ ನಾಡು ಕಲ್ಯಾಣ. ಶರಣರ ನಾಡು, ಹೆವ್ಮೆಯ ಬೀಡು, ತೊಗರಿಯ ಕಣಜವೆಂದೇ ಪ್ರಸಿದ್ಧವಾದ ಈ ನಾಡಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ. ಖಾಜಾಬಂದೇನವಾಜ ದಗರ್ಾ. ರಾಮ ಮಂದಿರ, ಸಾಯಿಬಾಬ ಮಂದಿರ, ಸಿದ್ದಾರಾಮ ಮಂದಿರ, ಮನಮೋಹಕವಾಗಿರುವ ಇತ್ತೀಚೆಗೆ ಸ್ಥಾಪನೆಯಾದ ಭೌದ್ಧ ವಿಹಾರ ಪ್ರಸಿದ್ದವಾದ ತಾಣವಾಗಿದೆ.

 ಈ ಭೌದ್ಧ ಮಂದಿರವು ಜನವರಿ 20, 2002ರಲ್ಲಿ ಕೇಂದ್ರಮಂತ್ರಿ ಮಲ್ಲಿಕಾಜರ್ುನ ಖಗರ್ೆ ನೇತೃತ್ವವದಲ್ಲಿ ಗುಲಬಗರ್ಾದಲ್ಲಿ ಬುದ್ಧ ವಿಹಾರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಜನವರಿ 7, 2009ರಂದು ರಾಷ್ಟ್ರಪತಿ ಪ್ರತಿಭಾ  ಪಾಟೀಲ ಬುದ್ಧವಿಹಾರ ಮತ್ತು ಪ್ರಾರ್ಥನ ಮಂದಿರವನ್ನು ಉದ್ಘಾಟಿಸಿದರು. ಜನವರಿ 19, 2009ರಂದು ಟಿಬೆಟ್ ಧರ್ಮಗುರು ದಲೈಲಾಮಾ ಬುದ್ಧನ ಮೂತರ್ಿಯನ್ನು ಅನಾವರಣಗೊಳಿಸಿದರು. ಅಕ್ಟೋಬರ್ 14, 1956ರಂದು ಡಾ. ಬಿ. ಆರ್. ಅಂಬೇಡ್ಕರ್ ಭೌದ್ಧ ಧರ್ಮ ಸ್ವೀಕರಿಸಿದಾಗ ಅವರೊಂದಿಗೆ 5 ಲಕ್ಷ ಜನ ಭೌದ್ಧ ಧರ್ಮ ಸೇರಿದರು. ಭಾರತದಲ್ಲಿ ಭೌದ್ಧ ಧರ್ಮ ಪುನರ್ ಸ್ಥಾಪಿಸಲು ಕಾರಣೀಭೂತರಾದ ಅವರಿಗೆ ಇದನ್ನು ಸಮಪರ್ಿಸಲಾಗಿದೆ.

ಭೌದ್ಧ ಧರ್ಮದ  ಹಿನ್ನೆಲೆ

2555 ವರ್ಷಗಳ ಹಿಂದೆ ಭಗವಾನ್ ಬುದ್ಧರು ಭೌದ್ಧ ಧರ್ಮದ ಸೃಷ್ಟಿಕರ್ತರಾಗಿದ್ದಾರೆ. ಭೌದ್ಧ ಧರ್ಮವನ್ನು "ಮಾನವ ಧರ್ಮ" ಎಂದು ಕರೆದರು. ಶಾಂತಿಯಿಂದ, ಕರುಣೆಯಿಂದ, ಸಮಾನತೆಯಿಂದ ಕಾಣುವ ಧರ್ಮವೇ ಮಾನವ ಧರ್ಮ ಎಂದು ಬೊಧಿಸಿದರು. ಈ ಪ್ರಕೃತಿಯ ಹುಟ್ಟು ಮತ್ತು ಅಂತ್ಯ ಕಂಡವರಿಲ್ಲ. ಇದು ಯಾರಿಗೂ ತಿಳಿದಿಲ್ಲ, ಇದೇ ಸೃಷ್ಟಿ ನಿಯಮ ಎಂದರು. ಚಕ್ರವತಿ ಅಶೋಕ ಮಹಾರಾಜ ಭೌದ್ಧ ಧರ್ಮ ಸ್ವೀಕರಿಸಿ ಅನೇಕ ದಾನಧರ್ಮಗಳನ್ನು ಮಾಡುತ್ತಾ 84 ಸಾವಿರ ಭೌದ್ಧ ವಿಹಾರ, 84 ಸಾವಿರ, ಸ್ಪೂಪಗಳನ್ನು, ನಿಮರ್ಿಸಿ, 84 ಸಾವಿರ ಅರಳೀಮರಗಳನ್ನು ಬೆಳೆಸಿ, ಭೌದ್ಧ ಧರ್ಮವನ್ನು ಬೆಳೆಸುತ್ತಾ ಬಂದರು.

ವಿಹಾರದ ನಿಯಮಗಳು

ವಿಹಾರದ  ಸಂದರ್ಶಕರೆಲ್ಲರೂ ವಂದನಾ ಮಂದಿರ, ಧ್ಯಾನ ಮಂದಿರ ಮತ್ತು ಸುತ್ತಲಿನ ಪರಿಸರದಲ್ಲಿ ದಿವ್ಯ ಮೌನವನ್ನು ಕಾಪಾಡಬೇಕು, ಇತರರ ಜೊತೆೆ ಯಾವುದೇ ಸನ್ನೆ ಸಂಕೇತಗಳ ಮುಖಾಂತರ ಕೈ ಮಾಡಬಾರದು, ಒಳ್ಳೆಯ ಸಭ್ಯಕರವಾದ ಬಟ್ಟೆಗಳನ್ನು ಧರಿಸಿರಬೇಕು, ಸಂಗೀತಕ್ಕೆ ಸಂಬದಿಸಿದ ಯಾವುದೇ ರೀತಿಯ ವಸ್ತುಗಳನ್ನು ಇಲ್ಲಿ ನಿಷೇಧಿಸಲಗಿದೆ. ವಿಹಾರವು 35 ಎಕರೆ ಪ್ರದೇಶವನ್ನು ಹೊಂದಿದೆ. ಇಲ್ಲಿಯ ನಿಸರ್ಗ, ನಿಶ್ಯಬ್ದವಾದ ವಾತಾವರಣ ಮನಸ್ಸಿಗೆ ಆಹ್ಲಾದಕರವಾಗಿದೆ. ಮುಖ್ಯದ್ವಾರವು ದೊಡ್ಡದಾದ ಕಮಾನುವಿನಿಂದ ಕೂಡಿದ್ದು, ನಾಲ್ಕು ದಿಕ್ಕಿಗೂ ಒಂದೇ ರೀತಿಯ ದ್ವಾರಬಾಗಿಲುಗಳಿವೆ.


ಪ್ರಾರ್ಥನಾ ಮಂದಿರ

ಮಂದಿರವು ಬೃಹದಾಕಾರವಾದ ಸುಂದರವಾದ ಹೆಬ್ಬಾಗಿಲಿನಿಂದ ಕೂಡಿದೆ, ಒಳಗಡೆ ಗಂಧದ ಸುವಾಸನೆ ಮನಸನ್ನು ಹಿಡಿದಿಡುತ್ತದೆ, ಸಾಗವಾನಿ ಮತ್ತು ಗಂಧದ ಮರದಿಂದ ಹೆಬ್ಬಾಗಿಲನ್ನು ತಯಾರಿಸಲಾಗಿದೆ ಪ್ರತಿಯೊಂದು ಬಾಗಿಲುಗಳಿಗೂ ರೋಸ್ವುಡ್ ಬಳಕೆ ಮಾಡಿರುವದು ವಿಶೇಷೆ ಇದು ಹೆಚ್ಚು ಬಾಳಿಕೆ ಬರುವಂತಹದ್ದು. ಬಾಗಿಲುಗಳ ಮೇಲಿರುವ ಕುಸುರಿ ಕಲೆಗಳ ಕೆತ್ತನೆಯು ನೋಡುಗರ ಕಣ್ಮನ ಸೆಳೆಯುತ್ತದೆ. ಮೈಸೂರು ಅರಮನೆ ಬಾಗಿಲುಗಳ ಕೆಲಸ ಮಾಡಿದ ನಿಪುಣರು ಇವುಗಳನ್ನು ನಿಮರ್ಿಸಿರುವದು ವಿಶೇಷ.

ಭಗವಾನ  ಬುದ್ಧನ ಮೂತರ್ಿಯ ಪೂಜೆಗೆ ಹೂಗಳನ್ನು ಸಮಪರ್ಿಸಬಹುದಾಗಿದೆ. ಪಂಚಲೋಹದಿಂದ ತಯಾರಾದ ಬುದ್ಧನ ಮೂತರ್ಿಯು ಬಂಗಾರ ಲೇಪನದಿಂದ ಕೂಡಿದೆ. ಇದನ್ನು ಥೈಲ್ಯಾಂಡ್ನಿಂದ ತರಿಸಲಾಗಿದೆ. ಬುದ್ಧನ ಪಟ್ಟ ಶಿಷ್ಯಂದಿರಾದ ಸಾರಪುತ್ರ, ಮೊಗ್ಗಲಿಯಾನನ ಮೂತರ್ಿಗಳು ಪಕ್ಕದಲ್ಲಿವೆ. ಗೋಡೆಯ ಮೇಲೆ ನಿಮರ್ಿಸಿದ ಮೂತರ್ಿಗಳು ಬುದ್ಧನು ಪ್ರಾಣಿಗಳ ಬಗ್ಗೆ ಇಟ್ಟಿರುವ ದಯೆ, ಪ್ರೀತಿಯನ್ನು ಹಾಗೂ ಧರ್ಮದ ಬಗ್ಗೆ ಸಾರಿ ಹೇಳುವಂತೆ ಕಾಣುತ್ತದೆ. ಮಂದಿರದ ಒಳಗಡೆ 13 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ "ಜ್ಯೂಮರ್" ವಿದ್ಯುದೀಪವನ್ನು ಅಳವಡಿಸಿ ಸರಪಳಿಯಿಂದ ಇಳಿಬಿಡಲಾಗಿದೆ. ಅದು ನೋಡಲು ಆಕರ್ಷಕವಾಗಿದೆ, ವಜ್ರದ ಹಾಗೆ ಹೊಳೆಯುತ್ತಿರುತ್ತದೆ. ಹುಣ್ಣಿಮೆಯ ದಿನದಂದು ಮಾತ್ರ ಈ ವಿದ್ಯುದೀಪವನ್ನು ಹಚ್ಚಲಾಗುತ್ತದೆ. ಮಂದಿರದಲ್ಲಿ ಸಿ. ಅಶ್ವಥ್ ಹಾಡಿರುವ ಪಾಳಿ ಭಾಷೆಯಲ್ಲಿರುವ "ಬುದ್ಧ ವಂದನಾ" ಗೀತೆಯನ್ನು ಮಾತ್ರ ಹಾಕಲಾಗಿದೆ.


ಧ್ಯಾನ  ಮಂದಿರ

ಕೆಳಮಹಡಿಯ ಧ್ಯಾನಮಂದಿರದಲ್ಲಿ ಅಮೃತ ಶಿಲೆಯುಳ್ಳ  ಬುದ್ಧನ ಮೂತರ್ಿ ಇದೆ. ಇಲ್ಲಿ ಸುಮಾರು ಐದು ನೂರು ಜನ ಏಕಕಾಲದಲ್ಲಿ ಕುಳಿತು ಧ್ಯಾನ ಮಾಡಬಹುದಾಗಿದೆ. ವಿಪಾಸನ ಧ್ಯಾನ ಕೇಂದ್ರದ ಶಿಬಿರಗಳು ಇಲ್ಲಿ ನಡೆಯುತ್ತಿರುತ್ತವೆ. ಧ್ಯಾನ ಮಾಡುವದರಿಂದ ಮನುಷ್ಯನಿಗೆ ಉತ್ಸಾಹ, ಚೈತನ್ಯ ತುಂಬಿ ಮನಸ್ಸು ನಿರಾಳವಾದ ಅನುಭವವಗುತ್ತದೆ, ಶಾಂತಿ, ನೆಮ್ಮದಿ ನೆಲೆಸಿ ಮನಸ್ಸು ಹಗುರವಾಗುವದರ ಜೊತೆಗೆ ಅದ್ಬುತ ಶಕ್ತಿಯ ಅರಿವಾಗುತ್ತದೆ. ಯೌವ್ವನಾವಧಿ, ಜ್ಞಾಪಕಶಕ್ತಿ ಅಧಿಕವಾಗುತ್ತದೆ. ಮೆದುಳು ತೀಕ್ಷ್ಣಗೊಳ್ಳುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಜೀವನದಲ್ಲಿ ನವಚೈತನ್ಯ ಮೂಡುತ್ತದೆ.

 ಈ ಮಂದಿರದಲ್ಲಿರುವ ಬೃಹದಾಕಾರದವಾದ 12 ಕಂಬಗಳು ಇಡೀ ಗೋಪುರದ ಭಾರವನ್ನು ಒತ್ತು ನಿಂತಿವೆ. ಗೋಡೆಯ ಮೇಲೆ ಬಿಡಿಸಿದ ಚಿತ್ರಗಳು ವಿವಿಧ ಬಣ್ಣಗಳಿಂದ ಕೂಡಿದ್ದು ವಿಶೇಷವಾಗಿದೆ. ಭೋಧಿ ವೃಕ್ಷದ (ಅರಳೀಮರದ) ಬಳಿ ಬುದ್ಧನಿಗೆ ಜ್ಞಾನೋದಯವಾದ ಚಿತ್ರದ ಕೆತ್ತನೆ ಹಾಗೂ ಅದರ ಎದುರುಗಡೆ ಇರುವ ಐದು ಹೆಡೆ ಸರ್ಪಗಳು ಒಂದಕೊಂದು ಗಂಟು ಹಾಕಿಕೊಂಡ ಚಿತ್ರವು ನೋಡುಗರ ಕಣ್ಮನ ಸೆಳೆಯುವಂತಿದೆ, ಈ ರೀತಿಯ ಅವಶೇಷಗಳು ಸಿಕ್ಕದ್ದು ಸನ್ನತಿಯಲ್ಲಿ ಎನ್ನಲಾಗಿದೆ. ವಿಹಾರದ ಸುತ್ತ ನಾಲ್ಕು ದಿಕ್ಕಿಗೂ ಸಿಂಹಗಳುಳ್ಳ ಬೃಹದಾಕಾರವಾದ ಅಶೋಕ ಸ್ಥಂಭಗಳಿವೆ. ವಿಹಾರದ  ಸುತ್ತಮುತ್ತ ಸುಂದರವಾದ ಉಧ್ಯಾನವನವಿದೆ, ಇದರಲ್ಲಿ ಹಲವು ಬಗೆಯ ಗಿಡಗಳು, ಹೂಬಳ್ಳಿಗಳು ಸೇರಿದಂತೆ ಅಶೋಕ ವೃಕ್ಷಗಳು ಇವೆ, ವಿಹಾರದ ಸುತ್ತಮುತ್ತ ಸುಮಾರು ಒಂದು ಸಾವಿರ ವಿದ್ಯುತ್ ಬಲ್ಬುಗಳನ್ನು ಅಳವಡಿಸಲಾಗಿದೆ. ವಿಹಾರವನ್ನು ಸುತ್ತುವರಿದ ಸುಮಾರು ಎರಡು ನೂರಕ್ಕೂ ಹೆಚ್ಚು ಕೊಠಡಿಗಳುಳ್ಳ ಅತಿಥಿ ಗೃಹಗಳು,. ದೊಡ್ಡ ಗ್ರಂಥಾಲಯ, ಭೌದ್ದ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳು ಪಾಳಿ ಭಾಷೆಯಿಂದ ಅನುವಾದವಾಗಿ ಕನ್ನಡ, ತೆಲುಗು, ಮರಾಠಿ, ಇಂಗ್ಲೀಷ, ಹಿಂದಿ ಭಾಷೆಗಳಲ್ಲಿ ಇಲ್ಲಿ ದೊರೆಯುತ್ತವೆ. ಪುಸ್ತಕಗಳಿಗೆ ಯಾವುದೇ ರೀತಿಯ ಬೆಲೆ ನಿಗಧಿ ಮಾಡಿರುವದಿಲ್ಲ, ಧಮ್ಮದಾನ ರೂಪದಲ್ಲಿ ನಿಮಗೆ ತಿಳಿದ ಬೆಲೆ ನಿಗಧಿಪಡಿಸಿ ತೆಗೆದುಕೊಳ್ಳಬಹುದಾಗಿದೆ.

ಬಯಲು ರಂಗಮಂದಿರ ಒಳಗೊಂಡಿದ್ದು, ನಾಟಕ, ಮಕ್ಕಳ ಕಾರ್ಯಕ್ರಮ ಹಾಗೂ ಸಭೆ, ಸಮಾರಂಭಗಳು ನಡೆಯುತ್ತವೆ. ಡಾ. ಬಿ. ಆರ್. ಅಂಬೇಡ್ಕರ್ ಜೊತೆ ಭೌದ್ಧ ಧರ್ಮದ ಅನುಯಾಯಿಗಳ ಮೂತಿಗಳನ್ನು, ಮುಂದೆ ಸಾಗಿರುವ ರೀತಿಯಲ್ಲಿ ಅಂದವಾಗಿ ನಿಮರ್ಿಸಲಾಗಿದೆ. ಇದರ ಪಕ್ಕದಲ್ಲಿಯೇ ಶಾಂತಿಸ್ಥೂಪವನ್ನು ನಿಮರ್ಾಣ ಮಾಡಲಾಗಿದೆ. ಭಗವಾನ್  ಬುದ್ಧನಿಗೆ ಜ್ಞಾನೋದಯವಾದಾಗ ಐದು ಜನ ಭಿಕ್ಕುಗಳಿಗೆ  ಮೊದಲ ಬಾರಿಗೆ ಧಮ್ಮ ಪ್ರವಚನ ನೀಡಿದ್ದರಿಂದ ವಿಜಯದಶಮಿ ದಿನದಂದು "ಧಮ್ಮ ಪರಿವರ್ತನಾ ದಿನ" ಎನ್ನಲಾಗುತ್ತದೆ. ಈ ದಿನದಂದು ಸಹಸ್ರಾರು ಜನರು ಬಂದಿರುತ್ತಾರೆ. ಬುದ್ಧ ಪೂಣರ್ಿಮ, ಮೇ 27ರ ಬುದ್ಧ ಜಯಂತಿ, 14 ನೇ ಅಕ್ಟೋಬರ್ ರಂದು ವಿಶೇಷ ಪೂಜೆಗಳು ನೆರವೇರುತ್ತವೆ. ಟಿಬೇಟಿಯನ್ ಧರ್ಮ ಗುರು ದಲೈಲಾಮಾ, ಇಂಗ್ಲೆಂಡಿನ ಸಬೂತಿ, ಬೆನತೊಟ, ಶ್ರೀಲಂಕಾದ ಸಂಗರತನಮಹಾತೇರೋ, ನಾಗ್ಪುರ, ಬುದ್ಧಗಯಾ, ಆನಂದವಿಹಾರದಿಂದ ಮಹಾಗುರುಗಳು ಭೇಟಿನೀಡಿದ್ದಾರೆ.  ಪ್ರಪಂಚದಲ್ಲಿಯೇ ಪ್ರಸಿದ್ದವಾದ ಬುದ್ಧವಿಹಾರಕ್ಕೆ ಧರ್ಮಭೇದವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಬುದ್ದಅನುಯಾಯಿಗಳು, ಪ್ರವಾಸಿಗರು ಬರುವದರಿಂದ ಇಲ್ಲಿ ಅತಿಥಿ ಗೃಹಗಳು, ಹೋಟೆಲುಗಳು ನಿಮರ್ಾಣವಾಗಬೇಕಾಗಿದೆ.

 ನೈಸಗಿಕವಾದ  ಬುದ್ಧಮಲಗಿರುವ ಬೆಟ್ಟವನ್ನು ವೀಕ್ಷೀಸಬೇಕಾದರೆ ಪಕ್ಕದ ಶಹಾಪುರಗೆ ಹೋಗಬೇಕಾಗುತ್ತದೆ, ಸರಕಾರಿ ಮತ್ತು ಖಾಸಗಿ ವಾಹನಗಳ ಅನುಕೂಲವಿದೆ. ಬುದ್ಧ ವಿಹಾರದ ಪ್ರತಿದಿನ ಪ್ರಾರ್ಥನಾ ವೇಳೆ ಬೆ.8 ರಿಂದ 10ಘಂ. ವರೆಗೆ. ಸಂಜೆ 6ರಿಂದ 7 ಘಂ. ವರೆಗೆ  ಮುಖ್ಯ ದ್ವಾರ ತೆರೆಯುವದು ಬೆ.8 ರಿಂದ 12 ಘಂ. ಸಂಜೆ 5 ರಿಂದ 8 ಘ. ವರೆಗೆ,  ರಜಾ ದಿನಗಳಂದು ಸಂಜೆ ನಾಲ್ಕು ಘಂ.ಗೆ ತೆರೆಯಲಾಗುತ್ತದೆ.  ಬುದ್ಧ ವಿಹಾರಕ್ಕೆ ಬರಲು ರಾಜಧಾನಿಯಿಂದ ಗುಲಬಗರ್ಾಕ್ಕೆ ರೈಲು ಮತ್ತು ಬಸ್ಸುಗಳ ವ್ಯವಸ್ಥೆ ಇದೆ.  ನಗರದ ಬಸ್ ನಿಲ್ದಾಣದಿಂದ 12 ಕಿ.ಮೀ. ಅಂತರದಲ್ಲಿದೆ. ಸುಪರ್ ಮಾಕರ್ೆಟಿನಿಂದ ಬಸ್ಸುಗಳ ಸೌಲಭ್ಯವಿದೆ. ಇಲ್ಲಿ ರಕ್ಷಣೆಗಾಗಿ 30 ಜನ ಕಾವಲಿರುತ್ತಾರೆ.




ಅಮರೇಶ ನಾಯಕ ಜಾಲಹಳ್ಳಿ
ಮೊ-9945268059.

No comments:

Post a Comment