ಸಂದರ್ಶನ ಎಂಬುದು ಒಂದು ಕಲೆ
ಸಂದರ್ಶನ ಮಾಡುವದೆಂದರೆ ಅದು ಸಾಮಾನ್ಯ ಮಾತಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು, ಪ್ರಸಿದ್ಧಿ ಹೊಂದಿದ ಆತನ ಜೀವನದ ಅನುಭವಗಳ ಬಗ್ಗೆ, ವ್ಯಕ್ತಿತ್ವದ ಬಗ್ಗೆ, ಜೀವನದ ಹಾಗು-ಹೋಗುಗಳ ಬಗ್ಗೆ, ಅವರ ಜೊತೆ ಮುಖಾ-ಮುಖಿಯಾಗಿ ಸಮಾಲೋಚಿಸಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬರವಣಿಗೆಯ ಮೂಲಕ ಒಂದು ಮೆರಗು ನೀಡಿ ಅವರ ಜೀವನದಲ್ಲಾಗಿರುವ ಬದಲಾವಣೆ, ಬೆಳವಣಿಗೆಗಳ ಬಗ್ಗೆ ಓದುಗರಿಗೆ ದರ್ಶನ ಮಾಡಿಸುವದಾಗಿದೆ.
ನಮ್ಮ ಗುರುಗಳಾದ ಸುಭಾಷ ಬಣಗಾರ್ ಪ್ರಕಟಿಸಿರುವ ಶೈಕ್ಷಣಿಕ ವಿಷಯಗಳ ಪ್ರಶ್ನೋತ್ತರ ಸರಮಾಲೆಯ ಈ ಸಂಭಾಷಣೆ ಪುಸ್ತಕ ನನ್ನ ಮೇಲೆ ಪ್ರಭಾವ ಬೀರಿತು. ಸಂದರ್ಶನ ಮಾಡಲು ನನಗೆ ಅಭಿಲಾಷೆ ಮೂಡುವಂತೆ ಇದು ಪ್ರೇರಣೆಯಾಯಿತು. ಯಾರಾದರೊಬ್ಬರನ್ನು ಸಂದಶರ್ಿಸಬೇಕೆಂದು ನನ್ನ ಮನಸ್ಸಿನ ಅಂತರಾಳದಲ್ಲಿ ಆಸೆ ಚಿಗುರೊಡೆಯ ತೊಡಗಿತು. ಆದರೆ ಯಾರನ್ನು ಆಯ್ಕೆ ಮಾಡುವದು? ಪ್ರಸಿದ್ಧ ವ್ಯಕ್ತಿಗಳನ್ನು ಹೇಗೆ ಸಂದಶರ್ಿಸಬೇಕು? ಅವರಿಗೆ ಎಂಥಹ ಪ್ರಶ್ನೆಗಳನ್ನು ಕೇಳಬೆಕು? ಎನ್ನುವ ಆತಂಕ, ಭಯ ಮನಸ್ಸಿನಲ್ಲಿ ಮೂಡಿತು. ಆಗ ನನಗೆ ಒಂದು ಆಲೋಚನೆ ಹೊಳೆಯಿತು. ನಾನು ಆಯ್ಕೆ ಮಾಡಿಕೊಂಡದ್ದು ಬೆರೆ ಯಾರನ್ನೂ ಅಲ್ಲ, ಬಹುಮುಖ ವ್ಯಕ್ತಿತ್ವದ, ಸರಳ ಸ್ವಭಾವದ ಪತ್ರಕರ್ತ, ಬಯಲು ಗ್ರಂಥಾಲಯದ ಸಂಸ್ಥಾಪಕ, ಕನರ್ಾಟಕ ಸೇವಾ ಸಿರಿ ಪ್ರಶಸ್ತಿ ಪುರಸ್ಕೃತ ಸುಭಾಷ ಬಣಗಾರ್ರವರನ್ನು.
ಅವರು ಒಬ್ಬ ಉತ್ತಮ ಸಂದರ್ಶಕರು. ಪ್ರತಿಭಾವಂತರನ್ನು ಹುಡುಕಿಕೊಂಡು ಹೋಗಿ, ಅಂಥವರ ಜೀವನದ ಸಾಧನೆಗಳ ಬಗ್ಗೆ ಚಚರ್ಿಸಿ, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಕಾರ್ಯಗಳ ಒಂದು ಸ್ತೂಲ ಮಾಹಿತಿಯನ್ನು ನೀಡುವದರೊಂದಿಗೆ ಸಮಾಜದಲ್ಲಿ ಅವರನ್ನು ಗುರುತಿಸುವಂತೆ ಮಾಡಿದ ಕೀತರ್ಿ ಇವರಿಗೆ ಸಲ್ಲುತ್ತದೆ. ನಾನು ಅವರನ್ನು ಸಂದಶರ್ಿಸಿ ಪ್ರಶ್ನೆ ಕೆಳುವಾಗ ಒಂದು ರೀತಿಯ ಹೊಸ ಹೊಸ ಅನುಭವಗಳಾದವು. ನಾನು ಸಂದಶರ್ಿಸಿದ ವ್ಯಕ್ತಿಯ ಬಗ್ಗೆ ಆನ್ಲೈನ್ ಪತ್ರಿಕೆಯಾದ ಈ-ಕನಸು ವಾರಪತ್ರಿಕೆಯಲ್ಲಿ ಕ್ಲಿಕ್ ಆಯಿತು ಬಯಲು ಗ್ರಂಥಾಲಯ ಎಂಬ ಸಂದರ್ಶನಾಧಾರಿತ ಲೇಖನ ಪ್ರಕಟಣೆಗೊಂಡಿತು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಇದು ನನ್ನ ಜೀವನದಲ್ಲಿ ನಾನು ಮಾಡಿದ ಮೊದಲ ಸಂದರ್ಶನ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡು ಅವರ ಸಂಪೂರ್ಣ ವಿವರದ ಮಾಹಿತಿಯನ್ನು ಓದುಗರಿಗೆ ನೀಡುವದೆಂದರೆ ಎನೋ ಒಂದು ತರಹ ಉಲ್ಲಾಸ. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರ ಕೆಲಸ ಕಾರ್ಯಗಳಲ್ಲಿ ತೊಡಗುವದರೆಂದರೆ ಸುಮ್ಮನೆ ಅಲ್ಲ.
ಈ ಪ್ರಶ್ನಾರ್ಥಕ ಚಿಹ್ನೆ ಕುಡುಗೋಲು ಇದ್ದಂತೆ. ಹೊಲದಲ್ಲಿ ಬೆಳೆದಿರುವ ಕಸವನ್ನು ಕಿತ್ತು ಹಾಕುತ್ತದೆ. ಅದೇ ರೀತಿ ವ್ಯಕ್ತಿಯ ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಶಕ್ತಿಯನ್ನು ಈ ಪ್ರಶ್ನೆಗಳೆಂಬ ಆಯುಧದಿಂದ ಪರಿಚಯಿಸಬಹುದಾಗಿದೆ, ಅವರ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕ. ಬದುಕಿನ ಅಗೋಚರ ಮುಖವನ್ನು ಓದುಗರಿಗೆ ದೊರಕಿಸಿ ಕೊಡುವ ಕಲೆಯೇ ಈ ಸಂದರ್ಶನ. ವ್ಯಕ್ತಿಯ ವ್ಯಕ್ತಿತ್ವದ ಆಂತರಿಕ ಹಾಗು ಬಹಿರಂಗ ಸಂಘರ್ಷದ ಅನಾವರಣ. ಲೋಕಾನುಭವ ಹಾಗು ವಿವಿಧ ನೆಲೆಗಳಿಂದ ರೂಡಿಸಿಕೊಂಡ ಜ್ಞಾನದ ಮೂಲಕ ರೂಪಗೊಂಡ ಪ್ರಶ್ನೆಗಳ ಸರಮಾಲೆಯೇ ಯಶಸ್ವಿ ಸಂದರ್ಶನಕ್ಕೆ ಆಧಾರ.
ವ್ಯಕ್ತಿಯಲ್ಲಿ ಹುದುಗಿರುವ ಭಾವ, ಆಶಯ, ಕೌಶಲ್ಯಗಳನ್ನು ಹೊರ ತೆಗೆದು ಓರೆಗೆ ಹಚ್ಚಿದಂತೆ. ಬರವಣಿಗೆ ಮೂಲಕ ಬಿಂಬಿಸುವದು ಸಂದರ್ಶನದ ತಿರುಳು. ಇದೊಂದು ರೀತಿ ಸವಾಲು ಕೂಡ ಹೌದು, ವ್ಯಕ್ತಿಯ ಭಾವನೆ ಹಾಗು ವ್ಯಕ್ತಿತ್ವಕ್ಕೆ ಧಕ್ಕೆ ಬರದಂತೆ ವ್ಯಕ್ತಿಗತ ಭಾವ ಪ್ರದಶರ್ಿತವಾಗದಂತೆ ಯಥಾವತ್ತಾಗಿ, ಯಥೋಚಿತ ಅಂಶಗಳನ್ನು ತೆರೆದಿಡುವದೇ ಸಂದರ್ಶನ. ವ್ಯಕ್ತಿಯ ಗುಣಲಕ್ಷಣ, ಸಾಮಥ್ರ್ಯ, ಅರ್ಹತೆಗಳನ್ನು ಅಳೆಯಲೆಂದು ಅವರೊಂದಿಗೆ ಮುಖಾ-ಮುಖಿ ಮಾತನಾಡುವದು.
ಯಾವುದಾದರೊಂದು ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ, ಯಶಸ್ಸು ಗಳಿಸಿರುವ, ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾಗಿರುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಹಾಗು ಕುತೂಹಲ ಎಲ್ಲ ಓದುಗರಲ್ಲಿ ಇರುತ್ತದೆ. ಈ ವ್ಯಕ್ತಿಗಳು ಬೆಳೆದು ಬಂದ ರೀತಿ, ಅವರು ಅನುಭವಿಸಿದ ಕಷ್ಟ-ಸುಖ, ಅವರಿಗೆ ದೊರಕಿದ ಪ್ರೇರಣೆ, ಅವರ ಹವ್ಯಾಸಗಳು, ಅವರನ್ನು ಕಾಡಿದ ಸಮಸ್ಯೆಗಳು, ಅವರಿಗೆ ದೊರಕಿದ ಮಾರ್ಗದರ್ಶನ. ಇವುಗಳ ಬಗ್ಗೆ ಮಾಹಿತಿ ಪಡೆಯಲು ಓದುಗರು ಕಾತುರರಾಗಿರುತ್ತಾರೆ. ಇವೆಲ್ಲವೂ ಮತ್ತೊಬ್ಬರಿಗೆ ಸಹಾಯಕವಾಗುವದಾದರೆ ಅದೊಂದು ಉತ್ತಮ ಲೇಖನಕ್ಕೆ ಸಾಮಾಗ್ರ ಆಗಬಹುದು. ಈ ಪ್ರಮುಖ ವ್ಯಕ್ತಿಗಳನ್ನು ಬೇಟಿ ಮಾಡಿ ಸಂದರ್ಶನ ನಡೆಸಿದರೆ ಬರಹಗಾರರ ಕುಶಲತೆಗೂ ಒಂದು ಅಭಿವ್ಯಕ್ತಿ ದೊರೆಯಬಹುದು
.
-ಅಮರೇಶ ನಾಯಕ ಜಾಲಹಳ್ಳಿ
ಮೊ-9945268059
No comments:
Post a Comment