Monday, 9 January 2012

Jnanaganga Campus Youth Festival-2011


ಜ್ಞಾನಗಂಗೆಯಲ್ಲಿ ಸಾಂಸ್ಕೃತಿಕ ಉತ್ಸಾಹದ ರಂಗು
ಯುವಜನೋತ್ಸವ-2011



ಚ್ಚ ಹಸುರಿನ ವಿಶ್ವವಿದ್ಯಾಲಯದ ಜ್ಞಾನಗಂಗೆಯ ಆವರಣದಲ್ಲಿ ಸಡಗರ, ಸಂಭ್ರಮಕ್ಕೆ ಇಂಥಹ ದಿನ ಇರಬೇಕೆಂದೇನಿಲ್ಲ. ಆ ಸಂತೋಷದ,  ಉಲ್ಲಾಸದ ವಾತಾವರಣಕ್ಕೆ ಇತ್ತೀಚೆಗೆ ನಡೆದ ಅಂತರ್ ಮಹಾವಿದ್ಯಾಲಯ ಯವಜನೋತ್ಸವ ಕಾರ್ಯಕ್ರಮವೇ ಈ ಉತ್ಸವಕ್ಕೆ  ಕಾರಣವಾಯಿತು. ಜನಪದ ಸಂಸ್ಕೃತಿಯ ನೆಲೆಯಲ್ಲಿ ಹಲವಾರು ವರ್ಷಗಳ ಕಾಲ ಕಲಾಸೇವೆ ಮಾಡಿ, ದೂರದರ್ಶನ ಕೇಂದ್ರದಲ್ಲಿ ನಿದರ್ೇಶಕರಾಗಿ ಸೇವೆ ಮಾಡಿರುವ ಖ್ಯಾತ ಜಾನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಮುಖ್ಯ ಅತಿಥಿಯಾಗಿ ಡೊಳ್ಳು ವಾದ್ಯವನ್ನು ಬಾರಿಸುವುದರ ಮೂಲಕ ಈ ಯುವಜನೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಬೀದರ್, ಗುಲಬಗರ್ಾ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ವಿವಿಧ ತಾಲೂಕಿನ 33 ಕಾಲೇಜಿನ 190 ವಿದ್ಯಾಥರ್ಿಗಳು ಹಾಗೂ 198 ವಿದ್ಯಾಥರ್ಿನಿಯರು ಒಟ್ಟು 388 ವಿದ್ಯಾಥರ್ಿಗಳು ಭಾಗವಹಿಸಿದ್ದು ವಿಶೇಷ. ಈ ಸಮಾರಂಭದಲ್ಲಿ ಹಮ್ಮಿಕೊಂಡ ಸ್ಪಧರ್ಾ ಕಾರ್ಯಕ್ರಮಗಳಾದ ವಾದ್ಯ ಸಂಗೀತ, ಪಾಶ್ಚಿಮಾತ್ಯ ಸಂಗೀತ, ಹಾಡುಗಾರಿಕೆ, ಶಾಸ್ತ್ರೀಯ ಹಾಗೂ ಜನಪದ ನೃತ್ಯಗಳು, ಮೂಕಾಭಿನಯ, ಅನುಕರಣೆ/ಪ್ರಹಸನ, ಏಕಾಂಕ ನಾಟಕಗಳು, ಕಾಟರ್ೂನಿಂಗ್, ಕ್ಲೇ ಮಾಡಲ್, ರಂಗೋಲಿ, ರಸಪ್ರಶ್ನೆ, ಚಚರ್ಾಸ್ಪಧರ್ೆ, ವಾಕ್ಪಟುತ್ವ ಸ್ಪಧರ್ೆ, ಛಾಯಾಚಿತ್ರ ಸ್ಪಧರ್ೆ, ಹಲವಾರು ಸ್ಪಧರ್ೆಗಳು ಕಾಲೇಜು ವಿದ್ಯಾಥರ್ಿಗಳ ಪ್ರತಿಭಾ ಪ್ರದರ್ಶನಕ್ಕೆ ಭೂಮಿಕೆ ಒದಗಿಸಿದಂತಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಶರುವಾಗಿ ಮುಖವಾಡ, ಬುಡಕಟ್ಟು ಜಾನಪದ ವೇಷ ತೊಟ್ಟ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯುವಕರ ಅಮಿತೋತ್ಸವ ಕಂಡ ಅತಿಥಿಗಳು ತರುಣರಂತೆ ಕುಣಿದು ನಲಿದರು. ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಜಾನಪದ, ತತ್ವಗೀತೆ ಹಾಡಿ ರಂಜಿಸಿದರು. ಎಲ್ಲಿ ನೋಡಿದರೂ ಹಚ್ಚ ಹಸಿರಿನ ಪಚ್ಚ ಮೈ ತುಂಬಿಕೊಂಡ ಬೃಹತ್ ಕಟ್ಟಡಗಳು, ವಿವಿಧ ಬಗೆಯ ವೇಷ-ಭೂಷಣ ತೊಟ್ಟು ನಿಂತಲ್ಲಿ ನಿಲ್ಲದೆ ಅತ್ತಿಂದತ್ತ ವೈನಾಗಿ ಕುಣಿಯುವ ಯುವಕರ ದಂಡು ಅಲ್ಲಿತ್ತು. ಎಲ್ಲರ ಮುಖದಲ್ಲೂ ಉತ್ಸಾಹದ ಕಳೆ ತುಂಬಿತ್ತು. ಎಲ್ಲಿ ನೋಡಿದರಲ್ಲಿ ವಾಧ್ಯ, ಮೇಳಗಳ ನಾದ-ನಿನಾದ ತುಂಬಿಕೊಂಡಿತ್ತು. ಗಿಡ, ಮರಗಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಕಟ್ಟಿ ನವ ವಧುವಿನಂತೆ ಸಿಂಗರಿಸಲಾಗಿತ್ತು. ಆರಂಭದ ದಿನದಂದು ಕಂಡುಬಂದ ದೃಶ್ಯಗಳಿವು. ಯುವಜನನೋತ್ಸವದ ಮೆರವಣಿಗೆಯು ಪ್ರಾಣಿಶಾಸ್ತ್ರ ವಿಭಾಗದಿಂದ ಪ್ರಾರಂಭವಾಗಿ ಕಾರ್ಯಸೌಧ ಮಹಾತ್ಮಾ ಗಾಂಧಿ ಸಭಾಂಗಣವನ್ನು ಪ್ರವೇಶಿಸುವುದರೊಂದಿಗೆ ಬೋಸ್ಹಾಲ್, ಭಾಸ್ಕರಹಾಲ್, ಫ್ಯಾಶ್ಚರ್ ಹಾಲ್ ಹಾಗೂ ಭಾಭಾ ಸಭಾಂಗಣಗಳಲ್ಲಿ ಸ್ಪಧರ್ೆಗಳು ಜರುಗಿದವು. ಮೊದಲ ದಿನದಂದು ಇಂಡಿಯನ್ ಗ್ರೂಫ್ ಸಾಂಗ್, ವೆಸ್ಟ್ರನ್ ವೊಕಲ್ ಸೊಲೊ, ಕ್ಲಾಸಿಕಲ್ ವೊಕಲ್ ಸೊಲೊ, ವೆಸ್ಟ್ರನ್ ಗ್ರೂಫ್ ಸಾಂಗ್, ಎಲೊಕ್ಯೂಷನ್, ಡಿಬೆಟ್ ಪೊಸ್ಟರ್ ಮೇಕಿಂಗ್, ಕ್ಲೇ ಮಾಡೆಲಿಂಗ್, ಒನ್ ಆಕ್ಟ್ ಪ್ಲೇ, ಮತ್ತು ಸ್ಕಿಟ್ ಸ್ಪಧರ್ೆಗಳನ್ನು ನಡೆಸಲಾಯಿತು.







ಎರಡನೇ ದಿನದಂದು ಹಾಡು ನೃತ್ಯ, ಮುಂತಾದ  ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯುವಕರು ಹುಮ್ಮಸ್ಸಿನಂದ ನೆರೆದಿದ್ದರು. ಮೊದಲ ದಿನ  ನಡೆದ  ಪೇಂಟಿಂಗ್, ಕ್ಲೇ ಮಾಡಲಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು. ಶುಕ್ರವಾರದಂದು ಯಾತಕ್ಕೆ ಮಳೆ ಹೋದವೊ ಶಿವ.. ಯಾತಕ್ಕೆ ಮಳೆ ಹೋದವೂ... ಎಂಬ ಹಾಡಿಗೆ ತಕಂ್ಕತೆ ಕೋಲು ಹಾಕಿ ಯುವಕರು ಪಡೆ ಸಂಭ್ರಮಿಸಿತು. ಈ ಮೂಲಕ  ಗ್ರಾಮೀಣ ಪ್ರದೇಶದ  ಸೊಗಡನ್ನ ಮತ್ತೆ  ಮರುಕಳಿಸುವಂತೆ  ಮಾಡಿದರು. ದೋತಿ, ಕಾಟನ್ ಬನಯನ್, ರೇಷ್ಮೆ ರುಮಾಲು ತೊಟು,್ಟ ಅವರು ಅಪ್ಪಟ ರೈತನ ಹೆಜ್ಜೆ ಹಾಕುತ್ತಿದ್ದರೆ, ಸಭೆಯಲ್ಲಿ ಕುಳಿತವರೆಲ್ಲರೂ ಮಗ್ನರಾಗಿ ಮೈ ಮರೆತಿದ್ದರು. ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಸೊಲೊ, ಲೈಟ್ ವೊಕಲ್ ಸೊಲೊ, ಪೋಕ್ ಆಕರ್ೆಸ್ಟ್ರ, ಕ್ವಿಜ್ ಸ್ಪಾಟ್ ಪೋಟೋಗ್ರಫಿ, ಸ್ಪಾಟ್ ಪೈಂಟಿಂಗ್, ರಂಗೋಲಿ, ಮೈಮ್, ಫೋಕ್ ಡ್ಯಾನ್ಸ್, ಕ್ಲಾಸಿಕಲ್ಡ್ಯಾನ್ಸ್, ಮಿಮಿಕ್ರಿ ಸ್ಪಧರ್ೆಗಳನ್ನು ನಡೆಸಲಾಯಿತು. ಲಂಬಾಣಿ ಉಡುಗೆ ತೊಟ್ಟು ಜ್ಞಾನಗಂಗೆಯ ವಿದ್ಯಾಥರ್ಿನಯರು ಸಾಂಪ್ರದಾಯಿಕ ಹಾಡಿಗೆ ಮೈ, ಮಾಟದೊಂದಿಗೆ ಕುಣಿಯುತ್ತಿದ್ದರೆ, ಅವರಿಗೆ ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆಯ ಬೆಂಬಲ ಪ್ರೋತ್ಸಾಹ ಸಿಕ್ಕಿತು. ಹುಯ್ಯೋ, ಹುಯ್ಯೋ ಮಳೆರಾಯ ಎಂಬ ಹಾಡಿನ ತಾಳಕ್ಕೆ ತಕ್ಕಂತೆ ಜಾನಪದ ನೃತ್ಯ ಪ್ರದಶರ್ಿಸಿದ ಯುವ ಪಡೆ ಸ್ವಲ್ಪ ಹೊತ್ತು ಸಾಂಸ್ಕೃತಿಕ ಮಳೆ ಬರುವಂತೆ ಮಾಡಿದರು.



ಕ್ರೂರ ಪ್ರಾಣಿ. ಹುಲಿಯನ್ನು  ಕೊಲ್ಲುವ ಬುಡಕಟ್ಟು ಜನಾಂಗದ ಹಾಡಿನ ರೂಪದ ನೃತ್ಯ ಮನುಷ್ಯನ   ಮೃಗೀಯ ಸ್ವಬಾವನ್ನು ಬಿಂಬಿಸುವಂತಿತ್ತು. ನಾಡು-ನುಡಿ  ನಮ್ಮ ಸಂಪ್ರದಾಯವನ್ನು ಮೆಲುಕು ಹಾಕುವಂತಹ ತಾನ ತಂದನಾ... ತಾನ ತಾನ ತಂದನ್.. ಎಂಬ ಹಾಡಿನ ನೃತ್ಯ ಪ್ರಸ್ತುತ ಪಡಿಸಿದ  ವಿದ್ಯಾಥರ್ಿ, ವಿದ್ಯಾಥರ್ಿನಿಯರು ಹಳೆಯ ಹಾಡಿಗೆ  ನಮ್ಮ ನಡೆ ಎಂಬುದನ್ನು ಮನಗಾನಿಸಿ, ಬಾಯಿ ಬಿಚ್ಚಿ ಮಾತಾಡಿ ಗಿಲ್ ಗಿಲ್ .. ಕಾಲ ಗೆಜ್ಜೆ  ಥಳಕ' ಎಂಬ ಹಾಡಿನ ಭರ್ಜರಿ ನೃತ್ಯ ಮಾಡಿದ ವಿದ್ಯಾಥರ್ಿನಿಯರು ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ ಹರಿದು ಬರುವಂತೆ ಮಾಡಿದರು. ನಂತರ ನಡೆದ ರಂಗೋಲಿ ಸ್ಪಧರ್ೆಯಲ್ಲಿ ಚಿತ್ತ,್ರ ಚಿತ್ತಾರದ ರಂಗವಲ್ಲಿ ಬಿಡಿಸಿದ ಯುವತಿಯರು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ರಂಗು ಬಿಡಿಸಿದರು.

ಮೂರನೇ ದಿನದಂದು ಕಾಟರ್ೂನಿಂಗ್, ಕಲೇಗ ಸ್ಪಧರ್ೆಗಳು ನಡೆದವು. ಸ್ಪಧರ್ೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಜ್ಞಾನಗಂಗಾ ಆವರಣದಲ್ಲಿ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಇದೊಂದು ಸಂಭ್ರಮದ ಸಮಾರಂಭವಾಗಿತ್ತು, ಅವರು 'ಜ್ಞಾನಗಂಗಾ' ಪತ್ರಿಕೆಯ ಪ್ರಾಯೋಗಿಕ ವರದಿಗಾಗಿ ಬೇರೆ ಬೇರೆ ವಿಭಾಗಗಳಲ್ಲಿ ನಡೆದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವರದಿ ತಯಾರಿಸುವದು ಅವರ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿತ್ತು. ಅದೇ ರೀತಿ ಕ್ಯಾಮರಾ ಹಿಡಿದು ಸಿಕ್ಕ ಸಿಕ್ಕಂದರಲ್ಲಿ ಫೋಟೋ ಕ್ಲಿಕ್ಕಿಸುತ್ತಾ ಓಡಾಡುವದು ಸಹಜವಾಗಿತ್ತು. ಪತ್ರಿಕೋದ್ಯಮ ವಿಭಾಗಕ್ಕೆ ಒಳಪಟ್ಟಿರುವ 'ಬಹುಮಾಧ್ಯಮ ಕೇಂದ್ರ'ದವರು ಕಾರ್ಯಕ್ರಮದ ವೇಳಾಪಟ್ಟಿ ಹಿಡಿದುಕೊಂಡು ಕೊರಳಲ್ಲಿ ಯುವಜನೋತ್ಸವದ ಗುರುತಿನ ಪತ್ರವನ್ನು ಹಾಕಿಕೊಂಡು ಪುರುಸೊತ್ತಿಲ್ಲದೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಪ್ರತಿಯೊಂದು ವಿಭಾಗಕ್ಕೆ ಬೇಟಿ ನಡಿ ಅಲ್ಲಿ ನಡೆದಿರುವಂತಹ ಕಾರ್ಯಕ್ರಮಗಳ ಛಾಯಾಚಿತ್ರ ಹಾಗೂ ವೀಡಿಯೋ ಕವರೇಜ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಬೇರೆ ಕಡೆಯಿಂದ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ರುಚಿ ರುಚಿಯಾದ ಊಟದ ವ್ಯವಸ್ಥೆಯು ಇತ್ತು. ವಸತಿ ಸೌಕರ್ಯವನ್ನು ಕೂಡ ಮಾಡಲಾಗಿತ್ತು.


ಇಲ್ಲಿಯ ಒಂದು ಉತ್ತಮ ಪರಿಸರ ಎಲ್ಲರನ್ನೂ ಮನಸೂರೆಗೊಳ್ಳುವಂತೆ ಮಾಡಿತು ಉದ್ಯಾನವನಗಳು ಹೂ, ಬಳ್ಳಿಗಳಿಂದ ವಿಶೇಷ ಗಿಡಗಳಿಂದ ಜ್ಞಾನಗಂಗಾ ಕ್ಯಾಂಪಸ್ ಸುಂದರವಾಗಿ ಕಾಣಿಸುತ್ತಿದೆ. ಸಸ್ಯಶಾಸ್ತ್ರ ವಿಭಾಗದಲ್ಲಿ ಹಲವಾರು ಔಷದೀಯ ಗುಣವುಳ್ಳ ಸಸ್ಯಗಳು, ಗಿಡಗಳು ಸುಂದರವಾಗಿದ್ದವು. ವಿಶ್ವವಿದ್ಯಾಲಯದ ಕುಲಪತಿಗಳು ಡೊಳ್ಳು ಬಾರಿಸುವುದರ ಮೂಲಕ ಯುವಕರಿಗೆ ಹುರಿದುಂಬಿಸಿದರು, ಪ್ರತಿಯೊಬ್ಬ ವಿದ್ಯಾಥರ್ಿಯು ತನ್ನ ಪ್ರತಿಭೆಯನ್ನು ತೋರಿಸಲು ಇದು ಒಂದು ವೇದಿಕೆಯಾಗಿ ಮಾರ್ಪಟ್ಟಿತ್ತು. ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ಕೌಶಲ್ಯ, ಪ್ರತಿಭೆ ಇರುತ್ತದೆ, ಅದನ್ನು ತೋರಿಸಲು ಅವನಿಗೊಂದು ಅವಕಾಶ ಬೇಕಾಗುತ್ತದೆ. ಅವಕಾಶ ಎಂಬ ತಾಯಿಗೆ, ಪ್ರಯತ್ನ ಎಂಬ ತಂದೆಗೆ ಜನಿಸುವ ಮಗು ಅದೃಷ್ಟ ಎಂದು ಹೇಳಬಹುದು. ಅವಕಾಶ ನಮಗಾಗಿ ಕಾಯುವದಿಲ್ಲ ಅವಕಾಶ ಒದಗಿ ಬಂದಾಗ ನಾವು ಅದನ್ನು ಬಳಸಿಕೊಂಡು ನಮ್ಮ ಕಾರ್ಯ ಸಾಧಿಸಬೇಕಾಗುತ್ತದೆ. ಒಂದೇ ಬಾರಿಗೆ ಯಾರೂ ವಿಜೇತರಾಗುವದಿಲ್ಲ, ಅದಕ್ಕೆ ದಿನನಿತ್ಯದ ಅಭ್ಯಾಸವಿರಬೇಕು, ಓದುವದರೊಂದಿಗೆ ಪ್ರತಿಭೆ ಬೆಳೆಸಿಕೊಳ್ಳುವದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ

ಯುವಜನೋತವ್ಸಕ್ಕೆ ಶನಿವಾರ ತೆರೆ ಬಿದ್ದಿದ್ದು. ಎನ್.ವಿ ವಿನ್ನರ್, ವಿ.ವಿ ರನ್ನರ್ ಸ್ಥಾನದಲ್ಲಿದೆ. ಗುಲಬಗರ್ಾದ ಎನ್,ವಿ ಪದವಿ ಕಾಲೇಜಿಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ. ಗುಲಬಗರ್ಾ ವಿಶ್ವವಿದ್ಯಾಲಯ ಎರಡನೇ ಸ್ಥಾನ ಗಳಿಸಿಕೊಂಡಿದೆ. ಖ್ಯಾತ ಅಂತರಾಷ್ಟ್ರೀಯ ಕಲಾವಿದ ನರಸಿಂಹಲು ವಡವಾಟಿ ಮತ್ತು ವಿಶ್ವವಿದ್ಯಾಲಯದ ಕುಲ;ಪತಿ ಪ್ರೊ. ಈ.ಟಿ.ಪುಟ್ಟಯ್ಯ ನೂತನ ವಿದ್ಯಾಲಯ ಪದವಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ವಿತರಿಸಿದರು. ಮೂರು ಚಿನ್ನದ ಪದಕ ಸೇರಿದಂತೆ ಒಟ್ಟು 17 ಪದಕಗಳನ್ನು ಎನ್.ವಿ ತನ್ನ ಮಡಿಲಿಗೆ ಹಾಕಿಕೊಂಡಿತು. ಎಲ್ಲ ಸ್ಪಧರ್ೆಗಳು ಕರಾರುವಕ್ಕಾಗಿ ಅತ್ಯಂತ ಶಿಸ್ತಿನಿಂದ ಜರುಗಿದವು. ಕನರ್ಾಟಕ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನಿಣರ್ಾಯಕರು ಸ್ಪಧರ್ಿಗಳಲ್ಲಿದ್ದ ಉತ್ಸಾಹ ಮತ್ತು ಪ್ರತಿಭೆಗಳನ್ನು ಕಂಡು ಪ್ರಶಂಸಿಸಿದರು. ಈ ಯುವಜನೋತ್ಸವ ವ್ಯವಸ್ಥಿತವಾಗಿ ಜರುಗಲು 16 ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಉಪಸಮಿತಿಗಳ ಅಧ್ಯಕ್ಷರು, ಸಂಯೋಜಕರು, ಸದಸ್ಯರು ಹಾಗೂ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾಥರ್ಿಗಳು, ವಿವಿಯ ಸಿಬ್ಬಂದಿ ವರ್ಗದವರು ಹಗಲಿರುಳು ಶ್ರಮಿಸಿ ದಕ್ಷವಾಗಿ ಕಾರ್ಯನಿರ್ವಹಿಸಿ ಯುವಜನೋತ್ಸವದ ಯಶಸ್ಸಿಗೆ ಸಹಕರಿಸಿದರು.

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಭಾರತೀಯ ಮೂಲ ಸಂಸ್ಕೃತಿ ನಶಿಸುತ್ತಿದ್ದು, ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ. ಸಮಾಜವನ್ನು ಸದಾ ಜೀವಂತವಾಗಿಡುವ ಕಲೆಗಳು ಯುವ ಮನಸ್ಸುಗಳನ್ನು ಸೆರೆಹಿಡಿಯುತ್ತವೆ. ಜಾನಪದ ಸಂಸ್ಕೃತಿ ಉಳಿಸಿಕೊಳ್ಳವುದರ ಜೊತೆಗೆ ಮೂಲ ಆಶಯಗಳಿಗೆ ದಕ್ಕೆ ಬಾರದ ರೀತಿಯಲ್ಲಿ ನಿಜ ಸಂಸ್ಕೃತಿಯನ್ನು ಉಳಿಸಿಕೊಂಡು ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾಥರ್ಿಯು ಈ ಕರ್ತವ್ಯವನ್ನು ಅರ್ಥಮಾಡಿಕೊಂಡು ತಮ್ಮ ಪ್ರತಿಭೆಯಿಂದ ಕನ್ನಡವನ್ನು, ಕನ್ನಡ ಸಂಸ್ಕೃತಿಯನ್ನು ಕಾಪಾಡಬೇಕಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು ಹೆಮ್ಮೆಯ ವಿಷಯ, ಅದನ್ನು ಚಿರಕಾಲ ಉಳಿಸಿಕೊಂಡು ಹೋಗುವದು ನಮ್ಮ ವಿಷಯ.



-ಅಮರೇಶ ನಾಯಕ.ಜಾಲಹಳ್ಳಿ
ಮೊ-9945268059. 


No comments:

Post a Comment