Monday, 9 January 2012

Sub Editor Subhas banagar Gulbarga Interview (Published)


ಬಹುಮುಖ ವ್ಯಕ್ತಿತ್ವದ ಪತ್ರಕರ್ತ `ಸುಭಾಷ ಬಣಗಾರ್'

ಯಾವುದೇ ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡುವುದೇ ಒಂದು ದೊಡ್ಡ ಗುರಿ ಎಂದು ತಿಳಿದಿರುತ್ತಾನೆ, ಆದರೆ ಒಂದು ಕ್ಷೇತ್ರದಲ್ಲಿ ತೊಡಗಿ ಇನ್ನೊಂದು ಕ್ಷೇತ್ರದಲ್ಲಿ ಕಾರ್ಯ ಮಾಡುವದೆಂದರೆ ಅದು ಸುಲಭ ಸಾಧ್ಯದ ಕೆಲಸವಲ್ಲ. ಅದಕ್ಕೆ ತುಂಬಾ ಒತ್ತಡ, ಅಡ್ಡಿ ಆತಂಕಗಳು ಇದ್ದು, ಹಲವಾರು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಇರುತ್ತದೆ. ಕೆಲವೊಂದು ಸಲ ಸಾಮಾನ್ಯ ವ್ಯಕ್ತಿ, ಅಸಾಮಾನ್ಯ ಕೆಲಸಗಳನ್ನು ಮಾಡುವದು ಉಂಟು. ಇಛ್ಚಾಶಕ್ತಿ ಇದ್ದರೆ ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಕಲ್ಯಾಣ ಕನರ್ಾಟಕ ಭಾಗದ ಪತ್ರಕರ್ತ ಸುಭಾಸ್ ಬಣಗಾರ್ ಅಂತಹ ಒಂದು ಸಾಧನೆ ಮಾಡಿದ್ದಾರೆ. ಇವರು ವೃತ್ತಿಯಂದ ಪತ್ರಕರ್ತರಾದರೂ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಏನಾದರೊಂದು ಮಾಡಬೇಕೆಂದುಕೊಂಡು ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಭಾಗದ ಜನತೆಗಾಗಿ 'ಬಯಲು ಗ್ರಂಥಾಲಯ' ಸ್ಥಾಪಿಸಿ ಯಶ ಕಂಡಿದ್ದಾರೆ. ಓದುವ ಅಭಿರುಚಿ ಇರುವವರಿಗೆ, ವಿದ್ಯಾಥರ್ಿ, ಯುವಕರಿಗೆ, ಇಳಿ ವಯಸ್ಸಿನವರಿಗೆ ಜ್ಞಾನ ದೀವಿಗೆಯಾಗಿದೆ. 

ಸುಭಾಷ ಬಣಗಾರ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದವರು. ಸುರಪುರದ ಶಂಕ್ಷಪುರ ಶಾಲೆಯಲ್ಲಿ ಪ್ರಾಥಮಿಕ, ಹಾಗೂ ಸರಕಾರಿ ಪ್ರೌಢ ಶಾಲೆಯಲ್ಲಿ ನಂತರ, ಹೈ.ಕ.ಶಿಕ್ಷಣ ಸಂಸ್ಥೆಯ ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ಪಿ.ಯು.ಸಿ. ಮುಗಿಸಿ ಬಿ.ಎ. ಪತ್ರಿಕೊದ್ಯಮವನ್ನು ಬೆಂಗಳೂರಿನ ಸದಾಶಿವನಗರದ ಹೈ.ಕ. ಶಿಕ್ಷಣ ಸಂಸ್ಥೆಯ ಶ್ರೀ ವೀರೇಂದ್ರ ಪಾಟೀಲ್ ಕಾಲೇಜಿನಲ್ಲಿ ಪದವಿ ಪಡೆದು, ನಂತರ ಎಂ.ಎಸ್ಸಿ. ಸಂವಹನ (ಪತ್ರಿಕೋದ್ಯಮ) ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.

ಇವರು 1994 ರಲ್ಲಿ ಬೆಂಗಳೂರಿನ ಭಾಷ್ಯಂ ಸರ್ಕಲ್ನಲ್ಲಿ ಕಚೇರಿ ಹೊಂದಿದ 'ಹೊಸ ದಿಗಂತ' ಪತ್ರಿಕೆಯಲ್ಲಿ ಫ್ರೂಪ್ ರೀಡರ್ (ಕರಡು ತಿದ್ದುವವರು) ಆಗಿ ಸೇರಿಕೊಂಡರು. ನಂತರ 1995-96 ರಲ್ಲಿ ಬೆಂಗಳೂರಿನ ದೇವಯ್ಯ ಪಾಕರ್್ ಬಳಿ ಆರಂಭಗೊಂಡ 'ಸಂಜೆ ನುಡಿ' ದಿನಪತ್ರಿಕೆಯಲ್ಲಿ ಚಲನಚಿತ್ರ ವರದಿಗಾರರಾಗಿ ಸೇರಿಕೊಂಡರು. 1997-98 ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆರಂಭವಾದ 'ಉತ್ತರ ಕನರ್ಾಟಕ' ಪತ್ರಿಕೆಗೆ ಚಲನಚಿತ್ರ, ಅಪರಾಧ, ರಾಜಕೀಯ ವರದಿಗಾರರಾಗಿ, ಉಪಸಂಪಾದಕರಾಗಿ, ಪುಟ ವಿನ್ಯಾಸಕಾರರಾಗಿ ಅಪಾರ ಅನುಭವ ಪಡೆದರು. ಮಂಗಳೂರಿನ 'ಕನ್ನಡ ಜನ ಅಂತರಂಗ' ದಿನಪತ್ರಿಕೆ ಹಾಗೂ 'ಕರಾವಳಿ ಅಲೆ' ಸಂಜೆ ಪತ್ರಿಕೆಗೆ ಚಲನಚಿತ್ರ ವರದಿಗಾರರಾಗಿ ಬೆಂಗಳೂರಿನಿಂದಲೇ ಕಾರ್ಯ ನಿರ್ವಹಿಸಿದರು. ಈ ಪತ್ರಿಕೆಗಳೆ ಬೆಂಗಳೂರಿನಲ್ಲಿ ಮುದ್ರಣ ಆರಂಭಿಸಿದಾಗ ಅಲ್ಲಿ ಸೇರಿಕೊಂಡರು. ಬೆಳಗಾವಿಯ 'ಕನ್ನಡಮ್ಮ' ದಿನಪತ್ರಿಕೆಗೆ ಚಲನಚಿತ್ರ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರಿನ 'ಮಹಾನಂದಿ' ಪತ್ರಿಕೆ ಬೆಂಗಳೂರಿನಲ್ಲಿ ಆರಂಭವಾದಾಗ ವರದಿಗಾರರಾಗಿ, ಇದರ ಜೊತೆಗೆ ಪತ್ರಿಕೆಗಳ ವಿತರಕರಾಗಿಯೂ ಕಾರ್ಯ ನಿರ್ವಹಿಸಿದರು.
ಅದೇ ರೀತಿ, ಬೆಂಗಳೂರಿನಿಂದ ಹದಿನೈದು ದಿನಕೊಮ್ಮೆ ಪ್ರಕಟವಾಗುತ್ತಿದ್ದ 'ಅಬಕಾರಿ ಆರಕ್ಷಕ', 'ರಾಜಕೀಯ ರಂಗ' ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. 1998 ರಲ್ಲಿ 'ಸಂಯುಕ್ತ ಕನರ್ಾಟಕ' ದಿನಪತ್ರಿಕೆಗೆ ಉಪಸಂಪಾದಕರಾಗಿ ಸೇರಿಕೊಂಡರು. 1999 ರಲ್ಲಿ ಕಲಬುಗರ್ಿ ಕಾಯರ್ಾಲಯಕ್ಕೆ ವರ್ಗವಾಗಿ ಬಂದು ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹದಿನೆಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಅಪಾರ ಅನುಭವ ಹೊಂದಿದ್ದಾರೆ.

 ಸರಳ ವ್ಯಕ್ತಿತ್ವ ರೂಢಿಸಿಕೊಂಡಿರುವ ಸುಭಾಷ ಬಣಗಾರ್ರವರ ಸಮಾಜ ಸೇವೆಗೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ. ಅವುಗಳಲ್ಲಿ ಕೊಡೆಕಲ್ ದಿ.ಕಾಳಪ್ಪ ಮಾಸ್ಟರ್ ಸ್ಮರಣಾರ್ಥ ಪ್ರಶಸ್ತಿ, ಸಗರನಾಡು ಸೇವಾ ಪ್ರಶಸ್ತಿ, ಬೆಂಗಳೂರು ಪತ್ರಕರ್ತರ ವೇದಿಕೆ ವತಿಯಿಂದ ಪ್ರಶಸ್ತಿ ಅಲ್ಲದೆ ಇತ್ತೀಚೆಗೆ ನವೆಂಬರ್ 10 ರಂದು ನೀಡಲಾಗಿರುವ ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಕನರ್ಾಟಕ ಸೇವಾ ಸಿರಿ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಅದೇ ರೀತಿ ವಿವಿಧ ಸಂಘ, ಸಂಸ್ಥೆಗಳು ಇವರಿಗೆ ಸನ್ಮಾನಿಸಿವೆ.

ಬಯಲು ಗ್ರಂಥಾಲಯ ಸಂಸ್ಥಾಪಕ: ಕಲಬುಗರ್ಿಯ ಸಾರ್ವಜನಿಕ ಉದ್ಯಾನವನದಲ್ಲಿ ಓದುಗರ ಹವ್ಯಾಸ ಹೆಚ್ಚಿಸಲು ವಿನೂತನ ಕಲ್ಪನೆಯಲ್ಲಿ 2000ರಲ್ಲಿ ಬಯಲು ಗ್ರಂಥಾಲಯ ಸ್ಥಾಪಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. ಈ ಬಯಲು ಗ್ರಂಥಾಲಯ ದೇಶದ ಮೊದಲ, ಜಗತ್ತಿನ ಎರಡನೇ ಗ್ರಂಥಾಲಯ ಎಂಬ ಹೆಗ್ಗಳಿಕೆ ಇದೆ. ಸರಕಾರದ ಸಹಾಯವಿಲ್ಲದೆ ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಇವರು ಶೈಕ್ಷಣಿಕ ವಿಷಯಗಳ ಪ್ರಶ್ನೋತ್ತರ ಸರಮಾಲೆಯ 'ಈ ಸಂಭಾಷಣೆ'  ಪುಸ್ತಕವನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರವನ್ನೇ ಉಸಿರಾಗಿಸಿಕೊಂಡಿರುವ ಇವರು ಹಲವಾರು ಯುವ ಪತ್ರಕರ್ತರನ್ನು ತಯಾರು ಮಾಡಿದ ಕೀತರ್ಿ ಇವರಿಗೆ ಸಲ್ಲುತ್ತದೆ. ಪ್ರಸ್ತುತ ಕಲಬುಗರ್ಿ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಹಾಗೂ ಕಲಬುಗರ್ಿ ಆವೃತ್ತಿಯ 'ಸಂಯುಕ್ತ ಕನರ್ಾಟಕ' ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಮ್ಮ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

 'ಕನರ್ಾಟಕ ಸೇವಾ ಸಿರಿ' ಪ್ರಶಸ್ತಿ ದೊರೆತಿರುವ ನಿಮಗೆ ಏನನಿಸುತ್ತದೆ?

ಸಂತೋಷವಾಗಿದೆ. ಇನ್ನೂ ಹೆಚ್ಚು ಜವಾಬ್ದಾರಿ ಬಂದಂತಾಗಿದೆ. ಇದರಿಂದ ನನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೀತಿಯಲ್ಲಿ ಇನ್ನೂ ಉತ್ತಮ ಕೆಲಸ ಮಾಡಲು ಬೆನ್ನು ತಟ್ಟಿದಂತಾಗಿದೆ.

ಬಯಲು ಗ್ರಂಥಾಲಯ ಸ್ಥಾಪಿಸುವ ಉದ್ದéಶ?

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಟಿ.ವಿ. ಚಾನಲ್ಗಳು ಬಂದು ಓದುಗರನ್ನು ಕ್ಷೀಣಿಸಿವೆ. ಎಲ್ಲ ವರ್ಗದ, ವಯೋಮಾನದವರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಈ ಬಯಲು ಗ್ರಂಥಾಲಯ ಸ್ಥಾಪಿಸಲಾಯಿತು. ಸರಕಾರದ ಅನುದಾನವಿಲ್ಲದೇ, ಸ್ವ-ಪ್ರೇರಣೆಯಿಂದ ಹನ್ನೊಂದು ವರ್ಷಗಳಿಂದ ಈ ಬಯಲು ಗ್ರಂಥಾಲಯದ ಸೇವೆ ಸುಗಮವಾಗಿ ನಡೆದಿದೆ. ಪತ್ರಿಕೆಗಳ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವದಕ್ಕಾಗಿ ವಿದ್ಯಾಥರ್ಿಗಳಿಗೆ ಹಾಗೂ ಓದುಗ ಜನತೆಗೆ ಈ ಬಯಲು ಗ್ರಂಥಾಲಯ ಅನುಕೂಲವಾಗಿದೆ. ಇಲ್ಲಿ ಅಧ್ಯಯನ ನಡೆಸಿದ ವಿದ್ಯಾಥರ್ಿಗಳು ಹಲವು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ಈ ಗ್ರಂಥಾಲಯದ ಸದುಪಯೋಗ ಎನ್ನಬಹುದು.

ಎಲ್ಲೆಲ್ಲಿ ಬಯಲು ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ?

ಓದುಗರ ಹವ್ಯಾಸ ಹೆಚ್ಚಿಸುವ ಹಿನ್ನೆಲೆಯಲ್ಲಿ ಪತ್ರಕರ್ತರ ಹಾಗೂ ವಿವಿಧ ಸಂಘ. ಸಂಸ್ಥೆಗಳ ನೆರವಿನೊಂದಿಗೆ ಕಲಬುಗರ್ಿ ಸಾರ್ವಜನಿಕ ಉದ್ಯಾನವನದಲ್ಲಿ 2000 ನೇ ಇಸವಿ ನವೆಂಬರ್ ತಿಂಗಳಲ್ಲಿ ಬಯಲು ಗ್ರಂಥಾಲಯ ಸ್ಥಾಪಿಸಲಾಯಿತು. ಇದೇ ಮಾದರಿಯಲ್ಲಿ ಜೇವಗರ್ಿ, ಚಿತ್ತಾಪುರ, ಕಲಬುಗರ್ಿ, ರಾಯಚೂರು, ಕೊಪ್ಪಳ, ಕೊಡೇಕಲ್, ಕಕ್ಕೇರಾ, ಆಳಂದ, ಬಸವ ಕಲ್ಯಾಣ ಸೇರಿದಂತೆ ರಾಜ್ಯದ ವಿವಿಧೆಡೆ ಸುಮಾರು ಹದಿನೈದು ಕಡೆ ಬಯಲು ಗ್ರಂಥಾಲಯಗಳನ್ನು ಆಸಕ್ರರು ಸ್ಥಾಪಿಸಿದ್ದಾರೆ.

ಈ ನಿಮ್ಮ ಯಶಸ್ವಿಗೆ ಕಾರಣವೇನು?

ಸತತ ಪ್ರಯತ್ನ, ಸಮಯಕ್ಕೆ ತಕ್ಕ ನಿಧರ್ಾರ, ತಾಳ್ಮೆ ಇವು ಯಶಸ್ವಿಗೆ ಕಾರಣ. ನನ್ನಲಿರುವ ಆತ್ಮವಿಶ್ವಾಸ ಹಾಗೂ ನನ್ನ ಕುಟುಂಬದ, ಸಹೊದ್ಯೋಗಿಗಳ, ಸೇಹಿತರ ಸಂಪೂರ್ಣ ಸಹಕಾರ ನನಗೆ ಸಹಾಯಕಾರಿಯಾಗಿದೆ. ಆತ್ಮವಿಶ್ವಾಸಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು, ದುಡುಕಿಯೂ ನಿಧರ್ಾರ ತೆಗೆದುಕೊಳ್ಳುವದು ಸರಿಯಲ್ಲ. ಎಲ್ಲರಿಗೂ ಗೌರವಿಸಬೇಕು. ಜಾತ್ಯಾತೀತ ಮನೋಭಾವ ಹೊಂದಿರಬೇಕು. ಅಧಿಕಾರ ದುರುಪಯೋಗ ಪಡೆದುಕೊಳ್ಳಬಾರದು. ಸಂಕುಚಿತ ಮನೋಭಾವ ಇರಬಾರದು. ನಿರಂತರ ಕಲಿಕೆ ಹಾಗೂ ಸತತ ಪ್ರಯುತ್ನ ಯಶಸ್ವಿಗೆ ಅಗತ್ಯವಾಗಿದೆ.

ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಅನುಭವದ ಬಗ್ಗೆ ಹೇಳಿ?

ಪತ್ರ್ರಿಕಾ ಕ್ಷೇತ್ರಕ್ಕೆ ಬಂದಿರುವದೇ ಒಂದು ಆಕಸ್ಮಿಕ. ನಾನು ಪತ್ರಕೋದ್ಯಮ ವಿದ್ಯಾಥರ್ಿಯಾಗಿದ್ದಾಗ ಲೇಖನಗಳನ್ನು ಬರೆಯಲಾರಂಭಿಸಿದೆ. ಆಗ ಪತ್ರಿಕೆಗಳು ನನಗೆ ಅನೇಕ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿವೆ. ನಾನು ಕಷ್ಡಪಟ್ಟು ದುಡಿದೆ. ಪತ್ರಿಕೆಗಳ ಬಂಡಲ್ ಕಟ್ಟುವುದು, ವಾಹನಗಳಿಗೆ ಸಾಗಿಸುವುದು, ಅಂಗಡಿಗಳಿಗೆ ಹಾಕುವುದು, ಉಳಿದ ಪ್ರತಿಗಳನ್ನು ವಾಪಸ್ಸು ತರುವುದು ಸೇರಿದಂತೆ ಹಗಲು ರಾತ್ರಿಯನ್ನದೆ ದುಡಿದೆ. ದುಡಿಸಿಕೊಂಡವರು ಸರಿಯಾಗಿ ಸಂಬಳ ನೀಡದಿದ್ದರೂ ಅವರ ಜೊತೆ ಸಂಬಂಧ ಕೆಡಿಸಿಕೊಳ್ಳಲಿಲ್ಲ. ಇವುಗಳ ಜೊತೆಗೆ ವಿಧಾನಸೌಧ, ಚಲನಚಿತ್ರ, ರಾಜಕೀಯ ವರದಿ, ಸಂಪಾದಕೀಯ ವಿಭಾಗದ ಮೇಲುಸ್ತುವಾರಿ ಸೇರಿದಂತೆ ಪತ್ರಿಕೋದ್ಯಮ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳ ಅನುಭವ ಇದೆ. ಬೆಂಗಳೂರಿನ 'ಹೊಸ ದಿಗಂತ', 'ಸಂಜೆ ನುಡಿ', 'ಉತ್ತರ ಕನರ್ಾಟಕ' ಪತ್ರಿಕೆ, 'ಕನ್ನಡ ಜನ ಅಂತರಂಗ ಪತ್ರಿಕೆ', 'ಕರಾವಳಿ ಅಲೆ' ಪತ್ರಿಕೆ, ಹಾಗೂ ಬೆಳಗಾವಿಯ 'ಕನ್ನಡಮ್ಮ' ದಿನಪತ್ರಿಕೆ, 'ಮೈಸೂರಿನ 'ಮಹಾನಂದಿ' ಪತ್ರಿಕೆ, 'ಅಬಕಾರಿ ಆರಕ್ಷಕ' 'ರಾಜಕೀಯ ರಂಗ' ಪತ್ರಿಕೆಗಳಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದೇನೆ.

ಪತ್ರಿಕೋದ್ಯಮ ಕ್ಷೇತ್ರ ಅಪಾಯವೇ?

ಹೌದು, ಪತ್ರಿಕೋದ್ಯಮ ಕ್ಷೇತ್ರ ಅಪಾಯ ಎನ್ನುವದನ್ನು ಅಲ್ಲಗಳೆಯುವಂತಿಲ್ಲ. ಪತ್ರಕರ್ತರ ಮೇಲಿನ ಹಲ್ಲೆ, ಪತ್ರಿಕಾಲಯಗಳ ಮೇಲೆ ದಾಳಿ ನಡೆಯುತ್ತಿರುವುದು ಗಮನಿಸಿದರೆ ಈ ಕ್ಷೇತ್ರ ಅಪಾಯವೆನ್ನಬಹುದು. ಸತ್ಯದ ವರದಿಗಳನ್ನು ಬರೆಯುವಂತಿಲ್ಲ. ಹಲವಾರು ಸವಾಲುಗಳು, ಸಮಸ್ಯೆಗಳು ಪತ್ರಕರ್ತರಿಗೆ ಎದುರಾಗುತ್ತವೆ. ವರದಿಗಾಗಿ ಹಗಲೂ ರಾತ್ರಿಯನ್ನದೆ ತಿರುಗಾಡಬೇಕು. ಸತ್ಯ ವರದಿಗಳನ್ನು ಬರೆದಾಗ ಬೆದರಿಕೆ ಬರುತ್ತವೆ. ಆದರೆ ಅವುಗಳಿಗೆ ಹೆದರದೆ ಮುನ್ನುಗ್ಗಬೇಕು. ಎಕೆಂದರೆ ಪತ್ರಿಕೋದ್ಯಮ ಕ್ಷೇತ್ರ ಸೇವಾ ಮನೋಭಾವನೆಯುಳ್ಳ ಕ್ಷೇತ್ರ. ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಲೇಖನಿ ಮೂಲಕ ಹೋರಾಟ ಮಾಡಬೇಕು. ಸಮಾಜದ ಅಭಿವೃದ್ದಿಗೆ ದುಡಿಯಬೇಕು.

ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳ ಸ್ಥಿತಿ-ಗತಿ ಎಂಥಹದ್ದು?

ಹೊಸ ಹೊಸ ಚಾನಲ್ಗಳು ಸೃಷ್ಟಿಯಾಗುತ್ತಿವೆ. ಟಿವಿ.ಚಾನಲ್ಗಳು 24 ಗಂಟೆ ಸುದ್ದಿ ನೀಡುತ್ತಿವೆ. ಒತ್ತಡ ಜೀವನದಲ್ಲಿ ಓದುಗರಿಗೆ ತಾಳ್ಮೆ ಇಲ್ಲ, ಸಮಯದ ಅಭಾವ. ಇದರಿಂದ ಓದುಗರ ಹವ್ಯಾಸ ಕಡಿಮೆಯಾಗಿದೆ. ಹಳೆಯ ಪತ್ರಿಕೆಗಳ ಜೊತೆ ಹೊಸ ಪತ್ರಿಕೆಗಳೂ ಬರುತ್ತಿರುವುದರಿಂದ ಪತ್ರಿಕೆಗಳ ಸ್ಥಿತಿ ಶೋಚನೀಯವಾಗಿದೆ. ಆದರೂ ಪತ್ರಿಕೆಗಳು ಸ್ಪಧರ್ೆಯಲ್ಲಿ ಮುನ್ನುಗ್ಗಿ ಯಶಸ್ವಿಯಾಗುತ್ತಿವೆ. ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಬದಲಾಗುತ್ತಿದೆ. ಪತ್ರ್ರಿಕೋದ್ಯಮದ ಮೂಲ ಧ್ಯೇಯ ಹಾಗೂ ಅಭಿರುಚಿಗಳು ವಿಭಿನ್ನ ದಿಕ್ಕಿನೆಡೆಗೆ ಸಾಗುತ್ತ ತನ್ನತನವನ್ನು ಉಳಿಸಿಕೊಳ್ಳುವ ಪ್ರಯತ್ನ ಇದೆ. ಮುಂದೊಂದು ದಿನ ಪತ್ರಿಕೆಗಳೆ ಮೇಲುಗೈ ಸಾಧಿಸುತ್ತವೆ.

ಭಾವಿ ಪತ್ರಕರ್ತರಿಗೆ ನಿಮ್ಮ ಸಂದೇಶವೇನು?

ಪತ್ರಿಕೋದ್ಯಮ ವಿದ್ಯಾಥರ್ಿಗಳು ನಾನೊಬ್ಬ ಪತ್ರಕರ್ತ ಎಂಬ ಭಾವನೆ ಮೊದಲು ಬರಬೇಕು. ಸರಿಯಾದ ರೀತಿಯಲ್ಲಿ ಪತ್ರಿಕೆಗಳನ್ನು ಓದುವದು, ಬರೆಯುವದರ ಜೊತೆಗೆ ನಿರಂತರ ಅಧ್ಯಯನ ಶೀಲರಾಗಬೆಕು. ವಿವಿಧ ಪತ್ರಿಕೆಗಳ ಬರವಣಿಗೆಯ ಶೈಲಿಯನ್ನು ತಿಳಿದುಕೊಳ್ಳಬೇಕು. ಸಾಮಾಜಿಕ ಕಳಕಳಿ ಇರಬೇಕು. ಜನಸ್ಪಂದನ ಹೊಂದಿರಬೇಕು. ಉತ್ತಮ ಸಂವಹನ ಶೈಲಿಯನ್ನು ಬೆಳೆಸಿಕೊಳ್ಳಬೇಕು. ನಾನು ಜನರ ಸೇವಕನೆಂಬ ಮನೋಭಾವನೆ ಹೊಂದಬೇಕು. ಆತ್ಮವಿಶ್ವಾಸ, ಸಮಯ ಪಾಲನೆ ಅತಿಮುಖ್ಯ.



-ಅಮರೇಶ ನಾಯಕ, ಜಾಲಹಳ್ಳಿ
ಮೊ-9945268059.


No comments:

Post a Comment