ಅಮ್ಮ ಎಂಬ ಎರಡಕ್ಷರದ ಮಹಿಮೆ...
ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ಎನ್ನುತ್ತಾರೆ, ಮಗುವನ್ನು ಒಂಭತ್ತು ತಿಂಗಳು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲುಹಿ ಕಾಪಾಡುವಳು ಹೆತ್ತ ತಾಯಿ. ಅಮ್ಮ ಎಂಬ ಶಬ್ದವನ್ನು ಬಾಯ್ತುಂಬಾ ಕರೆಯೋದೆ ಒಂದು ಹರುಷ ನಮ್ಮೆಲ್ಲರ ಪಾಲಿಗೆ ಅವಳೇ ದೈವವಾಗಿದ್ದಾಳೆ, ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ, ನಿರ್ಮಲವಾಗಿರುತ್ತದೆ. ಆ ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು, ಅಳುವ ಕಂದನನ್ನು ಅಪ್ಪಿಕೊಂಡು ತನ್ನ ಮಡಿಲಲ್ಲಿ ಹಾಕಿಕೊಂಡು ಅಮೃತಕ್ಕಿಂತ ಮಿಗಿಲಾದ ಆ ತಾಯಿಯ ಎದೆಹಾಲು ಉಣಿಸುವದರ ಮೂಲಕ ಆ ಮಗುವಿಗೆ ಸಮಾಧಾನ ಮಾಡುತ್ತಾಳೆ. ತಾಯಿಯ ಎದೆ ಹಾಲು ಬಹಳ ಶ್ರೇಷ್ಠವಾದದು ಎದೆ ಹಾಲು ಕುಡಿದ ಮಕ್ಕಳು ಯಾವುದೇ ನ್ಯೂನ್ಯತೆ ಇಲ್ಲದೆ ದಷ್ಟ ಪುಷ್ಟವಾಗಿ ಬೆಳೆಯುತ್ತಾರೆ, ಹಾಲನ್ನು ಕುಡಿಯದೇ ಇರುವಂತಹ ಮಕ್ಕಳು ಅನಾರ್ಯೊಗ್ಯದಿಂದ ಬಳಲುವದನ್ನು ಕಾಣುತ್ತೇವೆ. ಇದರಿಂದ ಕಣ್ಣಿನ ಸಮಸ್ಯೆ, ಜ್ಞಾಪಕ ಶಕ್ತಿ, ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.
ಗುಲಬಗರ್ಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಂತರ ಮಹಾವಿದ್ಯಾಲಯ ಯುವಜನೋತ್ಸವ 2011ರ ಸ್ಪಧರ್ಾ ಕಾರ್ಯಕ್ರಮಗಳಲ್ಲಿ ಕ್ಲೇ ಮಾಡೆಲಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳು ತಾಯಿ ಮಗುವಿಗೆ ಹಾಲುಣಿಸುವ ಹಾಗೂ ಮಮತೆ ತೋರಿಸುವ ಸುಂದರ ಕಲಾಕೃತಿಯನ್ನು ರಚಿಸಿ ಎಲ್ಲರ ಗಮನ ಸೆಳೆದರು. ಒಂದೊಂದು ಕಲಾಕೃತಿಯನ್ನು ನೋಡಿದ ಪ್ರತಿಯೊಬ್ಬರಿಗೂ ತಾಯಿಯ ಮಮತೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ. ಈ ಅಗಮ್ಯ, ಅಗೋಚರವಾದ ಅಮ್ಮನ ಪ್ರೀತಿ ಮುಂದೆ ಎಲ್ಲವೂ ತೃಣಕ್ಕೆ ಸಮಾನವಾಗುತ್ತದೆ. ಅಮ್ಮ ಎಂದರೆ ಸಿಗುವ ತೃಪ್ತಿ, ಮಕ್ಕಳಲ್ಲಿ ಚಿಮ್ಮುವ ಉತ್ಸಾಹ, ಉಲ್ಲಾಸ ಅವರ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳಿಗೆ ತಾಯಿಯೇ ಬಾಳನ ಬೆಳಕಾಗಿ, ಅವರ ಜೀವನದ ಜ್ಯೋತಿಯನ್ನು ಬೆಳಗುತ್ತಾಳೆ ಅವಳಿಲ್ಲದೇ ಎಲ್ಲವೂ ಶೂನ್ಯ.
ಇಂದಿನ ದಿನಮಾನಗಳಲ್ಲಿ ಕಾಲ ಬದಲಾದಂತೆ ಎಲ್ಲವೂ ಬದಲಾವಣೆಯಾಗುವದನ್ನು ನಾವು ಕಾಣುತ್ತೇವೆ. ಈ ಹೈಬ್ರಿಡ್ ಕಾಲದಲ್ಲಿ ಎಲ್ಲವೂ ದೊರೆಯುತ್ತದೆ, ಆದರೆ ಮಕ್ಕಳಿಗೆ ತಾಯಿ ಪ್ರೀತಿ ಸಿಗುವದೇ ಕಷ್ಟವಾಗಿದೆ. ಇಂದಿನ ಒತ್ತಡ ಜೀವನದಲ್ಲಿ ತಂದೆ, ತಾಯಿಗಳು ಹಣ ಗಳಿಸಿಲೆಂದು ಇರುವ ಸಮಯವನ್ನೇ ಅದರಲ್ಲಿ ಕಳೆಯುತ್ತಿದ್ದಾರೆ. ತಾವು ಹೆತ್ತ ಮಕ್ಕಳ ಬಗ್ಗೆ ಸ್ವಲ್ಪಾನು ಚಿಂತೆ ಇಲ್ಲದೆ ಅವರನ್ನು ಕಾನ್ವೆಂಟ್ ಸ್ಕೂಲಿಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆಯಿತೆಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ತಂದೆ, ತಾಯಿಯನ್ನು ಕಾಣಬೇಕೆಂಬ ಮಕ್ಕಳ ಆಸೆ ಹಾಗೆ ಕಮರಿ ಹೋಗುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳದೆ ಅವರು ಮಕ್ಕಳಿಗೆ ಬೇಸರ ಉಂಟು ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ ಎಂದು ತಿಳಿದರೂ ಸಹ ಅವರು ಮತ್ತೆ ಅದೇ ರೀತಿ ಮಾಡುವದು ವಿಷಾದದ ಸಂಗತಿ.
ಈಗತಾನೇ ಭೂಮಿಗೆ ಕಾಲಿಟ್ಟ ಏನು ಅರಿಯದಿರುವ ಹಸುಳೆ ಶಿಶುವನ್ನು ಹೆತ್ತ ಎಷ್ಟೋ ತಾಯಂದಿರು ಅವರನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವದು ಇತ್ತೀಚಿನ ದಿನಗಳಲ್ಲಿ ಸವರ್ೇ ಸಾಮಾನ್ಯವಾದ ಕೆಲಸವಾಗಿದೆ. ಈ ರೀತಿಯ ಘಟನೆಗಳು ಅಮಾನವೀಯ ಕೃತ್ಯಗಳಾಗಿವೆ. ಮನವೀಯ ಮೌಲ್ಯ ಹೊಂದಿದ ಯಾವುದೇ ವ್ಯಕ್ತಿ ಇಂಥಹ ಘಟನೆಗೆ ಆಸ್ಪದ ಕೊಡಬಾರದು. ಮಕ್ಕಳು ದೇವರು ಸಮಾನ ಎನ್ನುತ್ತಾರೆ. ಅವರನ್ನು ಕಾಪಾಡುವದು ಅವರವರ ಕರ್ತವ್ಯವಾಗಿದೆ. ಅದೇ ರೀತಿ ಯಾವ ತಾಯಿಯು ಕೆಟ್ಟವರಿರುವದಿಲ್ಲ ಆದರೆ ಸಮಯ, ಸಂದರ್ಭಗಳು ಮನುಷ್ಯನನ್ನು ಆಟ ಆಡಿಸುತ್ತವೆ. ಜೀವನದಲ್ಲಿ ನಂಬಿಕೆ ಮುಖ್ಯ, ನಂಬಿಕೆಯಿಂದಲೇ ಜೀವನ ನಡೆಸಬೇಕು. ಗಾಳಿಯೂ ನಿನ್ನದೇ, ದೀಪವೂ ನಿನ್ನದೇ ಆರದಿರಲಿ ಬದುಕು. ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ ಬಾಳುವದು ಜೀವನದ ನಿಯಮ. ನೋಡಲು ದೇವರಿಲ್ಲ, ಆ ದೇವರನ್ನೇ ತಾಯಿಯಲ್ಲಿ ಕಾಣಬೇಕು.
-ಅಮರೇಶ ನಾಯಕ ಜಾಲಹಳ್ಳಿ
ಮೊ-9945268059
No comments:
Post a Comment