Wednesday, 11 January 2012

Prof.K.Lingappa Interview (Published)


ಬಹುಮುಖ ವ್ಯಕ್ತಿತ್ವದ ಪ್ರೊ.ಕೆ.ಲಿಂಗಪ್ಪ

ವಾರವೇಳು ಕಾಲ ಹದಿನೆಂಟು ಎಂಬರಯ್ಯ
ಅದನಾವು ಅಲ್ಲವೆಂಬವು
ಇರುಳೊಂದು ವಾರ, ಹಗಲೊಂದು ವಾರ
ಭವಿಯೊಂದು ಕುಲ, ಭಕ್ತನೊಂದು ಕುಲ
ನಾವು ಬಲ್ಲುದು ಕಾಣಾ ಕೂಡಲ ಚೆನ್ನ ಸಂಗಮದೇವಾ||

ಚೆನ್ನಬಸವಣ್ಣನವರ ವಚನಗಳಂತೆ, ಕನಕದಾಸರು ಹೇಳಿದಂತೆ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ? ಸಾಮಾಜಿಕ ಶೋಷಣೆಗೆ ಒಳಗಾಗಿ, ನೋವು ಅನುಭವಿಸಿ,  ಅದರಿಂದ ಪಾಠ ಕಲಿತು, ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಹೋರಾಟಕ್ಕೆ ನಿಂತ ಧೀಮಂತ ವ್ಯಕ್ತಿ.

ಸಾಮಾಜಿಕ ಕಳಕಳಿಯ ಬಹುಮುಖ ಪ್ರತಿಭೆಯುಳ್ಳ ಪ್ರೊ. ಕೆ. ಲಿಂಗಪ್ಪ ಭಾನಾಮತಿ, ಮೂಢನಂಬಿಕೆ, ಅವೈಜ್ಞಾನಿಕ, ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿಕೊಂಡು ಬಂದವರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಡಾ.ಕೆ.ಲಿಂಗಪ್ಪ 1962 ರಲ್ಲಿ ರಾಯಚೂರು ಜಲ್ಲೆಯ ಲಿಂಗಸೂರು ತಾಲೂಕಿನ ಚಿನ್ನದ ಗಣಿಗೆ ಖ್ಯಾತಿ ಪಡೆದಿರುವ ಹಟ್ಟಿ ಇವರ ಹುಟ್ಟೂರು. ಬಳ್ಳಾರಿ ಸೇಂಟ್ಜಾನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ, ಲಿಂಗಸೂರು ಸರಕಾರಿ ಜ್ಯೂನಿಯರ್ ಕಾಲೆಜಿನಲ್ಲಿ ಪಿ.ಯು.ಸಿ, ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪದವಿ, ಗುಲಬಗರ್ಾ ವಿವಿಯ ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಹಾಗೂ 1994ರಲ್ಲಿ ಪಿ.ಎಚ್ಡಿ (ಡಾಕ್ಟ್ರೇಟ್) ಶಿಕ್ಷಣವನ್ನು ಮುಗಿಸಿದರು. ಇವರು ಡಾ.ಎನ್.ಎಸ್.ಪಡಶೆಟ್ಟಿ ಅವರ ಮಾರ್ಗದರ್ಶನದಲ್ಲಿ 'ದ್ರಾಕ್ಷಿಯ ಬದಲು ಹುಣಸೆ ಹಣ್ಣಿನಿಂದ' ವೈನ್ ತಯಾರಿಸುವ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು.

ಇವರು 1987ರಲ್ಲಿ ತಾವು ಅಧ್ಯಯನ ಮಾಡಿದ ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಹಂತ ಹಂತವಾಗಿ ಬಡ್ತಿ ಹೊಂದಿದರು. ಪ್ರಸ್ತುತ ಇವರು ಗುಲಬಗರ್ಾ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾಥರ್ಿ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು 8ಜನ ಪಿ.ಎಚ್ಡಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿ ಅವರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ್ದಾರೆ. ಪ್ರಸ್ತುತ 6ಜನ ಪಿ.ಎಚ್ಡಿ ಹಾಗೂ 10ಜನ ಎಂ.ಪಿಲ್ ವಿದ್ಯಾಥರ್ಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಸುಮಾರು 35 ಪ್ರಬಂಧಗಳನ್ನು ಮಂಡಿಸಿದ್ದಾರೆ.  3 ಯು. ಜಿ. ಸಿ ಪ್ರಾಜೆಕ್ಟ್ಗಳನ್ನು ಯಶಸ್ವಿಯಾಗಿ ನಿಬಾಯಿಸಿದ್ದಾರೆ. 3 ಶೈಕ್ಷಣಿಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

 ಗುಲಬಗರ್ಾ ವಿವಿಯ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ, ಪರಿಪಾಲಕರು ಹಾಗೂ ಮುಖ್ಯ ಪರಿಪಾಲಕರಾಗಿ, ವಿದ್ಯಾಥರ್ಿ ಕಲ್ಯಾಣಾಧಿಕಾರಿಯಾಗಿ ಶೈಕ್ಷಣಿಕ ರಂಗದಲ್ಲೂ ಜವಾಬ್ದಾರಿ ನಿರ್ವಹಿಸಿದ್ದಾರೆ. 2006-08 ರವರೆಗೆ ಭಾರತ ಜ್ಞಾನ ವಿಜ್ಞಾನದ ಜಿಲ್ಲಾಧ್ಯಕ್ಷರಾಗಿ, 2008-11 ರವರೆಗೆ ಭಾರತ ಜ್ಞಾನ ವಿಜ್ಞಾನದ ಉಪ ರಾಜ್ಯಾಧ್ಯಕ್ಷರಾಗಿ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗುಲಬಗರ್ಾ ಸಮುದಾಯದ ಜಿಲ್ಲಾ ಕಾರ್ಯದಶರ್ಿಯಾಗಿ ಜನ ಸೇವೆಯಲ್ಲಿ ನಿರತರಾಗಿದ್ದಾರೆ ಅಲ್ಲದೆ, ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿಮರ್ಿಸಲು ಸಮುದಾಯದ ಮೂಲಕ ಹೊಸ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.


ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಹೇರಿ ವತಿಯಿಂದ 2011ನೇ ರಾಜ್ಯ ವಚನ ಮಹೋತ್ಸವದ ಅಂಗವಾಗಿ ಅಕ್ಟೋಬರ್ 17ರಂದು ಬಿಜಾಪುರದ ಕಂದಗಲ್ ಹನುಮಂತ್ರಾಯ ರಂಗಮಂದಿರದಲ್ಲಿ ಇವರಿಗೆ 'ಬಸವ ಶ್ರೀ ಪ್ರಶಸ್ತಿ' ನೀಡಿ ಸನ್ಮಾನಿಸಲಾಗಿದೆ.


ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ 2011ನೇ 'ಮಹಾತ್ಮ ಜ್ಯೋತಿ ಬಾಪುಲೆ' ರಾಷ್ಟ್ರೀಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಡಿಸೆಂಬರ್ 11ರಂದು 27ನೇ ರಜತ ಜಯಂತಿ ಸಮಾರಂಭದಂದು ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಅವರು ತಮ್ಮ ಜೀವನ ಪಯಣದ ಕಷ್ಟದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

'ಜ್ಯೋತಿಬಾ ಪುಲೆ' ಅವಾಡರ್್ ಪಡೆದಿರುವ ನಿಮ್ಮ ಮನದಲ್ಲಾದ ಭಾವನೆಗಳೆನು?

ಬಹಳ ಖುಷಿಯಾಗಿದೆ. ಮಹಾತ್ಮ ಜ್ಯೋತಿಬಾ ಪುಲೆ ಬಹಳ ದೊಡ್ಡ ವ್ಯಕ್ತಿಗಳು. ಸಮಾಜದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ. ಅವರ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವದು ಸಂತೋಷದ ವಿಷಯ. ಸಮಾಜಕ್ಕೆ ನನ್ನಿಂದ ಒಂದು ಅಳಿಲು ಸೇವೆಯಾಗಿರಬಹುದು. ಅದನ್ನು ಗುರುತಿಸಿ ಪ್ರೋತ್ಸಾಹಿಸಿರುವದು ಸಾಮಾಜಿಕ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಇದು ನನ್ನನ್ನು ಪ್ರೇರೆಪಿಸಿದೆ.

ಚಿಕ್ಕ ವಯಸ್ಸಿನಲ್ಲಿ ಅಧ್ಯಯನ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಲು ಹೇಗೆ ಸಾಧ್ಯವಾಯಿತು?

ನಾನು ಬಹಳ ಬಡತನ ಕುಟುಂಬದಿಂದ ಬಂದವನು. ಕಷ್ಟದಿಂದಲೆ ಅಧ್ಯಯನ ಮಾಡಿದವನು. ಕಹಿ ಅನುಭವಗಳಿಂದ ನುರಿತವನು. ನನಗೆ ಆಥರ್ಿಕ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ನಾನು ಹುದ್ದೆಗೆ ಅಜರ್ಿ ಹಾಕಬೇಕಾದರೂ ನನಗೆ ಸಹಾಯ ಮಾಡಿದ್ದು ನನ್ನ ಗೆಳೆಯ. ನನಗೆ ಡಾಕ್ಟರ್ ಆಗಬೇಕೆಂಬ ಕನಸಿತ್ತು, ಆಥರ್ಿಕ ಪರಿಸ್ಥಿತಿಯ ಒತ್ತಡದಿಂದ ಕನಸು ಕಮರಿ ಹೋಯಿತು. ಈ ಕ್ಷೇತ್ರಕ್ಕೆ ಬಂದಾಗ ನಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ತುಡಿತ ಇತ್ತು. ಆ ದಿಶೆಯಲ್ಲಿ ಅವಕಾಶ ಸಿಕ್ಕಿದ್ದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೆ. ನನಗೆ ಪ್ರೋತ್ಸಾಹಿಸಿದವರು ಶಂಕರಯ್ಯ ಆರ್ ಘಂಟಿಯವರು, ಸಾಮಾಜಿಕ ಪಿಡುಗುಗಳಾದ ಅಸ್ಪೃಶ್ಯತೆ, ಮೂಢನಂಬಿಕೆ, ಭಾನಮತಿ, ಅನಕ್ಷರತೆ, ಅವೈಜ್ಞಾನಿಕತೆಯನ್ನು ತೊಡೆದು ಹಾಕುವಲ್ಲಿ ಜನಜಾಗೃತಿ ಮೂಡಿಸಲು ಪ್ರಯತ್ನ ಮಾಡಿದೆವು.

ಅಂದಿನ ಕಷ್ಟಗಳು ನಿಮ್ಮ ಅಧ್ಯಯನಕ್ಕೆ ತೊಡಕಾಗಲಿಲ್ಲವೇ?

ನಾನು ಕಷ್ಟದಲ್ಲಿಯೇ ಜೀವನ ನಡೆಸಿದವನು. ಆದರೆ, ಒಂದು ದಿವಸವೂ ಕಷ್ಟ ಎಂದು ಅಂದುಕೊಂಡಿಲ್ಲ. ಇದ್ದಿದರಲ್ಲಿ ತೃಪ್ತಿ ಪಡುವ ಸ್ವಭಾವ ನನ್ನದು. ಕಷ್ಟಗಳಿಗೆ ಪರಿಹಾರ ಹುಡುಕುತ್ತಿದ್ದೆ, ಅದನ್ನು ನಿಭಾಯಿಸುತ್ತಿದ್ದೆ. ನನ್ನ ತಾಯಿ ತಿಂಗಳಿಗೆ 5ರೂ. ಕಳಿಸುತ್ತಿದ್ದರು. ಅದರಲ್ಲೇ ನನ್ನ ಖರ್ಚನ್ನು ನೋಡಿಕೊಂಡು ಅಧ್ಯಯನ ನಡೆಸುತ್ತಿದ್ದೆ.
್ಡ ವಿಜ್ಞಾನ ಪ್ರಾಧ್ಯಾಪಕರಾದ ನಿಮಗೆ ಸಾಂಸ್ಕೃತಿಕ ಕ್ಷೇತ್ರದ ಆಸಕ್ತಿ ತಳೆಯಲು ಕಾರಣ?
ಈ ವಿಷಯದಲ್ಲಿ ಬಹಳ ಆಸಕ್ತಿ ಇತ್ತು. ನಾನು ಎಡಪಂಥೀಯ ವಿಚಾರಗಳನ್ನು ಮಾಡುತ್ತಿದ್ದೆ. ಮನೆಯಲ್ಲಿಯೂ ಈ ಧೋರಣೆ, ಇದನ್ನು ಹೋಗಲಾಡಿಸಬೇಕೆಂಬುದು ನನ್ನ ಮನಸ್ಸಿನಲ್ಲಿತ್ತು. ನಾನು ವಿಜ್ಞಾನ ವಿದ್ಯಾಥರ್ಿಯಾದುದರಿಂದ ಲ್ಯಾಬ್ನಲ್ಲಿ ಇರಬೇಕಾದುದು, ಸಂಶೋದನೆ ನಡೆಸುವದು ಬಿಟ್ಟರೆ ಏನೂ ಗೊತ್ತಿಲ್ಲ. ಶಂಕರಯ್ಯ ಘಂಟಿ ಸಮುದಾಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಾಯರ್ಾಗಾರ ಏರ್ಪಡಿಸುವದು, ನಾಟಕಗಳನ್ನು ಮಾಡುವದು ಇವೆಲ್ಲ ಜನರಿಗೆ ತಿಳುವಳಿಕೆ ಮೂಡಿಸುವಂತಹವು. 'ಅಸ್ಪೃಶ್ಯತೆಯ ಹಸಿರು ಮುಖಗಳು' ಎಂಬ ನಾಟಕ ಮಾಡಿದರು. ಮೊದಲೇ ಆಸಕ್ತಿ ಇದ್ದ ನನಗೆ ವೇದಿಕೆ ಸಿಕ್ಕಿತು. ನಾನು ಸಮುದಾಯಕ್ಕೆ ಸೇರಿದೆ, ಬೀದಿ ನಾಟಕಗಳಿಂದ ಅಸ್ಪೃಶ್ಯತೆ ಬಗ್ಗೆ ಜನಜಾಗೃತಿ ಮೂಡಿಸುವದು. ಈ ನಿಟ್ಟಿನಲ್ಲಿ ಕೆಲಸ ಮಾಡ ತೊಡಗಿದೆ.

ವಿಜ್ಞಾನಿಯಾದರೂ ಸಾಂಸ್ಕೃತಿಕವಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದೀರಿ. ಅದು ಹೆಗೆ ಸಾಧ್ಯವಾಯಿತು?

ನಾನು ಉಪನ್ಯಾಸಕನಾದರೂ ನನಗೆ ಸಭಾಕಂಪನದ ಅಂಜಿಕೆ ಮನಸ್ಸಿನಲ್ಲಿತ್ತು. ಸಮುದಾಯ ಸೇರಿದ ನಂತರ ಎಲ್ಲವನ್ನೂ ದಾಟಿ ನಡೆಯಲು ಕಲಿತೆ. ನನ್ನ ಗೆಳೆಯರ ಬಳಗ ಹಾಗೂ ಸಮುದಾಯ ನನಗೆ ಧೈರ್ಯ ತುಂಬಿದೆ. ಸಮಾಜದಲ್ಲಿ ಬದುಕುವ ಛಲ, ಜೀವನಕ್ಕೆ ಒಂದು ಇಮೇಜ್ ನೀಡಿದೆ. ಅನ್ಯಾಯವಾದರೆ ಕೇಳುವಂತಹ ಸಾಮಥ್ರ್ಯ ನನ್ನಲ್ಲಿ ಬೆಳೆದಿದೆ. ಒಬ್ಬನಲ್ಲಿ ಒಂದು ಕಲೆ ಇದ್ದರೆ ಸಮುದಾಯ ಎಲ್ಲವನ್ನೂ ಕಲಿಸಿ ಕೊಡುತ್ತದೆ. ಅದು ಸಮುದಾಯದ ಒಂದು ಶಕ್ತಿ ಎಂದು ಹೇಳಬಹುದು. ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಹಮ್ಮಿಕೊಂಡೆವು. ವಿದ್ಯಾಥರ್ಿ ಕಲ್ಯಾಣಾಧಿಕಾರಿಯಾಗಿ ವಿದ್ಯಾಥರ್ಿಗಳ ಸಮಸ್ಯೆಗಳಗೆ ಸ್ಪಂದಿಸುವದು. ಸರಕಾರ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳತಹ ಯುವಜನೋತ್ಸವ ಕಾರ್ಯಕ್ರಮ ಏರ್ಪಡಿಸುವದು. ಯು.ಜಿ.ಸಿ ನಡೆಸುವ (ಓಇಖಿ-ಖಐಇಖಿ) ಸ್ಪಧರ್ಾತ್ಮಕ ಪರೀಕ್ಷೆಗನ್ನು ನಡೆಸುವದು. ಒಟ್ಟಾರೆಯಾಗಿ ವಿದ್ಯಾಥರ್ಿಗಳ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ.

ನಿಮ್ಮ ಸಾಧನೆಗೆ ಪ್ರೇರಣೆ ಏನು?

ಕಾಯಕವೇ ಕೈಲಾಸ ಎಂದು ತಿಳಿದ ನನಗೆ ಕಹಿ ಘಟನೆಗಳೇ ನನ್ನನ್ನು ಪ್ರೇರೇಪಿಸಿವೆ. ಗ್ರಂಥಪಾಲಕ ಎಂ. ಟಿ. ಕಟ್ಟಿಮನಿ ಹೋರಾಟದ ಮನೋಭಾವನೆಯುಳ್ಳವರು. ಅವರ ಮಾರ್ಗದರ್ಶನ, ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿತು. ಆಗತಾನೇ ಸಮುದಾಯ ಸೇರಿದ್ದೆ, ಸುಮಾರು ಏಳು ವರ್ಷಧ ಹಿಂದೆ ವಿವಿಯ ಎಸ್ಸಿ. ಎಸ್ಟಿ. ವಿದ್ಯಾಥರ್ಿಗಳು ಮಿನಿ ವಿಧಾನಸೌಧದ ಎದುರುಗಡೆ ಧರಣಿ ಕುಳಿತಿದ್ದರು. ಆಥರ್ಿಕ ಬಿಕ್ಕಟ್ಟು ಉಂಟಾಗಿತ್ತು. ಹೇಗಾದರೂ ಮಾಡಿ ದುಡ್ಡು ಹೊಂದಿಸಬೇಕೆಂದು ವಿನೂತನವಾದ ಕಾರ್ಯಕ್ರಮ ಹಮ್ಮಿಕೊಂಡೆವು, 'ಬೂಟ್ ಪಾಲಿಶ್' (ಬೆ. 9ರಿಂದ.11ಘಂ) ಮಾಡಿ ಅದರಿಂದ ಬರುವ ದುಡ್ಡು ವಿದ್ಯಾಥರ್ಿಗಳಗೆ ಕೊಡಲಾಯಿತು. ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರೂ ಹಾಗೂ ಪ್ರೊಫೆಸರ್ ಆಗಿರುವ ಇವರು ಈ ರೀತಿಯ ಕಾರ್ಯಕ್ರಮ ಮಾಡುವರೆಂದು ಸಮುದಾಯ ಬಳಗವೆಲ್ಲ ಸೇರಿ ಬೆಂಗಾವಲಾಗಿ ನಿಂತರು.

ಸಾಧಕರಿಗೆ ಪ್ರಶಸ್ತಿ ಮುಖ್ಯವೋ, ಸೇವೆ ಮುಖ್ಯವೋ?

ಸಾಧಕರಿಗೆ ಸೇವೆಯೇ ಮುಖ್ಯವಾಗುತ್ತದೆ. ಈ ಪ್ರಶಸ್ತಿಗಳು ಸಾಧಕರಿಗೆ ಉತ್ತೇಜನೆ ನೀಡುತ್ತವೆ ಹೊರತು ಅವರಿಗೆ ಇದೇ ಮುಖ್ಯವಲ್ಲ. ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಗೆ ಮಾಡುವ ಮೂಲಕ ಈ ಪ್ರಶಸ್ತಿಗಳು ಪ್ರೋತ್ಸಾಹದಾಯಕವಾಗಿರುತ್ತವೆ. ಮೊದಲು ನಾವು ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೇವೆ. ಇಂಥಹ ಜವಾಬ್ದಾರಿಗಳು ದೊರೆತ ನಂತರ ನಾವು ಪ್ರಜ್ಞಾವಂತಿಕೆಯಿಂದ ಮತ್ತಷ್ಟು ಜವಾಬ್ದಾರಿಯಿಂದ ಹೆಜ್ಜೆ ಇಡಬೇಕಾಗುತ್ತದೆ.
್ಡ ಇಂದಿನ ವಿಜ್ಞಾನ ಅಧ್ಯಯನ ಮಾಡುವ ವಿದ್ಯಾಥರ್ಿಗಳಿಗೆ ನಿಮ್ಮ ಸಲಹೆಗಳೇನು?
ಅಧ್ಯಯನದ ಜೊತೆಗೆ ಸಾಮಾಜಿಕ ಕಳಕಳಿ ಇರಬೇಕು, ಪಾಠ ಹಾಗೂ ಸಂಶೋಧನೆಗಳ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸಗಳಲ್ಲಿ ಭಾಗಿಯಾಗಬೇಕು. ಬರೀ ಪಠ್ಯಕ್ಕೆ ಸೀಮಿತವಾಗಿರಬಾರದು. ವಿಶ್ವವಿದ್ಯಾಲಯ ಮಟ್ಟ ಬಿಟ್ಟು ಜನರ ಮಧ್ಯೆ ಸೇವೆ ಮಾಡುವಂತಹ ಔದಾರ್ಯ ಬೆಳೆಸಿಕೊಳ್ಳಬೆಕು. ಜನರನ್ನು ಮೂಢನಂಬಿಕೆಗಳಿಂದ ಹೊರಬರುವಂತೆ ಜಾಗೃತಿ ಮೂಡಿಸಬೇಕು, ವೈಜ್ಞಾನಿಕವಾಗಿ ಬೆಳೆಯುತ್ತಿರುವದರ ಬಗ್ಗೆ ಮಾಹಿತಿ ಒದಗಿಸಬೇಕು.

ಮುಂದಿನ ನಿಮ್ಮ ಗುರಿ ಏನು?

ಸಮಾಜವನ್ನು ಜಾತ್ಯಾತೀತವಾಗಿ ಪರಿವತರ್ಿಸುವ  ನಿಟ್ಟಿನಲ್ಲಿ ಹೋರಾಡುವದು. ಸಮಾಜದ ಓರೆ, ಕೋರೆಗಳನ್ನು ತಿದ್ದುವ ಕೆಲಸ ಮಾಡುವದು. ಜನರಲ್ಲಿ ಮನೆ ಮಾಡಿರುವ ಮೂಢನಂಬಿಕೆಯನ್ನು ಅಳಿಸಿ ಹಾಕುವದು. ವೈಜ್ಞಾನಿಕ ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವದು. ಸಂಶೋಧನೆಯ ಜೊತೆಗೆ ಸಮಾಜವನ್ನು ಒಳ್ಳೆಯ ದಿಕ್ಕಿನಲ್ಲಿ ಒಯ್ಯುವುದರ ಒಂದು ಪ್ರಯತ್ನ ಇದೆ.



-ಅಮರೇಶ ನಾಯಕ ಜಾಲಹಳ್ಳಿ,
Cell-9945268059

No comments:

Post a Comment