ಸಂಗಮೇಶನ ಅಂಚೆ ಚೀಟಿ ಸಂಗ್ರಹ ಕಲೆ...
ಇಂದಿನ ಬಿಡುವಿಲ್ಲದ ಕಾಲದಲ್ಲಿ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾಗುತ್ತದೆ, ಯಾವುದೇ ಕೆಲಸ ಪೂರ್ಣಗೊಳ್ಳಬೇಕಾದರೆ ಸಹನೆ, ಧೃಡಸಂಕಲ್ಪ, ಅಛಲ ಆತ್ಮವಿಶ್ವಾಸ ಅತ್ಯಗತ್ಯ. ಸ್ಪಧರ್ಾತ್ಮಕತೆ ಹೆಚ್ಚಾಗಿರುವ ಈ ಕಾಲದಲ್ಲಿ ಜನರು ಏನಾದರೊಂದು ಸಾಧಿಸಬೇಕೆಂದು ಅತಿ ವೇಗದಿಂದ್ಲ ಸಾಗುತ್ತಾರೆ. ಸಾಧಿಸಬೇಕೆನ್ನುವ ಛಲ, ಜೀವನದಲ್ಲಿ ಒಂದು ಗುರಿ, ಆದರ್ಶ ಇರಬೇಕು, ನಮ್ಮ ಹಿಂದೆ ಮಾರ್ಗದರ್ಶನ ಮಾಡಿ, ಗುರಿಯೆಡೆಗೆ ಸಾಗುವಂತೆ ಮಾಡುವ ಗುರು ಇರಬೇಕು, ಆಗ ಅಂದುಕೊಂಡದನ್ನು ಸಾಧಿಸಲು ಸಬಲ ಶಕ್ತಿ ದೊರೆಯುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಓದುವ, ಬರೆಯುವ, ಕ್ರೀಡೆ ಇದೆ ರೀತಿ ಇನ್ನಿತರ ಚಟುವಟಿಕೆಯಾಗಿರಬಹುದು. ಅವರು ರೂಢಿಸಿಕೊಂಡ ರೀಯಲ್ಲಿರುತ್ತದೆ. ಕೆಲವರಲ್ಲಿ ವಿಶಿಷ್ಠ ಕೌಶಲ್ಯಗಳು ಅಡಗಿರುತ್ತವೆ. ಅದನ್ನು ಹೊರಹಾಕಿದಾಗ, ಪ್ರದಶರ್ಿಸಿದಾಗ, ಇನ್ನೊಬ್ಬರ ಅರಿವಿಗೆ ಬರುತ್ತದೆ. ಇದು ಅವರ ವಿಶಿಷ್ಟ ಮನೋಭಿಲಾಷೆಗೆ, ಅವರ ಹವ್ಯಾಸಕ್ಕೆ ಮೆರಗು ಬರುತ್ತದೆ. ಅಂತಹ ವಿಶಿಷ್ಠ ಶೈಲಿಯ ಅಭಿರುಚಿಯುಳ್ಳ ವ್ಯಕ್ತಿಗಳು ಸಾಕಷ್ಟು ಜನರಿದ್ದಾರೆ, ವೇದಿಕೆ ದೊರೆತವರು ಗುರುತಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಎಲೆಮರೆಕಾಯಿಯಂತೆ ಹಿಂದೆ ಉಳಿಯುತ್ತಾರೆ.
ನಮ್ಮಲ್ಲಿ ಒಬ್ಬ ವಿದ್ಯಾಥರ್ಿ ಇದ್ದಾನೆ. ಆತನಿಗೆ ಪ್ರತಿಯೊಂದು ಹಳೆಯ ವಸ್ತುವನ್ನು ಸಂಗ್ರಹಿಸುವದೆಂದರೆ ಇಷ್ಟವಂತೆ ಆ ವ್ಯಕ್ತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದನ್ನೂರು ಗ್ರಾಮದ ಸಂಗಮೇಶ.ಆರ್.ಹಿಪ್ಪಳಗೆಮಠ, ಪ್ರಸ್ತುತ ಗುಲಬಗರ್ಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ಸೆಮಿಸ್ಟರ್ನಲ್ಲಿ ವ್ಯಾಸಂಗ ನಡೆಸಿದ್ದಾನೆ. ಆತ ಏನಾದರೊಂದು ಸಂಗ್ರಹಿಸುತ್ತಲೇ ಇರುತ್ತಾನೆ. ಏನಾದರೊಂದು ಸಂಗ್ರಹ ಮಾಡುವದೆಂದರೆ, ಸಂಶೋಧನೆ ಮಾಡಿದಂತೆಯೇ ಸರಿ, ಸಮಯದ ಮಹತ್ವ ಅರಿತು ಇರುವ ಸಮಯವನ್ನೇ ಸದ್ಬಳಕೆ ಮಾಡಿಕೊಂಡು ಜೀವಿಸುವದು ಅಗತ್ಯವಾಗಿದೆ ಎನ್ನುತ್ತಾನೆ. ದಿನದಿಂದ ದಿನಕ್ಕೆ ಸಮಯ ಕಡಿಮೆಯಾಗುತ್ತಾ, ಕಲಸಗಳು ಹೆಚ್ಚಾಗುತ್ತಿವೆ. ವಿದ್ಯಾಥರ್ಿ ಜೀವನ ಅತಿ ಅಮೂಲ್ಯವಾಗಿದೆ. ವಿದ್ಯಾಥರ್ಿ ಜೀವನವನ್ನು ಕೇವಲ ಶಿಕ್ಷಣಕ್ಕೆ ಮೀಸಲಿಟ್ಟಿರೆ ಸಾಲದು. ಸಾಮಾಜಿಕ, ಆಥರ್ಿಕ, ರಾಜಕೀಯ, ಧಾಮರ್ಿಕ ಇತಿಹಾಸ ಉಳಿಸುವ ಚಟುವಟಿಕೆಗಳ ಬಗೆಗೂ ಚಿಂತನೆ ನಡೆಸುವಂತಹ ಕೆಲಸವಾಗಬೇಕು. ಇತಿಹಾಸ ಬಲ್ಲವನು, ಇತಿಹಾಸ ಸೃಷ್ಟಿಸಬಲ್ಲನು. ಇತಿಹಾಸ ತಿಳಿಯದವನು, ಇತಿಹಾಸ ಸೃಷ್ಟಿಸಲಾರನು. ಅಂದರೆ ನಾವು ಜೀವನದಲ್ಲಿ ಹಿಂದೆ ನೋಡಿಕೊಂಡು ಮುಂದೆ ಸಾಗಬೇಕು, ಹಿಂದೆ ನಡೆದ ಘಟನೆಗಳ ಬಗ್ಗೆ ಅರಿತುಕೊಂಡರೆ, ಗತಕಾಲದ ವೈಭವದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಹಿಂದಿನ ಆಡಳಿತ ವ್ಯವಸ್ಥೆಯ ಬಗ್ಗೆ, ಜೀವನ ಕ್ರಮವನ್ನು ತಿಳಿದು ನಡೆಯಬೇಕಾಗುತ್ತದೆ.ಗತಕಾಲದ ಯಾವುದೇ ವಸ್ತುವನ್ನಾಗಲಿ ಸಂಗ್ರಹಿಸಿಡಬೇಕಾಗುತ್ತದೆ. ಹಳೆಯ ವಸ್ತುಗಳಿಗೆ ತುಂಬಾ ಬೆಲೆ ಇದೆ, ಅದಕ್ಕೆ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಾರೆ. ರಾಜ-ಮಹಾರಾಜರ ಕಾಲದಲ್ಲಿ ಬಳಕೆಯಾದ ವಸ್ತುಗಳನ್ನು ಕಲೆ ಹಾಕಿ ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆ ಇಡುವದುಂಟು. ಅದೇ ರೀತಿ ಈತನು ಸಂಗ್ರಹ ಮಾಡಿರುವ ವಸ್ತುಗಳೆಂದರೆ ನಿಜಾಮನ ಕಾಲದ ಬಾಂಡ್ ಪೇಪರ್ಗಳು, ನಾಣ್ಯಗಳು, ಹಲವು ರೀತಿಯ ವಸ್ತುಗಳು, ಬ್ರಿಟಿಷ ಈಸ್ಟ್ ಇಂಡಿಯ ಕಂಪನಿಯ ನಾಣ್ಯಗಳು (1616, 1717, 1818, 1937, 1917 ಇಸವಿಯ ನಾಣ್ಯಗಳು), ಪ್ರತಿಯೊಂದು ನಾಣ್ಯದ ಮೇಲೆ ಒಂದು ಬದಿಯಲ್ಲಿ ಬ್ರಟಿಷರ ಚಿಹ್ನೆ, ಮತ್ತೊಂದು ಬದಿಯಲ್ಲಿ ಭಾರತೀಯ ದೇವತೆಗಳ ಚಿಹ್ನೆ ಹೊಂದಿವೆ. 12 ಮತ್ತು 13ನೇ ಶತಮಾನದ ನಾಣ್ಯಗಳಿವೆ. ರಾಷ್ಟ್ರೀಯ ವಿಶೇಷ ದಿನಗಳಂದು (ಅಗಸ್ಟ್ 15, ಜನವರಿ 26, ಅಕ್ಟೋಬರ್ 2, ನವೆಂಬರ್ 14, ಸೆಪ್ಟೆಂಬರ್ 5, ನವೆಂಬರ್ 1) ಪ್ರತಿಯೊಂದು ದಿನಪತ್ರಿಕೆಯನ್ನು ಸಂಗ್ರಹಿಸಿ ಮಾಹಿತಿ ಕಲೆ ಹಾಕುವದು. 130 ನಮೂನೆಯ ಮ್ಯಾಚ್ ಬಾಕ್ಸ್ಗಳನ್ನೂ ಸಹ ಕಲೆಕ್ಟ್ ಮಾಡಿದ್ದಾರೆ. ಕ್ರಿಕೇಟ್ ಸ್ಟಾರ್ಗಳು, ಟೆನಿಸ್ ಕ್ರೀಡಾಪಟುಗಳ ಹಾಗೂ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳನ್ನು, ಪ್ರಮುಖ ವ್ಯಕ್ತಿಗಳ ಸಂದರ್ಶನ ಮಾಡಿ ಅವರ ಸಂಪೂರ್ಣ ವಿವರದ ಮಾಹಿತಿ ಪಡೆದು ಭಾವಚಿತ್ರವನ್ನು ಕಲೆಕ್ಟ್ ಮಾಡುವ ಹವ್ಯಾಸ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತ್ತಕೋತ್ತರ ಪದವಿಯವರೆಗೂ ತನಗೆ ಕಲಿಸಿದ ಗುರುಗಳ ಭಾವಚಿತ್ರ ಸಹಿತ ಮಾಹಿತಿ ಸಂಗ್ರಹಿಸಿ ಅವರ ಹುಟ್ಟುಹಬ್ಬ ಅಥವಾ ವಿಶೇಷ ದಿನದಂದು ಅವರಿಗೆ ಶುಭಾಶಯಗಳನ್ನು ತಿಳಿಸುವ ರೂಢಿ. ಇದು ಈ ಕಾಲದಲ್ಲಿಯೂ ಗುರುಗಳ ಮೇಲಿರುವ ಅಪಾರವಾದ ಭಕ್ತಿಯನ್ನು ತೋರಿಸುತ್ತದೆ. ಇತಿಹಾಸ ಪ್ರಸಿದ್ಧ ಕೋಟೆಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಸಂಗ್ರಹಿಸಿ ಚಿತ್ರಗಳನ್ನು ಸೆರೆ ಹಿಡಿಯುವದು, ನಿಸರ್ಗ ತಾಣಗಳಿಗೆ ಭೇಟಿ ನೀಡುವದು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಸೆರೆಹಿಡಿದು ವನ್ಯ ಮೃಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು. ಇದು ಒಂದು ಪರಿಸರ ಸ್ನೇಹಿ ಭಾವನೆ ತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತಹ ದುಶ್ಚಟಗಳಗೆ ಬಲಿಯಾಗದೆ ತಮ್ಮ ಬಂಗಾರದಂತಹ ರಸಮಯ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಪ್ಯಾಕೇಟ್ಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿದ್ದರೂ ಸಹ ಅದನ್ನು ಸೇವಿಸುವದು ಎಷ್ಟರಮಟ್ಟಿಗೆ ಸರಿ? ಈ ಕಾರಣಕ್ಕಾಗಿ ಹಲವಾರು ರೀತಿಯ ಗುಟ್ಕಾ ಪ್ಯಾಕೇಟ್ಗಳನ್ನು ಸಂಗ್ರಹಿಸಿ ಯುವಕರಿಗೆ ಅದರ ಬಗ್ಗೆ ಜಾಗೃತಿ ಮೂಢಿಸುವಂತಹ ಹವ್ಯಾಸವಿದೆ. ಇಂದಿನ ಸಂಕೀರ್ಣ ಯುಗದಲ್ಲಿ ಪ್ರತಿಯೊಬ್ಬರಿಗೂ ಸಮಯ ಮಹತ್ವದ್ದಾಗಿದೆ. ಸಮಯ ಕಡಿಮೆ ಇದೆ, ಕೆಲಸದ ಒತ್ತಡ ಜಾಸ್ತಿ ಇದೆ. ಹಿಂದಿನ ಕಾಲದ ಅಂಚೆ ಚೀಟಿಗಳು, ಬಾಂಡ್ ಪೇಪರ್ಗಳು, ಫಸ್ಟ್ ಡೇ ಕವರ್ಗಳು, ದಿನಪತ್ರಿಕೆಯಲ್ಲಿನ ಇತಿಹಾಸ ನಾಯಕರುಗಳ ಘಟನೆ ಬಗ್ಗೆ ಮಾಹಿತಿ ಸಂಗ್ರಹಣೆ ಅವುಗಳನ್ನು ಕಲೆ ಹಾಕುವುದು. ಹಾಗೂ ಅಧಿಕಾರಿಗಳ, ಪ್ರಮುಖರ, ಪ್ರಸಿಧ್ಧ ವ್ಯಕ್ತಿಗಳ, ಮಾಹಿತಿ ಮತ್ತು ಹಸ್ತಾಕ್ಷರ ಪಡೆಯುವುದು ಅವರ ಹವ್ಯಾಸವಾನ್ನಾಗಿ ರೂಢಿಸಿಕೊಂಡಿದ್ದಾರೆ.
ಸುಮಾರು 6 ವರ್ಷಗಳಿಂದ ವಸ್ತುಗಳನ್ನು ಸಂಗ್ರಹಿಸಿರುವ ಇವರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ, ಪ್ರಮುಖವಾಗಿ ಆಥರ್ಿಕ ಸಮಸ್ಯೆ ಇರುವ ಇವರು ತಮ್ಮ ಹವ್ಯಾಸವನ್ನು ಮಾತ್ರ ಬಿಟ್ಟಿಲ್ಲ. ಇವರಿಗೆ ಮನೆಯವರ ಮತ್ತು ಸ್ನೇಹಿತರ ಸಹಕಾರ ಇದೆ. ಇವರು ಸಂಗ್ರಹಿಸಿರುವ ಕೆಲವೊಂದು ಅತ್ಯಮೂಲ್ಯ ನೋಟುಗಳು, ನಾಣ್ಯಗಳು ಕಳುವಾಗಿದ್ದವು. ಪದವಿಯಲ್ಲಿ ಎರಡು ಬಾರಿ ಪ್ರದರ್ಶನ ನೀಡಿ. ಬಿ.ಇಡಿ ಕೋಸರ್್ ಮಾಡುವಾಗ ಅಲ್ಲಮಪ್ರಭು ಮಹಾವಿದ್ಯಾಲಯ ಕರಡಿಯಾಳ್(ಕೆ)ದಲ್ಲಿ ಒಂದು ಸಲ ಪ್ರದರ್ಶನ, ಅದೇ ರೀತಿ ಗುಲಬಗರ್ಾ ವಿಶ್ವವಿದ್ಯಾಲಯದ ಅಂತರ ಮಹಾ ವಿದ್ಯಾಲಯ ಯುವಜನೋತ್ಸವ 2011ರಂದು ಹಿಂದಿನ ಕಾಲದ ಹಲವಾರು ಸಂಗ್ರಹಿತ ಅಂಚೆ ಚೀಟಿಗಳ ಪ್ರದರ್ಶನ ನೀಡಿದ್ದಾರೆ. 50 ವರ್ಷದ ಹಳೆಯ ಅಂಚೆ ಚೀಟಿ ಪತ್ರ ಹಾಗೂ ಪ್ರಸ್ತುತ ಚಲಾವಣೆಯ ಪತ್ರ ಅವರಲ್ಲಿವೆ. 1894 ರಿಂದ 1896, 1898, 1907, 1910, 1946 ರವರೆಗೆ ಬಾಂಡ್ ಪೇಪರ್ಗಳನ್ನು ಸಂಗ್ರಹಿಸಿದ್ದಾರೆ. ಏನಾದರೊಂದು ಹೊಸತನವನ್ನು ಸಾಧಿಸಬೇಕೆಂಬ ಅಛಲವಾದ ಗುರಿ ನನ್ನಲ್ಲಿದೆ ಎಂದು ಆತ ಮನ ಬಿಚ್ಚಿ ಹೇಳುತ್ತಾನೆ. ಹಳೆಯ ವಸ್ತುಗಳ ಸಂಗ್ರಹಣೆಯ ಅಭಿರುಚಿ ಇರುವದು ವಿಶೇಷವಾಗಿದೆ. ಕಸದಿಂದ ರಸ ಎನ್ನವಂತೆ ನಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ಬಳಸಿಕೊಂಡು ಹಲವಾರು ಜನ ತಮ್ಮ ಕೌಶಲ್ಯದಿಂದ ಹೊರಹೊಮ್ಮಿದ್ದಾರೆ.
ಯಾವುದೇ ಒಂದು ವಸ್ತುವನ್ನು ಕಾಪಾಡುವದು ಅಷ್ಟೊಂದು ಸುಲಭದ ಕೆಲಸವಲ್ಲ, ಅದಕ್ಕೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಎಲ್ಲಿ ನಮ್ಮ ಪ್ರೀತಿ ಇರುತ್ತದೆಯೋ, ಅಲ್ಲಿ ನಮ್ಮ ಮನಸ್ಸಿರುತ್ತದೆ. ಎಲ್ಲಿ ನಮ್ಮ ಮನಸ್ಸಿರುತ್ತದೆಯೋ, ಅಲ್ಲಿ ನಮ್ಮ ಏಕಾಗ್ರತೆ ಇರುತ್ತದೆ. ಏಕಾಗ್ರತೆ ಒಲಿದರೆ ನಾವು ಅಂದುಕೊಡದ್ದನ್ನು ಸಾಧಿಸುವುದು ಸುಲಭ ಸಾಧ್ಯವಾಗುತ್ತದೆ. ಈತನ ಒಂದು ಹಳೆಯ ವಸ್ತುಗಳ ಸಂಗ್ರಹಣಾ ಕಾರ್ಯ ಪ್ರತಿಯೊಬ್ಬ ವಿದ್ಯಾಥಿಗಳಿಗೆ ಮಾದರಿಯಾಗಬೇಕಾಗಿದೆ.
-ಅಮರೇಶ ನಾಯಕ, ಜಾಲಹಳ್ಳಿ
ಮೊ-9945268059.