Saturday, 31 December 2011

Learning English (Published)


ಇಂಗ್ಲೀಷ ಕಲಿಯಿರಿ ಬೆಳೆಯಿರಿ..

 ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಇಂಗ್ಲೀಷ ಕಲಿಕೆ ಅನಿವಾರ್ಯವಾಗಿದೆ. ಇಂಗ್ಲೀಷ ಅಂತರಾಷ್ಟ್ರಿಯ ಸಂಪರ್ಕ ಭಾಷೆಯಾಗಿರುವದರಿಂದ ಪ್ರತಿ ಕ್ಷೇತ್ರದಲ್ಲೂ ಇದು ಅತ್ಯವಶ್ಯಕ.ಹೀಗಾಗಿ ಪ್ರತಿಯೋರ್ವ ಉದ್ಯೋಗಕಾಂಕ್ಷಿ ಇಂಗ್ಲೀಷ ಜ್ಞಾನ ಹೊಂದುವದು ಅನಿವಾರ್ಯ ಎಂಬಂತಾಗಿದೆ. ಪ್ತಸ್ತುತ ದಿನಗಳಲ್ಲಿಖಾಸಗಿ ಕಂಪನಿಗಳು ಚನ್ನಾಗಿ ಇಂಗ್ಲೀಷ ಮಾತನಾಡುಬಲ್ಲ ಮತ್ತು ಕಂಪ್ಯೂಟರ್ ಜ್ಞಾನದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದ್ದಾರೆ. ಇದಕ್ಕೆ ಕಾರಣ ಪರಿಪಕ್ವತೆ. ಇದು ಸಹಜ ಕೂಡ ಹೌದು. ಪದವಿ ಪೂರೈಸಿರುವ ಕೆಲವರು ತಮಗೆ ಇಂಗ್ಲೀಷ್ ಬರುವದಿಲ್ಲವೆಂದು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಬಲ್ಲವರ ಪ್ರಕಾರ ಇಂಗ್ಲೀಷ್ ಕಲಿಕೆ ಮತ್ತು ಮಾತನಾಡುವದು ಅಷ್ಟೊಂದು ದೊಡ್ಡ ಸಮಸ್ಯೆಯೇನಲ್ಲ. ಕಲಿಯುವ ಮುನ್ನ ಕಠಿಣ ಎನಿಸಿದರೂ ಕಲಿತ ಮೇಲೆ ಸರಳವಾಗಿ ಕಾಣುತ್ತದೆ. ಅಭ್ಯಾಸದಿಂದ ಎಲ್ಲವೂ ಸಾಧ್ಯ.

 ಮೊದ ಮೊದಲು ಇಂಗ್ಲೀಷ ಮಾತನಾಡುವಾಗ ತಪ್ಪಾಗುವದು ಸಹಜ, ಅದರಿಂದ ಎದೆಗುಂದದೆ ತಪ್ಪಿಲ್ಲದೇ ಮಾತನಾಡಲು ಪ್ರಯತ್ನಿಸಿದಾಗ ತಪ್ಪುಗಳು ಕಡಿಮೆಯಾಗತ್ತವೆ. ತಪ್ಪುಗಳು ಹೆಚ್ಚಾಗಿದ್ದರೂ ನಂತರದ ದಿನಗಳಲ್ಲಿ ತಪ್ಪುಗಳು ಕಡಿಮೆಯಾಗಿ ಭಾಷೆಯಲ್ಲಿಯೂ ಪ್ರಬುದ್ಧತೆ ಕಂಡುಬರುತ್ತದೆ. ಕಲಿಕೆಯ ಬಗೆಗಿನ ವಿಚಾರಗಳು ನವೀನವಾಗಿರಲಿ, ಯೋಚನೆ, ಪ್ರಯತ್ನಗಳಲ್ಲಿ ಹುರುಪಿರಲಿ, ಯೋಚಿಸುವದನ್ನು, ಪ್ರಯತ್ನಪಡುವದನ್ನು ನಿಲ್ಲಿಸಿದರೆ ವಿಚಾರಗಳಿಗೆ, ವ್ಯಕ್ತಿತ್ವಕ್ಕೆ ತುಕ್ಕು ಹಿಡಿಯುತ್ತದೆ. ಇಂಗ್ಲೀಷ ಸರಳವಾಗಿ ಕಲಿಯಲು ಮೊದಲು ಮಾತನಾಡುವದನ್ನು ರೂಢಿ ಮಾಡಿಕೊಳ್ಳಬೇಕು. ಕಷ್ಟ ಎಂದು ಸುಮ್ಮನಿದ್ದರೆ ಅದು ಮತ್ತಷ್ಟು ಕ್ಲಿಷ್ಟಕರವಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸಿದ್ದತೆ ಮಾಡಿಕೊಂಡು ಅದೇ ರೀತಿ ಅಭ್ಯಾಸ ಮುಂದುವರೆಸುತ್ತಾ ಬರಬೇಕು, ಅಭ್ಯಾಸವು ನಿಧಾನ ಮತ್ತು ನಿರಂತರ ಕ್ರಿಯೆಯಾಗಿರಬೇಕು.

ಈಜು ಕಲಿಯಬೇಕೆಂದುಕೊಂಡು ಬಾವಿ ಅಥವಾ ನದಿಯ ದಂಡೆಯ ಮೇಲೆ ಕುಳಿತರೆ ಈಜು ಕಲಿಯಲು ಸಾಧ್ಯವಿಲ್ಲ. ಈಜು ಕಲಿಯಬೇಕು ಎಂದಾದಲ್ಲಿ ಮೊದಲು ನೀರಿಗೆ ಧುಮುಕಬೇಕು, ಪ್ರಥಮವಾಗಿ ಕಷ್ಟವಾದರೂ ಕಾಲು ಬಡಿದಂತೆ ಅಭ್ಯಾಸ ಬಲದಿಂದ ಸರಳವಾಗಿ ಈಜು ಕಲಿಯಬಹುದು. ಇದು ಪ್ರಕೃತಿ ನಿಯಮ.. ಹೀಗೆಯೇ ಯಾವುದೇ ಭಾಷೆಯನ್ನು ಸರಾಗವಾಗಿ ಕಲಿತು ಮಾತನಾಡಬಲ್ಲ ಅನುಕರಣಿಯ ಶಕ್ತಿ ಎಲ್ಲರಲ್ಲೂ ಇರುತ್ತದೆ. ಅದನ್ನು ಬಳಸಿಕೊಂಡು ಏನನ್ನಾದರೂ ಸಾಧಿಸಬಹುದಾಗಿದೆ. ಎಲ್ಲಾ ಶಕ್ತಿಗಳೂ ನಮ್ಮಲ್ಲೇ ಅಡಗಿವೆ, ಅದನ್ನು ಪ್ರಚುರಪಡಿಸುವದು ನಮ್ಮಲ್ಲೇ ಅಡಗಿದೆ. ಪ್ರಪಂಚದಾದ್ಯಂತ ಸುಮಾರು ಮೂರು ಸಾವಿರದ ಐದುನೂರು ಭಾಷೆಗಳಿವೆ., ಅದರಲ್ಲಿ ಕೇವಲ ಐನುರು ಭಾಷೆಗಳು ಮಾತ್ರ ಲಿಪಿ ಹೊಂದಿವೆ. ಭಾಷೆಯ ಕಲಿಕೆಗೆ ಅನುಕರಣೆ ತುಂಬಾ ಅಗತ್ಯ.

 ನಾವು ಮಾತನಾಡುವ ಸಂದರ್ಭದಲ್ಲಿ ಎಷ್ಟೋ ಸಲ ಇಂಗ್ಲೀಷ ಶಬ್ದಗಳನ್ನು ಬಳಸುತ್ತಿರುತ್ತೇವೆ, ಎಷ್ಟೋ ಶಬ್ದಗಳಿಗೆ ಇರುವ ಕನ್ನಡದ ಅರ್ಥಗಳೇ ನಮಗೆ ತಿಳಿದಿರುವದಿಲ್ಲ. ಆದರೂ ಇಂಗಿಷ್ ಶಬ್ದಗಳನ್ನೇ ಬಳಸುತ್ತಿರತ್ತೇವೆ, ಅದೇ ರೀತಿ ಮಾತನಾಡುವ ಸಂದರ್ಭದಲ್ಲಿ ಬಳಸುವ ಶಬ್ದಗಳನ್ನೇ, ವ್ಯಾಕರಣಬದ್ದವಾಗಿ ಬಳಕೆ ಮಾಡಲು ಶುರು ಮಾಡಿದರೆ ಇಂಗ್ಲೀಷ ಭಾಷೆಯನ್ನು ರೂಢಿಸಿಕೊಳ್ಳುವದು ಅಷ್ಟು ಕಷ್ಟಕರವಲ್ಲ. ಭಾಷೆ ಕಲಿಕೆಯ ಸಂದರ್ಭದಲ್ಲಿ ನಿರಾಶೆ ಭಾವನೆ ತೊರೆದು ಆಶಾಭಾವನೆಯನ್ನು ಬೆಳೆಸಿಕೊಳ್ಳಬೇಕು, ಭಾಷೆ ಕಲಿಕೆಗೆ ವಯಸ್ಸಿನ ಮಾನದಂಡವಿಲ್ಲ. ಈ ಪ್ರಪಂಚದಲ್ಲಿ ಎಲ್ಲಾ ಹಂತಗಳು ಕಲಿಯುವದೇ ಆಗಿವೆ.
ಕಲಿಕೆಯ ಸಂದರ್ಭದಲ್ಲಿ ನಾವು ಮಕ್ಕಳಲ್ಲಿ ಮಕ್ಕಳಾಗಬೇಕು,

ಇಂಗ್ಲೀಷ್ ಕಲಿಕೆಗೆ ಖಾಸಗಿ ಸಂಸ್ಥೆಗಳು ಮುಂದಾಗಿವೆ. ಇವುಗಳ ಮೂಲಕವೂ ಕಲಿಯಬಹುದಾಗಿದೆ. ಭಾಷೆ ಕಲಿಕೆಯ ಸಂದರ್ಭದಲ್ಲಿ ಕಲಿತಿದ್ದನ್ನು ಮರೆಯುವಂತಾಗಬಾರದು. ಕಲಿಯುವ ಭಾಷೆ ದಿನಿತ್ಯದ ಸಂವಹನ ಕ್ರಿಯೆಯನ್ನಾಗಿ ಪರಿವರ್ತನೆ ಮಾಡಿಕೊಂಡಾಗ ಕಲಿಕೆ ಮತ್ತಷ್ಟು ಸರಳವಾಗುತ್ತದೆ. ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಇಂಗಿಳಷ್ ಕಲಿಕೆ ಅನಿವಾರ್ಯ. ಸಂಪರ್ಕ-ಸಂವಹನ ಕ್ರಿಯೆ ಬಲವಾಗಿದ್ದಷ್ಟು ವ್ಯಕ್ತಿಗೆ ತನ್ನನ್ನು ಗುರುತಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯ. ಭಾಷೆಯ ಜ್ಞಾನ ಇರದಿದ್ದರೆ ಉದ್ಯೋಗಕ್ಕೂ ಸಂಚಕಾರ. ಇಂಗ್ಲೀಷ ಕಬ್ಬಿಣದ ಕಡಲೆಯೇನೂ ಅಲ್ಲ. ಇಂಗ್ಲೀಷ್ ಕಲಿತು ಅರಳು ಹುರಿದಂತೆ ಮಾತನಾಡಬಹುದಾದ ಶಕ್ತಿ ನಮ್ಮಲ್ಲಿದೆ ಎಂಬುದನ್ನು ತೋರಿಸಿ ಕೊಡಬೇಕು.



-ಅಮರೇಶ ನಾಯಕ ಜಾಲಹಳ್ಳಿ
Cell-9945268059

No comments:

Post a Comment