Monday, 26 December 2011

Buddha Vihar darshana (Published)



ಭೌದ್ದ ವಿಹಾರ


ನಾನು ನನ್ನ ಗೆಳೆಯ ಸಂಜೆ 6ಘಂ.ಗೆ ಭೌದ್ಧ ವಿಹಾರ ನೋಡಲೆಂದು ನಡೆದುಕೊಂಡು ಹೊರಟೆವು. ವಿಶ್ವವಿದ್ಯಾಲಯದ ರಸ್ತೆ ಬದಿಯ ಎತ್ತರವಾದ ಸುಂದರ ಗಿಡ ಮರಗಳು ತಂಪಾದ ಗಾಳಿ ಬೀಸುತ್ತಿತ್ತು. ಮುಸ್ಸಂಜೆಯ ಆ ಹೊತ್ತಿನಲ್ಲಿ ಸವಿ ಮಾತುಗಳನ್ನಾಡುತ್ತ,  ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾ, ಹೊರಟಾಗ ನಮಗೆ ಎದುರಾಗಿದ್ದು ದೊಡ್ಡ ಕಮಾನು. ಅದನ್ನು ಕೂಲಂಕಷವಾಗಿ ವೀಕ್ಷಿಸುತ್ತಾ ನಿಂತಾಗ ಅದರಲ್ಲಿ ಕೆತ್ತಿರುವ ಕಲೆಗಳು ನಮಗೆ ಏನೋ ಸಂದೇಶ ನೀಡುವಂತೆ ತೋರುತ್ತಿದ್ದವು. ದೃಷ್ಟಿ ಬೀಳದಂತೆ ದೃಷ್ಟಿ ಗೊಂಬೆಗಳನ್ನು ಅದರಲ್ಲಿ ಕೆತ್ತಲಾಗಿತ್ತು.  
ಮುಂದೆ ಸಾಗಿದಾಗ ವಿಶಾಲವಾದ ಭೂಪ್ರದೇಶ, ಆ ಪ್ರದೇಶದಲ್ಲಿ ಪಪ್ಪಾಯಿ ತೋಟ ಸುಂದರವಾಗಿ ಕಾಣುತ್ತಿತ್ತು. ಬುದ್ಧ ವಿಹಾರ ಸಮೀಪಿಸಿದಾಗ ಮತ್ತೊಂದು ದೊಡ್ಡ ಗಾತ್ರದ ಕಮಾನು ಜನರನ್ನು ಸ್ವಾಗತಿಸುವಂತೆ ತೋರುತಿತ್ತು. .ಒಳಗೆ ನಡೆದಾಗ ಎಡಬದಿಯಲ್ಲಿ ಉದ್ಯಾನವನ, ಬಯಲು ರಂಗಮಂದಿರ. ಬಲಬದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರರ ಜೊತೆ ಭೌದ್ದ ಧರ್ಮದ ಅನುಯಾಯಿಗಳ ಮೂತರ್ಿಗಳನ್ನು ಮುಂದೆ ಸಾಗಿರುವ ರೀತಿಯಲ್ಲಿ ಅಂದವಾಗಿ ನಿಮರ್ಿಸಲಾಗಿದೆ.
ವಿಹಾರದ ಸುತ್ತಮುತ್ತ ಶಾಬಾದಿ ಬಂಡೆ ಹಾಗು ಟೈಲ್ಸಗಳನ್ನು ಹಾಕಲಾಗಿದೆ. ಎತ್ತರದ ಪ್ರದೇಶದಲ್ಲಿರುವದರಿಂದ ವಿಶಾಲ ರೂಪದಲ್ಲಿ ಸುಂದರವಾಗಿ ಕಾಣಿಸುತ್ತದೆ. ಇಲ್ಲಿಂದ ನೋಡಿದರೆ ಗುಲಬಗರ್ಾ ನಗರವು ವಿದ್ಯುತ್ ಬಲ್ಬುಗಳಿಂದ ಹೊಳೆಯುತ್ತಿರುತ್ತದೆ. ವಿಹಾರದ ಸುತ್ತ ಮುತ್ತ ಸುಮಾರು ಐವತ್ತು ಕೊಟಡಿಗಳುಳ್ಳ ಅತಿಥಿ ಗೃಹ ನಿಮರ್ಿಸಲಾಗಿದೆ. ಅಸರ ಸುತ್ತ ಉದ್ಯಾನವನ ನಿಮರ್ಿಸಿ, ಸುಮಾರು 500 ವಿದ್ಯುತ್ ಬಲ್ಬುಗಳನ್ನು ಅಳವಡಿಸಲಾಗಿದೆ. ವಿಹಾರದ ಒಳಗೆ ನಡೆದಾಗ ಗೋಡೆಯ ಮೇಲೆ ಕೆತ್ತಿರುವ ಕೆತ್ತನೆಗಳು ಬಿಡಿಸಿದ ಹಲವು ರೀತಿಯ ಚಿತ್ತಾರಗಳು ನಮ್ಮ ಮೈ ಮನವನ್ನು  ಸೆಳೆಯುವಂತಿದ್ದವು. ಗೋಪುರದ ಹೆಬ್ಬಾಗಿಲ ಬಳಿ ಬಂದಾಗ ಗಂಧದ ಮರ ಹಾಗು ಸಾಗುವಾನಿ ಮರದ ದ್ವಾರ ಬಾಗಿಲು ಆಕರ್ಷಕವಾಗಿತ್ತು.
ಪ್ರಾರ್ಥನ ಮಂದಿರದ ಒಳಗೆ ಪ್ರವೇಶಿಸಿದಾಗ ಭಗವಾನ ಬುದ್ಧನ ಮೂತರ್ಿ ನೋಡಿ ಬೆರಗಾಗಿ ನಿಂತೆವು. ಪಂಚಲೋಹಗಳೀಂದ ನಿಮರ್ಿಸಿದ ಮೂತರ್ಿಯು ಬಂಗಾರ ಲೇಪನದಿಂದ ಕೂಡಿದೆ. ಮಂದಿರದಲ್ಲಿ 13 ಲಕ್ಷ ರೂ. ಮೌಲ್ಯದ ಜ್ಯೂಮರ್ ವಿದ್ಯುತ್ ಬಲ್ಬನ್ನು ಅಳವಡಿಸಿ ಸರಪಳಿಯಿಂದ ಇಳಿಬಿಡಲಾಗಿದೆ. ಅದು ನೋಡಲು ಸುಂದರ, ಆಕರ್ಷಣೀಯ. ವಜ್ರದ ಹಾಗೆ ಹೊಳೆಯುತ್ತಿರುತ್ತದೆ. ಹುಣ್ಣಿಮೆಯ ದಿನದಂದು ಮಾತ್ರ ಜ್ಯೂಮರ್ ವಿದ್ಯುತ್ ದೀಪ ಹಚ್ಚುವದು ವಿಶೇಷ.
ಈ ವಿಹಾರದ ಕೆಳಮಹಡಿಯಲ್ಲಿ ಬುದ್ಧನ ಮೂತರ್ಿ ಅಮೃತ ಶಿಲೆಯಿಂದ ಕೂಡಿದೆ. .ಅದು ಧ್ಯಾನ ಮಂದಿರ. ನಾವು ಧ್ಯಾನ ಮಾಡಲು ಕುಳಿತಾಗ ಶಾಂತವಾದ ನಿಶ್ಯಬ್ದವಾದ ವಾತಾವರಣ ಅಲಿದ್ಲೆ ಎಂದು ಭಾವವಾಯಿತು. ನಮ್ಮ ನೆಮ್ಮದಿಗೆ ಸುಂದರ ತಾಣ ಅದು.. 30 ನಿಮಿಷಗಳ ಕಾಲ ಧ್ಯಾನ ಮಾಡಿ ಹೊರಗೆ ಬಂದಾಗ, ನಮಗೆ ಏನೋ ಒಂದು ಹೊಸ ಅನುಭವ, ಉತ್ಸಾಹ, ಚೈತನ್ಯ ತುಂಬಿ ಮನಸ್ಸು ನಿರಾಳವಾದಂತಾಯಿತು. ಧ್ಯಾನ ಮಾಡುವದರಿಂದ ಶಾಂತಿ, ನೆಮ್ಮದಿ ನೆಲಸಿ ಮನಸ್ಸು ಹಗುರಾಗುವದರ ಜೊತೆಗೆ ಅದ್ಬುತ ಶಕ್ತಿಯ ಅರಿವಾಗುತ್ತದೆ, ಜೀವನದಲ್ಲಿ ನವಚೈತನ್ಯ ಮೂಡುತ್ತದೆ. ಯೌವ್ವನಾವಧಿ, ಜ್ಞಾಪಕ ಶಕ್ತಿ ಅಧಿಕವಾಗುತ್ತದೆ. ಮೆದುಳು ತೀಕ್ಷ್ಣಗೊಳ್ಳುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಧ್ಯಾನ ಮಾಡಿ ಶಾಂತ ಚಿತ್ತದಿಂದ ಜೀವನ ಸಾಗಿಸಬಹುದಾಗಿದೆ.



-ಅಮರೇಶ ನಾಯಕ ಜಾಲಹಳ್ಳಿ
Cell-9945268059

No comments:

Post a Comment