Friday, 30 December 2011

Dreams (Published)



ಕನಸು ಕನಸಾಗಿ ಉಳಿಯದಿರಲಿ..

 ನಾ ವು ಏನಾದರೊಂದನ್ನು ಸಾದಿಸಬೇಕಾದರೆ ಬರೀ ಕನಸು ಕಾಣುತ್ತಾ ಕುಳಿತರೆ ಸಾಧ್ಯವಾಗುವದಿಲ್ಲ, ಕಂಡ ಕನಸನ್ನು ನನಸು ಮಾಡಿಕೊಳ್ಳುವ ಬಗ್ಗೆ ವಿಚಾರ ಮಾಡುತ್ತಾ, ಅದೇ ಪ್ರಕಾರ ಕಾರ್ಯ ಮಾಡುತ್ತಾ  ಬರಬೇಕಾಗುತ್ತದೆ. ಕಾರ್ಯ ಪ್ರವೃತ್ತರಾದರೆ ಅರ್ಧದಷ್ಟು ಕೆಲಸ ಮುಗಿದಂತೆಯೇ, ಆರಂಭದಲ್ಲಿ ಉತ್ಸಾಹ ತೋರಿ ಬರು ಬರುತ್ತಾ ಉತ್ಸಾಹ ಕಡಿಮೆಯಾದರೆ... ಕಾರ್ಯವು ಅಪೂರ್ಣವಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಒಳ್ಳೆಯ ಆಲೋಚನೆ, ಕನಸು ಬಂದೇ ಬರುತ್ತದೆ, ತಕ್ಷಣ ಅದನ್ನು ಮರೆತು ಹೋಗದಂತೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವದು ಉತ್ತಮ, ಆ ಕನಸು ನನಸಾಗುವ, ಆಲೋಚನೆ ಈಡೇರುವ ಕಾಲ ಬರಬಹುದು, ಅದನ್ನು ನೀವೇ ಮಾಡಬೇಕು, ಅದೊಂದು ಕನಸು ಎಂದು ಸುಮ್ಮನಿದ್ದರೆ ಜೀವನದಲ್ಲಿ ಯಾವುದನ್ನು ಸಾಧಿಸಲು ಸಾಧ್ಯವಾಗುದಿಲ್ಲ.

 ಕನಸಿನ ಬಗ್ಗೆ ಮಹಾನ್ ವಿದ್ವಾಂಸರು, ತತ್ವಜ್ಞಾನಿಗಳು ಈ ರೀತಿ ಹೇಳಿದ್ದಾರೆ. ನಾವು ಕಾಣುವ ಕನಸು ಕನಸಾಗಿ ಉಳಿಯಬಾರದು, ಕನಸನ್ನು ನನಸು ಮಾಡುವವರು ನಾವೇ ಆಗಬೇಕು...   ಮಲಗಿದ್ದಾಗ ಕಾಣುವ ಕನಸು ಕನಸಲ್ಲ, ಯಾವ ಕನಸು ಮಲಗಲು ಬಿಡುವದಿಲ್ಲವೋ ಅದು ಕನಸು, ನಾವು ಕಂಡ ಕನಸು ನನಸಾಗುವ ತನಕ ಪ್ರಯತ್ನ ಮಾಡುವದಷ್ಟೇ ನಮ್ಮ ಕೆಲಸ. ಸಾಧನೆಯತ್ತ ಸಾಗಬೇಕಾದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ಮಾಡಬೇಕು, ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ, ಮನುಷ್ಯನ ಆಲೋಚನೆಗಳೇ, ದೇಶವನ್ನು ಆಳುತ್ತವೆ ಎನ್ನುವದು ಸತ್ಯ.

ಮನುಷ್ಯನಿಗೆ ಕನಸು ಬೀಳುವದು ಸಾಮಾನ್ಯ, ಆ ಕನಸುಗಳೇ ಅವನ ಅವನ ಜೀವನದ ಹಾದಿಯನ್ನು ಬದಲಾಯಿಸಬಲ್ಲವು, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ದಿಟ್ಟ ನಿಧಾರ ಕೈಗೊಳ್ಳಬೇಕು, ನಾವು ಯಾವ ಬೀಜ ಬಿತ್ತುತ್ತೇವೋ ಅದಕ್ಕೆ ಸಂಬಂಧಪಟ್ಟ ಸಸಿ ಮಾತ್ರ ಮೊಳಕೆಯೊಡೆಯುತ್ತದೆ, ಹಾಗೆಯೇ ನಾವು ಏನನ್ನು ಆಲೋಚಿಸುತ್ತೇವೆಯೋ ಫಲ ಕೂಡ ಹಾಗೆ ಇರುತ್ತದೆ. ನಕಾರಾತ್ಮಕವಾಗಿ ಆಲೋಚಿಸಿದರೆ ಫಲಿತಾಂಶವು ನಕಾರಾತ್ಮಕವಾಗಿಯೇ ಇರುತ್ತದೆ, 'ನಾನು ಮಾಡಬಲ್ಲೆ, ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಮೂಡಿದರೆ ... ಬಾಲ್ಯದಿಂದಲೂ ನಮ್ಮ ಮೆದುಳಿನಲ್ಲಿ ವಿವಿಧ ರೂಪಗಳಲ್ಲಿ ನಿಕ್ಷಿಪ್ತವಾಗಿರುವ ಶಕ್ತಿಯ ವಿಕಾಸಗೊಂಡು , ಹೊರಹೊಮ್ಮಿ ನಮ್ಮನ್ನು ಕಾಯರ್ೋನ್ಮುಖರನ್ನಾಗಿ ಮಾಡುತ್ತದೆ. ಸಕಾರಾತ್ಮಕ ಆಲೋಚನೆಗಳೇ ಗೆಲುವಿನ ರಹಸ್ಯಗಳೆಂದು ಹೇಳಬಹುದು.

 ಒಬ್ಬ ಬಡತನ ಕುಟುಂಬದ ವ್ಯಕ್ತಿಗೆ ವಿಜ್ಞಾನ ಶಾಸ್ತ್ರದ ಅಧ್ಯಯನ ಮಾಡುವ ಕೋರಿಕೆ ತೀವ್ರವಾಗಿತ್ತು. ಆ ದಿನಗಳಲ್ಲಿ ವಿಜ್ಞಾನ ಓದುವದೆಂದರೆ, ನವಾಬರ ಸಂತಾನಕ್ಕೆ ಸೀಮಿತವಾಗಿತ್ತು, ಆದರೆ ಆತನಲ್ಲಿ ಆಸೆ ಸಾಯಲಿಲ್ಲ, ತಾನೊಬ್ಬ ಉನ್ನತ ವಿಜ್ಞಾನಿಯಾಗಬೇಕೆಂಬ ಆಸೆ ಹತ್ತಿಕ್ಕಲಿಲ್ಲ, ಆ ಅಭಿಲಾಷೆಯಿಂದ ತನ್ನ ಮನಸ್ಸಿನ ತುಂಬ ಅದೇ ಆಲೋಚನೆಗಳನ್ನು ತುಂಬಿಕೊಂಡ ಹಠಾತ್ತನೆ ಆತನಿಗೊಂದು ಆಲೋಚನೆ ಹೊಳೆಯಿತು, ದೊಡ್ಡ ವಿಜ್ಞಾನಿ ಎಂದು ಹೆಸರು ಪಡೆದಿದ್ದ ಹ್ಯಾಂಘ್ರೀ ಡೇವಿಗೆ ನೇರವಾಗಿ ಕಾಗದ ಬರೆದ, ಆ ಪತ್ರದಲ್ಲಿ ತನ್ನ ವ್ಯಥೆಯನ್ನು ವಿವರಿಸಿ, ತನ್ನ ಕನಸು ನನಸಾಗಿಸಿಕೊಳ್ಳುವ ಮಾರ್ಗ ಏನಾದರೂ ಇದ್ದರೆ ಹೇಳಿ ಪುಣ್ಯ ಕಟ್ಟಿಕೊಳ್ಳುವಂತೆ ಪ್ರಾಥಿಸಿದ, ಡೇವಿ ಆ ಪತ್ರವನ್ನು ಓದಿ ಪ್ರತಿಕ್ರಿಯಿಸಿದರು, ಆತನಿಗೆ ಸಂದರ್ಶನಕ್ಕೆ ಬರುವಂತೆ ಆಹ್ವಾನಿಸಿದರು, ಸಂದರ್ಶನದಲ್ಲಿ ಆತನ ಜಿಜ್ಞಾಸೆಯನ್ನು ಗಮನಿಸಿದ ಡೇವಿ, ಆತನನ್ನು ತನ್ನ ಸಹಾಯಕನಾಗಿ ನೇಮಿಸಿಕೊಂಡ, ಅಲ್ಲಿ ಶಿಕ್ಷಣ ಯಶಸ್ವಿಯಾಗಿ ಸಾಗಿತು, ತಾನು ಪ್ರೀತಿಸಿದ ವಿಜ್ಞಾನ ಶಾಸ್ತ್ರದ ಅಧ್ಯಯನಕ್ಕೆ ಶ್ರಮಿಸಿದ, ತನ್ನ ಜೀವನವನ್ನು ಮುಡುಪಾಗಿರಿಸಿದ, ಮುಂದೆ ಶ್ರೇಷ್ಠ ವಿಜ್ಞಾನಿಯಾದ, ಆ ವ್ಯಕ್ತಿಯೇ ಮೈಖೆಲ್ ಫ್ಯಾರಡೇ, ಫ್ಯಾರಡೇಗೆ ಏನಾದರೂ ಸಕಾರಾತ್ಮಕ ದೃಷ್ಟಿ ಇಲ್ಲದೆ ಹೋಗಿದ್ದರೆ ವಿದ್ಯುತ್ ಸಂಶೋಧನಾ ರಂಗದಲ್ಲಿ ಬೆಳಕು ಬೀರುತ್ತಲೇ ಇರಲಿಲ್ಲ.

 ದಿನವೆಲ್ಲಾ ಮನುಷ್ಯ ಏನೆಲ್ಲಾ ಕುರಿತು ಆಲೋಚಿಸುತ್ತಾನೋ ಅದೇ ಆತನ ವ್ಯಕ್ತಿತ್ವಕ್ಕೆ ನಿದರ್ಶನವಾಗಿ ಬದಲಾವಣೆ ಹೊಂದುತ್ತದೆ. ವಿಜೇತರಾಗಿ ಜೀವಿಸಲು ನಿಮಗೆ ಅಗತ್ಯವಾದ ಆ ಸ್ಪೂತರ್ಿ-ಪ್ರೋತ್ಸಾಹ ಸಮೃದ್ದವಾಗಿ ಲಭಿಸಿದಾಗಲೇ ಕನಸನ್ನು ನನಸಾಗಿಸಿಕೊಳ್ಳುತ್ತಾ, ಅಸಾಧ್ಯವೆನಿಸಿದ್ದನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.

-ಅಮರೇಶ ನಾಯಕ ಜಾಲಹಳ್ಳಿ
-9945268059

No comments:

Post a Comment