Friday, 30 December 2011

Pratibhe


ಪ್ರತಿಭೆ ಗುರುತಿಸಿ ಸ್ಪೂತರ್ಿಯಾಗಿ..

 ಪ್ರತಿಯೊಬ್ಬರೂ ಜೀವನದಲ್ಲಿ ಇನ್ನೊಬ್ಬರಿಂದ ಸಹಾಯ ಪಡೆಯಬೇಕಾದ ಸ್ಥಿತಿ ಒದಗಬಹುದು, ಯಾವ ಮನುಷ್ಯನನ್ನು ಕೀಳಾಗಿ ಕಾಣುವ, ಉದಾಸೀನ ತೋರುವ ಮನೋಭಾವ ಇರಬಾರದು. ಅವರು ಹೇಗೆ ಇರಲಿ, ಆತ್ಮೀಯತೆ, ಮಾನವೀಯತೆಯಿಂದ ಕಾಣಬೇಕಾದುದು ಮನುಷ್ಯನ ಧರ್ಮ. ಯಾರೇ ಆದರೂ ಇನ್ನೊಬ್ಬರಿಗೆ ಸಹಾಯ ಮಾಡುವಂತಹ ಗುಣ ಹೊಂದಬೇಕು. ಸಹಾಯ ಮಾಡಲು ಮುಂದಾಗಬೇಕು, ಆಗ ಮಾತ್ರ ಮತ್ತೊಬ್ಬರು ನಮಗೆ ನೆರವಾಗಲು ಬಯಸುತ್ತಾರೆ. ನಮಗೆ ಆ ಇಚ್ಚೆ ಇಲ್ಲದಿದ್ದರೆ, ಇನ್ನೊಬ್ಬರು ಬಂದು ಸಹಾಯ ಮಾಡಲು ಹೇಗೆ ಸಾಧ್ಯ? ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕಾಗುತ್ತದೆ, ಪ್ರತಿಫಲಾಫೇಕ್ಷೆ ಸಲ್ಲದು, ಇದೊಂದು ಹೆಲ್ಪಿಂಗ್ ನೇಚರ್, ಈ ಗುಣವನ್ನು ಎಲ್ಲರೂ ಬೆಳೆಸಿಕೊಂಡರೆ ಸಮಯ, ಸಂದರ್ಭ ಬಂದಾಗ, ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವವರು ಇರುತ್ತಾರೆ.

ಪ್ರತಿಯೊಬ್ಬರನ್ನು ಅವಲಭಿಸಿ ಜೀವಿಸುವದರಿಂದ ಜವಾನನಿಂದ, ದಿವಾನರತನಕವೂ ಸಹಾಯ ಕೇಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಆದ್ದರಿಂದ ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವದು ಸರಿಯಲ್ಲ, ಯಾವ ಹುತ್ತಿನಲ್ಲಿ ಯಾವ ಹಾವು ಇರುತ್ತದೆಂದು ಯಾರು ಬಲ್ಲರು. ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರತಿಭೆ ಇರುತ್ತದೆ, ಆ ಪ್ರತಿಭೆಯಿಂದ ಆತ ಬೆಳೆಯಲು ಸಹಾಯ ಮಡಬೇಕು. ಪ್ರತಿಭೆ ಗುರುತಿಸಿ ಪರಿಚಯಿಸುವದು, ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗು ನೀಡಿ. ಆತನ ಜೀವನದಲ್ಲಿ ಆಶಾಕಿರಣ ಬೆಳಗಿಸಿದಂತಾಗುತ್ತದೆ, ನಮ್ಮ ಬೆನ್ನನ್ನು ನಾವೇ ನೋಡಿಕೊಳ್ಳುವ ಸಾಧ್ಯತೆ ಇಲ್ಲ, ಇನ್ನೊಬ್ಬರು ಹೇಳಿದಾಗ ನಮ್ಮ ಬೆನ್ನ ಮೇಲಿರುವ ಕಲೆಗಳು ತಿಳಿಯುವಂತೆ, ನಮ್ಮಲ್ಲಿ ಹುದುಗಿರುವ ಕಲೆ ನಮಗೆ ಗೊತ್ತಾಗುವದಿಲ್ಲ, ಅದು ಬೇರೆಯವರಿಗೆ ತಿಳಿದಿರುತ್ತದೆ. ಆ ಕಲೆಯನ್ನು ಗುರುತಿಸಿ ಪರಿಚಯಿಸಬೇಕು, ಅದಕ್ಕೆ ಪ್ರೋತ್ಸಾಹ ನೀಡಬೇಕು. ಇದು ಅ ವ್ಯಕ್ತಿ ಕ್ರಿಯಶೀಲನಾಗಲು ಕಾರಣವಾಗುತ್ತದೆ.


ಸಾಧನೆ ಮಾಡಬೇಕೆಂದು ಛಲ ಇರುವವರಿಗೆ ಸ್ಪೂತರ್ಿ ಬೇಕಾಗುತ್ತದೆ, ಸ್ಪೂತರ್ಿಯನ್ನು ತುಂಬುವ ವ್ಯಕ್ತಿಗಳಾಗಿ, ನಿಮಗೂ ಇನ್ನೊಬ್ಬರು ಸ್ಪೂತಿಯ ಸೆಲೆಯಾಗಿ ನಿಲ್ಲಬಲ್ಲರು. ಇನ್ನೊಬ್ಬರ ಯಶಸ್ಸಿಗೆ ಕಾರಣರಾಗಿ ಅದರಿಂದ ಸಿಗುವ ಸಂತೋಷದ ಅನುಭವ ಪಡೆಯಿರಿ, ಇನ್ನೊಬ್ಬರ ಸಂತೋಷಕ್ಕೆ ಕಾರಣ ನೀವಾಗಿ, ಆದರೆ ಆ ಸಂತೋಷದಲ್ಲಿ ಭಾಗಿಯಾಗಬೇಡಿ, ಇನ್ನೊಬ್ಬರ ದು:ಖದಲ್ಲಿ ಭಾಗಿಯಾಗಿ, ಆದರೆ ಆ ದು:ಖಕ್ಕೆ ಕಾರಣ ನೀವಾಗಬೇಡಿ. ದೀಪವು ತನ್ನನ್ನು ಸುಟ್ಟುಕೊಂಡು ಎಲ್ಲರಿಗೂ ಬೆಳಕು ನೀಡುತ್ತದೆ, ಆದ್ದರಿಂದ ಆ ದೀಪಕ್ಕೆ ತುಂಬಾ ಮಹತ್ವ ವಿದೆ, ಅದು ಬೆಳಕು ಚೆಲ್ಲುವದರಿಂದ ಕತ್ತಲೆ ನಿವಾರಣೆಯಾಗುತ್ತದೆ, ಇನ್ನೊಬ್ಬರ ಬದುಕಿಗೆ ಬೆಳಕು ನೀಡುವ ಮಾರ್ಗದರ್ಶಕರಾಗಿ ಹೊರಹೊಮ್ಮಿರಿ.

ಪ್ರತಿಯೊಬ್ಬರೂ ವಿಶಿಷ್ಟ ಶಕ್ತಿ, ಸಾಮಥ್ರ್ಯಗಳನ್ನು ಹೊಂದಿರುತ್ತಾರೆ, ಅವರ ಆ ವಿಶಿಷ್ಠ ಗುಣಗಳ ಲಾಭ ಇನ್ನೊಬ್ಬರು ಪಡೆಯಬೇಕು, ಅದಕ್ಕೆ ಪ್ರತಿಯೊಬ್ಬರ ಸಹಕಾರ, ಸಹಾನುಭೂತಿಗಳು ಅಗತ್ಯ, ಸಮಾಜದ ಒಳಿತಿಗಾಗಿ ಅದರ ಬಳಕೆ ಆಗಬೇಕು, ಸಮಾಜಕ್ಕೆ ಅವರ ವಿಶಿಷ್ಟ ಕೊಡುಗೆ ದೊರೆಯಬೆಕಾದರೆ ಅವರೂ ಸಹ ಆ ನಿಟ್ಟಿನಲ್ಲಿ ಕಾರ್ಯ ಮಾಡಿ ತೋರಿಸುವ ಸಾಮಥ್ರ್ಯ ಹೊಂದಬೇಕಾಗುತ್ತದೆ. ಇರುವೆಗಳ ಸಂಘ ಜೀವನವು ಮನುಷ್ಯನಿಗೆ ಒಂದು ನೀತಿ ಕಥೆಯನ್ನೇ ತಿಳಿಸುತ್ತದೆ. ನಾವು ನಮ್ಮವರು ಎನ್ನುವ ಭಾವನೆಯಿಂದ ಕೂಡಿ ಬಾಳುವದು ವಿವಿಧತೆಯಲ್ಲಿ ಏಕತೆ ತೋರಿಸುತ್ತದೆ.

ಇಂದು ಮತೊಬ್ಬರನ್ನು ನೋಯಿಸಿ, ಹಿಂಸಿಸಿ ಬದುಕುವವರನ್ನು ಕಾಣುತ್ತೇವೆ, ಅದು ಮಾನವೀಯ ಮೌಲ್ಯಗಳಿಗೆ ಕುಂದು ತರುವಂತಹ ಕೆಲಸ. ಅಮಾನವೀಯ ಲಕ್ಷಣ. ಅಂತಹ ವ್ಯಕ್ತಿಗಳು ಇವತ್ತು ಇನ್ನೊಬ್ಬರನ್ನು ನೋಯಿಸುವಂಥಾ ಕೆಲಸವನ್ನು ಮಾಡಿಲ್ಲ, ಇವತ್ತು ನನ್ನ ಆತ್ಮಸಾಕ್ಷಿಗೆ ವಿರುದ್ದವಾದ ನಿಧರ್ಾರಕ್ಕೆ ಬದ್ದನಾಗಲಿಲ್ಲ, ಇವತ್ತು ಕೈಲಾದಷ್ಟು ಪರೋಪಕಾರ ಮಾಡಿದ್ದೀನಿ ಎಂದು ತಮಗೆ ತಾವೇ ಹೇಳಿಕೊಂಡು ಮಾನವನಾಗಿ ಬಾಳಲು ಪ್ರಯತ್ನಪಡಬೇಕು, ಇದು ನಾಳೆಗೆ ಬೇಕಾದ ಮನೋಸ್ಥೈರ್ಯ, ಉತ್ಸಾಹವನ್ನು ಕೊಡುತ್ತದೆ, ಜೀವನದಲ್ಲಿ ಹುಮ್ಮಸ್ಸಿನಿಂದ ಬದುಕಲು ಸಹಾಯವಾಗುತ್ತದೆ.

ಮಹಾತ್ಮರು ಹೇಳಿದಂತೆ ಜೀವನ ಅಲ್ಪಕಾಲದ್ದು, ಅದು ಅರ್ಥಪೂರ್ಣವಾಗುವಂತೆ ಬದುಕುವದು ಒಳಿತು, ಕಷ್ಟಗಳು ನಮ್ಮಲ್ಲಿರುವ ಧೈರ್ಯವನ್ನು ಪರೀಕ್ಷೆಗೆ ಒಡ್ಡುತ್ತವೆ ಎನ್ನಬಹುದು, ಧೈರ್ಯ ಎಂಬುದು ಭಯದ ಮೇಲೆ ಸವಾರಿ ಮಾಡುವ ಯಜಮಾನನಿದ್ದಂತೆ. ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎನ್ನುವಂತೆ ಜೀವನವು ಸ್ವಾರಸ್ಯಮಯವಾಗಿದೆ. ಜೀವನದಲ್ಲಿ ಸುಖವೂ ಬರುತ್ತದೆ, ಕಷ್ಟವೂ ಬರುತ್ತದೆ ಯಾವುದೂ ಸ್ಥಿರವಲ್ಲ, ಕಾಲಚಕ್ರದಂತೆ ತಿರುಗುತ್ತಿರುತ್ತದೆ, ಕಾಲಚಕ್ರದಲ್ಲಿ ಬಿದ್ದು ಒದ್ದಾಡುವದಕ್ಕಿಂತ ಪರೋಪಕಾರಿಯಾಗಿ ಜೀವಿಸಬೇಕು. ಅಲ್ಪ ಕಾಲದ ಜೀವನದಲ್ಲಿ ಅಪಕಾರಿಗಳಾಗುವದಕ್ಕಿಂತ ಉಪಕಾರಿಗಳಾಗುವದು ಲೇಸು. ಇದನ್ನು ಅರಿತು ಬಾಳುವದು ಇನ್ನೂ ಲೆಸು.
ಜೀವನದಲ್ಲಿ ಬರುವಂತಹ ಅವಕಾಶಗಳನ್ನು ಕಳೆದುಕೊಳ್ಳದೆ, ಅದನ್ನು ಸದುಪಯೋಗ ಮಾಡಿಕೊಂಡು ನೀವಿಟ್ಟುಕೊಂಡ ಗುರಿಗಳನ್ನು ಸಾಧಿಸುವತ್ತ ನಿಮ್ಮ ವಿಚಾರ ಲಹರಿ ಹರಿದು ಬರಲಿ, ಪ್ರತಿಭೆಗಳನ್ನು ಗುರುತಿಸಿ ಬೆಳೆಸುವದು ಸುಲಭದ ಮಾತಲ್ಲ ಅದೊಂದು ಕಲೆ ಎನ್ನಬಹುದು. 





-ಅಮರೇಶ ನಾಯಕ ಜಾಲಹಳ್ಳಿ
Cell-9945268059.

No comments:

Post a Comment