Wednesday, 28 December 2011

Knowledge is Power


ಬಾಳು ಬೆಳಗಲು ಜ್ಞಾನದ ಬೆಳಕು...

 ಜ್ಞಾನದಿಂದಲಿ ಇಹವು | ಜ್ಞಾನದಿಂದಲಿ ಪರವು |
ಜ್ಞಾನವಿಲ್ಲದೆಲೆ ಸಕಲವೂ ತನಗಿದ್ದು |
ಹಾನಿ ಕಾಣಯ್ಯ ಸರ್ವಜ್ಞ ||

 ಜ್ಞಾನದಿಂದಲೇ ಈ ಲೋಕದಲ್ಲಿ ಸುಖ ಹಾಗೂ ಪರಲೋಕದಲ್ಲಿ ಮುಕ್ತಿ ದೊರೆಯುವದು, ಜ್ಞಾನವೇ ಇಲ್ಲದಿದ್ದರೆ ತನಗೆ ಸಿಕ್ಕಿರುವ ಸಕಲ ವಸ್ತುಗಳೂ ವ್ಯರ್ಥ, ಎನ್ನುವದು ಸರ್ವಜ್ಞ ನುಡಿಯ ಒಳಾರ್ಥವಾಗಿದೆ. ಜೀವನದಲ್ಲಿ ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವದು ಜ್ಞಾನ, ಇದು ಇದ್ದಾಗ ಮಾತ್ರ ಸಮಾಜದಲ್ಲಿ ತಲೆಯೆತ್ತಿ ಬದುಕಲು ಸಾಧ್ಯವಾದೀತು. ಜ್ಞಾನವು ಸಿಗುವ ವಸ್ತುವಲ್ಲ, ಅದನ್ನು ಪಡೆದುಕೊಳ್ಳಬೇಕಾಗಿದೆ, ಈ ಜ್ಞಾನ ಎನ್ನುವದು ಅಳಿಸಲಾಗದಂತಹ ವಿದ್ಯೆ, ಎಷ್ಟು ಸಲ ಖಚರ್ು ಮಾಡಿದರೂ ಹೆಚ್ಚಾಗುತ್ತದೆ, ಹೊರತು ಕಡಿಮೆಯಾಗುವದಿಲ್ಲ. ಜ್ಞಾನದ ಮಹಿಮೆಯ ಬಗ್ಗೆ ಬದುಕನ್ನು ಅರ್ಥ ಮಾಡಿಕೊಂಡವರು, ಬದುಕಿನ ಕವಲು ದಾರಿಗಳಲ್ಲಿ ಹಲವು ಮಗ್ಗುಲುಗಳನ್ನು ಕಂಡವರು, ಬದುಕು, ಬಾಳಿನ ಸ್ವಾರಸ್ಯವನ್ನು ಅರಿತವರು. ಇದರ ಕುರಿತು ಹಲವಾರು ಉಪನ್ಯಾಸ, ಉಪದೇಶಗಳನ್ನು ನೀಡಿದ್ದಾರೆ. ವೇದಗಳು, ಉಪನಿಷತ್ತುಗಳು ಜ್ಞಾನದ ಹಲವು ಮಾರ್ಗಗಳನ್ನು ತೋರಿಸಿ ಕೊಟ್ಟಿವೆ.

 ಇಂದು ಬೆಳೆದು ನಿಂತಿರುವ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದರ ಬಗ್ಗೆ ಕನಿಷ್ಟ ಜ್ಞಾನ ಪಡೆಯುವದು, ಇಂದಿನ ಅತಿವೇಗದ ಜೀವನದಲ್ಲಿ ಎಲ್ಲವನ್ನು ತಿಳಿದುಕೊಂಡು ಬದುಕುವದು ಅವಶ್ಯವಾಗಿದೆ. ಪ್ರತಿಯೊಬ್ಬರೂ ಮುಂದೆ ಬರಬೇಕೆಂಬ ಆಸೆಯಿಂದ ತಮ್ಮ ಜೀವನದಲ್ಲಿ ಏನೆಲ್ಲಾ ಮಾಡಲು ಹೊರಡುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ತಮಗೆ ಏನೆಲ್ಲಾ ಅವಶ್ಯಕತೆಗಳು ಬೇಕು, ಮನುಷ್ಯ ಅದನ್ನು ಸೃಷ್ಟಿ ಮಾಡುವಂತಹ ಶಕ್ತಿ ಪಡೆದುಕೊಂಡಿದ್ದಾನೆ. ಆತನಿಗೆ ಅನುಕೂಲವಾಗುವಂತೆ ಸೋಫಾಸೆಟ್ ಇದೆ, ಡೈನಿಂಗ್ ಸೆಟ್ ಇದೆ, ಹ್ಯಾಂಡ್ ಸೆಟ್ ಇದೆ, ಟಿವಿ ಸೆಟ್ ಇದೆ, ಎಲ್ಲವೂ ಇದ್ದರೂ ಆತನ ಮೈಂಡ್ಸೆಟ್ ಮಾತ್ರ ಅಪ್ಸೆಟ್ ಆಗಿದೆ ಅದಕ್ಕೆ ಬೇಕಾಗಿರುವದು ಮೆಡಿಷನ್ ಅಲ್ಲ, ಮೆಡಿಟೇಶನ್ ಆಗಿದೆ ಎಂದು ಮುನಿಶ್ರೀಗಳು ಹೇಳಿದ್ದಾರೆ. 

ಇಂದು ಎಲ್ಲವೂ ಮಾನವ ನಿಮರ್ಿತ ವಸ್ತುಗಳಾಗಿ ಪರಿಣಮಿಸ ತೊಡಗಿವೆ. ನಿಸರ್ಗ ಸೌಂದರ್ಯವನ್ನು ಕೂಡ ಮನುಷ್ಯ, ಮಾನವ ನಿಮರ್ಿತ ವಸ್ತುವನ್ನಾಗಿ ಹಿಡಿದಿಟ್ಟಿದ್ದಾನೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮನುಷ್ಯ ತನ್ನ ಹಿಡಿತವನ್ನು ಸಾಧಿಸಿಕೊಳ್ಳುತ್ತಿದ್ದಾನೆ, ತನ್ನ ಬುದ್ದಿಮಟ್ಟಕ್ಕೆ ಮೀರಿ ಕೆಲಸ ಮಾಡುತ್ತಿದ್ದಾನೆ, ಇದು ಆತನಲ್ಲಿರುವ ಜ್ಞಾನದ ಶಕ್ತಿಯನ್ನು ತೋರಿಸುತ್ತದೆ. ಜ್ಞಾನ ಸಂಪಾದಿಸಿಕೊಳ್ಳಲು ಎರಡು ಮಾರ್ಗಗಳಿವೆ, ಒಂದು ಕೋಶ ಓದುವದು, ಇನ್ನೊಂದು ದೇಶ ನೋಡುವದು, ಅಕ್ಷರಸ್ಥರಷ್ಟೇ ಜ್ಞಾನ ಸಂಪಾದಿಸಿ ಎಲ್ಲವನ್ನು ಅರಿತವನಾಗುತ್ತಾನೆಂದರೆ ಅದು ತಪ್ಪು, ಓದದೆ ಇರುವಂತಹ ಎಷ್ಟೋ ಜನರು ಇಂದು ಹೆಚ್ಚು ಓದಿದವರಿಗೆ ನೌಕರಿ ನೀಡಿದ್ದಾರೆ. ಎಷ್ಟೋ ಜನರಿಗೆ ತಮ್ಮ ಅಂತ: ಶಕ್ತಿಯ ಅರಿವಿರುವದಿಲ್ಲ. ಅವರು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಏನೆಲ್ಲಾ ಮಾಡುವ ಸಾಧ್ಯತೆಗಳಿವೆ, ತಮ್ಮ ಜ್ಞಾನದ ಲಹರಿಯನ್ನು ಬಳಸಿಕೊಳ್ಳುವ ಪರಿ ಬದಲಾಗಬೇಕು.

ಒಂದು ಕಡೆ ಸರ್ವಜ್ಞ ಹೇಳುತ್ತಾನೆ ನನಗೆ ವಚನಗಳು ಹೇಳಲು ತಿಳಿದಿಲ್ಲ, ಆದರೆ ಜನರೆಲ್ಲಾ ಬಲವಂತವಾಗಿ ಹೇಳು ಎಂದಿದ್ದರಿಂದ ಶಿವನ ದಾಸಾನುದಾಸನಾಗಿ ನನಗೆ ತಿಳಿದಿದ್ದನ್ನು ಹೇಳಿದೆನು, ನಾನು ವಿದ್ಯೆಯ ಗರ್ವದಿಂದ ಸರ್ವಜ್ಞನೆಂದು ಹೇಳಿಕೊಳ್ಳುತ್ತಿಲ್ಲ, ನಾನು ಎಲ್ಲ ವಿದ್ಯಾವಂತರ ಹತ್ತಿರ ಒಂದೊಂದು ಮಾತನ್ನು ಕಲಿತು ವಿದ್ಯೆಯ ಪರ್ವತವೇ ಆದನು. ಆದರೆ ಈತನಿಗಿಂತ ತಿಳಿದವರು ಎಷ್ಟೋ ಜನ ಇದ್ದಾರೆ, ತಮ್ಮ ಬುದ್ದಿವಂತಿಕೆಯನ್ನು ಬಳಸಿರುವದಿಲ್ಲ, ಯಾರೊಬ್ಬರಲ್ಲಿ ವಿದ್ಯೆ ಇರುತ್ತದೆ, ಅವರು ತಾವೇ ಜಾಣರೆಂದು ತಿಳಿದು ಸುಮ್ಮನಿದ್ದರೆ, ಅವರಿಗಿಂತ ದಡ್ಡರು ಬೇರಾರು ಇಲ್ಲ. ಅವರಲ್ಲಿರುವ ಜ್ಞಾನವನ್ನು ಬಳಕೆ ಮಾಡದಿದ್ದರೆ, ಅದಕ್ಕೆ ತುಕ್ಕು ಹಿಡಿದು ಮಂಕು ಕವಿಯುತ್ತದೆ, ಮತ್ತೊಬ್ಬರಿಗೆ ಕಲಿಸಬೇಕು, ಹೇಳಿ ಕೊಡಬೇಕು, ಯಾರಿಗೆ ಕಲಿಯಲು ಉತ್ಸಾಹವಿರುತ್ತದೆಯೋ, ಅಂಥವರು ಕಲಿಸಲು ಯೋಗ್ಯರು, ಕಲಿಕೆ ನಿರಂತರವಾಗಿರಬೇಕು. ಅದು ನಿಂತ ನೀರಲ್ಲ ಹರಿಯುವ ನೀರು.

 ನಾವು ಎಲ್ಲೇ ಹೋದರೂ ಅಲ್ಲಿ ನಮ್ಮ ಮನಸ್ಸು ಬರುವದು, ಅಂದರೆ ಜ್ಞಾನ, ಅದು ಯಾರಿಂದಲೂ ಕದಿಯಲಸಾಧ್ಯವಾದ ವಸ್ತು., ಜ್ಞಾನವನ್ನು ಹಂಚುವದರಿಂದ ತಮ್ಮ ಜ್ಞಾನವು ವೃದ್ದಿಯಾಗುತ್ತದೆ ವಿನ: ಅದು ಕ್ಷೀಣಿಸದು. ಜ್ಞಾನ ಎನ್ನುವದು ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು. ನಿಂತಲ್ಲಿ ನಿಂತರೆ ಆ ನೀರು ಮಲೆತು, ಯಾವುದಕ್ಕೂ ಪ್ರಯೋಜನವಾಗದಂತಾಗುತ್ತದೆ. ಈ ಜಗತ್ತೇ ಒಂದು ವಿಶ್ವವಿದ್ಯಾಲಯ, ನಿಸರ್ಗವೇ ಪಾಠಶಾಲೆ, ಕಲಿಯಲು ಬಂದಿರುವ ನಾವೆಲ್ಲರೂ ವಿದ್ಯಾಥರ್ಿಗಳು, ತಿಳಿದುಕೊಳ್ಳುವ ಜಿಜ್ಞಾಸೆ ಇರಬೇಕು, ತಿಳಿಸುವ ಆಸೆ ಇರಬೇಕು, ಎಲ್ಲವೂ ಜಗತ್ತಿನ ಜ್ಞಾನ, ಎಂದು ಮಹಾಜ್ಞಾನಿಗಳಾದ ಬಿಜಾಪುರದ ಜ್ಞಾನಯೋಗಾಶ್ರಮದ ಶ್ವೇತ ವಸ್ತ್ರಧಾರಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳುತ್ತಾರೆ.  ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಪಸರಿಸಲಿ, ನಿಮ್ಮ ಜೀವನದಲ್ಲಿ ಅಧಿಕ ಜ್ಞಾನ ಗಳಿಸಿಕೊಂಡು ಮಹತ್ತರವಾದುದುದನ್ನು ಸಾಧಿಸಲು ಯತ್ನಿಸಬೇಕು. ಇದರಿಂದ ನಿಮ್ಮ ಬದುಕು ಬಂಗಾರವಾಗಬಲ್ಲದು.


-ಅಮರೇಶ ನಾಯಕ ಜಾಲಹಳ್ಳಿ.
Cell-9945268059.

No comments:

Post a Comment