Tuesday, 27 December 2011

Shradde (Published)

ಬದುಕು ಬಲವಾಗಲು ಶ್ರದ್ಧೆ ಬೇಕು..




ಓ ನನ್ನ ದೀರ ಸುತರೇ |
ನೀವೆಲ್ಲರೂ ಮಹತ್ಕಾರ್ಯವೆಸಗಲು ಜನಿಸಿದವರು
ಇದರಲ್ಲಿ ಶ್ರದ್ದೆ ಇರಲಿ ನಿಮಗೆ |
ನಾಯಿ ಕುನ್ನಿಗಳ ಕೂಗಿಗೆಲ್ಲ ನೀವು ಬೆದರುವದೇ |
ಛೇ | ಎಂದಿಗೂ ಸಲ್ಲ |
ಎಂತಹ ಬರಸಿಡಿಲಿಗೂ ನೀವು ಬೆದರಬೇಕಿಲ್ಲ |
ಪುರುಷ ಸಿಂಹರು ನೀವು
      ಅಮರ ಆತ್ಮರು |
ಸಮಸ್ತ ಪ್ರಕೃತಿ ಶಕ್ತಿಗಳು
    ನಿಮಗೆ ಸೇವಕರು |
ನಿಮ್ಮಲ್ಲಿ ನಿಮಗೆ ಶ್ರದ್ದೆಯಿರರಲಿ |

ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕೆಂದು ಕನಸು ಕಟ್ಟಿರುತ್ತಾರೆ, ಕೆಲವರು ಸಾಧಿಸಿ ತೋರಿಸಿದರೆ ಇನ್ನು ಕೆಲವರು ತಮ್ಮ ವೈಫಲ್ಯದಿಂದ ಹಿಂದೆ ಉಳಿಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗಳಿಗೂ ಪ್ರತಿಸ್ಪದರ್ಿಗಳಿರುತ್ತಾರೆ, ಅಂಜದೆ ದಿಟ್ಟ ಹೆಜ್ಜೆಯಿಂದ ಪೈಪೋಟಿಗಿಳಿದು ಸ್ಪಧರ್ೆ ಮಾಡಿ ಗೆಲ್ಲುವದೇ ನಿಜವಾದ ಗೆಲುವು. ವ್ಯಕ್ತಿ-ವ್ಯಕ್ತಿಗಳಲ್ಲಿನ ವ್ಯತ್ಯಾಸಕ್ಕೆ ಅವರವರ ಶ್ರದ್ದೆಯ ಗುಣಮಟ್ಟವೇ ಕಾರಣ, ಒಬ್ಬನನ್ನು ಬಲಾಡ್ಯನನ್ನಾಗಿ ಮಾಡಿದರೆ, ಮತ್ತೊಬ್ಬನನ್ನು ಧೀನನನ್ನಾಗಿ ಮಾಡುತ್ತದೆ. ಏನನ್ನಾದರೂ ಸಾಧಿಸಬೇಕಾದರೆ ಮೊದಲು ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕೆಂದು ವಿವೇಕಾನಂದರು ಯುವಕರಿಗೆ ಸಾರಿ ಸಾರಿ ಹೇಳಿದ್ದು ಇಲ್ಲಿ ಸ್ಮರಿಸಬೇಕಾಗುತ್ತದೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯವಿದೆ. ಪ್ರತಿಯೊಬ್ಬರ ಜೀವನದಲ್ಲೂ ಇತಿಹಾಸವಿರುತ್ತದೆ. ನಿಮ್ಮ ಉಜ್ವಲ ಭವಷ್ಯಕ್ಕಾಗಿ ನೀವು ಸಾಧಿಸಬೇಕಾಗಿರುವದು ಅಪಾರವಾಗಿದೆ, ಸಾಧಿಸಲು ನಿಮ್ಮಲ್ಲಿ ಸಕಲ ಶಕ್ತಿಯು ಅಡಗಿದೆ, ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವದಕ್ಕಾಗಿ, ಇದರಿಂದ ನಿಮ್ಮ ಭವಿಷ್ಯ ಭವ್ಯವಾಗುವದು ಎಂದು ಶರಣರು, ಸಂತರು, ಜ್ಞಾನಿ ಜೀವಿಗಳು ಯುವಕರಿಗೆ ಜ್ಞಾನವಾಣಿಗಳಿಂದ, ನುಡಿಮುತ್ತುಗಳಿಂದ ಜೀವನದ ಅನುಭವಗಳ ಬಗ್ಗೆ ತಿಳಿಸಿ ಹೇಳಿದ್ದಾರೆ, ಈಗಲೂ ಹೇಳುತ್ತಿದ್ದಾರೆ.

ನಾವು ಯಾವುದೇ ಕೆಲಸ ಮಾಡಬೇಕೆಂದರೂ ಶ್ರದ್ದೆಯಿಂದ ಮಾಡಬೇಕಾಗುತ್ತದೆ. ನಂಬಿಕೆ, ವಿಶ್ವಾಸವಿಟ್ಟು ಕೆಲಸ ಮಾಡಬೇಕು, ನಮ್ಮಲ್ಲಿ ನಾವು ನಂಬಿಕೆ, ವಿಶ್ವಾಸ ಬೆಳೆಸಿಕೊಂಡು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೆಕು. ಒಂದು ಚಿಕ್ಕ ಕೆಲಸವೆಂದರೂ ಉದಾಸೀನ ತೋರದೆ ಅದನ್ನು ಚೊಕ್ಕಟವಾಗಿ ಮಾಡಿ ಮುಗಿಸಬೇಕಾಗುತ್ತದೆ, ಇದರಿಂದ ಉತ್ಸಾಹ ಹೆಚ್ಚಾಗಿ, ಆತ್ಮವಿಶ್ವಾಸ ಬೆಳೆಯುತ್ತದೆ, ಆತ್ಮವಿಶ್ವಾಸ ಇಮ್ಮಡಿಗೊಂಡು, ನಾನೇನು ಬೇಕಾದರೂ ಸಾಧಿಸಬಲ್ಲೆ | ಎನ್ನುವ ಛಲ ಮನಸ್ಸಿನಲ್ಲಿ ಬೇರೂರಲು ಸಾಧ್ಯವಾಗುತ್ತದೆ. ಮಹಾತ್ಮರಾಗಿ ಬೆಳೆದ ಸಕಲ ಸ್ತ್ರೀ-ಪುರುಷರ ಜೀವನದಲ್ಲೂ ಅವರಿಗಿದ್ದ ಅತಿದೊಡ್ಡ ಪ್ರೇರಕ ಶಕ್ತಿಯೆಂದರೆ ಅವರಲ್ಲಿ, ಅವರಿಗಿದ್ದ ಶ್ರದ್ದೆ ಎಂದು ಹೇಳಬಹುದು.

ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸ ಇಲ್ಲದಿರುವದೇ ಅವರ ಹಿನ್ನಡೆಗೆ ಕಾರಣವಾಗಿದೆ. ಇಂದಿನ ಯುವಕರೇ, ನಾಡಿನ ಪ್ರಜೆಗಳು, ಅವರು ಮಾತ್ರ ನಿರುತ್ಸಾಹಿಗಳಾಗಬಾರದು, ಅವರಲ್ಲಿ ಉತ್ಸಾಹ ತುಂಬಿ ಪುಟಿದೇಳಬೇಕು. ದೆಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಬಗ್ಗೆ ಅಭಿಮಾನ, ಗೌರವ ಬೆಳೆಸಿಕೊಳ್ಳಬೇಕು, ದೇಶಭಕ್ತಿ ಇರಬೇಕು. ದೇವರಲ್ಲಿ ನಂಬಿಕೆ ಇಲ್ಲದವ ನಾಸ್ತಿಕ ಎಂದಿತು ಪುರಾತನ ಧರ್ಮ, ಆದರೆ ತನ್ನಲ್ಲಿ ತನಗೆ ನಂಬಿಕೆಯಿಲ್ಲದವನೇ ನಾಸ್ತಿಕ ಎನ್ನುತ್ತದೆ ನೂತನ ಧರ್ಮ. ಇದನ್ನು ಅರಿತುಕೊಂಡು ಮುನ್ನಡೆಯಬೇಕಾದುದು ಇಂದಿನ ಯುವಕರ ಧರ್ಮ. 

ನಮ್ಮಲ್ಲಿ ಹುದುಗಿರುವ ಶಕ್ತಿಯನ್ನು ಪ್ರಚುರಪಡಿಸಿ ಸಾಧಿಸಬೇಕಾದುದು ಬಹಳಷ್ಟು ಇದೆ. ಏಳಿ! ಎದ್ದೇಳಿ!! ಆತ್ಮ ಬಲದಿಂದ ಮುನ್ನುಗ್ಗಿ ಕಾರ್ಯಸಾಧಿಸಿ. ಎಂದು ಸಾರುತ್ತಿರುವ ಮಹಾನ್ ವ್ಯಕ್ತಿಗಳ ವಿವೇಕವಾಣಿಗೆ ಇಂದಿನ ಯುವಕರು ಕಿವಿಗೊಟ್ಟು ಅವರ ಮಾತನ್ನು ಆಲಿಸಬೇಕಾಗಿದೆ. ನಮ್ಮನ್ನು ನಾವು ಸಂಪೂರ್ಣ ಅರ್ಥಮಾಡಿಕೊಳ್ಳುವವರೆಗೂ ನಾವೇನೆಂಬುದು ತಿಳಿಯುವದಿಲ್ಲ. ನಾವು ಮಾಡುವಂತಹ ಕೆಲಸಗಳು ನಮ್ಮ ಆತ್ಮ, ತೃಪ್ತಿ ಪಡುವಂತಹ ಕಾರ್ಯಗಳಾಗಿರಬೇಕೆ ಹೊರತು, ಯಾರದೋ ಒತ್ತಡಕ್ಕೆ ಮಣಿದು ನಮ್ಮ ಸ್ವಾಭಿಮಾನವನ್ನು ನಾವು ಮಾರಿಕೊಳ್ಳಬಾರದು.

ಸಂತ-ಮಹಾಂತರನ್ನು, ಸಾರ್ಥಕ ಜೀವನ ನಡೆಸಿದ ಸಮರ್ಥ ವ್ಯಕ್ತಿಗಳನ್ನು, ಶೌರ್ಯ-ಧೈರ್ಯ- ಸಾಹಸಗಳಿಂದ ಪರಾಕ್ರಮ ಪೂರ್ಣ ಜೀವನ ನಡೆಸಿದವರನ್ನು, ಇತಿಹಾಸ ಪ್ರಸಿದ್ದರನ್ನಾಗಿಸಿದ್ದು ಅವರಲ್ಲಿದ್ದ ಅಪಾರ ಶ್ರದ್ದಾಬಲವೇ ಕಾರಣ ಎಂಬ ಕಟುಸತ್ಯವನ್ನು ಎಲ್ಲರೂ ತಿಳಿಯಬೇಕಾಗಿದೆ. ಏಕೆಂದರೆ ಶ್ರದ್ಧೆಯೇ ಸಿದ್ಧಿಯ ಕೀಲಿ ಕೈ ಆಗಿದೆ. ಈ ಶ್ರದ್ಧೆಯಿಂದ ಗೆದ್ದು ಬಂದವರು ಹಲವರಿದ್ದಾರೆ. ಅಂತಹ ವ್ಯಕ್ತಿಗಳು ಇನ್ನೊಬ್ಬರಿಗೆ ಮಾದರಿ.



-ಅಮರೇಶ ನಾಯಕ ಜಾಲಹಳ್ಳಿ.
Cell-9945268059.

No comments:

Post a Comment