Tuesday, 27 December 2011

Festivals (Published)


ಹಬ್ಬ ಬಂತು ಹಬ್ಬ..


ಭಾರತದಲ್ಲಿ ಹಬ್ಬಗಳು ಹತ್ತು ಹಲವು, ಹಬ್ಬಗಳು ಸಂಸ್ಕೃತಿಯ ಮತ್ತು ಭಾವೈಕ್ಯತೆಯ ಸಂಕೇತವಾಗಿದ್ದು, ಜನರ ಭಾವವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿವೆ. ಹಬ್ಬಗಳು ಜನರಲ್ಲಿ ಪರಸ್ಪರ ಭಾಂದವ್ಯಕ್ಕೆ ಕಾರಣವಾಗಿವೆ.
ಎಲ್ಲರೂ ಸಂತೋಷದಿಂದ ಸೇರುವದು, ಸಂಭ್ರಮ ಸಡಗರದ ಆಶಚರನೆಯ ಮೂಲಕ ಸಂತಸ ಹಂಚಿಕೊಳ್ಳುವದು ಹಬ್ಬ-ಹರಿದಿನಗಳಲ್ಲಿನ ವಿಶೇಷತೆ, ಏನೆ ಮನಸ್ತಾಪಗಳಿದ್ದರೂ ಹಬ್ಬ-ಹರಿದಿನಗಳಲ್ಲಿ ಒಂದುಗೂಡುತ್ತಾರೆ. ಇದರಿಂದಾಗಿ ಜನರಲ್ಲಿ ಶಾಂತಿ, ಸಮಾಧಾನ ನೆಲೆಸಲು ಮತ್ತು ಉತ್ಸಾಹ, ಆನಂದ ತುಂಬಿ ತುಳುಕಲು ಕಾರವಾಗಿದೆ.
ಹಬ್ಬಗಳು ಸದ್ಭಾವನೆ ಮೂಡಿಸುವುದರ ಜೊತೆ ಜೊತೆಗೆ ಭಾರತೀಯ ಅಖಂಡತೆಗೂ ಮುಯ ಕಾರಣವಾಗಿವೆ. 
ವಿದೇಶಗಳಲ್ಲಿ ಜನವರಿ 1 ಹೊಸ ವಷರ್ಾಚರಣೆಗೆ ಕಾರಣವಾದರೆ, ಭಾರತದಲ್ಲಿ ಚಾಂದ್ರಮಾನ ಯುಗಾದಿ ಹೊಸವರ್ಷವಾಗಿದೆ. ಅಂದು ಸೂಯರ್ೋದಯದೊಂದಿಗೆ ಹಬ್ಬ ಆಚರಣೆ ಶುರು, ವಶೇಷ ಸ್ನಾನ ಮಾಡಿಕೊಂಡು, ದೇವರಿಗೆ, ಹಿರಿಯರಿಗೆ ವಂದಿಸುವ ಮೂಲಕ ಹಬ್ಬದ ಆಚರಣೆಗೆ ಮುಂದಾಗುವದು ವಾಡಿಕೆ.

ಆಯಾ ಋತುವಿಗೆ ತಕ್ಕಂತೆ ಹಬ್ಬಗಳು ಭಾರತೀಯ ಸಂಸ್ಕೃತಿಯಲ್ಲಿ ಕಂಡು ಬರುತ್ತವೆ.ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟತೆ ಇದೆ. ಹಬ್ಬ ಆಚರಿಸುವ ರೀತಿ ನೀತಿ ಭಿನ್ನ ಭಿನ್ನವಾಗಿರುತ್ತವೆ. ನಿಸರ್ಗ ಪ್ರೇಮ, ರೈತರಿಗೆ, ಮಕ್ಕಳಿಗೆ, ಹೆಣ್ಣುಮಕ್ಕಳಿಗೆ, ವ್ಯಾಪಾರಿಗಳಿಗೆ, ಪ್ರಾಣಿಗಳಿಗೆ ಸಂಬಂಧಿಸಿದ ಹಬ್ಬಗಳಿಂದ ಭಾರತೀಯ ಸಂಸ್ಕೃತಿ ನಿರೂಪಿತವಾಗಿದೆ. 

ಅಣ್ಣ-ತಂಗಿಯರ ಭಾಂಧವ್ಯದ ಸಂಕೇತವಾಗಿ ರಕ್ಷಾ-ಬಂಧನ, ಸುಗ್ಗಿಕಾಲ ಮುಗಿಯುತ್ತಿದ್ದಂತೆ ರೈತನಿಗೆ ಹರುಷ ತರುವ ಹಬ್ಬಗಳು ದೀಪಾವಳಿ-ದಸರಾ, ಇವೆಲ್ಲವೂ ಮಕ್ಕಳಿಗೆ ಅಚ್ಚು-ಮೆಚ್ಚು ಜೊತೆಗೆ ಮಕ್ಕಳಲ್ಲಿ ಹರುಷದ ಹೊನಲು ಚಿಮ್ಮಿಸುವ ಹಬ್ಬ, ಅದೇ ರೀತಿ ಗಣೇಶ ಚತುಥರ್ಿ, ಶ್ರಾವಣ ಮಾಸ, ಸಂಕ್ರಾಂತಿ ಇತ್ಯಾದಿ.

ಹಬ್ಬದ ದಿನಗಳಂದು ಹೊಸ ಬಟ್ಟೆ, ಚಿನ್ನಾಭರನಗಳನ್ನು ಖರೀದಿ ಮಾಡುವದು ಸಾಮಾನ್ಯ. ವಿವಿಧ ರೀತಿಯ ತಿಂಡಿ-ತಿನಿಸು ತಯಾರಿಸುವದು, ಧರ್ಮ ಭೇದ ಎನಿಸದೆ ಜನರನ್ನು ಮನೆಗೆ ಕರೆದು ಊಟ ಹಾಕುವ ಪದ್ದತಿಯೂ ರೂಡಿಯಲ್ಲಿದೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ ಹೊಂದಿದೆ. ಹಬ್ಬಗಳು ಒಂದರ್ಥದಲ್ಲಿ ಸಂತೋಷಕೂಟಗಳಿದ್ದಂತೆ. ವಿಶ್ರಾಂತಿ, ಆನಂದಕ್ಕಾಗಿ ಹಬ್ಬ ಆಚರಣೆನೆರವಾಗಿವೆ. ನಿತ್ಯ ಜೀವನದ ಆಹಾರ ಪದ್ದತಿಯ ಬದಲಾವಣೆಗೊಂಡು ಹಬ್ಬದ ದಿನ ವಿವಿಧ ರೀತಿಯ ಪದಾರ್ಥಗಳು ಮನೆಯಲ್ಲಿ ರಾರಾಜಿಸುತ್ತವೆ. ಈ ಸಂತಸವನ್ನು ಎಲ್ಲರೂ ಒಂದುಗೂಡಿ ಆನಂದ ಹಂಚಿಕೊಳ್ಳುವದು ಒಂದು ಪದ್ಧತಿ. ಹಬ್ಬಗಳು ಆಚರಣೆ ಪದ್ಧತಿ, ಉದ್ದೇಶ ಮತ್ತು ವಿಶೇಷತೆ ತಿಳಿದುಕೊಳ್ಳುವದು ಮುಖ್ಯ. ವಿವಿಧತೆಯಲ್ಲಿ ಏಕತೆ ಇರುವದರಿಂದ ನಾವು-ನಮ್ಮವರು ಎನ್ನುವ ಭಾವನೆ ನಮ್ಮಲ್ಲಿದೆ. ಧರ್ಮದ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿರುವ ಹಬ್ಬಗಳು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ. ಅವರವರ ಧರ್ಮಕ್ಕನುಗುಣವಾಗಿ ಹಬ್ಬ ಆಚರಣೆ ರೂಡಿಗತ. 

ಇತ್ತೀಚಿನ ದಿನಮಾನಗಳಲ್ಲಿ ಹಬ್ಬ ಆಚರಣೆ ಮಾಡುವ ರೀತಿಯೂ ಬದಲಾಗುತ್ತಿದೆ. ಜನರು ಅತಿಯಾದ ಮೋಜು ಮಾಡಲು ಮುಂದಾಗುತ್ತಿದ್ದಾರೆ. ಹಬ್ಬ ದುಂದು ವೆಚ್ಚಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸಾಲ ಮಾಡಿ ದುಂದು ವೆಚ್ಚ ಮಾಡಿ ಹಬ್ಬ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಮಾಡುವದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಒಂದರ್ಥದಲ್ಲಿಹೇಳುವದಾದಲ್ಲಿ ಹಬ್ಬಗಳ ವಿಶೇಷತೆ ಹಾಳಾಗುತ್ತಿದೆ.

ಸಂಕ್ರಾಂತಿ ಹಬ್ಬದಲ್ಲಿ ಜನರು ತಮ್ಮ ಪಾಪ-ಕರ್ಮ ತೊಳೆದುಕೊಳ್ಳಲು ನದಿಯಲ್ಲಿ ಸ್ನಾನ ಮಾಡಿ, ಪೂಜೆ ಮಾಡುವದುಂಟು, ಆದರೆ, ಇತ್ತೀಚೆಗೆ ನದಿಯ ದಡದಲ್ಲಿ ಕುಳಿತು ಇಸ್ಪೀಟು ಆಡುವದು, ಗುಂಡು-ತುಂಡು ಪಾಟರ್ಿ ಮಾಡಿ ಮೋಜು ಮಾಡುತ್ತಾರೆ. ಇದು ಭರತೀಯ ಹಬ್ಬದ ಸಂಸ್ಕೃತಿಗೆ ಧಕ್ಕೆ ತರುವಂತಿದೆ. ದೇವಸ್ಥಾನಕ್ಕೆ ಹೋಗುವದು ದೇವರ ದರ್ಶನಕ್ಕಾಗಿ ಇಂಥಹ ಸಂದರ್ಭದಲ್ಲಿ ದೇಹ, ಮನಸ್ಸು ಶುದ್ಧವಾಗಿರಬೇಕು. ಹಬ್ಬಗಳು ಸಂತೋಷಕೂಟಗಳಾಗಬೇಕೆ ಹೊರತು ಸಂತಸಹರಣವಾಗಬಾರದು, ಜನತೆಯು ಶಾಂತಿ, ನೆಮ್ಮದಿಗೋಸ್ಕರ ಹಬ್ಬ ಆಚರಣೆಗೆ ಮುಂದಾಗುತ್ತಾರೆ. ಅದನ್ನು ಹಾಳು ಮಾಡಿಕೊಳ್ಳುವದು ಯಾವ ಧರ್ಮ. 


-ಅಮರೇಶನಾಯಕ ಜಾಲಹಳ್ಳಿ,
Cell-9945268059

No comments:

Post a Comment