Saturday, 31 December 2011

Anche Chiti Sangrha (Published)


ಸಂಗಮೇಶನ ಅಂಚೆ ಚೀಟಿ ಸಂಗ್ರಹ ಕಲೆ...

ಇಂದಿನ ಬಿಡುವಿಲ್ಲದ ಕಾಲದಲ್ಲಿ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾಗುತ್ತದೆ, ಯಾವುದೇ ಕೆಲಸ ಪೂರ್ಣಗೊಳ್ಳಬೇಕಾದರೆ ಸಹನೆ, ಧೃಡಸಂಕಲ್ಪ, ಅಛಲ ಆತ್ಮವಿಶ್ವಾಸ ಅತ್ಯಗತ್ಯ. ಸ್ಪಧರ್ಾತ್ಮಕತೆ ಹೆಚ್ಚಾಗಿರುವ ಈ ಕಾಲದಲ್ಲಿ ಜನರು ಏನಾದರೊಂದು ಸಾಧಿಸಬೇಕೆಂದು ಅತಿ ವೇಗದಿಂದ್ಲ ಸಾಗುತ್ತಾರೆ. ಸಾಧಿಸಬೇಕೆನ್ನುವ ಛಲ, ಜೀವನದಲ್ಲಿ ಒಂದು ಗುರಿ, ಆದರ್ಶ ಇರಬೇಕು, ನಮ್ಮ ಹಿಂದೆ ಮಾರ್ಗದರ್ಶನ ಮಾಡಿ, ಗುರಿಯೆಡೆಗೆ ಸಾಗುವಂತೆ ಮಾಡುವ ಗುರು ಇರಬೇಕು, ಆಗ ಅಂದುಕೊಂಡದನ್ನು ಸಾಧಿಸಲು ಸಬಲ ಶಕ್ತಿ ದೊರೆಯುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಓದುವ, ಬರೆಯುವ, ಕ್ರೀಡೆ ಇದೆ ರೀತಿ ಇನ್ನಿತರ ಚಟುವಟಿಕೆಯಾಗಿರಬಹುದು. ಅವರು ರೂಢಿಸಿಕೊಂಡ ರೀಯಲ್ಲಿರುತ್ತದೆ. ಕೆಲವರಲ್ಲಿ ವಿಶಿಷ್ಠ ಕೌಶಲ್ಯಗಳು ಅಡಗಿರುತ್ತವೆ. ಅದನ್ನು ಹೊರಹಾಕಿದಾಗ, ಪ್ರದಶರ್ಿಸಿದಾಗ, ಇನ್ನೊಬ್ಬರ ಅರಿವಿಗೆ ಬರುತ್ತದೆ. ಇದು ಅವರ ವಿಶಿಷ್ಟ ಮನೋಭಿಲಾಷೆಗೆ, ಅವರ ಹವ್ಯಾಸಕ್ಕೆ ಮೆರಗು ಬರುತ್ತದೆ. ಅಂತಹ ವಿಶಿಷ್ಠ ಶೈಲಿಯ ಅಭಿರುಚಿಯುಳ್ಳ ವ್ಯಕ್ತಿಗಳು ಸಾಕಷ್ಟು ಜನರಿದ್ದಾರೆ, ವೇದಿಕೆ ದೊರೆತವರು ಗುರುತಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಎಲೆಮರೆಕಾಯಿಯಂತೆ ಹಿಂದೆ ಉಳಿಯುತ್ತಾರೆ. 

ನಮ್ಮಲ್ಲಿ ಒಬ್ಬ ವಿದ್ಯಾಥರ್ಿ ಇದ್ದಾನೆ. ಆತನಿಗೆ ಪ್ರತಿಯೊಂದು ಹಳೆಯ ವಸ್ತುವನ್ನು ಸಂಗ್ರಹಿಸುವದೆಂದರೆ ಇಷ್ಟವಂತೆ ಆ ವ್ಯಕ್ತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದನ್ನೂರು ಗ್ರಾಮದ ಸಂಗಮೇಶ.ಆರ್.ಹಿಪ್ಪಳಗೆಮಠ, ಪ್ರಸ್ತುತ ಗುಲಬಗರ್ಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ಸೆಮಿಸ್ಟರ್ನಲ್ಲಿ ವ್ಯಾಸಂಗ ನಡೆಸಿದ್ದಾನೆ. ಆತ ಏನಾದರೊಂದು ಸಂಗ್ರಹಿಸುತ್ತಲೇ ಇರುತ್ತಾನೆ. ಏನಾದರೊಂದು ಸಂಗ್ರಹ ಮಾಡುವದೆಂದರೆ, ಸಂಶೋಧನೆ ಮಾಡಿದಂತೆಯೇ ಸರಿ, ಸಮಯದ ಮಹತ್ವ ಅರಿತು ಇರುವ ಸಮಯವನ್ನೇ ಸದ್ಬಳಕೆ ಮಾಡಿಕೊಂಡು ಜೀವಿಸುವದು ಅಗತ್ಯವಾಗಿದೆ ಎನ್ನುತ್ತಾನೆ. ದಿನದಿಂದ ದಿನಕ್ಕೆ ಸಮಯ ಕಡಿಮೆಯಾಗುತ್ತಾ, ಕಲಸಗಳು ಹೆಚ್ಚಾಗುತ್ತಿವೆ. ವಿದ್ಯಾಥರ್ಿ ಜೀವನ ಅತಿ ಅಮೂಲ್ಯವಾಗಿದೆ. ವಿದ್ಯಾಥರ್ಿ ಜೀವನವನ್ನು ಕೇವಲ ಶಿಕ್ಷಣಕ್ಕೆ ಮೀಸಲಿಟ್ಟಿರೆ ಸಾಲದು. ಸಾಮಾಜಿಕ, ಆಥರ್ಿಕ, ರಾಜಕೀಯ, ಧಾಮರ್ಿಕ ಇತಿಹಾಸ ಉಳಿಸುವ ಚಟುವಟಿಕೆಗಳ ಬಗೆಗೂ ಚಿಂತನೆ ನಡೆಸುವಂತಹ ಕೆಲಸವಾಗಬೇಕು. ಇತಿಹಾಸ ಬಲ್ಲವನು, ಇತಿಹಾಸ ಸೃಷ್ಟಿಸಬಲ್ಲನು. ಇತಿಹಾಸ ತಿಳಿಯದವನು, ಇತಿಹಾಸ ಸೃಷ್ಟಿಸಲಾರನು. ಅಂದರೆ ನಾವು ಜೀವನದಲ್ಲಿ ಹಿಂದೆ ನೋಡಿಕೊಂಡು ಮುಂದೆ ಸಾಗಬೇಕು, ಹಿಂದೆ ನಡೆದ ಘಟನೆಗಳ ಬಗ್ಗೆ ಅರಿತುಕೊಂಡರೆ, ಗತಕಾಲದ ವೈಭವದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಹಿಂದಿನ ಆಡಳಿತ ವ್ಯವಸ್ಥೆಯ ಬಗ್ಗೆ, ಜೀವನ ಕ್ರಮವನ್ನು ತಿಳಿದು ನಡೆಯಬೇಕಾಗುತ್ತದೆ.

ಗತಕಾಲದ ಯಾವುದೇ ವಸ್ತುವನ್ನಾಗಲಿ ಸಂಗ್ರಹಿಸಿಡಬೇಕಾಗುತ್ತದೆ. ಹಳೆಯ ವಸ್ತುಗಳಿಗೆ ತುಂಬಾ ಬೆಲೆ ಇದೆ, ಅದಕ್ಕೆ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಾರೆ. ರಾಜ-ಮಹಾರಾಜರ ಕಾಲದಲ್ಲಿ ಬಳಕೆಯಾದ ವಸ್ತುಗಳನ್ನು ಕಲೆ ಹಾಕಿ ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆ ಇಡುವದುಂಟು. ಅದೇ ರೀತಿ ಈತನು ಸಂಗ್ರಹ ಮಾಡಿರುವ ವಸ್ತುಗಳೆಂದರೆ ನಿಜಾಮನ ಕಾಲದ ಬಾಂಡ್ ಪೇಪರ್ಗಳು, ನಾಣ್ಯಗಳು, ಹಲವು ರೀತಿಯ ವಸ್ತುಗಳು, ಬ್ರಿಟಿಷ ಈಸ್ಟ್ ಇಂಡಿಯ ಕಂಪನಿಯ ನಾಣ್ಯಗಳು (1616, 1717, 1818, 1937, 1917 ಇಸವಿಯ ನಾಣ್ಯಗಳು), ಪ್ರತಿಯೊಂದು ನಾಣ್ಯದ ಮೇಲೆ ಒಂದು ಬದಿಯಲ್ಲಿ ಬ್ರಟಿಷರ ಚಿಹ್ನೆ, ಮತ್ತೊಂದು ಬದಿಯಲ್ಲಿ ಭಾರತೀಯ ದೇವತೆಗಳ ಚಿಹ್ನೆ ಹೊಂದಿವೆ. 12 ಮತ್ತು 13ನೇ ಶತಮಾನದ ನಾಣ್ಯಗಳಿವೆ. ರಾಷ್ಟ್ರೀಯ ವಿಶೇಷ ದಿನಗಳಂದು (ಅಗಸ್ಟ್ 15, ಜನವರಿ 26, ಅಕ್ಟೋಬರ್ 2, ನವೆಂಬರ್ 14, ಸೆಪ್ಟೆಂಬರ್ 5, ನವೆಂಬರ್ 1) ಪ್ರತಿಯೊಂದು ದಿನಪತ್ರಿಕೆಯನ್ನು ಸಂಗ್ರಹಿಸಿ ಮಾಹಿತಿ ಕಲೆ ಹಾಕುವದು. 130 ನಮೂನೆಯ ಮ್ಯಾಚ್ ಬಾಕ್ಸ್ಗಳನ್ನೂ ಸಹ ಕಲೆಕ್ಟ್ ಮಾಡಿದ್ದಾರೆ. ಕ್ರಿಕೇಟ್ ಸ್ಟಾರ್ಗಳು, ಟೆನಿಸ್ ಕ್ರೀಡಾಪಟುಗಳ ಹಾಗೂ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳನ್ನು, ಪ್ರಮುಖ ವ್ಯಕ್ತಿಗಳ ಸಂದರ್ಶನ ಮಾಡಿ ಅವರ ಸಂಪೂರ್ಣ ವಿವರದ ಮಾಹಿತಿ ಪಡೆದು ಭಾವಚಿತ್ರವನ್ನು ಕಲೆಕ್ಟ್ ಮಾಡುವ ಹವ್ಯಾಸ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತ್ತಕೋತ್ತರ ಪದವಿಯವರೆಗೂ ತನಗೆ ಕಲಿಸಿದ ಗುರುಗಳ ಭಾವಚಿತ್ರ ಸಹಿತ ಮಾಹಿತಿ ಸಂಗ್ರಹಿಸಿ ಅವರ ಹುಟ್ಟುಹಬ್ಬ ಅಥವಾ ವಿಶೇಷ ದಿನದಂದು ಅವರಿಗೆ ಶುಭಾಶಯಗಳನ್ನು ತಿಳಿಸುವ ರೂಢಿ. ಇದು ಈ ಕಾಲದಲ್ಲಿಯೂ ಗುರುಗಳ ಮೇಲಿರುವ ಅಪಾರವಾದ ಭಕ್ತಿಯನ್ನು ತೋರಿಸುತ್ತದೆ. ಇತಿಹಾಸ ಪ್ರಸಿದ್ಧ ಕೋಟೆಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಸಂಗ್ರಹಿಸಿ ಚಿತ್ರಗಳನ್ನು ಸೆರೆ ಹಿಡಿಯುವದು, ನಿಸರ್ಗ ತಾಣಗಳಿಗೆ ಭೇಟಿ ನೀಡುವದು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಸೆರೆಹಿಡಿದು ವನ್ಯ ಮೃಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು. ಇದು ಒಂದು ಪರಿಸರ ಸ್ನೇಹಿ ಭಾವನೆ ತೋರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತಹ ದುಶ್ಚಟಗಳಗೆ ಬಲಿಯಾಗದೆ ತಮ್ಮ ಬಂಗಾರದಂತಹ ರಸಮಯ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಪ್ಯಾಕೇಟ್ಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿದ್ದರೂ ಸಹ ಅದನ್ನು ಸೇವಿಸುವದು ಎಷ್ಟರಮಟ್ಟಿಗೆ ಸರಿ? ಈ ಕಾರಣಕ್ಕಾಗಿ ಹಲವಾರು ರೀತಿಯ ಗುಟ್ಕಾ ಪ್ಯಾಕೇಟ್ಗಳನ್ನು ಸಂಗ್ರಹಿಸಿ ಯುವಕರಿಗೆ ಅದರ ಬಗ್ಗೆ ಜಾಗೃತಿ ಮೂಢಿಸುವಂತಹ ಹವ್ಯಾಸವಿದೆ. ಇಂದಿನ ಸಂಕೀರ್ಣ ಯುಗದಲ್ಲಿ ಪ್ರತಿಯೊಬ್ಬರಿಗೂ ಸಮಯ ಮಹತ್ವದ್ದಾಗಿದೆ. ಸಮಯ ಕಡಿಮೆ ಇದೆ, ಕೆಲಸದ ಒತ್ತಡ ಜಾಸ್ತಿ ಇದೆ. ಹಿಂದಿನ ಕಾಲದ ಅಂಚೆ ಚೀಟಿಗಳು, ಬಾಂಡ್ ಪೇಪರ್ಗಳು, ಫಸ್ಟ್ ಡೇ ಕವರ್ಗಳು, ದಿನಪತ್ರಿಕೆಯಲ್ಲಿನ ಇತಿಹಾಸ ನಾಯಕರುಗಳ ಘಟನೆ ಬಗ್ಗೆ ಮಾಹಿತಿ ಸಂಗ್ರಹಣೆ ಅವುಗಳನ್ನು ಕಲೆ ಹಾಕುವುದು. ಹಾಗೂ ಅಧಿಕಾರಿಗಳ, ಪ್ರಮುಖರ, ಪ್ರಸಿಧ್ಧ ವ್ಯಕ್ತಿಗಳ, ಮಾಹಿತಿ ಮತ್ತು ಹಸ್ತಾಕ್ಷರ ಪಡೆಯುವುದು ಅವರ ಹವ್ಯಾಸವಾನ್ನಾಗಿ ರೂಢಿಸಿಕೊಂಡಿದ್ದಾರೆ.

ಸುಮಾರು 6 ವರ್ಷಗಳಿಂದ ವಸ್ತುಗಳನ್ನು ಸಂಗ್ರಹಿಸಿರುವ ಇವರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ, ಪ್ರಮುಖವಾಗಿ ಆಥರ್ಿಕ ಸಮಸ್ಯೆ ಇರುವ ಇವರು ತಮ್ಮ ಹವ್ಯಾಸವನ್ನು ಮಾತ್ರ ಬಿಟ್ಟಿಲ್ಲ. ಇವರಿಗೆ ಮನೆಯವರ ಮತ್ತು ಸ್ನೇಹಿತರ ಸಹಕಾರ ಇದೆ. ಇವರು ಸಂಗ್ರಹಿಸಿರುವ ಕೆಲವೊಂದು ಅತ್ಯಮೂಲ್ಯ ನೋಟುಗಳು, ನಾಣ್ಯಗಳು ಕಳುವಾಗಿದ್ದವು. ಪದವಿಯಲ್ಲಿ ಎರಡು ಬಾರಿ ಪ್ರದರ್ಶನ ನೀಡಿ. ಬಿ.ಇಡಿ ಕೋಸರ್್ ಮಾಡುವಾಗ ಅಲ್ಲಮಪ್ರಭು ಮಹಾವಿದ್ಯಾಲಯ ಕರಡಿಯಾಳ್(ಕೆ)ದಲ್ಲಿ ಒಂದು ಸಲ ಪ್ರದರ್ಶನ, ಅದೇ ರೀತಿ ಗುಲಬಗರ್ಾ ವಿಶ್ವವಿದ್ಯಾಲಯದ ಅಂತರ ಮಹಾ ವಿದ್ಯಾಲಯ ಯುವಜನೋತ್ಸವ 2011ರಂದು ಹಿಂದಿನ ಕಾಲದ ಹಲವಾರು ಸಂಗ್ರಹಿತ ಅಂಚೆ ಚೀಟಿಗಳ ಪ್ರದರ್ಶನ ನೀಡಿದ್ದಾರೆ. 50 ವರ್ಷದ ಹಳೆಯ ಅಂಚೆ ಚೀಟಿ ಪತ್ರ ಹಾಗೂ ಪ್ರಸ್ತುತ ಚಲಾವಣೆಯ ಪತ್ರ ಅವರಲ್ಲಿವೆ. 1894 ರಿಂದ 1896, 1898, 1907, 1910, 1946 ರವರೆಗೆ ಬಾಂಡ್ ಪೇಪರ್ಗಳನ್ನು ಸಂಗ್ರಹಿಸಿದ್ದಾರೆ. ಏನಾದರೊಂದು ಹೊಸತನವನ್ನು ಸಾಧಿಸಬೇಕೆಂಬ ಅಛಲವಾದ ಗುರಿ ನನ್ನಲ್ಲಿದೆ ಎಂದು ಆತ ಮನ ಬಿಚ್ಚಿ ಹೇಳುತ್ತಾನೆ. ಹಳೆಯ ವಸ್ತುಗಳ ಸಂಗ್ರಹಣೆಯ ಅಭಿರುಚಿ ಇರುವದು ವಿಶೇಷವಾಗಿದೆ. ಕಸದಿಂದ ರಸ ಎನ್ನವಂತೆ ನಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ಬಳಸಿಕೊಂಡು ಹಲವಾರು ಜನ ತಮ್ಮ ಕೌಶಲ್ಯದಿಂದ ಹೊರಹೊಮ್ಮಿದ್ದಾರೆ.

ಯಾವುದೇ ಒಂದು ವಸ್ತುವನ್ನು ಕಾಪಾಡುವದು ಅಷ್ಟೊಂದು ಸುಲಭದ ಕೆಲಸವಲ್ಲ, ಅದಕ್ಕೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಎಲ್ಲಿ ನಮ್ಮ ಪ್ರೀತಿ ಇರುತ್ತದೆಯೋ, ಅಲ್ಲಿ ನಮ್ಮ ಮನಸ್ಸಿರುತ್ತದೆ. ಎಲ್ಲಿ ನಮ್ಮ ಮನಸ್ಸಿರುತ್ತದೆಯೋ, ಅಲ್ಲಿ ನಮ್ಮ ಏಕಾಗ್ರತೆ ಇರುತ್ತದೆ. ಏಕಾಗ್ರತೆ ಒಲಿದರೆ ನಾವು ಅಂದುಕೊಡದ್ದನ್ನು ಸಾಧಿಸುವುದು ಸುಲಭ ಸಾಧ್ಯವಾಗುತ್ತದೆ. ಈತನ ಒಂದು ಹಳೆಯ ವಸ್ತುಗಳ ಸಂಗ್ರಹಣಾ ಕಾರ್ಯ ಪ್ರತಿಯೊಬ್ಬ ವಿದ್ಯಾಥಿಗಳಿಗೆ ಮಾದರಿಯಾಗಬೇಕಾಗಿದೆ. 





-ಅಮರೇಶ ನಾಯಕ, ಜಾಲಹಳ್ಳಿ
ಮೊ-9945268059.

Chaladinda Geluvu (Published)


ಛಲವಿರಲಿ ಗೆಲುವಿರಲಿ...

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಸ್ಪಧರ್ೆ ಮಾಡಿ ಗೆಲ್ಲುವದು ಅನಿವಾರ್ಯ. ಸರಕಾರ ನಿಗಧಿಪಡಿಸಿರುವ ಸ್ಪಧರ್ಾತ್ಮಕ ಪರೀಕ್ಷೆ ಎದುರಿಸಿ, ಉದ್ಯೋಗ ಗಿಟ್ಟಿಸಿ, ಜೀವನದಲ್ಲಿ ಸಾಫಲ್ಯತೆ ಪಡೆದುಕೊಳ್ಳಬೇಕು ಎಂಬುದು ಎಲ್ಲರ ಆಕಾಂಕ್ಷೆ. ಆದರೆ ಹಲವರು ಮಾತ್ರ ಸ್ಪದರ್ೆ ಎದುರಿಸಲು ತಕ್ಕ ಸಿದ್ದತೆ ಮಾಡಿಕೊಂಡು ಆ ನಿಟ್ಟಿನಲ್ಲಿ ನಿರಂತರಾಗುತ್ತಾರೆ. ಪ್ರಯತ್ನ ಪಡುವವರಿಗೇನೂ ಕಡಿಮೆಯಿಲ್ಲ, ಹೀಗೆ ಪ್ರಯತ್ನಪಟ್ಟವರಿಗೆ ತಕ್ಕುದಾದ ಪ್ರತಿಫಲ ದೊರೆಯುವದರಲ್ಲಿ ಸಂಶಯವೂ ಇಲ್ಲ. ಎಷ್ಟೋ ಜನ ಅದು ಮಾಡಬೇಕು, ಇದು ಮಾಡಬೇಕು ಎಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಪಡದೆ ಕಾಲಹರಣ ಮಾಡುವದನ್ನು ಕಾಣುತ್ತೇವೆ.

ಕನರ್ಾಟಕ ಲೋಕ ಸೇವಾ ಆಯೋಗ ನಡೆಸುವ ಎಸ್,ಡಿ,ಎ. ಎಫ್,ಡಿಎ. ಪಿ,ಡಿ,ಒ. ಗಳಂತಹ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಲಕ್ಷ ಲಕ್ಷ ಜನರು ಅಜರ್ಿ ಹಾಕುತ್ತಾರೆ. ಇಂತಹ ಪರೀಕ್ಷೆಯಲ್ಲಿ ಜನ ಸಾಧಿಸಲು ಪ್ರಯತ್ನ ಅಗತ್ಯ. ಪರೀಕ್ಷೆಗೆ ಸಜ್ಜಾಗಲು ಮೊದಲು ಏಕಾಗ್ರತೆಯನ್ನು ಗಳಿಸಿಕೊಳ್ಳಬೇಕು. ಪ್ರೀತಿ ಎಲ್ಲಿರುತ್ತದೆಯೋ, ಅಲ್ಲಿ ಮನಸ್ಸಿರುತ್ತದೆ. ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ಏಕಾಗ್ರತೆ ಇರುತ್ತದೆ. ಮೊದಲು ಇಷ್ಟವಿರುವ ವಿಷಯವನ್ನು ಆಯ್ದುಕೊಂಡು ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕು. ಎಲ್ಲಾ ಪುಸ್ತಕಗಳನ್ನು ಕೂಡಿ ಹಾಕಿಕೊಂಡು ಅಭ್ಯಾಸಕ್ಕೆ ತೊಡಗುವದು ಒಳ್ಳೆಯ ಪದ್ದತಿಯಲ್ಲ. ಏಕೆಂದರೆ ಯಾವುದನ್ನು ಓದಬೇಕು, ಯಾವುದನ್ನು ಬಿಡಬೆಕು ಎಂದು ಗಲಿಬಿಲಿಗೊಳ್ಳುವಂತಾಗುತ್ತದೆ.

ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅಭ್ಯಾಸ ಮಾಡುವದು ಒಳ್ಳೆಯದು. ಕಳೆದು ಹೋದ ಸಮಯ ಮರಳಿ ಬಾರದು ಎಂಬ ಕಟುಸತ್ಯ ಪರೀಕ್ಷಾಥರ್ಿ ಅರಿತುಕೊಳ್ಳಬೇಕು. ಜೀವನದಲ್ಲಿ ಸಮಯ ಪಾಲನೆ ಅತ್ಯಗತ್ಯ. ಸಮಯದ ಮಹತ್ವ ತಿಳಿಯಬೇಕಾದರೆ ವರ್ಷಪೂತರ್ಿ ಓದಿಕೊಂಡು ಪರಿಕ್ಷೆಯಲ್ಲಿ ಫೇಲಾದ ವಿದ್ಯಾಥರ್ಿಯನ್ನು, ಬಸ್ಸು ನಿಲ್ದಾಣಕ್ಕೆ ಐದು ನಿಮಿಷ ತಡವಾಗಿ ಬಂದು ಬಸ್ಸು ತಪ್ಪಸಿಕೊಂಡವನನ್ನೂ, ಟಿಕೇಟು ಖರೀದಿಸಲು ನಿಂತು ಒಂದೇ ನಿಮಿಷದಲ್ಲಿ ರೈಲು ತಪ್ಪಿಸಿಕೊಂಡಾತನನ್ನು, ಓಲಂಪಿಕ್ಸ್ ಓಟದಲ್ಲಿ ಒಂದೇ ಸೆಕೆಂಡಿನಲ್ಲಿ ಚಿನ್ನದ ಪದಕ ಕಳೆದುಕೊಂಡ ಆಟಗಾರರನ್ನು ಕೇಳಬೇಕು. ಇದರಿಂದ ಸಮಯದ ಮಹತ್ವದ ಅರಿವಾಗುತ್ತದೆ, ವಿನಾಕಾರಣ ಸಮಯ ಕಳೆಯಲು ಪ್ರಯತ್ನಿಸಬೇಡಿ, ಇದ್ದ ಸಮಯದಲ್ಲೇ ಸಾಧಿಸುವದನ್ನು ಕಲಿತುಕೊಳ್ಳಿ.

 ಯಾವುದೇ ಕೆಲಸ ಅಥವಾ ಅಭ್ಯಾಸ ಮಾಡುವದನ್ನು ಮುಂದೂಡುವ ಪ್ರವೃತ್ತಿ ಸಲ್ಲದು. ನಾಳೆ ಮಾಡುವ ಕೆಲಸ ಇಂದೇ ಮಾಡು, ಇಂದು ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡಿ. ಜೀವನದಲ್ಲಿ ಯಶಸ್ವಿ ಸಾಧಿಸಿರುವ ವ್ಯಕ್ತಿಗಳು ಧೈನಂದಿನ ಕೆಲಸಗಳನ್ನೆ ಭಿನ್ನ ಭನ್ನ ರೀತಿ ಮಾಡಿ ಯಶ ಸಾಧಿಸಿದ್ದಾರೆ. ಸಾಧಿಸಬೇಕೆನ್ನುವ ಛಲ, ಆತ್ಮವಿಶ್ವಾಸ, ದೃಡನಿಧರ್ಾರ ಇದ್ದರೆ ಜೀವನದಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ. ಕದಿಯಲು ಸಾಧ್ಯವಾಗದ ವಸ್ತುವೆಂದರೆ ಜ್ಞಾನವೊಂದೆ, ಜ್ಞಾನ ಸಂಪಾದಿಸಿದರೆ ಎಂತಹ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸುವದು ಸುಲಭ. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಪಸರಿಸಬೇಕು, ಪ್ರತಿಯೊಬ್ಬರಿಗೂ ತಿಳಿದುಕೊಳ್ಳೂವ ಜಿಜ್ಞಾಸೆ ಇರಬೇಕು, ತಿಳಿಸುವ ಆಸೆ ಇರಬೇಕು, ಕಲಿಕೆ ನಿರಂರವಾಗಿರಬೇಕು. ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸ ಇಲ್ಲದಿರುವದೇ ಬಹುದೊಡ್ಡ ಸಮಸ್ಯೆ.

 ಯುವಜನತೆಯಲ್ಲಿ ಉತ್ಸಾಹ ಪುಟಿದೇಳಬೇಕು, ತನ್ನಲ್ಲಿ ತನಗೆ ನಂಬಿಕೆ ಹುಟ್ಟಬೇಕು, ತನ್ನಲ್ಲೇ ಅಡಗಿರುವ ಶಕ್ತಿಯನ್ನು ಪ್ರಚುರಪಡಿಸಿ ಆತ್ಮ ಬಲದಿಂದ ಮುನ್ನುಗ್ಗಿ ಶ್ರದ್ದೆಯಿಂದ ಕಾರ್ಯ ಸಾಧಿಸಬೇಕು. ಶ್ರದ್ಧೆಯೇ ಸಿದ್ದಿಯ ಕೀಲಿ ಕೈ ಯಾವುದೇ ಕೆಲಸವನ್ನು ಮುಂದೂಡುವ ಪ್ರವೃತ್ತಿ ಸಲ್ಲದು. ಅದು ಅತ್ಯಂತ ಭಯಂಕರ ಲಕ್ಷಣ ಒರ್ವನಲ್ಲಿ ಸಾಮಥ್ರ್ಯವಿದ್ದೂ ಹಿಂದುಳಿಯುತ್ತಿದ್ದರೆ ಅದಕ್ಕೆ ಕಾರಣ ಮುಂದೂಡುವ ಪ್ರವೃತ್ತಿ. ಕೆಲಸವನ್ನು ಪದೇ ಪದೇ ಮುಂದೂಡುವದನ್ನು ರೂಢಿಸಿಕೊಂಡರೆ ಸೋಮಾರಿತನ ಹೆಗಲೇರಿ ಗಹಗಹಿಸುತ್ತದೆ. ಇದು ಪ್ರತಿಯೊಬ್ಬರಿಗೂ ಅನ್ವಯವಾಗುವ ಮಾತು. ಒಂದು ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಓದುವದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ.



-ಅಮರೇಶ ನಾಯಕ ಜಾಲಹಳ್ಳಿ
Cell-9945268059



Learning English (Published)


ಇಂಗ್ಲೀಷ ಕಲಿಯಿರಿ ಬೆಳೆಯಿರಿ..

 ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಇಂಗ್ಲೀಷ ಕಲಿಕೆ ಅನಿವಾರ್ಯವಾಗಿದೆ. ಇಂಗ್ಲೀಷ ಅಂತರಾಷ್ಟ್ರಿಯ ಸಂಪರ್ಕ ಭಾಷೆಯಾಗಿರುವದರಿಂದ ಪ್ರತಿ ಕ್ಷೇತ್ರದಲ್ಲೂ ಇದು ಅತ್ಯವಶ್ಯಕ.ಹೀಗಾಗಿ ಪ್ರತಿಯೋರ್ವ ಉದ್ಯೋಗಕಾಂಕ್ಷಿ ಇಂಗ್ಲೀಷ ಜ್ಞಾನ ಹೊಂದುವದು ಅನಿವಾರ್ಯ ಎಂಬಂತಾಗಿದೆ. ಪ್ತಸ್ತುತ ದಿನಗಳಲ್ಲಿಖಾಸಗಿ ಕಂಪನಿಗಳು ಚನ್ನಾಗಿ ಇಂಗ್ಲೀಷ ಮಾತನಾಡುಬಲ್ಲ ಮತ್ತು ಕಂಪ್ಯೂಟರ್ ಜ್ಞಾನದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದ್ದಾರೆ. ಇದಕ್ಕೆ ಕಾರಣ ಪರಿಪಕ್ವತೆ. ಇದು ಸಹಜ ಕೂಡ ಹೌದು. ಪದವಿ ಪೂರೈಸಿರುವ ಕೆಲವರು ತಮಗೆ ಇಂಗ್ಲೀಷ್ ಬರುವದಿಲ್ಲವೆಂದು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಬಲ್ಲವರ ಪ್ರಕಾರ ಇಂಗ್ಲೀಷ್ ಕಲಿಕೆ ಮತ್ತು ಮಾತನಾಡುವದು ಅಷ್ಟೊಂದು ದೊಡ್ಡ ಸಮಸ್ಯೆಯೇನಲ್ಲ. ಕಲಿಯುವ ಮುನ್ನ ಕಠಿಣ ಎನಿಸಿದರೂ ಕಲಿತ ಮೇಲೆ ಸರಳವಾಗಿ ಕಾಣುತ್ತದೆ. ಅಭ್ಯಾಸದಿಂದ ಎಲ್ಲವೂ ಸಾಧ್ಯ.

 ಮೊದ ಮೊದಲು ಇಂಗ್ಲೀಷ ಮಾತನಾಡುವಾಗ ತಪ್ಪಾಗುವದು ಸಹಜ, ಅದರಿಂದ ಎದೆಗುಂದದೆ ತಪ್ಪಿಲ್ಲದೇ ಮಾತನಾಡಲು ಪ್ರಯತ್ನಿಸಿದಾಗ ತಪ್ಪುಗಳು ಕಡಿಮೆಯಾಗತ್ತವೆ. ತಪ್ಪುಗಳು ಹೆಚ್ಚಾಗಿದ್ದರೂ ನಂತರದ ದಿನಗಳಲ್ಲಿ ತಪ್ಪುಗಳು ಕಡಿಮೆಯಾಗಿ ಭಾಷೆಯಲ್ಲಿಯೂ ಪ್ರಬುದ್ಧತೆ ಕಂಡುಬರುತ್ತದೆ. ಕಲಿಕೆಯ ಬಗೆಗಿನ ವಿಚಾರಗಳು ನವೀನವಾಗಿರಲಿ, ಯೋಚನೆ, ಪ್ರಯತ್ನಗಳಲ್ಲಿ ಹುರುಪಿರಲಿ, ಯೋಚಿಸುವದನ್ನು, ಪ್ರಯತ್ನಪಡುವದನ್ನು ನಿಲ್ಲಿಸಿದರೆ ವಿಚಾರಗಳಿಗೆ, ವ್ಯಕ್ತಿತ್ವಕ್ಕೆ ತುಕ್ಕು ಹಿಡಿಯುತ್ತದೆ. ಇಂಗ್ಲೀಷ ಸರಳವಾಗಿ ಕಲಿಯಲು ಮೊದಲು ಮಾತನಾಡುವದನ್ನು ರೂಢಿ ಮಾಡಿಕೊಳ್ಳಬೇಕು. ಕಷ್ಟ ಎಂದು ಸುಮ್ಮನಿದ್ದರೆ ಅದು ಮತ್ತಷ್ಟು ಕ್ಲಿಷ್ಟಕರವಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸಿದ್ದತೆ ಮಾಡಿಕೊಂಡು ಅದೇ ರೀತಿ ಅಭ್ಯಾಸ ಮುಂದುವರೆಸುತ್ತಾ ಬರಬೇಕು, ಅಭ್ಯಾಸವು ನಿಧಾನ ಮತ್ತು ನಿರಂತರ ಕ್ರಿಯೆಯಾಗಿರಬೇಕು.

ಈಜು ಕಲಿಯಬೇಕೆಂದುಕೊಂಡು ಬಾವಿ ಅಥವಾ ನದಿಯ ದಂಡೆಯ ಮೇಲೆ ಕುಳಿತರೆ ಈಜು ಕಲಿಯಲು ಸಾಧ್ಯವಿಲ್ಲ. ಈಜು ಕಲಿಯಬೇಕು ಎಂದಾದಲ್ಲಿ ಮೊದಲು ನೀರಿಗೆ ಧುಮುಕಬೇಕು, ಪ್ರಥಮವಾಗಿ ಕಷ್ಟವಾದರೂ ಕಾಲು ಬಡಿದಂತೆ ಅಭ್ಯಾಸ ಬಲದಿಂದ ಸರಳವಾಗಿ ಈಜು ಕಲಿಯಬಹುದು. ಇದು ಪ್ರಕೃತಿ ನಿಯಮ.. ಹೀಗೆಯೇ ಯಾವುದೇ ಭಾಷೆಯನ್ನು ಸರಾಗವಾಗಿ ಕಲಿತು ಮಾತನಾಡಬಲ್ಲ ಅನುಕರಣಿಯ ಶಕ್ತಿ ಎಲ್ಲರಲ್ಲೂ ಇರುತ್ತದೆ. ಅದನ್ನು ಬಳಸಿಕೊಂಡು ಏನನ್ನಾದರೂ ಸಾಧಿಸಬಹುದಾಗಿದೆ. ಎಲ್ಲಾ ಶಕ್ತಿಗಳೂ ನಮ್ಮಲ್ಲೇ ಅಡಗಿವೆ, ಅದನ್ನು ಪ್ರಚುರಪಡಿಸುವದು ನಮ್ಮಲ್ಲೇ ಅಡಗಿದೆ. ಪ್ರಪಂಚದಾದ್ಯಂತ ಸುಮಾರು ಮೂರು ಸಾವಿರದ ಐದುನೂರು ಭಾಷೆಗಳಿವೆ., ಅದರಲ್ಲಿ ಕೇವಲ ಐನುರು ಭಾಷೆಗಳು ಮಾತ್ರ ಲಿಪಿ ಹೊಂದಿವೆ. ಭಾಷೆಯ ಕಲಿಕೆಗೆ ಅನುಕರಣೆ ತುಂಬಾ ಅಗತ್ಯ.

 ನಾವು ಮಾತನಾಡುವ ಸಂದರ್ಭದಲ್ಲಿ ಎಷ್ಟೋ ಸಲ ಇಂಗ್ಲೀಷ ಶಬ್ದಗಳನ್ನು ಬಳಸುತ್ತಿರುತ್ತೇವೆ, ಎಷ್ಟೋ ಶಬ್ದಗಳಿಗೆ ಇರುವ ಕನ್ನಡದ ಅರ್ಥಗಳೇ ನಮಗೆ ತಿಳಿದಿರುವದಿಲ್ಲ. ಆದರೂ ಇಂಗಿಷ್ ಶಬ್ದಗಳನ್ನೇ ಬಳಸುತ್ತಿರತ್ತೇವೆ, ಅದೇ ರೀತಿ ಮಾತನಾಡುವ ಸಂದರ್ಭದಲ್ಲಿ ಬಳಸುವ ಶಬ್ದಗಳನ್ನೇ, ವ್ಯಾಕರಣಬದ್ದವಾಗಿ ಬಳಕೆ ಮಾಡಲು ಶುರು ಮಾಡಿದರೆ ಇಂಗ್ಲೀಷ ಭಾಷೆಯನ್ನು ರೂಢಿಸಿಕೊಳ್ಳುವದು ಅಷ್ಟು ಕಷ್ಟಕರವಲ್ಲ. ಭಾಷೆ ಕಲಿಕೆಯ ಸಂದರ್ಭದಲ್ಲಿ ನಿರಾಶೆ ಭಾವನೆ ತೊರೆದು ಆಶಾಭಾವನೆಯನ್ನು ಬೆಳೆಸಿಕೊಳ್ಳಬೇಕು, ಭಾಷೆ ಕಲಿಕೆಗೆ ವಯಸ್ಸಿನ ಮಾನದಂಡವಿಲ್ಲ. ಈ ಪ್ರಪಂಚದಲ್ಲಿ ಎಲ್ಲಾ ಹಂತಗಳು ಕಲಿಯುವದೇ ಆಗಿವೆ.
ಕಲಿಕೆಯ ಸಂದರ್ಭದಲ್ಲಿ ನಾವು ಮಕ್ಕಳಲ್ಲಿ ಮಕ್ಕಳಾಗಬೇಕು,

ಇಂಗ್ಲೀಷ್ ಕಲಿಕೆಗೆ ಖಾಸಗಿ ಸಂಸ್ಥೆಗಳು ಮುಂದಾಗಿವೆ. ಇವುಗಳ ಮೂಲಕವೂ ಕಲಿಯಬಹುದಾಗಿದೆ. ಭಾಷೆ ಕಲಿಕೆಯ ಸಂದರ್ಭದಲ್ಲಿ ಕಲಿತಿದ್ದನ್ನು ಮರೆಯುವಂತಾಗಬಾರದು. ಕಲಿಯುವ ಭಾಷೆ ದಿನಿತ್ಯದ ಸಂವಹನ ಕ್ರಿಯೆಯನ್ನಾಗಿ ಪರಿವರ್ತನೆ ಮಾಡಿಕೊಂಡಾಗ ಕಲಿಕೆ ಮತ್ತಷ್ಟು ಸರಳವಾಗುತ್ತದೆ. ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಇಂಗಿಳಷ್ ಕಲಿಕೆ ಅನಿವಾರ್ಯ. ಸಂಪರ್ಕ-ಸಂವಹನ ಕ್ರಿಯೆ ಬಲವಾಗಿದ್ದಷ್ಟು ವ್ಯಕ್ತಿಗೆ ತನ್ನನ್ನು ಗುರುತಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯ. ಭಾಷೆಯ ಜ್ಞಾನ ಇರದಿದ್ದರೆ ಉದ್ಯೋಗಕ್ಕೂ ಸಂಚಕಾರ. ಇಂಗ್ಲೀಷ ಕಬ್ಬಿಣದ ಕಡಲೆಯೇನೂ ಅಲ್ಲ. ಇಂಗ್ಲೀಷ್ ಕಲಿತು ಅರಳು ಹುರಿದಂತೆ ಮಾತನಾಡಬಹುದಾದ ಶಕ್ತಿ ನಮ್ಮಲ್ಲಿದೆ ಎಂಬುದನ್ನು ತೋರಿಸಿ ಕೊಡಬೇಕು.



-ಅಮರೇಶ ನಾಯಕ ಜಾಲಹಳ್ಳಿ
Cell-9945268059

Friday, 30 December 2011

Dreams (Published)



ಕನಸು ಕನಸಾಗಿ ಉಳಿಯದಿರಲಿ..

 ನಾ ವು ಏನಾದರೊಂದನ್ನು ಸಾದಿಸಬೇಕಾದರೆ ಬರೀ ಕನಸು ಕಾಣುತ್ತಾ ಕುಳಿತರೆ ಸಾಧ್ಯವಾಗುವದಿಲ್ಲ, ಕಂಡ ಕನಸನ್ನು ನನಸು ಮಾಡಿಕೊಳ್ಳುವ ಬಗ್ಗೆ ವಿಚಾರ ಮಾಡುತ್ತಾ, ಅದೇ ಪ್ರಕಾರ ಕಾರ್ಯ ಮಾಡುತ್ತಾ  ಬರಬೇಕಾಗುತ್ತದೆ. ಕಾರ್ಯ ಪ್ರವೃತ್ತರಾದರೆ ಅರ್ಧದಷ್ಟು ಕೆಲಸ ಮುಗಿದಂತೆಯೇ, ಆರಂಭದಲ್ಲಿ ಉತ್ಸಾಹ ತೋರಿ ಬರು ಬರುತ್ತಾ ಉತ್ಸಾಹ ಕಡಿಮೆಯಾದರೆ... ಕಾರ್ಯವು ಅಪೂರ್ಣವಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಒಳ್ಳೆಯ ಆಲೋಚನೆ, ಕನಸು ಬಂದೇ ಬರುತ್ತದೆ, ತಕ್ಷಣ ಅದನ್ನು ಮರೆತು ಹೋಗದಂತೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವದು ಉತ್ತಮ, ಆ ಕನಸು ನನಸಾಗುವ, ಆಲೋಚನೆ ಈಡೇರುವ ಕಾಲ ಬರಬಹುದು, ಅದನ್ನು ನೀವೇ ಮಾಡಬೇಕು, ಅದೊಂದು ಕನಸು ಎಂದು ಸುಮ್ಮನಿದ್ದರೆ ಜೀವನದಲ್ಲಿ ಯಾವುದನ್ನು ಸಾಧಿಸಲು ಸಾಧ್ಯವಾಗುದಿಲ್ಲ.

 ಕನಸಿನ ಬಗ್ಗೆ ಮಹಾನ್ ವಿದ್ವಾಂಸರು, ತತ್ವಜ್ಞಾನಿಗಳು ಈ ರೀತಿ ಹೇಳಿದ್ದಾರೆ. ನಾವು ಕಾಣುವ ಕನಸು ಕನಸಾಗಿ ಉಳಿಯಬಾರದು, ಕನಸನ್ನು ನನಸು ಮಾಡುವವರು ನಾವೇ ಆಗಬೇಕು...   ಮಲಗಿದ್ದಾಗ ಕಾಣುವ ಕನಸು ಕನಸಲ್ಲ, ಯಾವ ಕನಸು ಮಲಗಲು ಬಿಡುವದಿಲ್ಲವೋ ಅದು ಕನಸು, ನಾವು ಕಂಡ ಕನಸು ನನಸಾಗುವ ತನಕ ಪ್ರಯತ್ನ ಮಾಡುವದಷ್ಟೇ ನಮ್ಮ ಕೆಲಸ. ಸಾಧನೆಯತ್ತ ಸಾಗಬೇಕಾದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ಮಾಡಬೇಕು, ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ, ಮನುಷ್ಯನ ಆಲೋಚನೆಗಳೇ, ದೇಶವನ್ನು ಆಳುತ್ತವೆ ಎನ್ನುವದು ಸತ್ಯ.

ಮನುಷ್ಯನಿಗೆ ಕನಸು ಬೀಳುವದು ಸಾಮಾನ್ಯ, ಆ ಕನಸುಗಳೇ ಅವನ ಅವನ ಜೀವನದ ಹಾದಿಯನ್ನು ಬದಲಾಯಿಸಬಲ್ಲವು, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ದಿಟ್ಟ ನಿಧಾರ ಕೈಗೊಳ್ಳಬೇಕು, ನಾವು ಯಾವ ಬೀಜ ಬಿತ್ತುತ್ತೇವೋ ಅದಕ್ಕೆ ಸಂಬಂಧಪಟ್ಟ ಸಸಿ ಮಾತ್ರ ಮೊಳಕೆಯೊಡೆಯುತ್ತದೆ, ಹಾಗೆಯೇ ನಾವು ಏನನ್ನು ಆಲೋಚಿಸುತ್ತೇವೆಯೋ ಫಲ ಕೂಡ ಹಾಗೆ ಇರುತ್ತದೆ. ನಕಾರಾತ್ಮಕವಾಗಿ ಆಲೋಚಿಸಿದರೆ ಫಲಿತಾಂಶವು ನಕಾರಾತ್ಮಕವಾಗಿಯೇ ಇರುತ್ತದೆ, 'ನಾನು ಮಾಡಬಲ್ಲೆ, ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಮೂಡಿದರೆ ... ಬಾಲ್ಯದಿಂದಲೂ ನಮ್ಮ ಮೆದುಳಿನಲ್ಲಿ ವಿವಿಧ ರೂಪಗಳಲ್ಲಿ ನಿಕ್ಷಿಪ್ತವಾಗಿರುವ ಶಕ್ತಿಯ ವಿಕಾಸಗೊಂಡು , ಹೊರಹೊಮ್ಮಿ ನಮ್ಮನ್ನು ಕಾಯರ್ೋನ್ಮುಖರನ್ನಾಗಿ ಮಾಡುತ್ತದೆ. ಸಕಾರಾತ್ಮಕ ಆಲೋಚನೆಗಳೇ ಗೆಲುವಿನ ರಹಸ್ಯಗಳೆಂದು ಹೇಳಬಹುದು.

 ಒಬ್ಬ ಬಡತನ ಕುಟುಂಬದ ವ್ಯಕ್ತಿಗೆ ವಿಜ್ಞಾನ ಶಾಸ್ತ್ರದ ಅಧ್ಯಯನ ಮಾಡುವ ಕೋರಿಕೆ ತೀವ್ರವಾಗಿತ್ತು. ಆ ದಿನಗಳಲ್ಲಿ ವಿಜ್ಞಾನ ಓದುವದೆಂದರೆ, ನವಾಬರ ಸಂತಾನಕ್ಕೆ ಸೀಮಿತವಾಗಿತ್ತು, ಆದರೆ ಆತನಲ್ಲಿ ಆಸೆ ಸಾಯಲಿಲ್ಲ, ತಾನೊಬ್ಬ ಉನ್ನತ ವಿಜ್ಞಾನಿಯಾಗಬೇಕೆಂಬ ಆಸೆ ಹತ್ತಿಕ್ಕಲಿಲ್ಲ, ಆ ಅಭಿಲಾಷೆಯಿಂದ ತನ್ನ ಮನಸ್ಸಿನ ತುಂಬ ಅದೇ ಆಲೋಚನೆಗಳನ್ನು ತುಂಬಿಕೊಂಡ ಹಠಾತ್ತನೆ ಆತನಿಗೊಂದು ಆಲೋಚನೆ ಹೊಳೆಯಿತು, ದೊಡ್ಡ ವಿಜ್ಞಾನಿ ಎಂದು ಹೆಸರು ಪಡೆದಿದ್ದ ಹ್ಯಾಂಘ್ರೀ ಡೇವಿಗೆ ನೇರವಾಗಿ ಕಾಗದ ಬರೆದ, ಆ ಪತ್ರದಲ್ಲಿ ತನ್ನ ವ್ಯಥೆಯನ್ನು ವಿವರಿಸಿ, ತನ್ನ ಕನಸು ನನಸಾಗಿಸಿಕೊಳ್ಳುವ ಮಾರ್ಗ ಏನಾದರೂ ಇದ್ದರೆ ಹೇಳಿ ಪುಣ್ಯ ಕಟ್ಟಿಕೊಳ್ಳುವಂತೆ ಪ್ರಾಥಿಸಿದ, ಡೇವಿ ಆ ಪತ್ರವನ್ನು ಓದಿ ಪ್ರತಿಕ್ರಿಯಿಸಿದರು, ಆತನಿಗೆ ಸಂದರ್ಶನಕ್ಕೆ ಬರುವಂತೆ ಆಹ್ವಾನಿಸಿದರು, ಸಂದರ್ಶನದಲ್ಲಿ ಆತನ ಜಿಜ್ಞಾಸೆಯನ್ನು ಗಮನಿಸಿದ ಡೇವಿ, ಆತನನ್ನು ತನ್ನ ಸಹಾಯಕನಾಗಿ ನೇಮಿಸಿಕೊಂಡ, ಅಲ್ಲಿ ಶಿಕ್ಷಣ ಯಶಸ್ವಿಯಾಗಿ ಸಾಗಿತು, ತಾನು ಪ್ರೀತಿಸಿದ ವಿಜ್ಞಾನ ಶಾಸ್ತ್ರದ ಅಧ್ಯಯನಕ್ಕೆ ಶ್ರಮಿಸಿದ, ತನ್ನ ಜೀವನವನ್ನು ಮುಡುಪಾಗಿರಿಸಿದ, ಮುಂದೆ ಶ್ರೇಷ್ಠ ವಿಜ್ಞಾನಿಯಾದ, ಆ ವ್ಯಕ್ತಿಯೇ ಮೈಖೆಲ್ ಫ್ಯಾರಡೇ, ಫ್ಯಾರಡೇಗೆ ಏನಾದರೂ ಸಕಾರಾತ್ಮಕ ದೃಷ್ಟಿ ಇಲ್ಲದೆ ಹೋಗಿದ್ದರೆ ವಿದ್ಯುತ್ ಸಂಶೋಧನಾ ರಂಗದಲ್ಲಿ ಬೆಳಕು ಬೀರುತ್ತಲೇ ಇರಲಿಲ್ಲ.

 ದಿನವೆಲ್ಲಾ ಮನುಷ್ಯ ಏನೆಲ್ಲಾ ಕುರಿತು ಆಲೋಚಿಸುತ್ತಾನೋ ಅದೇ ಆತನ ವ್ಯಕ್ತಿತ್ವಕ್ಕೆ ನಿದರ್ಶನವಾಗಿ ಬದಲಾವಣೆ ಹೊಂದುತ್ತದೆ. ವಿಜೇತರಾಗಿ ಜೀವಿಸಲು ನಿಮಗೆ ಅಗತ್ಯವಾದ ಆ ಸ್ಪೂತರ್ಿ-ಪ್ರೋತ್ಸಾಹ ಸಮೃದ್ದವಾಗಿ ಲಭಿಸಿದಾಗಲೇ ಕನಸನ್ನು ನನಸಾಗಿಸಿಕೊಳ್ಳುತ್ತಾ, ಅಸಾಧ್ಯವೆನಿಸಿದ್ದನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.

-ಅಮರೇಶ ನಾಯಕ ಜಾಲಹಳ್ಳಿ
-9945268059

Farmer (Published)


ರೈತನ ಕಣ್ಣೊರೆಸಿ




ಇಂದು ಎಲ್ಲರೂ ಪಾಶ್ಚಿಮಾತ್ಯ ಬೆಳವಣಿಗೆಗೆ ಮಾರು ಹೋಗುತ್ತಿದ್ದಾರೆ, ನೂತನ ಯುಗದಲ್ಲಿ ತಂತ್ರಜ್ಞಾನ ತನ್ನದೇ ಆದ ಪ್ರಭಾವ ಬೀರುತ್ತದೆ. ಎಲ್ಲರೂ ಆಸೆಯಿಂದ ಹಣ ಗಳಿಕೆ ಮಾರ್ಗ ಹುಡುಕುತ್ತಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಅನ್ನ ನೀಡುವ ಭೂ ತಾಯಿಯನ್ನೇ ಮರೆತಿದ್ದಾರೆ. ಹಣದ ಆಸೆಗಾಗಿ ಭೂಮಿ ಮಾರುತ್ತಿದ್ದಾರೆ, ಕೃಷಿ ಮರೆಯುತ್ತಿದ್ದಾರೆ.

ಭಾರತ ಹಳ್ಳಿಗಳ ದೇಶ ಹಾಗೂ 'ಕರಷಿ ಪ್ರಧಾನ ರಾಷ್ಟ್ರ' ಮುಂದುವರೆಯುತ್ತಿರುವ ದೇಶ. ಅದಕ್ಕೆ ಕೃಷಿಯೇ ಕಾರಣ. ಉತ್ತಿ, ಬಿತ್ತಿ ಬೆಳೆದ ಬೀಜಗಳು, ಧಾನ್ಯಗಳು ರಫ್ತಾಗುತ್ತವೆ. ಎಲ್ಲರಿಗೆ ಅನ್ನ ನೀಡಿ ಕಣೊರೆಸುವವನು ರೈತ, ಇಂದು ರೈತನೇ ಕಣ್ಣಿರಿಡುವ ಪರಿಸ್ಥಿತಿ ಉಂಟಾಗಿದೆ. ಸಾಲ ಮಾಡಿ ಬೆಳೆದ ಬೆಲೆಯಿಲ್ಲ. ಮಧ್ಯವತರ್ಿಗಳ ಆವಳಿ ಹೆಚ್ಚಾಗುತ್ತದೆ.

ರೈತನ ಉತ್ಪನ್ನಗಳಿಗೆ ನಿಗಧಿತ ಬೆಲೆ ನೀಡುವ ಕಾರ್ಯವನ್ನು ಸಕರ್ಾರ ಮಾಡಬೇಕಾಗಿದೆ. ಬೆಳೆಗೆ ತಕ್ಕ ಬೆಲೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಸಾಮಾನ್ಯವಾಗುತ್ತಿದೆ. ಧಾನ್ಯದ ಬೆಲೆ ಗಗನಕ್ಕೇರಿ ಬಡತನ, ಹಸಿವಿನಿಂದ ಜನ ಆತ್ಮಹತ್ಯೆ ಮಾಡಿಕೊಇಳ್ಳುವ ಪರಿ ಇನ್ನೊಂದು ಕಡೆ. ಈ ವ್ಯವಸ್ಥೆಯಿಂದ ಹೊರಬರಬೇಕಾದರೆ ಯುವಕರು ಎಚ್ಚೆತ್ತುಕೊಳುಬೇಕು. ಇಲ್ಲವಾದರೆ ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದರೆಂಬಂತೆ ಆಗುತ್ತದೆ.

ಓದು ನೌಕರಿಗಾಗಿ ಅಲ್ಲ ಜ್ಞಾನಕ್ಕಾಗಿ, ಎಷ್ಟೋ ಜನ ಡಿಗ್ರಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸಫಲರಾದವರೂ ಇದ್ದಾರೆ. ವಿದ್ಯಾಥರ್ಿಗಳು ಹೊ ಹೊಸ ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಭಾಗವಹಿಸಿದರೆ ದೇಶಕ್ಕೆ ಅನ್ನದ ಬರ ಇರುವದಿಲ್ಲ. ಈ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ.

ಕಣ್ತೆರೆದು ರೈತನಾದ ಅನ್ನದಾತನನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಬೇಕಾಶಗಿದೆ. ದೇಶ ಕಾಪಾಡುವವನು ಸೈನಿಕನಾದರೆ, ಅನ್ನದಾತನಾಗಿರುವ ರೈತನನ್ನು ಕಾಪಾಡುವದು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ರೈತನನ್ನು ಕಾಪಾಡಿ ಕೃಷಿಗೆ ಹೆಚ್ಚು ಒತ್ತು ನೀಡುವದು ಆದ್ಯ ಕರ್ತವ್ಯ.



-ಅಮರೇಶ ನಾಯಕ ಜಾಲಹಳ್ಳಿ 
Cell-9945268059               

Pratibhe


ಪ್ರತಿಭೆ ಗುರುತಿಸಿ ಸ್ಪೂತರ್ಿಯಾಗಿ..

 ಪ್ರತಿಯೊಬ್ಬರೂ ಜೀವನದಲ್ಲಿ ಇನ್ನೊಬ್ಬರಿಂದ ಸಹಾಯ ಪಡೆಯಬೇಕಾದ ಸ್ಥಿತಿ ಒದಗಬಹುದು, ಯಾವ ಮನುಷ್ಯನನ್ನು ಕೀಳಾಗಿ ಕಾಣುವ, ಉದಾಸೀನ ತೋರುವ ಮನೋಭಾವ ಇರಬಾರದು. ಅವರು ಹೇಗೆ ಇರಲಿ, ಆತ್ಮೀಯತೆ, ಮಾನವೀಯತೆಯಿಂದ ಕಾಣಬೇಕಾದುದು ಮನುಷ್ಯನ ಧರ್ಮ. ಯಾರೇ ಆದರೂ ಇನ್ನೊಬ್ಬರಿಗೆ ಸಹಾಯ ಮಾಡುವಂತಹ ಗುಣ ಹೊಂದಬೇಕು. ಸಹಾಯ ಮಾಡಲು ಮುಂದಾಗಬೇಕು, ಆಗ ಮಾತ್ರ ಮತ್ತೊಬ್ಬರು ನಮಗೆ ನೆರವಾಗಲು ಬಯಸುತ್ತಾರೆ. ನಮಗೆ ಆ ಇಚ್ಚೆ ಇಲ್ಲದಿದ್ದರೆ, ಇನ್ನೊಬ್ಬರು ಬಂದು ಸಹಾಯ ಮಾಡಲು ಹೇಗೆ ಸಾಧ್ಯ? ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕಾಗುತ್ತದೆ, ಪ್ರತಿಫಲಾಫೇಕ್ಷೆ ಸಲ್ಲದು, ಇದೊಂದು ಹೆಲ್ಪಿಂಗ್ ನೇಚರ್, ಈ ಗುಣವನ್ನು ಎಲ್ಲರೂ ಬೆಳೆಸಿಕೊಂಡರೆ ಸಮಯ, ಸಂದರ್ಭ ಬಂದಾಗ, ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವವರು ಇರುತ್ತಾರೆ.

ಪ್ರತಿಯೊಬ್ಬರನ್ನು ಅವಲಭಿಸಿ ಜೀವಿಸುವದರಿಂದ ಜವಾನನಿಂದ, ದಿವಾನರತನಕವೂ ಸಹಾಯ ಕೇಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಆದ್ದರಿಂದ ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವದು ಸರಿಯಲ್ಲ, ಯಾವ ಹುತ್ತಿನಲ್ಲಿ ಯಾವ ಹಾವು ಇರುತ್ತದೆಂದು ಯಾರು ಬಲ್ಲರು. ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರತಿಭೆ ಇರುತ್ತದೆ, ಆ ಪ್ರತಿಭೆಯಿಂದ ಆತ ಬೆಳೆಯಲು ಸಹಾಯ ಮಡಬೇಕು. ಪ್ರತಿಭೆ ಗುರುತಿಸಿ ಪರಿಚಯಿಸುವದು, ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗು ನೀಡಿ. ಆತನ ಜೀವನದಲ್ಲಿ ಆಶಾಕಿರಣ ಬೆಳಗಿಸಿದಂತಾಗುತ್ತದೆ, ನಮ್ಮ ಬೆನ್ನನ್ನು ನಾವೇ ನೋಡಿಕೊಳ್ಳುವ ಸಾಧ್ಯತೆ ಇಲ್ಲ, ಇನ್ನೊಬ್ಬರು ಹೇಳಿದಾಗ ನಮ್ಮ ಬೆನ್ನ ಮೇಲಿರುವ ಕಲೆಗಳು ತಿಳಿಯುವಂತೆ, ನಮ್ಮಲ್ಲಿ ಹುದುಗಿರುವ ಕಲೆ ನಮಗೆ ಗೊತ್ತಾಗುವದಿಲ್ಲ, ಅದು ಬೇರೆಯವರಿಗೆ ತಿಳಿದಿರುತ್ತದೆ. ಆ ಕಲೆಯನ್ನು ಗುರುತಿಸಿ ಪರಿಚಯಿಸಬೇಕು, ಅದಕ್ಕೆ ಪ್ರೋತ್ಸಾಹ ನೀಡಬೇಕು. ಇದು ಅ ವ್ಯಕ್ತಿ ಕ್ರಿಯಶೀಲನಾಗಲು ಕಾರಣವಾಗುತ್ತದೆ.


ಸಾಧನೆ ಮಾಡಬೇಕೆಂದು ಛಲ ಇರುವವರಿಗೆ ಸ್ಪೂತರ್ಿ ಬೇಕಾಗುತ್ತದೆ, ಸ್ಪೂತರ್ಿಯನ್ನು ತುಂಬುವ ವ್ಯಕ್ತಿಗಳಾಗಿ, ನಿಮಗೂ ಇನ್ನೊಬ್ಬರು ಸ್ಪೂತಿಯ ಸೆಲೆಯಾಗಿ ನಿಲ್ಲಬಲ್ಲರು. ಇನ್ನೊಬ್ಬರ ಯಶಸ್ಸಿಗೆ ಕಾರಣರಾಗಿ ಅದರಿಂದ ಸಿಗುವ ಸಂತೋಷದ ಅನುಭವ ಪಡೆಯಿರಿ, ಇನ್ನೊಬ್ಬರ ಸಂತೋಷಕ್ಕೆ ಕಾರಣ ನೀವಾಗಿ, ಆದರೆ ಆ ಸಂತೋಷದಲ್ಲಿ ಭಾಗಿಯಾಗಬೇಡಿ, ಇನ್ನೊಬ್ಬರ ದು:ಖದಲ್ಲಿ ಭಾಗಿಯಾಗಿ, ಆದರೆ ಆ ದು:ಖಕ್ಕೆ ಕಾರಣ ನೀವಾಗಬೇಡಿ. ದೀಪವು ತನ್ನನ್ನು ಸುಟ್ಟುಕೊಂಡು ಎಲ್ಲರಿಗೂ ಬೆಳಕು ನೀಡುತ್ತದೆ, ಆದ್ದರಿಂದ ಆ ದೀಪಕ್ಕೆ ತುಂಬಾ ಮಹತ್ವ ವಿದೆ, ಅದು ಬೆಳಕು ಚೆಲ್ಲುವದರಿಂದ ಕತ್ತಲೆ ನಿವಾರಣೆಯಾಗುತ್ತದೆ, ಇನ್ನೊಬ್ಬರ ಬದುಕಿಗೆ ಬೆಳಕು ನೀಡುವ ಮಾರ್ಗದರ್ಶಕರಾಗಿ ಹೊರಹೊಮ್ಮಿರಿ.

ಪ್ರತಿಯೊಬ್ಬರೂ ವಿಶಿಷ್ಟ ಶಕ್ತಿ, ಸಾಮಥ್ರ್ಯಗಳನ್ನು ಹೊಂದಿರುತ್ತಾರೆ, ಅವರ ಆ ವಿಶಿಷ್ಠ ಗುಣಗಳ ಲಾಭ ಇನ್ನೊಬ್ಬರು ಪಡೆಯಬೇಕು, ಅದಕ್ಕೆ ಪ್ರತಿಯೊಬ್ಬರ ಸಹಕಾರ, ಸಹಾನುಭೂತಿಗಳು ಅಗತ್ಯ, ಸಮಾಜದ ಒಳಿತಿಗಾಗಿ ಅದರ ಬಳಕೆ ಆಗಬೇಕು, ಸಮಾಜಕ್ಕೆ ಅವರ ವಿಶಿಷ್ಟ ಕೊಡುಗೆ ದೊರೆಯಬೆಕಾದರೆ ಅವರೂ ಸಹ ಆ ನಿಟ್ಟಿನಲ್ಲಿ ಕಾರ್ಯ ಮಾಡಿ ತೋರಿಸುವ ಸಾಮಥ್ರ್ಯ ಹೊಂದಬೇಕಾಗುತ್ತದೆ. ಇರುವೆಗಳ ಸಂಘ ಜೀವನವು ಮನುಷ್ಯನಿಗೆ ಒಂದು ನೀತಿ ಕಥೆಯನ್ನೇ ತಿಳಿಸುತ್ತದೆ. ನಾವು ನಮ್ಮವರು ಎನ್ನುವ ಭಾವನೆಯಿಂದ ಕೂಡಿ ಬಾಳುವದು ವಿವಿಧತೆಯಲ್ಲಿ ಏಕತೆ ತೋರಿಸುತ್ತದೆ.

ಇಂದು ಮತೊಬ್ಬರನ್ನು ನೋಯಿಸಿ, ಹಿಂಸಿಸಿ ಬದುಕುವವರನ್ನು ಕಾಣುತ್ತೇವೆ, ಅದು ಮಾನವೀಯ ಮೌಲ್ಯಗಳಿಗೆ ಕುಂದು ತರುವಂತಹ ಕೆಲಸ. ಅಮಾನವೀಯ ಲಕ್ಷಣ. ಅಂತಹ ವ್ಯಕ್ತಿಗಳು ಇವತ್ತು ಇನ್ನೊಬ್ಬರನ್ನು ನೋಯಿಸುವಂಥಾ ಕೆಲಸವನ್ನು ಮಾಡಿಲ್ಲ, ಇವತ್ತು ನನ್ನ ಆತ್ಮಸಾಕ್ಷಿಗೆ ವಿರುದ್ದವಾದ ನಿಧರ್ಾರಕ್ಕೆ ಬದ್ದನಾಗಲಿಲ್ಲ, ಇವತ್ತು ಕೈಲಾದಷ್ಟು ಪರೋಪಕಾರ ಮಾಡಿದ್ದೀನಿ ಎಂದು ತಮಗೆ ತಾವೇ ಹೇಳಿಕೊಂಡು ಮಾನವನಾಗಿ ಬಾಳಲು ಪ್ರಯತ್ನಪಡಬೇಕು, ಇದು ನಾಳೆಗೆ ಬೇಕಾದ ಮನೋಸ್ಥೈರ್ಯ, ಉತ್ಸಾಹವನ್ನು ಕೊಡುತ್ತದೆ, ಜೀವನದಲ್ಲಿ ಹುಮ್ಮಸ್ಸಿನಿಂದ ಬದುಕಲು ಸಹಾಯವಾಗುತ್ತದೆ.

ಮಹಾತ್ಮರು ಹೇಳಿದಂತೆ ಜೀವನ ಅಲ್ಪಕಾಲದ್ದು, ಅದು ಅರ್ಥಪೂರ್ಣವಾಗುವಂತೆ ಬದುಕುವದು ಒಳಿತು, ಕಷ್ಟಗಳು ನಮ್ಮಲ್ಲಿರುವ ಧೈರ್ಯವನ್ನು ಪರೀಕ್ಷೆಗೆ ಒಡ್ಡುತ್ತವೆ ಎನ್ನಬಹುದು, ಧೈರ್ಯ ಎಂಬುದು ಭಯದ ಮೇಲೆ ಸವಾರಿ ಮಾಡುವ ಯಜಮಾನನಿದ್ದಂತೆ. ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎನ್ನುವಂತೆ ಜೀವನವು ಸ್ವಾರಸ್ಯಮಯವಾಗಿದೆ. ಜೀವನದಲ್ಲಿ ಸುಖವೂ ಬರುತ್ತದೆ, ಕಷ್ಟವೂ ಬರುತ್ತದೆ ಯಾವುದೂ ಸ್ಥಿರವಲ್ಲ, ಕಾಲಚಕ್ರದಂತೆ ತಿರುಗುತ್ತಿರುತ್ತದೆ, ಕಾಲಚಕ್ರದಲ್ಲಿ ಬಿದ್ದು ಒದ್ದಾಡುವದಕ್ಕಿಂತ ಪರೋಪಕಾರಿಯಾಗಿ ಜೀವಿಸಬೇಕು. ಅಲ್ಪ ಕಾಲದ ಜೀವನದಲ್ಲಿ ಅಪಕಾರಿಗಳಾಗುವದಕ್ಕಿಂತ ಉಪಕಾರಿಗಳಾಗುವದು ಲೇಸು. ಇದನ್ನು ಅರಿತು ಬಾಳುವದು ಇನ್ನೂ ಲೆಸು.
ಜೀವನದಲ್ಲಿ ಬರುವಂತಹ ಅವಕಾಶಗಳನ್ನು ಕಳೆದುಕೊಳ್ಳದೆ, ಅದನ್ನು ಸದುಪಯೋಗ ಮಾಡಿಕೊಂಡು ನೀವಿಟ್ಟುಕೊಂಡ ಗುರಿಗಳನ್ನು ಸಾಧಿಸುವತ್ತ ನಿಮ್ಮ ವಿಚಾರ ಲಹರಿ ಹರಿದು ಬರಲಿ, ಪ್ರತಿಭೆಗಳನ್ನು ಗುರುತಿಸಿ ಬೆಳೆಸುವದು ಸುಲಭದ ಮಾತಲ್ಲ ಅದೊಂದು ಕಲೆ ಎನ್ನಬಹುದು. 





-ಅಮರೇಶ ನಾಯಕ ಜಾಲಹಳ್ಳಿ
Cell-9945268059.

Wednesday, 28 December 2011

Knowledge is Power


ಬಾಳು ಬೆಳಗಲು ಜ್ಞಾನದ ಬೆಳಕು...

 ಜ್ಞಾನದಿಂದಲಿ ಇಹವು | ಜ್ಞಾನದಿಂದಲಿ ಪರವು |
ಜ್ಞಾನವಿಲ್ಲದೆಲೆ ಸಕಲವೂ ತನಗಿದ್ದು |
ಹಾನಿ ಕಾಣಯ್ಯ ಸರ್ವಜ್ಞ ||

 ಜ್ಞಾನದಿಂದಲೇ ಈ ಲೋಕದಲ್ಲಿ ಸುಖ ಹಾಗೂ ಪರಲೋಕದಲ್ಲಿ ಮುಕ್ತಿ ದೊರೆಯುವದು, ಜ್ಞಾನವೇ ಇಲ್ಲದಿದ್ದರೆ ತನಗೆ ಸಿಕ್ಕಿರುವ ಸಕಲ ವಸ್ತುಗಳೂ ವ್ಯರ್ಥ, ಎನ್ನುವದು ಸರ್ವಜ್ಞ ನುಡಿಯ ಒಳಾರ್ಥವಾಗಿದೆ. ಜೀವನದಲ್ಲಿ ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವದು ಜ್ಞಾನ, ಇದು ಇದ್ದಾಗ ಮಾತ್ರ ಸಮಾಜದಲ್ಲಿ ತಲೆಯೆತ್ತಿ ಬದುಕಲು ಸಾಧ್ಯವಾದೀತು. ಜ್ಞಾನವು ಸಿಗುವ ವಸ್ತುವಲ್ಲ, ಅದನ್ನು ಪಡೆದುಕೊಳ್ಳಬೇಕಾಗಿದೆ, ಈ ಜ್ಞಾನ ಎನ್ನುವದು ಅಳಿಸಲಾಗದಂತಹ ವಿದ್ಯೆ, ಎಷ್ಟು ಸಲ ಖಚರ್ು ಮಾಡಿದರೂ ಹೆಚ್ಚಾಗುತ್ತದೆ, ಹೊರತು ಕಡಿಮೆಯಾಗುವದಿಲ್ಲ. ಜ್ಞಾನದ ಮಹಿಮೆಯ ಬಗ್ಗೆ ಬದುಕನ್ನು ಅರ್ಥ ಮಾಡಿಕೊಂಡವರು, ಬದುಕಿನ ಕವಲು ದಾರಿಗಳಲ್ಲಿ ಹಲವು ಮಗ್ಗುಲುಗಳನ್ನು ಕಂಡವರು, ಬದುಕು, ಬಾಳಿನ ಸ್ವಾರಸ್ಯವನ್ನು ಅರಿತವರು. ಇದರ ಕುರಿತು ಹಲವಾರು ಉಪನ್ಯಾಸ, ಉಪದೇಶಗಳನ್ನು ನೀಡಿದ್ದಾರೆ. ವೇದಗಳು, ಉಪನಿಷತ್ತುಗಳು ಜ್ಞಾನದ ಹಲವು ಮಾರ್ಗಗಳನ್ನು ತೋರಿಸಿ ಕೊಟ್ಟಿವೆ.

 ಇಂದು ಬೆಳೆದು ನಿಂತಿರುವ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದರ ಬಗ್ಗೆ ಕನಿಷ್ಟ ಜ್ಞಾನ ಪಡೆಯುವದು, ಇಂದಿನ ಅತಿವೇಗದ ಜೀವನದಲ್ಲಿ ಎಲ್ಲವನ್ನು ತಿಳಿದುಕೊಂಡು ಬದುಕುವದು ಅವಶ್ಯವಾಗಿದೆ. ಪ್ರತಿಯೊಬ್ಬರೂ ಮುಂದೆ ಬರಬೇಕೆಂಬ ಆಸೆಯಿಂದ ತಮ್ಮ ಜೀವನದಲ್ಲಿ ಏನೆಲ್ಲಾ ಮಾಡಲು ಹೊರಡುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ತಮಗೆ ಏನೆಲ್ಲಾ ಅವಶ್ಯಕತೆಗಳು ಬೇಕು, ಮನುಷ್ಯ ಅದನ್ನು ಸೃಷ್ಟಿ ಮಾಡುವಂತಹ ಶಕ್ತಿ ಪಡೆದುಕೊಂಡಿದ್ದಾನೆ. ಆತನಿಗೆ ಅನುಕೂಲವಾಗುವಂತೆ ಸೋಫಾಸೆಟ್ ಇದೆ, ಡೈನಿಂಗ್ ಸೆಟ್ ಇದೆ, ಹ್ಯಾಂಡ್ ಸೆಟ್ ಇದೆ, ಟಿವಿ ಸೆಟ್ ಇದೆ, ಎಲ್ಲವೂ ಇದ್ದರೂ ಆತನ ಮೈಂಡ್ಸೆಟ್ ಮಾತ್ರ ಅಪ್ಸೆಟ್ ಆಗಿದೆ ಅದಕ್ಕೆ ಬೇಕಾಗಿರುವದು ಮೆಡಿಷನ್ ಅಲ್ಲ, ಮೆಡಿಟೇಶನ್ ಆಗಿದೆ ಎಂದು ಮುನಿಶ್ರೀಗಳು ಹೇಳಿದ್ದಾರೆ. 

ಇಂದು ಎಲ್ಲವೂ ಮಾನವ ನಿಮರ್ಿತ ವಸ್ತುಗಳಾಗಿ ಪರಿಣಮಿಸ ತೊಡಗಿವೆ. ನಿಸರ್ಗ ಸೌಂದರ್ಯವನ್ನು ಕೂಡ ಮನುಷ್ಯ, ಮಾನವ ನಿಮರ್ಿತ ವಸ್ತುವನ್ನಾಗಿ ಹಿಡಿದಿಟ್ಟಿದ್ದಾನೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮನುಷ್ಯ ತನ್ನ ಹಿಡಿತವನ್ನು ಸಾಧಿಸಿಕೊಳ್ಳುತ್ತಿದ್ದಾನೆ, ತನ್ನ ಬುದ್ದಿಮಟ್ಟಕ್ಕೆ ಮೀರಿ ಕೆಲಸ ಮಾಡುತ್ತಿದ್ದಾನೆ, ಇದು ಆತನಲ್ಲಿರುವ ಜ್ಞಾನದ ಶಕ್ತಿಯನ್ನು ತೋರಿಸುತ್ತದೆ. ಜ್ಞಾನ ಸಂಪಾದಿಸಿಕೊಳ್ಳಲು ಎರಡು ಮಾರ್ಗಗಳಿವೆ, ಒಂದು ಕೋಶ ಓದುವದು, ಇನ್ನೊಂದು ದೇಶ ನೋಡುವದು, ಅಕ್ಷರಸ್ಥರಷ್ಟೇ ಜ್ಞಾನ ಸಂಪಾದಿಸಿ ಎಲ್ಲವನ್ನು ಅರಿತವನಾಗುತ್ತಾನೆಂದರೆ ಅದು ತಪ್ಪು, ಓದದೆ ಇರುವಂತಹ ಎಷ್ಟೋ ಜನರು ಇಂದು ಹೆಚ್ಚು ಓದಿದವರಿಗೆ ನೌಕರಿ ನೀಡಿದ್ದಾರೆ. ಎಷ್ಟೋ ಜನರಿಗೆ ತಮ್ಮ ಅಂತ: ಶಕ್ತಿಯ ಅರಿವಿರುವದಿಲ್ಲ. ಅವರು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಏನೆಲ್ಲಾ ಮಾಡುವ ಸಾಧ್ಯತೆಗಳಿವೆ, ತಮ್ಮ ಜ್ಞಾನದ ಲಹರಿಯನ್ನು ಬಳಸಿಕೊಳ್ಳುವ ಪರಿ ಬದಲಾಗಬೇಕು.

ಒಂದು ಕಡೆ ಸರ್ವಜ್ಞ ಹೇಳುತ್ತಾನೆ ನನಗೆ ವಚನಗಳು ಹೇಳಲು ತಿಳಿದಿಲ್ಲ, ಆದರೆ ಜನರೆಲ್ಲಾ ಬಲವಂತವಾಗಿ ಹೇಳು ಎಂದಿದ್ದರಿಂದ ಶಿವನ ದಾಸಾನುದಾಸನಾಗಿ ನನಗೆ ತಿಳಿದಿದ್ದನ್ನು ಹೇಳಿದೆನು, ನಾನು ವಿದ್ಯೆಯ ಗರ್ವದಿಂದ ಸರ್ವಜ್ಞನೆಂದು ಹೇಳಿಕೊಳ್ಳುತ್ತಿಲ್ಲ, ನಾನು ಎಲ್ಲ ವಿದ್ಯಾವಂತರ ಹತ್ತಿರ ಒಂದೊಂದು ಮಾತನ್ನು ಕಲಿತು ವಿದ್ಯೆಯ ಪರ್ವತವೇ ಆದನು. ಆದರೆ ಈತನಿಗಿಂತ ತಿಳಿದವರು ಎಷ್ಟೋ ಜನ ಇದ್ದಾರೆ, ತಮ್ಮ ಬುದ್ದಿವಂತಿಕೆಯನ್ನು ಬಳಸಿರುವದಿಲ್ಲ, ಯಾರೊಬ್ಬರಲ್ಲಿ ವಿದ್ಯೆ ಇರುತ್ತದೆ, ಅವರು ತಾವೇ ಜಾಣರೆಂದು ತಿಳಿದು ಸುಮ್ಮನಿದ್ದರೆ, ಅವರಿಗಿಂತ ದಡ್ಡರು ಬೇರಾರು ಇಲ್ಲ. ಅವರಲ್ಲಿರುವ ಜ್ಞಾನವನ್ನು ಬಳಕೆ ಮಾಡದಿದ್ದರೆ, ಅದಕ್ಕೆ ತುಕ್ಕು ಹಿಡಿದು ಮಂಕು ಕವಿಯುತ್ತದೆ, ಮತ್ತೊಬ್ಬರಿಗೆ ಕಲಿಸಬೇಕು, ಹೇಳಿ ಕೊಡಬೇಕು, ಯಾರಿಗೆ ಕಲಿಯಲು ಉತ್ಸಾಹವಿರುತ್ತದೆಯೋ, ಅಂಥವರು ಕಲಿಸಲು ಯೋಗ್ಯರು, ಕಲಿಕೆ ನಿರಂತರವಾಗಿರಬೇಕು. ಅದು ನಿಂತ ನೀರಲ್ಲ ಹರಿಯುವ ನೀರು.

 ನಾವು ಎಲ್ಲೇ ಹೋದರೂ ಅಲ್ಲಿ ನಮ್ಮ ಮನಸ್ಸು ಬರುವದು, ಅಂದರೆ ಜ್ಞಾನ, ಅದು ಯಾರಿಂದಲೂ ಕದಿಯಲಸಾಧ್ಯವಾದ ವಸ್ತು., ಜ್ಞಾನವನ್ನು ಹಂಚುವದರಿಂದ ತಮ್ಮ ಜ್ಞಾನವು ವೃದ್ದಿಯಾಗುತ್ತದೆ ವಿನ: ಅದು ಕ್ಷೀಣಿಸದು. ಜ್ಞಾನ ಎನ್ನುವದು ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು. ನಿಂತಲ್ಲಿ ನಿಂತರೆ ಆ ನೀರು ಮಲೆತು, ಯಾವುದಕ್ಕೂ ಪ್ರಯೋಜನವಾಗದಂತಾಗುತ್ತದೆ. ಈ ಜಗತ್ತೇ ಒಂದು ವಿಶ್ವವಿದ್ಯಾಲಯ, ನಿಸರ್ಗವೇ ಪಾಠಶಾಲೆ, ಕಲಿಯಲು ಬಂದಿರುವ ನಾವೆಲ್ಲರೂ ವಿದ್ಯಾಥರ್ಿಗಳು, ತಿಳಿದುಕೊಳ್ಳುವ ಜಿಜ್ಞಾಸೆ ಇರಬೇಕು, ತಿಳಿಸುವ ಆಸೆ ಇರಬೇಕು, ಎಲ್ಲವೂ ಜಗತ್ತಿನ ಜ್ಞಾನ, ಎಂದು ಮಹಾಜ್ಞಾನಿಗಳಾದ ಬಿಜಾಪುರದ ಜ್ಞಾನಯೋಗಾಶ್ರಮದ ಶ್ವೇತ ವಸ್ತ್ರಧಾರಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳುತ್ತಾರೆ.  ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಪಸರಿಸಲಿ, ನಿಮ್ಮ ಜೀವನದಲ್ಲಿ ಅಧಿಕ ಜ್ಞಾನ ಗಳಿಸಿಕೊಂಡು ಮಹತ್ತರವಾದುದುದನ್ನು ಸಾಧಿಸಲು ಯತ್ನಿಸಬೇಕು. ಇದರಿಂದ ನಿಮ್ಮ ಬದುಕು ಬಂಗಾರವಾಗಬಲ್ಲದು.


-ಅಮರೇಶ ನಾಯಕ ಜಾಲಹಳ್ಳಿ.
Cell-9945268059.

Tuesday, 27 December 2011

Sole Geluvu (Published)

ಸೋಲೇ ಗೆಲುವಿನ ಸೋಪಾನ..

 ಮನುಷ್ಯ ಎಂಥವನೆನ್ನುವದು ಅವನು ಗೆದ್ದಾಗ ಗೊತ್ತಾಗುವದಿಲ್ಲ ಅದು ಅವನು ಸೋತಾಗ ಗೊತ್ತಾಗುತ್ತದೆ. ಸೋಲು ಮನುಷ್ಯನ ಬಲವನ್ನು ಹೆಚ್ಚಿಸುವಂತೆ, ಗೆಲುವು ಹೆಚ್ಚಿಸುವದಿಲ್ಲ, ಯಾಕೆಂದರೆ ದಾಹ ಆದಾಗಲೇ ನೀರಿನ ಮಹತ್ವ ತಿಳಿಯುವದು. ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದು ಇಲ್ಲ, ಆತ್ಮವಿಶ್ವಾಸ ಪ್ರಬಲವಾಗಿದ್ದಾಗ ಅಸಾಧ್ಯಾವಾದುದನ್ನು, ಸಾಧ್ಯ ಮಾಡಿ ತೋರಿಸಬಲ್ಲವನಾಗುತ್ತಾನೆ, ಪ್ರತಿಯೊಂದು ಗುರಿ ಮುಟ್ಟುವದಕ್ಕೂ ಹಲವಾರು ದಾರಿಗಳಿವೆ, ಸ್ಪಷ್ಠವಾದ ನಿಧರ್ಾರ, ಸಾಧಿಸುವ ಛಲ ಇರಬೇಕು.

ಆತ್ಮವಿಶ್ವಾಸ, ಧೈರ್ಯ, ಶ್ರದ್ದೆ, ಕೆಲಸ ಸಾಧಿಸುವ ನಿರಂತರ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಪ್ರಯತ್ನ ಎಂಬ ತಾಯಿಗೆ, ಅವಕಾಶ ಎಂಬ ತಂದೆಗೆ ಜನಿಸುವ ಮಗು ಅದೃಷ್ಟ, ಎನ್ನುತ್ತಾರೆ ತಿಳಿದವರು. ನಾವು ಮಾಡುವ ಪ್ರಯತ್ನವು ಯಶಸ್ಸಿಗೆ ಜಿಗಿದು ಹೋಗುವ ಸೋಪಾನವಾಗಿದೆ, ಪ್ರತಿಯೊಂದು ಮೆಟ್ಟಿಲನ್ನು ಏರಿ ಯಶಸ್ಸಿನ ಹಾದಿ ಹಿಡಿಯುವ ಪ್ರಯತ್ನ ಪ್ರತಿಯೊಬ್ಬರಲ್ಲೂ ಸದಾ ಇರಬೇಕು. ಬದುಕಬೇಕು ಬದುಕಿ ತೋರಿಸಬೇಕು, ಗೆಲ್ಲಬೇಕು ಎನ್ನುವ ಮನೋ ಭಾವನೆಯಿಂದ ಮುನ್ನಡೆಯಬೇಕು, ಗೆಲ್ಲುವ ನಿಧರ್ಾರ ತೊಟ್ಟವನು ಸೋಲುವದಕ್ಕೆ ಸಾಧ್ಯವಿಲ್ಲ.

 ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಹಂತದಲ್ಲಿ ಕಹಿ ಅನುಭವ ಆಗಿಯೇ ಆಗುತ್ತದೆ. ಅಂತಹ ಕಹಿ ಅನುಭವಗಳಿಂದ ಪಾಠ ಕಲಿತು, ಸಮಸ್ಯೆ ಗಳನ್ನು ಎದುರಿಸಿ ಬದುಕುವದು ಧೈರ್ಯವಂತರ ಹಾಗೂ ಆಶಾವಾದಿಗಳ ಲಕ್ಷಣವಾಗಿದೆ. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ, ಬೇರೆಯವರು ಬಂದು ರೂಪಿಸುತ್ತಾರೆಂದು ತಿಳಿದರೆ ಅದು ತಪ್ಪು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರ ಪೈ ಪೋಟಿ ಇರುವದರಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿ, ಗೆಲುವನ್ನಾಗಿ ಪರಿವತರ್ಿಸುವ ನಿಟ್ಟಿನಲ್ಲಿ ನಮ್ಮ ಆಲೋಚನಾ ಲಹರಿ ಇರಬೇಕು. ನಿಮ್ಮ ಸುಪ್ತ ಮನಸ್ಸಿನಲ್ಲಿ ಅಡಗಿರುವ ಶಕ್ತಿಯನ್ನು ಬಡಿದೆಬ್ಬಿಸಿ ಕಾರ್ಯಪ್ರವೃತ್ತವಾಗುವಂತೆ ಮಾಡಬೇಕಾಗುತ್ತದೆ.

 ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಕೇವಲ ಗುರಿಯನ್ನು ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸದೆ ಕನಸು ಕಾಣುತ್ತಾ ಕುಳಿತರೆ ಸಾಲದು. ಆ ದಿಶೆಯಲ್ಲಿ ಧೃಡ ಸಂಕಲ್ಪ ತಾಳಿ, ನಮ್ಮ ಮನಸ್ಸನ್ನು ಸನ್ನದ್ಧಗೊಳಿಸಬೇಕಾಗುತ್ತದೆ, ಪ್ರಯತ್ನದೊಂದಿಗೆ ಮುನ್ನುಗ್ಗಬೇಕಾಗುತ್ತದೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು, ಏನಾದರೂ ಮಾಡಬೇಕಾದರೆ ಅದಕ್ಕೆ ಮಾರ್ಗದರ್ಶನ ಅವಶ್ಯವಾಗಿ ಬೇಕಾಗುತ್ತದೆ, ಇದರಿಂದ ಸಾಧನೆ ಸುಲಭವಾಗುತ್ತದೆ. ಒಳ್ಳೆಯ ಕಾರ್ಯಕ್ಕೆ, ಹಲವು ವಿಘ್ನಗಳು ಎಂಬಂತೆ ನಮ್ಮ ಪ್ರಯತ್ನದಲ್ಲಿ ಹಲವು ಅಡ್ಡಿ ಆತಂಕಗಳು ಬರಬಹುದು, ಅವುಗಳಿಗೆಲ್ಲ ಅಂಜದೆ ದಿಟ್ಟ ಹೆಜ್ಜೆಯೊಂದಿಗೆ ಮುನ್ನುಗ್ಗಿದಾಗ ಮಾತ್ರ ನೀವು ಇಟ್ಟ ಪ್ರತಿಯೊಂದು ಹೆಜ್ಜೆಯೂ, ನಿಮ್ಮ ಮುಂದಿನ ಹೆಜ್ಜೆಗೆ ಭದ್ರಬುನಾದಿಯಾಗಿ, ಬೆಂಗಾವಾಲಾಗಿ ನಿಲ್ಲುತ್ತದೆ. ಜೀವನವೆಂದರೆ ಕಷ್ಟ, ಸುಖಗಳ ಸಮ್ಮಿಲನ, ಸುಖವಾಗಲೀ, ದು:ಖವಾಗಲೀ ಶಾಶ್ವತವಾಗಿ ಇರದೆ ಅವು ಬದಲಾಗುತ್ತಿರುತ್ತವೆ. ಸೋಲು ಉಂಟಾದಾಗ ಸೂಕ್ಷ್ಮ ಪರಿಶೀಲನೆ ಅಗತ್ಯ, ಇಲ್ಲದಿದ್ದಲ್ಲಿ ಸೋಲಿನಿಂದ ನೀವು ಏನು ಕಲಿಯಲಾರಿರಿ, ಗೆಲುವಿಗಾಗಿ ಮಾಡುವ ಪ್ರಯತ್ನದಲ್ಲಿ ಅಡೆತಡೆಗಳು ಬರುತ್ತಲೇ ಇರುತ್ತವೆ, ಇದರಲ್ಲಿ ಅನುಮಾನವೇ ಇಲ್ಲ,

  ಗೆಲುವು ಸುಲಭವಾಗಿ ಸಿಗಬಹುದಾಗಿದ್ದರೆ ಎಲ್ಲರೂ ಯಶಸ್ವಿಯಾಗಿ ಬಿಡುತ್ತಿದ್ದರು.
ಯಶಸ್ವಿ ವ್ಯಕ್ತಿಗಳು ಸೋಲನ್ನು ಸವಾಲಾಗಿ ತೆಗೆದುಕೊಳ್ಳುತ್ತಾರೆ,
ಉಳಿದವರು ಸೋಲಿಗೆ ಶರಣಾಗಿ ಬಿಡುತ್ತಾರೆ,
ಯಶಸ್ವಿ ವ್ಯಕ್ತಿಗಳು ಸೋಲುಗಳಲ್ಲಿ ಪಾಠಗಳನ್ನು ಕಲಿಯುತ್ತಾರೆ,
ಸೋಲಿನಿಂದ ಕಲಿತಿದ್ದನ್ನು ಇತರರು ಮರೆತು ಬಿಡುತ್ತಾರೆ.
ಈ ಸೋಲು ಗೆಲುವಿನ ಅಂತರ ತಿಳಿದವರು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಾರೆ. ಸೋಲು ಗೆಲುವೆಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಒಂದನ್ನು ಬಿಟ್ಟು ಒಂದು ಇರಲಾರವು.



-ಅಮರೇಶ ನಾಯಕ ಜಾಲಹಳ್ಳಿ,
Cell-9945268059


Shradde (Published)

ಬದುಕು ಬಲವಾಗಲು ಶ್ರದ್ಧೆ ಬೇಕು..




ಓ ನನ್ನ ದೀರ ಸುತರೇ |
ನೀವೆಲ್ಲರೂ ಮಹತ್ಕಾರ್ಯವೆಸಗಲು ಜನಿಸಿದವರು
ಇದರಲ್ಲಿ ಶ್ರದ್ದೆ ಇರಲಿ ನಿಮಗೆ |
ನಾಯಿ ಕುನ್ನಿಗಳ ಕೂಗಿಗೆಲ್ಲ ನೀವು ಬೆದರುವದೇ |
ಛೇ | ಎಂದಿಗೂ ಸಲ್ಲ |
ಎಂತಹ ಬರಸಿಡಿಲಿಗೂ ನೀವು ಬೆದರಬೇಕಿಲ್ಲ |
ಪುರುಷ ಸಿಂಹರು ನೀವು
      ಅಮರ ಆತ್ಮರು |
ಸಮಸ್ತ ಪ್ರಕೃತಿ ಶಕ್ತಿಗಳು
    ನಿಮಗೆ ಸೇವಕರು |
ನಿಮ್ಮಲ್ಲಿ ನಿಮಗೆ ಶ್ರದ್ದೆಯಿರರಲಿ |

ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕೆಂದು ಕನಸು ಕಟ್ಟಿರುತ್ತಾರೆ, ಕೆಲವರು ಸಾಧಿಸಿ ತೋರಿಸಿದರೆ ಇನ್ನು ಕೆಲವರು ತಮ್ಮ ವೈಫಲ್ಯದಿಂದ ಹಿಂದೆ ಉಳಿಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗಳಿಗೂ ಪ್ರತಿಸ್ಪದರ್ಿಗಳಿರುತ್ತಾರೆ, ಅಂಜದೆ ದಿಟ್ಟ ಹೆಜ್ಜೆಯಿಂದ ಪೈಪೋಟಿಗಿಳಿದು ಸ್ಪಧರ್ೆ ಮಾಡಿ ಗೆಲ್ಲುವದೇ ನಿಜವಾದ ಗೆಲುವು. ವ್ಯಕ್ತಿ-ವ್ಯಕ್ತಿಗಳಲ್ಲಿನ ವ್ಯತ್ಯಾಸಕ್ಕೆ ಅವರವರ ಶ್ರದ್ದೆಯ ಗುಣಮಟ್ಟವೇ ಕಾರಣ, ಒಬ್ಬನನ್ನು ಬಲಾಡ್ಯನನ್ನಾಗಿ ಮಾಡಿದರೆ, ಮತ್ತೊಬ್ಬನನ್ನು ಧೀನನನ್ನಾಗಿ ಮಾಡುತ್ತದೆ. ಏನನ್ನಾದರೂ ಸಾಧಿಸಬೇಕಾದರೆ ಮೊದಲು ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕೆಂದು ವಿವೇಕಾನಂದರು ಯುವಕರಿಗೆ ಸಾರಿ ಸಾರಿ ಹೇಳಿದ್ದು ಇಲ್ಲಿ ಸ್ಮರಿಸಬೇಕಾಗುತ್ತದೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯವಿದೆ. ಪ್ರತಿಯೊಬ್ಬರ ಜೀವನದಲ್ಲೂ ಇತಿಹಾಸವಿರುತ್ತದೆ. ನಿಮ್ಮ ಉಜ್ವಲ ಭವಷ್ಯಕ್ಕಾಗಿ ನೀವು ಸಾಧಿಸಬೇಕಾಗಿರುವದು ಅಪಾರವಾಗಿದೆ, ಸಾಧಿಸಲು ನಿಮ್ಮಲ್ಲಿ ಸಕಲ ಶಕ್ತಿಯು ಅಡಗಿದೆ, ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವದಕ್ಕಾಗಿ, ಇದರಿಂದ ನಿಮ್ಮ ಭವಿಷ್ಯ ಭವ್ಯವಾಗುವದು ಎಂದು ಶರಣರು, ಸಂತರು, ಜ್ಞಾನಿ ಜೀವಿಗಳು ಯುವಕರಿಗೆ ಜ್ಞಾನವಾಣಿಗಳಿಂದ, ನುಡಿಮುತ್ತುಗಳಿಂದ ಜೀವನದ ಅನುಭವಗಳ ಬಗ್ಗೆ ತಿಳಿಸಿ ಹೇಳಿದ್ದಾರೆ, ಈಗಲೂ ಹೇಳುತ್ತಿದ್ದಾರೆ.

ನಾವು ಯಾವುದೇ ಕೆಲಸ ಮಾಡಬೇಕೆಂದರೂ ಶ್ರದ್ದೆಯಿಂದ ಮಾಡಬೇಕಾಗುತ್ತದೆ. ನಂಬಿಕೆ, ವಿಶ್ವಾಸವಿಟ್ಟು ಕೆಲಸ ಮಾಡಬೇಕು, ನಮ್ಮಲ್ಲಿ ನಾವು ನಂಬಿಕೆ, ವಿಶ್ವಾಸ ಬೆಳೆಸಿಕೊಂಡು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೆಕು. ಒಂದು ಚಿಕ್ಕ ಕೆಲಸವೆಂದರೂ ಉದಾಸೀನ ತೋರದೆ ಅದನ್ನು ಚೊಕ್ಕಟವಾಗಿ ಮಾಡಿ ಮುಗಿಸಬೇಕಾಗುತ್ತದೆ, ಇದರಿಂದ ಉತ್ಸಾಹ ಹೆಚ್ಚಾಗಿ, ಆತ್ಮವಿಶ್ವಾಸ ಬೆಳೆಯುತ್ತದೆ, ಆತ್ಮವಿಶ್ವಾಸ ಇಮ್ಮಡಿಗೊಂಡು, ನಾನೇನು ಬೇಕಾದರೂ ಸಾಧಿಸಬಲ್ಲೆ | ಎನ್ನುವ ಛಲ ಮನಸ್ಸಿನಲ್ಲಿ ಬೇರೂರಲು ಸಾಧ್ಯವಾಗುತ್ತದೆ. ಮಹಾತ್ಮರಾಗಿ ಬೆಳೆದ ಸಕಲ ಸ್ತ್ರೀ-ಪುರುಷರ ಜೀವನದಲ್ಲೂ ಅವರಿಗಿದ್ದ ಅತಿದೊಡ್ಡ ಪ್ರೇರಕ ಶಕ್ತಿಯೆಂದರೆ ಅವರಲ್ಲಿ, ಅವರಿಗಿದ್ದ ಶ್ರದ್ದೆ ಎಂದು ಹೇಳಬಹುದು.

ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸ ಇಲ್ಲದಿರುವದೇ ಅವರ ಹಿನ್ನಡೆಗೆ ಕಾರಣವಾಗಿದೆ. ಇಂದಿನ ಯುವಕರೇ, ನಾಡಿನ ಪ್ರಜೆಗಳು, ಅವರು ಮಾತ್ರ ನಿರುತ್ಸಾಹಿಗಳಾಗಬಾರದು, ಅವರಲ್ಲಿ ಉತ್ಸಾಹ ತುಂಬಿ ಪುಟಿದೇಳಬೇಕು. ದೆಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಬಗ್ಗೆ ಅಭಿಮಾನ, ಗೌರವ ಬೆಳೆಸಿಕೊಳ್ಳಬೇಕು, ದೇಶಭಕ್ತಿ ಇರಬೇಕು. ದೇವರಲ್ಲಿ ನಂಬಿಕೆ ಇಲ್ಲದವ ನಾಸ್ತಿಕ ಎಂದಿತು ಪುರಾತನ ಧರ್ಮ, ಆದರೆ ತನ್ನಲ್ಲಿ ತನಗೆ ನಂಬಿಕೆಯಿಲ್ಲದವನೇ ನಾಸ್ತಿಕ ಎನ್ನುತ್ತದೆ ನೂತನ ಧರ್ಮ. ಇದನ್ನು ಅರಿತುಕೊಂಡು ಮುನ್ನಡೆಯಬೇಕಾದುದು ಇಂದಿನ ಯುವಕರ ಧರ್ಮ. 

ನಮ್ಮಲ್ಲಿ ಹುದುಗಿರುವ ಶಕ್ತಿಯನ್ನು ಪ್ರಚುರಪಡಿಸಿ ಸಾಧಿಸಬೇಕಾದುದು ಬಹಳಷ್ಟು ಇದೆ. ಏಳಿ! ಎದ್ದೇಳಿ!! ಆತ್ಮ ಬಲದಿಂದ ಮುನ್ನುಗ್ಗಿ ಕಾರ್ಯಸಾಧಿಸಿ. ಎಂದು ಸಾರುತ್ತಿರುವ ಮಹಾನ್ ವ್ಯಕ್ತಿಗಳ ವಿವೇಕವಾಣಿಗೆ ಇಂದಿನ ಯುವಕರು ಕಿವಿಗೊಟ್ಟು ಅವರ ಮಾತನ್ನು ಆಲಿಸಬೇಕಾಗಿದೆ. ನಮ್ಮನ್ನು ನಾವು ಸಂಪೂರ್ಣ ಅರ್ಥಮಾಡಿಕೊಳ್ಳುವವರೆಗೂ ನಾವೇನೆಂಬುದು ತಿಳಿಯುವದಿಲ್ಲ. ನಾವು ಮಾಡುವಂತಹ ಕೆಲಸಗಳು ನಮ್ಮ ಆತ್ಮ, ತೃಪ್ತಿ ಪಡುವಂತಹ ಕಾರ್ಯಗಳಾಗಿರಬೇಕೆ ಹೊರತು, ಯಾರದೋ ಒತ್ತಡಕ್ಕೆ ಮಣಿದು ನಮ್ಮ ಸ್ವಾಭಿಮಾನವನ್ನು ನಾವು ಮಾರಿಕೊಳ್ಳಬಾರದು.

ಸಂತ-ಮಹಾಂತರನ್ನು, ಸಾರ್ಥಕ ಜೀವನ ನಡೆಸಿದ ಸಮರ್ಥ ವ್ಯಕ್ತಿಗಳನ್ನು, ಶೌರ್ಯ-ಧೈರ್ಯ- ಸಾಹಸಗಳಿಂದ ಪರಾಕ್ರಮ ಪೂರ್ಣ ಜೀವನ ನಡೆಸಿದವರನ್ನು, ಇತಿಹಾಸ ಪ್ರಸಿದ್ದರನ್ನಾಗಿಸಿದ್ದು ಅವರಲ್ಲಿದ್ದ ಅಪಾರ ಶ್ರದ್ದಾಬಲವೇ ಕಾರಣ ಎಂಬ ಕಟುಸತ್ಯವನ್ನು ಎಲ್ಲರೂ ತಿಳಿಯಬೇಕಾಗಿದೆ. ಏಕೆಂದರೆ ಶ್ರದ್ಧೆಯೇ ಸಿದ್ಧಿಯ ಕೀಲಿ ಕೈ ಆಗಿದೆ. ಈ ಶ್ರದ್ಧೆಯಿಂದ ಗೆದ್ದು ಬಂದವರು ಹಲವರಿದ್ದಾರೆ. ಅಂತಹ ವ್ಯಕ್ತಿಗಳು ಇನ್ನೊಬ್ಬರಿಗೆ ಮಾದರಿ.



-ಅಮರೇಶ ನಾಯಕ ಜಾಲಹಳ್ಳಿ.
Cell-9945268059.

Curruption (Published)

ಭ್ರಷ್ಟಾಚಾರ ನಿಮರ್ೂಲನೆ ಸಾಧ್ಯವೇ?


ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನರಲ್ಲಿ ಇದೊಂದು ಮಾರಕ ರೋಗವಾಗಿ ಪರಿಣಮಿಸಿದೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವದು ಅನಾಗರಿಕತೆಯ ಲಕ್ಷಣ, ಇದೊಂದು ಉತ್ತಮ ಸಂಸ್ಕೃತಿಗೆ ಕಳಂಕ ಹಾಗೂ ದೇಶದ ಪ್ರಗತಿಗೆ ಮಾರಕವಾಗಿದೆ, ಎಲ್ಲಿಯವರೆಗೆ ಭ್ರಷ್ಟಾಚಾರ ತಾಂಡವಾಡುತ್ತದೋ ಅಲ್ಲಿಯವರೆಗೂ ಅಭಿವೃದ್ದಿ ಸಾಧ್ಯವಿಲ್ಲ.
ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದ ಸಾಮಾಜಿಕ, ಆಥರ್ಿಕ ಹಾಗೂ ಧಾಮರ್ಿಕ ವಿಷಯಗಳ ಬಗ್ಗೆ ಚಿಂತನೆ ಮಾಡುವ ಪ್ರಜ್ಞೆ ಇದೆ, ಅದೇ ರೀತಿ ಭ್ರಷ್ಟಾಚಾರದ ನಿಮರ್ೂಲನೆ ಬಗ್ಗೆಯೂ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವದು ಅತ್ಯವಶ್ಯಕವಾಗಿದೆ. ಪ್ರಜಾಪ್ರಭುತ್ವದ ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಅತಿರೇಕವಾಗುತ್ತಿದೆ, ದೆಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಗಂಭೀರವಾಗಿ ಪರಿಗಣಿಸಿ ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಹೋರಾಡಬೆಕಾಗಿದೆ.

ಭ್ರಷ್ಟಾಚಾರ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ.ಇದರಿಂದ ಎಷ್ಟೋ ಜನ ಮನೆಗಳನ್ನು ಕಳೆದುಕೊಂಡಿರುವದಲ್ಲದೇ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿದೆ, ಪ್ರತಿಭಾವಂತ ವ್ಯಕ್ತಿಗಳಿಗೆ ಕೆಲಸ ಸಿಗದೆ ಪ್ರಾಣ ಬಿಟ್ಟಿರುವ ಉದಾಹರಣೆಗಳೂ ಇವೆ, ಕಿತ್ತು ತಿನ್ನುವ ಬಡತನದಿಂದ ಕುಗ್ಗಿ ಹೋಗಿರುವವರು ಈ ಭ್ರಷ್ಟಾಚಾರಕ್ಕೆ ಒಳಗಾದ ಅಮಾಯಕರಾಗಿದ್ದಾರೆ, ಇಂದಿನ ವ್ಯವಸ್ಥೆಯಲ್ಲಿ 'ಲಂಚ ಸ್ವೀಕಾರ' ಮಾಡುವದು ಸವರ್ೇ ಸಾಮಾನ್ಯವಾಗಿದೆ. ಇಂದು ನಡೆದ ಅತಿವೇಗದ ಜೀವನದಲ್ಲಿ ಜನರು ತಮ್ಮ ಕೆಲಸಗಳನ್ನು ಬಹಳ ಬೇಗ ಮುಗಿಸಲೆಂದು ಲಂಚ ಕೊಟ್ಟು ಕಾರ್ಯವನ್ನು ಸಾಧಿಸಿಕೊಳ್ಳುವ ಭರದಲ್ಲಿ ತಾವೇ ಮುಂದೆ ನಿಂತು ಭ್ರಷ್ಟಾಚಾರವನ್ನು ಹುಟ್ಟು ಹಾಕಲು ಕಾರಣರಾಗುತ್ತಿದ್ದಾರೆ. ಲಂಚ ಪಡೆದುಕೊಳ್ಳಲು ಪ್ರಮುಖವಾದ ಕಾರಣವೆಂದರೆ ಮನುಷ್ಯನಿಗೆ ಇರುವ ಅತಿಯಾದ ದುರಾಸೆ ಎನ್ನಬಹುದು. ಸ್ವಲ್ಪ ಇದ್ದಾಗ, ಇನ್ನೂ ಸ್ವಲ್ಪ ಬೇಕೆನ್ನುವ ಆಸೆ, ಇನ್ನಷ್ಟೂ ಇದ್ದಾಗ ಮತ್ತಷ್ಟೂ ಬೇಕೆನ್ನುವ ಆಸೆ. ಈ ರೀತಿಯಾಗಿ ಮನುಷ್ಯ ಸ್ವಾರ್ಥ, ಅತಿಲೋಭೀಯಗಿರುವದರಿಂದ ಲಂಚ ಪಡೆದು ಭ್ರಷ್ಟಾಚಾರ ಎಸಗಲು ಮುಂದಾಗುತ್ತಾನೆ.

ಜನರು ಅಲ್ಪ ತೃಪ್ತಿಯಾದಾಗ, ಅವರಿಗೆ ಮೂಲಭೂತ ಅವಶ್ಯಕತೆಗಳು ಸಮರ್ಪಕವಾಗಿ ದೊರೆಯದೆ ಇದ್ದಾಗ, ಐಶಾರಾಮಿ ಜೀವನದ ಬಗ್ಗೆ ಕನಸು ಕಾಣುವಾಗ, ಇಂತಹ ವ್ಯತಿರಿಕ್ತ ಆಲೋಚನೆಗಳು ಅವರ ಮನಸ್ಸಿನಲ್ಲಿ ಮೂಡುತ್ತಿರುತ್ತವೆ ಸ್ಪಧಾತ್ಮಕತೆ ಹೆಚ್ಚಾಗಿರುವದರಿಂದ, ಸಮಯದ ಅಭಾವದಿಂದ, ಅತಿಯಾದ ತಂತ್ರಜ್ಞಾನದಿಂದ, ವೇತನಗಳಲ್ಲಿ ತಾರತಮ್ಯವಾದಾಗ, ಇನ್ನೊಬ್ಬರನ್ನು ನೋಡಿ ಅನುಕರಿಸಬೇಕೆಂಬ ಹುಚ್ಚು ಸಾಹಸದಿಂದ, ಸಂಸ್ಕಾರದ ಕೊರತೆಯಿಂದ, ಶಿಕ್ಷಣದಲ್ಲಿ ಏರುಪೇರಾದಾಗ, ನೈತಿಕ ಮೌಲ್ಯ ಕುಸಿದಾಗ, ಸತ್ಸಂಗದ ಕೊರತೆ ಎದ್ದು ಕಾಣುವಾಗ, ದುಶ್ಚಟಗಳಿಗೆ ಬಲಿಯಾದಾಗ, ಬೆಲೆ ಏರಿಕೆ ಅತಿಯಾದಾಗ, ಜನರು ಭ್ರಷ್ಟಾಚಾರವೆಸಗಲು ತೊಡಗುತ್ತಾರೆ ಎಂದು ಹೇಳಬಹುದು.

ಮುಂದೆ ಇದೇ ರೀತಿ ಮುಂದುವರಿದರೆ, ಪೀಳಿಗೆಯಿಂದ ಪೀಳಿಗೆಗೂ ವ್ಯಾಪಿಸಿ ಇದು ಒಂದು ವಾಸಿಯಾಗದ ರೋಗವಾಗಿ ಪರಿಣಮಿಸುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಜ್ಞಾವಂತ ಜನರು ಕಾರ್ಯಪ್ರವೃತ್ತರಾಗಬೇಕು. ಇದಕ್ಕೆ ಆತ್ಮಜ್ಞಾನದ ಅವಶ್ಯಕತೆ ಇದೆ, ರಚನಾತ್ಮಕವಾಗಿ ವಿಚಾರ ಮಾಡುವ ಗುಣಗಳು ಬೇಕು, ಭ್ರಷ್ಟಾಚಾರ ತೊಲಗಿಸಲು ಬರುವವರೆಲ್ಲ ಭ್ರಷ್ಟಾಚಾರಿಗಳಾಗಬಾರದು, ಬೇಲೀನೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ;, ತಾವು ಅತ್ಮ ವಿಮಶರ್ೆ ಮಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗಬೇಕು, ಆಲೋಚನಾ ಶೈಲಿಗಳು ಬದಲಾಗಬೇಕು, ಸರಳಜೀವನವನ್ನು ರೂಡಿಸಿಕೊಳ್ಳುವಂತಹ ಮನೋಭಾವ ಬೆಳೆಯಬೇಕು.
ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು, ನಾವು-ನಮ್ಮವರು ಎನ್ನುವ ಭಾವನೆ ಇರಬೇಕು, ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ, ಎನ್ನುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇನ್ನೊಬರಿಗೆ ಮೋಸ, ವಂಚನೆ ಮಾಡಿ ಹಣ ಗಳಿಸಬೇಕು ಎನ್ನುವ ದುರಾಸೆ ಬಿಡಬೇಕು, ಇದರಿಂದ ಎಷ್ಟು ಗಳಿಸಿದರೂ ಫಲವಿಲ್ಲ, ಅದು ಎಲ್ಲಿಗೆ ಹೋಗಬೇಕು, ಅಲ್ಲಿಗೆ ಹೋಗುತ್ತದೆ, ಇಲ್ಲಿ ಪ್ರೀತಿ ವಿಶ್ವಾಸಗಳು ಮುಖ್ಯ.

ಸರಕಾರವು ಭ್ರಷ್ಟಾಚಾರವನ್ನು ತೊಲಗಿಸಲು ಲೋಕಾಯುಕ್ತರನ್ನು ನೇಮಿಸಿದೆ, ಪ್ರಸ್ತುತ ರಾಜ್ಯದ ಲೋಕಾಯುಕ್ತರು ನಿಸ್ವಾರ್ಥ ಸೇವೆ ಸಲ್ಲಿಸಬೇಕು, ಅವರಿಗೆ ಹೆಚ್ಚಿನ ಅಧಿಕಾರ ನೀಡಿ ಬಲಪಡಿಸಬೇಕಾಗಿದೆ. ಆದಾಯ ತೆರಿಗೆ ಇಲಾಖೆಯವರು ಇದಕ್ಕೆ ಹೊರತಲ್ಲ ಅವರೂ ಸಹ ನಿಸ್ವಾರ್ಥದಿಂದ ಸೇವೆ ಮಾಡಬೇಕಾಗಿದೆ, ಕೋಟಿಗಟ್ಟಲೆ ಹಣವನ್ನು ಜನರಿಂದ ದೋಚುತ್ತಾ ವಂಚನೆ ಮಾಡುತ್ತಿರುವವರ ಹಣವನ್ನು ಒತ್ತುವರಿ ಮಾಡಿಕೊಳ್ಳಬೇಕು. ಜನರಿಗೆ ಮೋಸ ಮಾಡಿ ಅವರಿಂದ ತೆಗೆದುಕೊಂಡ ಲಂಚದ ಹಣವನ್ನು ಸ್ವಿಸ್ ಬ್ಯಾಂಕ್ಗಳಂತಹ ಗುಪ್ತ ವ್ಯವಹಾರ ಸಂಸ್ಥೆಗಳಲ್ಲಿ ಇಡಲಾಗುತ್ತಿದೆ. ಅಂತಹ ಸಂಸ್ಥೆಗಳನ್ನು ಮುಚ್ಚುವಂತೆ ಆಗಬೇಕು, ಆಡಳಿತದಲ್ಲಿ ಕಟ್ಟುಪಾಡುಗಳಾಬೇಕು, ಭ್ರಷ್ಟಾಚಾರ ನಿಮರ್ೂಲನಾ ಕಾಯ್ದೆಯು ಸಮರ್ಪಕವಾಗಿ ಜಾರಿಗೆಯಾಗಬೇಕು, ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಯುವಕರು ಸನ್ನದ್ಧರಾಗಬೆಕು.




-ಅಮರೇಶ ನಾಯಕ ಜಾಲಹಳ್ಳಿ
Cell-9945268059

Swabhimaanada Jeevana (Published)

ಸ್ವಾಭಿಮಾನದಿಂದ ಬದುಕಿ...


ಸ್ವಾಭಿಮಾನದಿಂದ ಬದುಕುವದನ್ನು ಕಲಿಯಬೇಕು, ಇನ್ನೊಬ್ಬರ ಮೇಲೆ ಹೆಚ್ಚು ಅವಲಂಭಿತರಾಗದೆ ಜೀವನ ಸಾಗಿಸುವದನ್ನು ಕಲಿತರೆ ಮನುಷ್ಯನಿಗೆ ಯಾವುದೇ ತರಹದ ನಿಂದನೆಗಳು ಯಾರಿಂದಲೂ ಬರುವ ಸಾಧ್ಯತೆಗಳು ಇರುವದಿಲ್ಲ. 'ಉದ್ಯೋಗಂ ಪುರುಷ ಲಕ್ಷಣಂ' ಎನ್ನುವಂತೆ ಉದ್ಯೋಗ ಮಾಡುವದು ಮನುಷ್ಯನ ಲಕ್ಷಣವಾಗಿದೆ. ಒಂದೇ ರೀತಿಯ ಉದ್ಯೋಗಕ್ಕೆ ಆಕಷರ್ಿತನಾಗದೆ ತನಗೆ ಗೊತ್ತಿರುವ ಕೆಲವಾರು ಉದ್ಯೋಗಳನ್ನು ಕೈಗೊಂಡು ಕಾರ್ಯ ಪ್ರವೃತ್ತನಾಗಬೇಕಾಗುತ್ತದೆ. ಹುಟ್ಟಿದಾಗ ಯಾವ ಮಗುವು ಕಲಿತು ಬಂದಿರುವದಿಲ್ಲ, ಮಗು ಬೆಳೆಯುತ್ತಾ, ಹಂತ ಹಂತವಾಗಿ ಕಲಿಯಲಾರಂಭಿಸುತ್ತದೆ, ಅದು ಇನ್ನೊಬ್ಬರನ್ನು ನೋಡಿ ಕಲಿಯುತ್ತದೆ, ಅನುಕರಣೆ ಮಾಡುತ್ತದೆ, ಅನುಕರಣೆ ಪ್ರೇರಣೆಯಾಗುತ್ತದೆ, ಮಗು ಮನೆಯವರನ್ನು ಅವಲಂಭಿಸಿರುತ್ತದೆ, ಮನೆಯ ವಾತವರಣವೇ ಮಗುವಿಗೆ ಪಾಠ ಹೇಳುತ್ತದೆ, ಅಲ್ಲಿನ ಸಂಸ್ಕೃತಿಗನುಗುಣವಾಗಿ ಮಕ್ಕಳ ಬೆಳವಣಿಗೆಯಾಗುತ್ತದೆ.

ಪ್ರೌಢಾವಸ್ಥೆಗೆ ಬಂದ ಮಕ್ಕಳು ಇಂದು ಹಲವು ಚಟಗಳಿಗೆ ಬಲಿಯಾಗುತ್ತಿದ್ದಾರೆ, ಅದರಿಂದ ಜೀವನ ಹಾಳಾಗುತ್ತದೆ, ಅವರು ಮಾಡುವ ಕೆಟ್ಟ ಆಲೋಚನೆಗಳೇ ಜೀವನವನ್ನು ಬಲಿ ತೆಗೆದುಕೊಳ್ಳುತ್ತವೆ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ, ಆದರೆ ಸಂದರ್ಭಗಳು ಮನುಷ್ಯನ ದಿಕ್ಕನ್ನು ಬದಲಾಯಿಸುತ್ತವೆ, ಇಂದಿನ ಯುವಕರು ತಮ್ಮ ಜೀವನದ ಗುರಿ ಏನೆಂಬುದನ್ನು ತಿಳಿದುಕೊಳ್ಳದೆ ಏನೋ ಮಾಡಲು ಹೋಗಿ, ಇನ್ನೆನೋ ಮಾಡುತ್ತಾರೆ.

ಮೊದಲು ಜೀವನದಲ್ಲಿ ಯಾವ ರೀತಿಯಲ್ಲಿ ಸಾಧನೆ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟವಾದ ನಿಧರ್ಾರ ಕೈಗೊಳ್ಳಬೇಕು, ಯಾವುದೇ ಗೊಂದಲಕ್ಕೀಡಾಗದೆ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವದರ ಕಡೆಗೆ ಗಮನ ಹರಿಸಬೇಕು, 'ಗುರಿಯಿಲ್ಲದ ಮನುಷ್ಯ, ಗರಿಯಿಲ್ಲದ ಪಕ್ಷಿಯಂತೆ' ಜೀವನವು ತುಂಬಾ ಅಮೂಲ್ಯವಾದುದು, ಬಂಗಾರದಂತಹ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಮನಸ್ಸು ಬಂದ ಹಾಗೆ ಜೀವಿಸುವದು ಜೀವನವಲ್ಲ, ಎಲ್ಲರಂತೆ ನಾನೂ ಒಬ್ಬ ಎಂದು ಯೋಚಿಸುವದಕ್ಕಿಂತ ಎಲ್ಲರೊಳಗೆ ನಾನು ಭಿನ್ನವಾದ ವ್ಯಕ್ತಿಯಾಗಬೇಕು, ಎನ್ನುವ ವಿಚಾರದಿಂದ ಬಾಳಬೇಕು, ನಮಗೆ ಗೌರವ ಸಿಗಬೇಕಾದರೆ ಮೊದಲು ನಮ್ಮನ್ನು ನಾವು ಗೌರವಿಸಿಕೊಳ್ಳುವದನ್ನು ಕಲಿಯಬೇಕು, ನಮ್ಮಲ್ಲಿ ನಮಗೆ ನಂಬಿಕೆ ಹುಟ್ಟಬೇಕು, ಆತ್ಮವಿಶ್ವಾಸ ಬೆಳೆಯಬೇಕು, ನಮ್ಮನ್ನು ನಾವು ಕಾಪಾಡಿಕೊಳ್ಳುವ ಶಕ್ತಿ ಬಂದರೆ, ಇನ್ನೊಬ್ಬರನ್ನು ಕಾಪಾಡುವದು ಸುಲಭವಾಗಬಹುದು.

ಮನೆಯಲ್ಲಿ ದಂಡಪಿಂಡನೆನಿಸಿಕೊಂಡು, ಹಾದಿ ಬೀದಿಯಲ್ಲಿ ಕೆಲಸಕ್ಕೆ ಬಾರದವನು ಎನಿಸಿಕೊಳ್ಳುವದಕ್ಕಿಂತ ನಮ್ಮ ಕಾಲ ಮೇಲೆ ನಾವು ನಿಲ್ಲುವ ಪ್ರಯತ್ನ ಮಾಡಬೇಕು, ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ, ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು, ಎನ್ನುವ ವಾಕ್ಯವನ್ನು ಬಾಳಿನಲ್ಲಿ ರೂಡಿಸಿಕೊಳ್ಳಬೇಕು, ಶ್ರದ್ದೆಯಿಂದ ಕೆಲಸ ಮಾಡಬೇಕು, ಏಕೆಂದರೆ ಶ್ರದ್ದೆಯೇ ಸಿದ್ಧಿಯ ಕೀಲಿ ಕೈ. ಇತ್ತೀಚಿನ ದಿನಮಾನಗಳಲ್ಲಿ ಜನರು ತಮ್ಮ ವೃತ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ, ಅಂಥವರು ಮೊದಲು ತಮ್ಮ ವೃತ್ತಿ ಗೌರವವನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ಒಬ್ಬರನ್ನೊಬ್ಬರು ಅವಲಂಭಿಸಿ ಬದುಕುವದು ರೂಡಿಯಾಗಿಬಿಟ್ಟಿದೆ, ಇದು ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತದೆ, ಪರಾವಲಂಭಿಯಾಗಿ ಬದುಕುದನ್ನು ಕಲಿಯಬೇಕು, ಏಕೆಂದರೆ ಎಲ್ಲರೂ ಎಲ್ಲ ಸಮಯದಲ್ಲಿ ಜೊತೆಯಲ್ಲಿರಲು ಸಾಧ್ಯವಿಲ್ಲ, ಸದಾ ನಮ್ಮ ಜತೆಯಲ್ಲಿಯೇ ಇರುವ ನಮ್ಮ ನೆರಳು ಕೂಡ ಒಂದು ಸಮಯದಲ್ಲಿ ಬಿಟ್ಟು ಹೋಗುತ್ತದೆ.

ಯಾವುದೇ ಕೆಲಸ ಮಾಡಬೆಕಾದರೂ ನಿಧಾನ, ನಿರಂತರ ಕ್ರಿಯೆಯಲ್ಲಿರಬೆಕು, ಅಸಾಧ್ಯ ಎನ್ನುವ ಪದವನ್ನು ತೆಗೆದು ಹಾಕಿ, ಸಾಧ್ಯ ಎಂದು ಮುನ್ನಡೆಯಬೇಕು, ಶಿಖರವನ್ನೇರಬೇಕೆಂದರೂ ಮೊದಲ ಹೆಜ್ಜೆ ಭೂಮಿಯಿಂದಲೇ ಇಡಬೆಕಾಗುತ್ತದೆ, ಸ್ವಾಭಿಮಾನದಿಂದ ಬದುಕಿ ತೋರಿಸಿದವರು ವಿರಳ, ಅದು ಸರಳ ಎಂದು ತೋರಿಸಲು ನಿಮ್ಮ ಜೀವನ ಸವಾಲಾಗಿ ಮಾರ್ಪಡಲಿ.


ನಿಮ್ಮೆಲ್ಲರಲ್ಲೂ ಹುದುಗಿದೆ ಅನಂತ ಶಕ್ತಿ
ಅದನ್ನು ಹಗಲಿನಷ್ಟು ಸ್ಪಷ್ಟವಾಗಿ
ಕಾಣುತ್ತಿದೆಯನ್ನ ದೃಷ್ಟಿ:
ವ್ಯಕ್ತಗೊಳಿಸಿಕೊಳ್ಳಿರೈ ಆ ಅನಂತ ಶಕ್ತಿಯನ್ನು!
ಎದ್ದು ಬೆಳಗಿಸಿಕೊಳ್ಳಿರೈ ನಿಮ್ಮ ಬದುಕನ್ನು!
ಎನ್ನುವ ವಿವೇಕವಾಣಿಯು ನಿಮ್ಮ ಜೀವನದ ಬದಲಾವಣೆಗೆ ಕಾರಣವಾಗಲಿ.



-ಅಮರೇಶ ನಾಯಕ
Cell-9945268059

Festivals (Published)


ಹಬ್ಬ ಬಂತು ಹಬ್ಬ..


ಭಾರತದಲ್ಲಿ ಹಬ್ಬಗಳು ಹತ್ತು ಹಲವು, ಹಬ್ಬಗಳು ಸಂಸ್ಕೃತಿಯ ಮತ್ತು ಭಾವೈಕ್ಯತೆಯ ಸಂಕೇತವಾಗಿದ್ದು, ಜನರ ಭಾವವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿವೆ. ಹಬ್ಬಗಳು ಜನರಲ್ಲಿ ಪರಸ್ಪರ ಭಾಂದವ್ಯಕ್ಕೆ ಕಾರಣವಾಗಿವೆ.
ಎಲ್ಲರೂ ಸಂತೋಷದಿಂದ ಸೇರುವದು, ಸಂಭ್ರಮ ಸಡಗರದ ಆಶಚರನೆಯ ಮೂಲಕ ಸಂತಸ ಹಂಚಿಕೊಳ್ಳುವದು ಹಬ್ಬ-ಹರಿದಿನಗಳಲ್ಲಿನ ವಿಶೇಷತೆ, ಏನೆ ಮನಸ್ತಾಪಗಳಿದ್ದರೂ ಹಬ್ಬ-ಹರಿದಿನಗಳಲ್ಲಿ ಒಂದುಗೂಡುತ್ತಾರೆ. ಇದರಿಂದಾಗಿ ಜನರಲ್ಲಿ ಶಾಂತಿ, ಸಮಾಧಾನ ನೆಲೆಸಲು ಮತ್ತು ಉತ್ಸಾಹ, ಆನಂದ ತುಂಬಿ ತುಳುಕಲು ಕಾರವಾಗಿದೆ.
ಹಬ್ಬಗಳು ಸದ್ಭಾವನೆ ಮೂಡಿಸುವುದರ ಜೊತೆ ಜೊತೆಗೆ ಭಾರತೀಯ ಅಖಂಡತೆಗೂ ಮುಯ ಕಾರಣವಾಗಿವೆ. 
ವಿದೇಶಗಳಲ್ಲಿ ಜನವರಿ 1 ಹೊಸ ವಷರ್ಾಚರಣೆಗೆ ಕಾರಣವಾದರೆ, ಭಾರತದಲ್ಲಿ ಚಾಂದ್ರಮಾನ ಯುಗಾದಿ ಹೊಸವರ್ಷವಾಗಿದೆ. ಅಂದು ಸೂಯರ್ೋದಯದೊಂದಿಗೆ ಹಬ್ಬ ಆಚರಣೆ ಶುರು, ವಶೇಷ ಸ್ನಾನ ಮಾಡಿಕೊಂಡು, ದೇವರಿಗೆ, ಹಿರಿಯರಿಗೆ ವಂದಿಸುವ ಮೂಲಕ ಹಬ್ಬದ ಆಚರಣೆಗೆ ಮುಂದಾಗುವದು ವಾಡಿಕೆ.

ಆಯಾ ಋತುವಿಗೆ ತಕ್ಕಂತೆ ಹಬ್ಬಗಳು ಭಾರತೀಯ ಸಂಸ್ಕೃತಿಯಲ್ಲಿ ಕಂಡು ಬರುತ್ತವೆ.ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟತೆ ಇದೆ. ಹಬ್ಬ ಆಚರಿಸುವ ರೀತಿ ನೀತಿ ಭಿನ್ನ ಭಿನ್ನವಾಗಿರುತ್ತವೆ. ನಿಸರ್ಗ ಪ್ರೇಮ, ರೈತರಿಗೆ, ಮಕ್ಕಳಿಗೆ, ಹೆಣ್ಣುಮಕ್ಕಳಿಗೆ, ವ್ಯಾಪಾರಿಗಳಿಗೆ, ಪ್ರಾಣಿಗಳಿಗೆ ಸಂಬಂಧಿಸಿದ ಹಬ್ಬಗಳಿಂದ ಭಾರತೀಯ ಸಂಸ್ಕೃತಿ ನಿರೂಪಿತವಾಗಿದೆ. 

ಅಣ್ಣ-ತಂಗಿಯರ ಭಾಂಧವ್ಯದ ಸಂಕೇತವಾಗಿ ರಕ್ಷಾ-ಬಂಧನ, ಸುಗ್ಗಿಕಾಲ ಮುಗಿಯುತ್ತಿದ್ದಂತೆ ರೈತನಿಗೆ ಹರುಷ ತರುವ ಹಬ್ಬಗಳು ದೀಪಾವಳಿ-ದಸರಾ, ಇವೆಲ್ಲವೂ ಮಕ್ಕಳಿಗೆ ಅಚ್ಚು-ಮೆಚ್ಚು ಜೊತೆಗೆ ಮಕ್ಕಳಲ್ಲಿ ಹರುಷದ ಹೊನಲು ಚಿಮ್ಮಿಸುವ ಹಬ್ಬ, ಅದೇ ರೀತಿ ಗಣೇಶ ಚತುಥರ್ಿ, ಶ್ರಾವಣ ಮಾಸ, ಸಂಕ್ರಾಂತಿ ಇತ್ಯಾದಿ.

ಹಬ್ಬದ ದಿನಗಳಂದು ಹೊಸ ಬಟ್ಟೆ, ಚಿನ್ನಾಭರನಗಳನ್ನು ಖರೀದಿ ಮಾಡುವದು ಸಾಮಾನ್ಯ. ವಿವಿಧ ರೀತಿಯ ತಿಂಡಿ-ತಿನಿಸು ತಯಾರಿಸುವದು, ಧರ್ಮ ಭೇದ ಎನಿಸದೆ ಜನರನ್ನು ಮನೆಗೆ ಕರೆದು ಊಟ ಹಾಕುವ ಪದ್ದತಿಯೂ ರೂಡಿಯಲ್ಲಿದೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ ಹೊಂದಿದೆ. ಹಬ್ಬಗಳು ಒಂದರ್ಥದಲ್ಲಿ ಸಂತೋಷಕೂಟಗಳಿದ್ದಂತೆ. ವಿಶ್ರಾಂತಿ, ಆನಂದಕ್ಕಾಗಿ ಹಬ್ಬ ಆಚರಣೆನೆರವಾಗಿವೆ. ನಿತ್ಯ ಜೀವನದ ಆಹಾರ ಪದ್ದತಿಯ ಬದಲಾವಣೆಗೊಂಡು ಹಬ್ಬದ ದಿನ ವಿವಿಧ ರೀತಿಯ ಪದಾರ್ಥಗಳು ಮನೆಯಲ್ಲಿ ರಾರಾಜಿಸುತ್ತವೆ. ಈ ಸಂತಸವನ್ನು ಎಲ್ಲರೂ ಒಂದುಗೂಡಿ ಆನಂದ ಹಂಚಿಕೊಳ್ಳುವದು ಒಂದು ಪದ್ಧತಿ. ಹಬ್ಬಗಳು ಆಚರಣೆ ಪದ್ಧತಿ, ಉದ್ದೇಶ ಮತ್ತು ವಿಶೇಷತೆ ತಿಳಿದುಕೊಳ್ಳುವದು ಮುಖ್ಯ. ವಿವಿಧತೆಯಲ್ಲಿ ಏಕತೆ ಇರುವದರಿಂದ ನಾವು-ನಮ್ಮವರು ಎನ್ನುವ ಭಾವನೆ ನಮ್ಮಲ್ಲಿದೆ. ಧರ್ಮದ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿರುವ ಹಬ್ಬಗಳು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ. ಅವರವರ ಧರ್ಮಕ್ಕನುಗುಣವಾಗಿ ಹಬ್ಬ ಆಚರಣೆ ರೂಡಿಗತ. 

ಇತ್ತೀಚಿನ ದಿನಮಾನಗಳಲ್ಲಿ ಹಬ್ಬ ಆಚರಣೆ ಮಾಡುವ ರೀತಿಯೂ ಬದಲಾಗುತ್ತಿದೆ. ಜನರು ಅತಿಯಾದ ಮೋಜು ಮಾಡಲು ಮುಂದಾಗುತ್ತಿದ್ದಾರೆ. ಹಬ್ಬ ದುಂದು ವೆಚ್ಚಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸಾಲ ಮಾಡಿ ದುಂದು ವೆಚ್ಚ ಮಾಡಿ ಹಬ್ಬ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಮಾಡುವದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಒಂದರ್ಥದಲ್ಲಿಹೇಳುವದಾದಲ್ಲಿ ಹಬ್ಬಗಳ ವಿಶೇಷತೆ ಹಾಳಾಗುತ್ತಿದೆ.

ಸಂಕ್ರಾಂತಿ ಹಬ್ಬದಲ್ಲಿ ಜನರು ತಮ್ಮ ಪಾಪ-ಕರ್ಮ ತೊಳೆದುಕೊಳ್ಳಲು ನದಿಯಲ್ಲಿ ಸ್ನಾನ ಮಾಡಿ, ಪೂಜೆ ಮಾಡುವದುಂಟು, ಆದರೆ, ಇತ್ತೀಚೆಗೆ ನದಿಯ ದಡದಲ್ಲಿ ಕುಳಿತು ಇಸ್ಪೀಟು ಆಡುವದು, ಗುಂಡು-ತುಂಡು ಪಾಟರ್ಿ ಮಾಡಿ ಮೋಜು ಮಾಡುತ್ತಾರೆ. ಇದು ಭರತೀಯ ಹಬ್ಬದ ಸಂಸ್ಕೃತಿಗೆ ಧಕ್ಕೆ ತರುವಂತಿದೆ. ದೇವಸ್ಥಾನಕ್ಕೆ ಹೋಗುವದು ದೇವರ ದರ್ಶನಕ್ಕಾಗಿ ಇಂಥಹ ಸಂದರ್ಭದಲ್ಲಿ ದೇಹ, ಮನಸ್ಸು ಶುದ್ಧವಾಗಿರಬೇಕು. ಹಬ್ಬಗಳು ಸಂತೋಷಕೂಟಗಳಾಗಬೇಕೆ ಹೊರತು ಸಂತಸಹರಣವಾಗಬಾರದು, ಜನತೆಯು ಶಾಂತಿ, ನೆಮ್ಮದಿಗೋಸ್ಕರ ಹಬ್ಬ ಆಚರಣೆಗೆ ಮುಂದಾಗುತ್ತಾರೆ. ಅದನ್ನು ಹಾಳು ಮಾಡಿಕೊಳ್ಳುವದು ಯಾವ ಧರ್ಮ. 


-ಅಮರೇಶನಾಯಕ ಜಾಲಹಳ್ಳಿ,
Cell-9945268059

Monday, 26 December 2011

Buddha Vihar darshana (Published)



ಭೌದ್ದ ವಿಹಾರ


ನಾನು ನನ್ನ ಗೆಳೆಯ ಸಂಜೆ 6ಘಂ.ಗೆ ಭೌದ್ಧ ವಿಹಾರ ನೋಡಲೆಂದು ನಡೆದುಕೊಂಡು ಹೊರಟೆವು. ವಿಶ್ವವಿದ್ಯಾಲಯದ ರಸ್ತೆ ಬದಿಯ ಎತ್ತರವಾದ ಸುಂದರ ಗಿಡ ಮರಗಳು ತಂಪಾದ ಗಾಳಿ ಬೀಸುತ್ತಿತ್ತು. ಮುಸ್ಸಂಜೆಯ ಆ ಹೊತ್ತಿನಲ್ಲಿ ಸವಿ ಮಾತುಗಳನ್ನಾಡುತ್ತ,  ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾ, ಹೊರಟಾಗ ನಮಗೆ ಎದುರಾಗಿದ್ದು ದೊಡ್ಡ ಕಮಾನು. ಅದನ್ನು ಕೂಲಂಕಷವಾಗಿ ವೀಕ್ಷಿಸುತ್ತಾ ನಿಂತಾಗ ಅದರಲ್ಲಿ ಕೆತ್ತಿರುವ ಕಲೆಗಳು ನಮಗೆ ಏನೋ ಸಂದೇಶ ನೀಡುವಂತೆ ತೋರುತ್ತಿದ್ದವು. ದೃಷ್ಟಿ ಬೀಳದಂತೆ ದೃಷ್ಟಿ ಗೊಂಬೆಗಳನ್ನು ಅದರಲ್ಲಿ ಕೆತ್ತಲಾಗಿತ್ತು.  
ಮುಂದೆ ಸಾಗಿದಾಗ ವಿಶಾಲವಾದ ಭೂಪ್ರದೇಶ, ಆ ಪ್ರದೇಶದಲ್ಲಿ ಪಪ್ಪಾಯಿ ತೋಟ ಸುಂದರವಾಗಿ ಕಾಣುತ್ತಿತ್ತು. ಬುದ್ಧ ವಿಹಾರ ಸಮೀಪಿಸಿದಾಗ ಮತ್ತೊಂದು ದೊಡ್ಡ ಗಾತ್ರದ ಕಮಾನು ಜನರನ್ನು ಸ್ವಾಗತಿಸುವಂತೆ ತೋರುತಿತ್ತು. .ಒಳಗೆ ನಡೆದಾಗ ಎಡಬದಿಯಲ್ಲಿ ಉದ್ಯಾನವನ, ಬಯಲು ರಂಗಮಂದಿರ. ಬಲಬದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರರ ಜೊತೆ ಭೌದ್ದ ಧರ್ಮದ ಅನುಯಾಯಿಗಳ ಮೂತರ್ಿಗಳನ್ನು ಮುಂದೆ ಸಾಗಿರುವ ರೀತಿಯಲ್ಲಿ ಅಂದವಾಗಿ ನಿಮರ್ಿಸಲಾಗಿದೆ.
ವಿಹಾರದ ಸುತ್ತಮುತ್ತ ಶಾಬಾದಿ ಬಂಡೆ ಹಾಗು ಟೈಲ್ಸಗಳನ್ನು ಹಾಕಲಾಗಿದೆ. ಎತ್ತರದ ಪ್ರದೇಶದಲ್ಲಿರುವದರಿಂದ ವಿಶಾಲ ರೂಪದಲ್ಲಿ ಸುಂದರವಾಗಿ ಕಾಣಿಸುತ್ತದೆ. ಇಲ್ಲಿಂದ ನೋಡಿದರೆ ಗುಲಬಗರ್ಾ ನಗರವು ವಿದ್ಯುತ್ ಬಲ್ಬುಗಳಿಂದ ಹೊಳೆಯುತ್ತಿರುತ್ತದೆ. ವಿಹಾರದ ಸುತ್ತ ಮುತ್ತ ಸುಮಾರು ಐವತ್ತು ಕೊಟಡಿಗಳುಳ್ಳ ಅತಿಥಿ ಗೃಹ ನಿಮರ್ಿಸಲಾಗಿದೆ. ಅಸರ ಸುತ್ತ ಉದ್ಯಾನವನ ನಿಮರ್ಿಸಿ, ಸುಮಾರು 500 ವಿದ್ಯುತ್ ಬಲ್ಬುಗಳನ್ನು ಅಳವಡಿಸಲಾಗಿದೆ. ವಿಹಾರದ ಒಳಗೆ ನಡೆದಾಗ ಗೋಡೆಯ ಮೇಲೆ ಕೆತ್ತಿರುವ ಕೆತ್ತನೆಗಳು ಬಿಡಿಸಿದ ಹಲವು ರೀತಿಯ ಚಿತ್ತಾರಗಳು ನಮ್ಮ ಮೈ ಮನವನ್ನು  ಸೆಳೆಯುವಂತಿದ್ದವು. ಗೋಪುರದ ಹೆಬ್ಬಾಗಿಲ ಬಳಿ ಬಂದಾಗ ಗಂಧದ ಮರ ಹಾಗು ಸಾಗುವಾನಿ ಮರದ ದ್ವಾರ ಬಾಗಿಲು ಆಕರ್ಷಕವಾಗಿತ್ತು.
ಪ್ರಾರ್ಥನ ಮಂದಿರದ ಒಳಗೆ ಪ್ರವೇಶಿಸಿದಾಗ ಭಗವಾನ ಬುದ್ಧನ ಮೂತರ್ಿ ನೋಡಿ ಬೆರಗಾಗಿ ನಿಂತೆವು. ಪಂಚಲೋಹಗಳೀಂದ ನಿಮರ್ಿಸಿದ ಮೂತರ್ಿಯು ಬಂಗಾರ ಲೇಪನದಿಂದ ಕೂಡಿದೆ. ಮಂದಿರದಲ್ಲಿ 13 ಲಕ್ಷ ರೂ. ಮೌಲ್ಯದ ಜ್ಯೂಮರ್ ವಿದ್ಯುತ್ ಬಲ್ಬನ್ನು ಅಳವಡಿಸಿ ಸರಪಳಿಯಿಂದ ಇಳಿಬಿಡಲಾಗಿದೆ. ಅದು ನೋಡಲು ಸುಂದರ, ಆಕರ್ಷಣೀಯ. ವಜ್ರದ ಹಾಗೆ ಹೊಳೆಯುತ್ತಿರುತ್ತದೆ. ಹುಣ್ಣಿಮೆಯ ದಿನದಂದು ಮಾತ್ರ ಜ್ಯೂಮರ್ ವಿದ್ಯುತ್ ದೀಪ ಹಚ್ಚುವದು ವಿಶೇಷ.
ಈ ವಿಹಾರದ ಕೆಳಮಹಡಿಯಲ್ಲಿ ಬುದ್ಧನ ಮೂತರ್ಿ ಅಮೃತ ಶಿಲೆಯಿಂದ ಕೂಡಿದೆ. .ಅದು ಧ್ಯಾನ ಮಂದಿರ. ನಾವು ಧ್ಯಾನ ಮಾಡಲು ಕುಳಿತಾಗ ಶಾಂತವಾದ ನಿಶ್ಯಬ್ದವಾದ ವಾತಾವರಣ ಅಲಿದ್ಲೆ ಎಂದು ಭಾವವಾಯಿತು. ನಮ್ಮ ನೆಮ್ಮದಿಗೆ ಸುಂದರ ತಾಣ ಅದು.. 30 ನಿಮಿಷಗಳ ಕಾಲ ಧ್ಯಾನ ಮಾಡಿ ಹೊರಗೆ ಬಂದಾಗ, ನಮಗೆ ಏನೋ ಒಂದು ಹೊಸ ಅನುಭವ, ಉತ್ಸಾಹ, ಚೈತನ್ಯ ತುಂಬಿ ಮನಸ್ಸು ನಿರಾಳವಾದಂತಾಯಿತು. ಧ್ಯಾನ ಮಾಡುವದರಿಂದ ಶಾಂತಿ, ನೆಮ್ಮದಿ ನೆಲಸಿ ಮನಸ್ಸು ಹಗುರಾಗುವದರ ಜೊತೆಗೆ ಅದ್ಬುತ ಶಕ್ತಿಯ ಅರಿವಾಗುತ್ತದೆ, ಜೀವನದಲ್ಲಿ ನವಚೈತನ್ಯ ಮೂಡುತ್ತದೆ. ಯೌವ್ವನಾವಧಿ, ಜ್ಞಾಪಕ ಶಕ್ತಿ ಅಧಿಕವಾಗುತ್ತದೆ. ಮೆದುಳು ತೀಕ್ಷ್ಣಗೊಳ್ಳುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಧ್ಯಾನ ಮಾಡಿ ಶಾಂತ ಚಿತ್ತದಿಂದ ಜೀವನ ಸಾಗಿಸಬಹುದಾಗಿದೆ.



-ಅಮರೇಶ ನಾಯಕ ಜಾಲಹಳ್ಳಿ
Cell-9945268059